ಶುಕ್ರವಾರ, ಮೇ 23, 2025

ಭೂ ಒಡೆತನ ಯೋಜನೆಯಡಿ ಜಮೀನು ಮಂಜೂರು: ಆಕ್ಷೇಪಣೆ ಸಲ್ಲಿಸಲು ಅವಕಾಶ

ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ): ಭೂ ಒಡೆತನ ಯೋಜನೆಯಡಿ ಬಳ್ಳಾರಿ ತಾಲ್ಲೂಕಿನ ಚಾಗನೂರು ಗ್ರಾಮದ ಸಿ.ಆರ್ ಲಕ್ಷಿö್ಮರೆಡ್ಡಿ ಬಿನ್ ವೀರಾರೆಡ್ಡಿ ಇವರ ಜಮೀನಿನ ಸರ್ವೆ ನಂ 33/3, 30/5 ವಿಸ್ತೀರ್ಣ 0.8 2.61 ಮತ್ತು ಸಿ.ವೆಂಕಟರೆಡ್ಡಿ ಬಿನ್ ವೀರಾರೆಡ್ಡಿ ಇವರ ಜಮೀನಿನ ವಿಸ್ತೀರ್ಣ 30/4, 33/1, ವಿಸ್ತೀರ್ಣ 2.61. 0.80 ಒಟ್ಟು 6.83 ಎಕರೆ ತರಿ ಜಮೀನುಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಅನುಮೋದನೆಗೊಂಡಿದ್ದು, ಜಮೀನುಗಳ ಮೇಲೆ ಈ ಕುರಿತು ಆಕ್ಷೇಪಣೆಗಳು ಇದ್ದಲ್ಲಿ ಮೇ 30 ರೊಳಗಾಗಿ ಲಿಖಿತವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ