ಬುಧವಾರ, ಮೇ 28, 2025
ವ್ಯಕ್ತಿ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,ಮೇ 28(ಕರ್ನಾಟಕ ವಾರ್ತೆ):
ಬಳ್ಳಾರಿ ತಾಲ್ಲೂಕಿನ ಪರಮದೇವನಹಳ್ಳಿ ಗ್ರಾಮದ ಭುಜ್ಜಮ್ಮ ಕಟ್ಟೆ ಹತ್ತಿರದ 02 ನೇ ವಾರ್ಡ್ ನ ನಿವಾಸಿಯಾದ ನಾಗರಾಜ.ಎಂ ಎನ್ನುವ 38 ವರ್ಷದ ವ್ಯಕ್ತಿ ಮೇ 18 ರಂದು ಕಾಣೆಯಾಗಿರುವ ಕುರಿತು ಪಿ.ಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರು ಮನವಿ ಮಾಡಿದ್ದಾರೆ.
ಚಹರೆ ಗುರುತು:
ಅಂದಾಜು 5.5 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಅಂಗಿ ಮತ್ತು ಬಿಳಿ ಬಣ್ಣದ ಲುಂಗಿ ಧರಿಸಿರುತ್ತಾನೆ.
ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಪಿ.ಡಿ ಹಳ್ಳಿ ಪೊಲೀಸ್ ಠಾಣೆಯ ದೂ.08392-265010 ಮತ್ತು ಪಿ.ಎಸ್.ಐ ರವರ ಮೊ.9480803052, ಪಿ.ಡಿ.ಹಳ್ಳಿ ವೃತ್ತದ ಸಿಪಿಐ ಕಚೇರಿ ದೂ.08392-276461 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ. 08392-258100/102, ಬಳ್ಳಾರಿ ಎಸ್.ಪಿ ರವರ ಕಚೇರಿ ದೂ.08392-258400, ಸಿರುಗುಪ್ಪ ಡಿ.ಎಸ್.ಪಿ ರವರ ಕಚೇರಿ ದೂ.08392-276000 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ