ಮಂಗಳವಾರ, ಮಾರ್ಚ್ 31, 2026

ಕ್ರೀಡಾ ಬೇಸಿಗೆ ಶಿಬಿರ ನೋಂದಣಿಗೆ ಆಹ್ವಾನ

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಬೇಸಿಗೆ ಕ್ರೀಡಾ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದ್ದು, ಆಸಕ್ತ ಕ್ರೀಡಾಪಟುಗಳು ಹಾಗೂ ಕ್ರೀಡಾ ಆಸಕ್ತರಿಂದ ನೋಂದಣಿಗೆ ಆಹ್ವಾನಿಸಲಾಗಿದೆ. ತರಬೇತಿ ಸ್ಥಳ: ಬಿ.ಡಿ.ಎ.ಎ. ಮೈದಾನದಲ್ಲಿ ಫುಟ್‌ಬಾಲ್ ತರಬೇತಿ, ಜಿಲ್ಲಾ ಕ್ರೀಡಾ ಸಂಕೀರ್ಣದಲ್ಲಿ ಈಜು ಮತ್ತು ಬ್ಯಾಡ್ಮಿಂಟನ್, ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿ ಮತ್ತು ಅಥ್ಲೆಟಿಕ್ ತರಬೇತಿ ಶಿಬಿರ ನೀಡಲಾಗುತ್ತದೆ. ಏ.08 ರಿಂದ ಜೂ.04 ರವರೆಗೆ ವಿವಿಧ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುವುದು. ಕ್ರೀಡಾಪಟುಗಳ ಅನುಕೂಲಕ್ಕಾಗಿ ಎರಡು ಅವಧಿಗಳಲ್ಲಿ ತರಬೇತಿ ನೀಡಲಾಗುತ್ತದೆ (ಬೆಳಿಗ್ಗೆ 06 ರಿಂದ 09 ಗಂಟೆಯವರೆಗೆ ಹಾಗೂ ಸಂಜೆ 04.30 ರಿಂದ 06.30 ಗಂಟೆಯವರೆಗೆ). ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ತಮ್ಮ ಹೆಸರನ್ನು ಏ.01 ರಿಂದ 07 ರ ವರೆಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ನಲ್ಲಚೇರುವು ಪ್ರದೇಶದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಏ.02 ರಂದು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರಪಾಲಿಕೆಯ ಸಾಮಾನ್ಯ ಸಭೆಯನ್ನು ಏ.02 ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್‌ನ ಹೊಸ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆಸಲು ನಿಗಡಿಪಡಿಸಲಾಗಿದೆ. ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಅಧ್ಯಕ್ಷತೆ ವಹಿಸುವರು ಎಂದು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ನಂದೀಶ್ ಎಲ್.ಎಂ ಅವರು ತಿಳಿಸಿದ್ದಾರೆ. ----------

ಡಿಜಿಟಲ್ ಜನಗಣತಿ 2027; ಏಪ್ರಿಲ್ 1 ರಿಂದ ಸ್ವಯಂ ನೋಂದಣಿಗೆ ಅವಕಾಶ- ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಜನಗಣತಿ-2027 ಕಾರ್ಯವು ಇದೇ ಏಪ್ರಿಲ್ 01 ನಿಂದ ಆರಂಭವಾಗಲಿದ್ದು, ಈ ಬಾರಿಯ ಜನಗಣತಿಯು ಸಂಪೂರ್ಣ ಡಿಜಿಟಲ್ ರೂಪದಲ್ಲಿ ನಡೆಯಲಿದೆ. ಹಾಗಾಗಿ ನಾಗರಿಕರಿಗೆ ಆನ್‌ಲೈನ್ ಮೂಲಕ ಸ್ವಯಂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು. ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜನಗಣತಿ ಕಾರ್ಯ ಕುರಿತು ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಜನಗಣತಿ-2027ರ ಕಾರ್ಯವು ದೇಶದ 16ನೇ ಹಾಗೂ ಸ್ವಾತಂತ್ರö್ಯ ನಂತರದ 8ನೇ ಜನಗಣತಿ ಪ್ರಕ್ರಿಯೆಯಾಗಿದೆ. 2021ರಲ್ಲಿ ನಡೆಯಬೇಕಿದ್ದ ಜನಗಣತಿಯು ಕೋವಿಡ್ ಕಾರಣದಿಂದ ವಿಳಂಬವಾಗಿದ್ದು, ಈಗ 2027ರಲ್ಲಿ ಆರಂಭವಾಗುತ್ತಿದೆ ಎಂದರು. ಜನಗಣತಿಯು ದೇಶದ ಅಭಿವೃದ್ಧಿಗೆ ಪೂರಕವಾಗಿದ್ದು, ನಿಖರ ದತ್ತಾಂಶ ಒದಗಿಸುವ ಮೂಲಕ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು. *ಸ್ವಯಂ ನೋಂದಣಿಗೆ ಅವಕಾಶ:* ಜನಗಣತಿಯ ಮೊದಲ ಹಂತವಾಗಿ ಏಪ್ರಿಲ್ 1 ರಿಂದ ಏಪ್ರಿಲ್ 15ರವರೆಗೆ ಸ್ವಯಂ ನೋಂದಣಿಗೆ ಸಾರ್ವಜನಿಕರು ವೆಬ್‌ಸೈಟ್ https://se.census.gov.in ಮೂಲಕ ತಾವಾಗಿಯೇ ಮಾಹಿತಿಯನ್ನು ದಾಖಲಿಸಲು ಅವಕಾಶ ನೀಡಲಾಗಿದೆ. ಬಳಿಕ ಏಪ್ರಿಲ್ 16 ರಿಂದ ಮೇ 15 ರವರೆಗೆ ಜನಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮನೆಗಳ ಪಟ್ಟಿ ಮತ್ತು ಜನಗಣತಿ ಕಾರ್ಯವನ್ನು ಕೈಗೊಳ್ಳಲಿದ್ದಾರೆ. ನಂತರ ಫೆಬ್ರವರಿ 2027 ರಲ್ಲಿ ಭೌತಿಕ ಗಣತಿ ಕಾರ್ಯ ನಡೆಯಲಿದೆ ಎಂದು ಅವರು ವಿವರಿಸಿದರು. *ಅಧಿಕಾರಿ- ಸಿಬ್ಬಂದಿ ನೇಮಕ:* ಜಿಲ್ಲೆಯಲ್ಲಿ ಒಟ್ಟು 2,798 ಗಣತಿದಾರರು ಮತ್ತು 473 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಇವರಲ್ಲಿ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಸೇರಿದ್ದಾರೆ. ಅದೇರೀತಿಯಾಗಿ ಜಿಲ್ಲೆಯಲ್ಲಿ ಜನಗಣತಿ ಕಾರ್ಯಕ್ಕೆ ಒಟ್ಟು 17 ಚಾರ್ಜ್ ಆಫೀಸರ್‌ಗಳನ್ನು ನೇಮಕ ಮಾಡಲಾಗಿದೆ (ಗ್ರಾಮೀಣ ಭಾಗಕ್ಕೆ 12 ಮತ್ತು ನಗರ ಪ್ರದೇಶಕ್ಕೆ 5). ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ ಗಣತಿದಾರರಿಗೆ ತರಬೇತಿ ನೀಡಲಾಗಿದೆ. 48 ಫೀಲ್ಡ್ ಟ್ರೇನರ್‌ಗಳು ಮತ್ತು ಮೈಸೂರಿನ ಎಟಿಐ ನಿಂದ ತರಬೇತಿ ಪಡೆದ ನಾಲ್ವರು ಮಾಸ್ಟರ್ ಟ್ರೇನರ್‌ಗಳು ಈ ತರಬೇತಿಯನ್ನು ನಡೆಸಿಕೊಟ್ಟಿದ್ದಾರೆ ಎಂದರು. *ತಾAತ್ರಿಕ ಸಿದ್ಧತೆ ಮತ್ತು ವಿಶೇಷತೆ:* ಈ ಬಾರಿಯ ಜನಗಣತಿಯಲ್ಲಿ ಕಾಗದ ರಹಿತ ವ್ಯವಸ್ಥೆಯಿದ್ದು, ಗಣತಿದಾರರು ಸ್ಮಾರ್ಟ್ಫೋನ್ ಮತ್ತು ಮೊಬೈಲ್ ಆಪ್‌ಗಳನ್ನು ಬಳಸಿ ಡಿಜಿಟಲ್ ದತ್ತಾಂಶಗಳನ್ನು ಸಂಗ್ರಹಿಸಲಿದ್ದಾರೆ ಎಂದು ತಿಳಿಸಿದರು. *ಬ್ಲಾಕ್‌ಗಳ ವಿಂಗಡನೆ:* ಜಿಲ್ಲೆಯಾದ್ಯAತ ಒಟ್ಟು 2,544 ಹೌಸ್ ಲಿಸ್ಟಿಂಗ್ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಪ್ರತಿ ಬ್ಲಾಕ್‌ನಲ್ಲಿ ಸುಮಾರು 150 ರಿಂದ 200 ಮನೆಗಳಿರಲಿವೆ. ಪ್ರತಿಯೊಂದು ಬ್ಲಾಕ್ ಅನ್ನು ಗೂಗಲ್ ಮ್ಯಾಪ್ ಮೂಲಕ ಜಿಯೋ ಟ್ಯಾಗ್ ಮಾಡಲಾಗಿದೆ ಎಂದರು. ಈ ಬಾರಿ ಗಣತಿದಾರರು ಪೇಪರ್ ಬದಲಿಗೆ ಸ್ಮಾರ್ಟ್ಫೋನ್‌ಗಳ ಮೂಲಕ ಡಿಜಿಟಲ್ ದತ್ತಾಂಶ ಸಂಗ್ರಹಿಸಲಿದ್ದಾರೆ. ತಾಂತ್ರಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತ್ಯೇಕವಾಗಿ ‘ಮಲ್ಟಿ ಟಾಸ್ಕಿಂಗ್ ಸ್ಟಾಫ್' ಮತ್ತು ಸ್ಟೇಟ್ ಕೋ-ಆರ್ಡಿನೇಟರ್‌ಗಳ ತಂಡ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಾರ್ವಜನಿಕರು ನಿಗದಿತ ಸಮಯದಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ ಮನೆಗೆ ಬರುವ ಗಣತಿದಾರರಿಗೆ ನಿಖರ ಮಾಹಿತಿ ನೀಡುವ ಮೂಲಕ ದೇಶದ ಈ ಮಹತ್ವದ ಕಾರ್ಯಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ವಿನಂತಿಸಿದರು. ಈ ವೇಳೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಝುಬೇರ್, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ್ ಹಾಗೂ ಇತರರಿದ್ದರು. ----------

ಸುತ್ತೂರು: ಜೆ.ಎಸ್.ಎಸ್ ಉಚಿತ ವಸತಿ ಶಾಲೆಗೆ ಅರ್ಜಿ ಆಹ್ವಾನ

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಮೈಸೂರಿನ ಸುತ್ತೂರು ಕ್ಷೇತ್ರದ ಜೆ.ಎಸ್.ಎಸ್ ಉಚಿತ ವಸತಿ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮೀಣ ಭಾಗದ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ, 1 ರಿಂದ 8ನೇ ತರಗತಿಯವರೆಗೆ ಹೊಸದಾಗಿ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಪೋಷಕರು ಶಾಲೆಯ ಅಧಿಕೃತ ವೆಬ್‌ಸೈಟ್‌ಗಳಾದ www.jssschoolsuttur.org ಅಥವಾ www.jssonline.org ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಏಪ್ರಿಲ್ 2 ರಿಂದ ಅರ್ಜಿ ವಿತರಣೆ ಪ್ರಾರಂಭ, ಮೇ 16 ಅರ್ಜಿ ಸಲ್ಲಿಸಲು ಕೊನೆಯ ದಿನ. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ “ಮುಖ್ಯೋಪಾಧ್ಯಾಯರು, ಜಿ.ಎಸ್.ಎಸ್. ಸಂಸ್ಥೆಗಳು, ಸುತ್ತೂರು, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ – 571129” ಈ ವಿಳಾಸಕ್ಕೆ ನೇರವಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು. ಅರ್ಜಿಯ ಜೊತೆಗೆ ವಿದ್ಯಾರ್ಥಿಯ ಹಿಂದಿನ ತರಗತಿಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಹಾಗೂ ಆಧಾರ್ ಕಾರ್ಡ್ ಪ್ರತಿಗಳನ್ನು ಲಗತ್ತಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.7411486938, ದೂ.08221-232332 ಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಏ.01 ರಿಂದ ಸಹಕಾರ ಸಂಘಗಳ ಸಮೀಕ್ಷೆಗೆ ರಾಷ್ಟಿçÃಯ ಸಾಂಖ್ಯಿಕ ಕಾರ್ಯಾಲಯ ಸಜ್ಜು

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ನಿಖರವಾದ ಅಂಕಿ-ಅAಶಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ರಾಷ್ಟಿçÃಯ ಸಾಂಖ್ಯಿಕ ಕಾರ್ಯಾಲಯವು ಸಹಕಾರ ಸಂಘಗಳ ಸಮೀಕ್ಷೆಯನ್ನು ಕೈಗೆತ್ತಿಕೊಳ್ಳುತ್ತಿದ್ದು, ಈ ಸಮೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ ಎಂದು ಬೆಳಗಾವಿ ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಕಲಪ್ಪ ಒಬಣ್ಣಗೋಳ ಅವರು ತಿಳಿಸಿದರು. ಹುಬ್ಬಳ್ಳಿ ನಗರದ ರಾಷ್ಟಿçÃಯ ಸಾಂಖ್ಯಿಕ ಕಾರ್ಯಾಲಯದ ಸಭಾ ಭವನದಲ್ಲಿ ಸೋಮವಾರ ಆಯೋಜಿಸಲಾಗಿದ್ದ ‘ಸಹಕಾರ ಸಂಘಗಳ ತ್ವರಿತ ಸಮೀಕ್ಷೆ'ಯ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಸಹಕಾರ ಸಂಘಗಳ ಪಾತ್ರವೇನು ಎಂಬುದನ್ನು ತಿಳಿಯಲು ಈ ಸಮೀಕ್ಷೆ ಸಹಕಾರಿಯಾಗಲಿದೆ. ಈ ಸಮೀಕ್ಷೆಗೆ ಸಹಕಾರ ಇಲಾಖೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದರು. ಕಾರ್ಯಾಲಯದ ನಿರ್ದೇಶಕ ಹರೀಶ್ವರನ್ ಅವರು ಮಾತನಾಡಿ, ಸಹಕಾರ ಸಂಘಗಳ ಕುರಿತಾದ ಸಮೀಕ್ಷೆಯು ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಈ ವೇಳೆ ಸಂಘಗಳ ಒಟ್ಟು ಮೌಲ್ಯ ವರ್ಧನೆ, ಒಟ್ಟು ಉತ್ಪಾದನಾ ಮೌಲ್ಯ ಹಾಗೂ ಉದ್ಯೋಗದ ಕುರಿತಾದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದರು. ಕೇAದ್ರ ಸಹಕಾರ ಸಚಿವಾಲಯದ ಕೋರಿಕೆಯಂತೆ ಈ ಸಮೀಕ್ಷೆ ನಡೆಯುತ್ತಿದ್ದು, ಏಪ್ರಿಲ್ 1 ರಿಂದ ಆರಂಭಗೊAಡು ಮುಂಬರುವ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದರು. ಈ ತರಬೇತಿ ಶಿಬಿರದಲ್ಲಿ ಬೆಳಗಾವಿ ಉಪ ಪ್ರಾದೇಶಿಕ ಕಾರ್ಯಾಲಯದ ಸಹಾಯಕ ನಿರ್ದೇಶಕ ಮೋಹನ ಕಾರ್ಜೋಳ ಸೇರಿದಂತೆ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಹಾಗೂ ಕಲಬುರಗಿ ಕಾರ್ಯಾಲಯಗಳ ಹಿರಿಯ ತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಪ್ರಮೋದ ಪಂಡಿತ ಅವರು ಸ್ವಾಗತಿಸಿದರು. ಉಪನಿರ್ದೇಶಕ ಮಹದೇವಪ್ಪ ವಂದಿಸಿದರು. -----------

ಏ.02 ರಂದು 'ಪೊಲೀಸ್ ಧ್ವಜ ದಿನಾಚರಣೆ' ಕಾರ್ಯಕ್ರಮ

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಏ.02 ರಂದು ಬೆಳಿಗ್ಗೆ 08 ಗಂಟೆಗೆ ನಗರದ ಜಿಲ್ಲಾ ಸಶಸ್ತç ಪೊಲೀಸ್ ಕವಾಯತು ಮೈದಾನದಲ್ಲಿ 'ಪೊಲೀಸ್ ಧ್ವಜ ದಿನಾಚರಣೆ' ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಅತಿಥಿಯಾಗಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ನಿವೃತ್ತ ಸಹಾಯಕ ಸಬ್-ಇನ್ಸ್ಪೆಕ್ಟರ್ ಆದ ಶ್ರೀನಿವಾಸಲು ಎಂ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಡಾ.ಪಿ.ಎಸ್. ಹರ್ಷ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ. ಪೆನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಕೆ.ಪಿ. ರವಿಕುಮಾರ್ ಮತ್ತು ಎಸ್. ನವೀನ್‌ಕುಮಾರ್ ಸೇರಿದಂತೆ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ- ಸಿಬ್ಬಂದಿ ವರ್ಗ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. -----------

ಬಳ್ಳಾರಿಯಲ್ಲಿ ಸಂಭ್ರಮದ ಭಗವಾನ್ ಮಹಾವೀರ ಜಯಂತ್ಯೋತ್ಸವ | ಭಗವಾನ್ ಮಹಾವೀರರ ತತ್ವಗಳು ಸಮಾಜಕ್ಕೆ ದಾರಿದೀಪ: ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ

ಬಳ್ಳಾರಿ,ಮಾ.31(ಕರ್ನಾಟಕ ವಾರ್ತೆ): ಭಗವಾನ್ ಮಹಾವೀರರ ತತ್ವಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದು ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ತೇರು ಬೀದಿಯ ಶ್ರೀ ಪಾರ್ಶ್ವನಾಥ್ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಹಾವೀರರು ಪಂಚ ತತ್ವಗಳನ್ನು ಬೋಧಿಸಿದವರು. ಅಹಿಂಸೆಯ ಮೂಲಕ ಪ್ರತಿಯೊಂದು ಜೀವಿಯಲ್ಲೂ ಆತ್ಮವಿದ್ದು, ಯಾವುದೇ ಪ್ರಾಣಿ ಅಥವಾ ಮನುಷ್ಯರಿಗೆ ಹಿಂಸೆ ನೀಡಬಾರದು. ಸತ್ಯದ ಮೂಲಕ ಸುಳ್ಳಿನ ಪ್ರಪಂಚದಲ್ಲಿ ಕನಿಷ್ಠ ಪಕ್ಷ ಸತ್ಯವನ್ನಾದರೂ ಮಾತನಾಡಬೇಕು. ಅಸ್ತೇಯ ಎಂದರೆ ನಮಗೆ ಸೇರದ ಯಾವುದೇ ವಸ್ತುವನ್ನು ಅಥವಾ ಆಸ್ತಿಯನ್ನು ಮುಟ್ಟಬಾರದು. ಬ್ರಹ್ಮಚರ್ಯ ಮೂಲಕ ಶಿಸ್ತಿನ ಜೀವನ ನಡೆಸುವುದು ಮತ್ತು ಸಂಯಮವನ್ನು ಪಾಲಿಸುವುದು. ಅಪರಿಗ್ರಹದಿಂದ ಭೌತಿಕ ಆಸೆಗಳನ್ನು ತ್ಯಜಿಸುವುದು ಎಂದು ತಮ್ಮ ಪಂಚ ತತ್ವಗಳನ್ನು ಒತ್ತಿ ತಿಳಿಸಿದ್ದಾರೆ ಎಂದರು. ಭಾರತದ ವೈವಿಧ್ಯಮಯ ಧರ್ಮಗಳ ನಡುವೆ ಜೈನ ಧರ್ಮದ ಅಹಿಂಸೆ ಮತ್ತು ನೈತಿಕತೆಯ ತತ್ತ್ವಗಳು ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಸಹಕಾರಿ. ಜೈನ್ ಸಮಾಜದವರು ಬಡವರಿಗೆ ಬಟ್ಟೆ ವಿತರಣೆ, ಕಡಿಮೆ ದರದಲ್ಲಿ ಊಟ ನೀಡುವುದು ಮತ್ತು ಅರವಟ್ಟಿಗೆಗಳ ಸ್ಥಾಪನೆಯಂತಹ ಮಹತ್ವದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದು, ಇನ್ನು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯ ಮಾಡಬೇಕು ಎಂದರು. ಸರ್ಕಾರವು ಅಧಿಕೃತವಾಗಿ ಮಹಾವೀರ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ಮಹಾವೀರರ ತ್ಯಾಗ, ಅವರ ವಿಚಾರಧಾರೆಗಳು ಕೇವಲ ಓದಿಕೊಂಡವರಿಗೆ ಮಾತ್ರವಲ್ಲದೆ, ಇಡೀ ಸಮಾಜಕ್ಕೆ ತಲುಪಬೇಕು ಎಂಬ ಉದ್ದೇಶ ಸರ್ಕಾರ ಹೊಂದಿದೆ ಎಂದು ತಿಳಿಸಿದರು. ಮುಂದಿನ ವರ್ಷಗಳಲ್ಲಿ ಮಹಾವೀರರ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮದ ಮೂಲಕ ಉಪನ್ಯಾಸ ಆಯೋಜಿಸಲಾಗುವುದು ಎಂದು ಹೇಳಿದರು. ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಮಹಾವೀರರು ಜಗತ್ತಿಗೆ ನೀಡಿದ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಇಂದಿನ ಸಮಾಜಕ್ಕೆ ಅತ್ಯಗತ್ಯ. ಮಹಾವೀರರ ಬೋಧನೆಯಂತೆ ದಾನ, ಧರ್ಮ ಮತ್ತು ಸತ್ಯದ ಹಾದಿಯಲ್ಲಿ ನಡೆಯುವ ಸಂಕಲ್ಪವನ್ನು ಈ ಸಮಾಜದವರು ಹೊಂದಿದ್ದಾರೆ ಎಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಇರಾನ್, ಅಮೇರಿಕಾ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದAತಹ ಜಾಗತಿಕ ಅಶಾಂತಿಯ ಸಂದರ್ಭದಲ್ಲಿ, ಮಹಾವೀರರು ಬೋಧಿಸಿದ ಶಾಂತಿ ಮತ್ತು ಅಹಿಂಸೆಯ ಸಂದೇಶಗಳು ಅತ್ಯಂತ ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟರು. ಕೇವಲ ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿ-ಪಕ್ಷಿ, ಕ್ರಿಮಿಕೀಟಗಳಿಗೂ ತೊಂದರೆಯಾಗದAತೆ ಬದುಕಬೇಕು. ಉಸಿರಾಡುವಾಗಲೂ ಕ್ರಿಮಿಕೀಟಗಳಿಗೆ ಹಾನಿಯಾಗಬಾರದೆಂದು ಮಾಸ್ಕ್ ಧರಿಸುವ ಮತ್ತು ಪಾದರಕ್ಷೆಗಳಿಲ್ಲದೆ ನಡೆಯುವ ಸಂಪ್ರದಾಯಗಳನ್ನು ಜೈನ್ ಧರ್ಮದ ಅನುಯಾಯಿಗಳು ಅನುಸರಿಸುವ ಉನ್ನತ ತತ್ವಗಳನ್ನು ಇದೇ ಸಂದರ್ಭದಲ್ಲಿ ಪ್ರಶಂಶಿಸಿದರು. ಸತ್ಯA ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂಭಾಷ ಅವರು ಜಯಂತಿ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಜೈನ ಧರ್ಮವು ಸುಮಾರು 2625 ವರ್ಷಗಳ ಹಿಂದೆ ಸ್ಥಾಪನೆಯಾದ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದಾಗಿದೆ ಎಂದು ತಿಳಿಸುವ ಮೂಲಕ ಭಗವಾನ್ ಮಹಾವೀರರ ಜೀವನ ಚರಿತ್ರೆ ಪ್ರಸ್ತುತಪಡಿಸಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪ್ರಸ್ತಾವನೆ ಬೋಧಿಸಲಾಯಿತು. ಶ್ರೀ ಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ ವತಿಯಿಂದ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಭಗವಾನ್ ಮಹಾವೀರರ ಜಯಂತಿ ಅಂಗವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಜೈನ್ ಸಂಘದ ಅಧ್ಯಕ್ಷ ಸುರಜ್ ಮಲ್ ಜೈನ್ ಸೇರಿದಂತೆ ಸಮಾಜದ ಮುಖಂಡರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ------------

ಶುಕ್ರವಾರ, ಮಾರ್ಚ್ 27, 2026

ಮಾ.28 ರಂದು ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಾ.28 ರಂದು ಬೆಳಿಗ್ಗೆ 10 ಗಂಟೆಗೆ ನಗರದ ತಾಳೂರು ರಸ್ತೆಯ ಜಿಲ್ಲಾ ನ್ಯಾಯಾಲಯದ 1ನೇ ಮಹಡಿಯ ಸಭಾಂಗಣದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ಜಿಲ್ಲಾ ನ್ಯಾಯಾಂಗ ಇಲಾಖೆಯ ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ತೋರಣಗಲ್ಲು: ನಾಲ್ವರು ಬಾಲಕಾರ್ಮಿಕ ಮಕ್ಕಳ ರಕ್ಷಣೆ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಹಾಗೂ ‘ಪ್ಯಾನ್-ಇಂಡಿಯಾ ರೆಸ್ಕೂö್ಯ ಮತ್ತು ರಿಹ್ಯಾಬಿಲಿಟೇಶನ್' ಅಭಿಯಾನದ ಅಂಗವಾಗಿ, ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಶುಕ್ರವಾರ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ತಾಲೂಕು ಟಾಸ್ಕ್ ಫೋರ್ಸ್ ಸಮಿತಿಯು ದಿಢೀರ್ ದಾಳಿ ನಡೆಸಿ ನಾಲ್ವರು ಮಕ್ಕಳನ್ನು ರಕ್ಷಿಸಿದೆ. ಸಂಡೂರು ಗ್ರೇಡ್-2 ತಹಶೀಲ್ದಾರ್ ಸುಧಾರಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ತೋರಣಗಲ್ಲು ವ್ಯಾಪ್ತಿಯ ಹೊಸಪೇಟೆ ಮುಖ್ಯ ರಸ್ತೆ, ಬೈಪಾಸ್ ರಸ್ತೆ ಹಾಗೂ ರೈಲ್ವೇ ನಿಲ್ದಾಣದ ಸುತ್ತಮುತ್ತಲಿನ ವಿವಿಧ ಉದ್ದಿಮೆಗಳಾದ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ, ಫಾಸ್ಟ್ ಫುಡ್ ಸೆಂಟರ್ ಗಳು ಸೇರಿದಂತೆ ಮನೆ ನಿರ್ಮಾಣ ನಡೆಯುತ್ತಿದ್ದ ಸ್ಥಳಗಳಲ್ಲಿ ದಾಳಿ ನಡೆಸಿ ತಪಾಸಣೆ ಕೈಗೊಳ್ಳಲಾಯಿತು. ಈ ವೇಳೆ ಕೆಲಸ ಮಾಡುತ್ತಿರುವುದು ಕಂಡುಬAದ 04 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಸಮಿತಿಯು ವಶಕ್ಕೆ ಪಡೆದು, ಅಧಿಕಾರಿಗಳು ಸ್ಥಳದಲ್ಲಿಯೇ ಮಕ್ಕಳ ಹೇಳಿಕೆಗಳನ್ನು ದಾಖಲಿಸಿಕೊಂಡು ನಂತರ ಅವರನ್ನು ಸುರಕ್ಷಿತವಾಗಿ ಪೋಷಕರ ವಶಕ್ಕೆ ಒಪ್ಪಿಸಲಾಯಿತು. ದಾಳಿಯ ಸಂದರ್ಭದಲ್ಲಿ ಉದ್ದಿಮೆಗಳ ಮಾಲೀಕರಿಗೆ ಬಾಲಕಾರ್ಮಿಕ ಪದ್ಧತಿಯ ದುಷ್ಟರಿಣಾಮ ಹಾಗೂ ಕಾನೂನು ಕ್ರಮಗಳ ಬಗ್ಗೆ ಎಚ್ಚರಿಕೆ ನೀಡಲಾಯಿತು. ಬಳಿಕ ಕರಪತ್ರ ಮತ್ತು ಪೋಸ್ಟರ್‌ಗಳನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಸಂಡೂರು ಕಾರ್ಮಿಕ ನಿರೀಕ್ಷಕ ಮಂಜುನಾಥ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ತೋರಣಗಲ್ಲು ಕಂದಾಯ ನಿರೀಕ್ಷಕರು, ಮಕ್ಕಳ ರಕ್ಷಣಾ ಘಟಕದ ಅರುಳ್, ಸಹಾಯವಾಣಿ ಸಿಬ್ಬಂದಿ ಕಾರ್ತಿಕ್, ರೀಚ್ ಸಂಸ್ಥೆಯ ಹನುಮಂತಪ್ಪ, ರೀಡ್ಸ್ ಸಂಸ್ಥೆಯ ಸಂಯೋಜಕ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. -----------

ಹೆಚ್ಚುತ್ತಿರುವ ಬಿಸಿಲಿನ ತಾಪ: ಸಾರ್ವಜನಿಕರು ಜಾಗೃತಿ ವಹಿಸಲು ಡಿಹೆಚ್‌ಓ ಡಾ.ಯಲ್ಲಾ ರಮೇಶ್ ಬಾಬು ಮನವಿ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಪ್ರಸಕ್ತ ವರ್ಷ ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಭಾರತೀಯ ಹವಮಾನ ಇಲಾಖೆಯ ಮುನ್ಸೂಚನೆಯಂತೆ ಸಾರ್ವಜನಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಮನವಿ ಮಾಡಿದ್ದಾರೆ. ಶಾಖಾಘಾತ ಹಾಗೂ ನಿರ್ಜಲೀಕರಣದಿಂದ ರಕ್ಷಿಸಿಕೊಳ್ಳಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅವರು ತಿಳಿಸಿದ್ದಾರೆ. *ಏನು ಮಾಡಬೇಕು?:* ಮನೆಯಿಂದ ಹೊರಬರುವಾಗ ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸಬೇಕು. ಗಾಳಿಯಾಡುವ ಪಾದರಕ್ಷೆಗಳನ್ನು ಬಳಸಬೇಕು. ಸದಾ ಕುಡಿಯುವ ನೀರನ್ನು ಜೊತೆಯಲ್ಲಿಟ್ಟುಕೊಳ್ಳಿ. ಬಾಯಾರಿಕೆಯಾಗದಿದ್ದರೂ ನಿಯಮಿತವಾಗಿ ನೀರು, ಮಜ್ಜಿಗೆ, ಎಳೆನೀರು ಅಥವಾ ಹಣ್ಣಿನ ರಸ ಸೇವಿಸಿ. ಓಆರ್‌ಎಸ್ ದ್ರಾವಣ ಬಳಸುವುದು ಉತ್ತಮ. ಶುದ್ಧ ಹಾಗೂ ಮಸಾಲೆ ರಹಿತ ಆಹಾರಕ್ಕೆ ಆದ್ಯತೆ ನೀಡಿ. ಬೆರವನನ್ನು ಒರೆಸಲು ಮೆತ್ತನೆಯ ಕರವಸ್ತç ಅಥವಾ ಟಿಶ್ಯೂ ಬಳಸಬಹುದು ಎಂದು ಅವರು ತಿಳಿಸಿದ್ದಾರೆ. *ಏನು ಮಾಡಬಾರದು?:* ಅತಿಯಾದ ಕಾಫಿ, ಟೀ, ಕಾರ್ಬೋನೇಟೆಡ್ ಸಾಫ್ಟ್ ಡ್ರಿಂಕ್ಸ್ ಹಾಗೂ ಮದ್ಯಪಾನ ತ್ಯಜಿಸಬೇಕು. ಇವು ದೇಹದಲ್ಲಿನ ನೀರಿನಂಶವನ್ನು ಕಡಿಮೆ ಮಾಡುತ್ತವೆ. ರಸ್ತೆಬದಿಯ ತೆರೆದಿಟ್ಟ ಆಹಾರ, ಮಾಂಸಾಹಾರ ಹಾಗೂ ಅತಿಯಾದ ಮಸಾಲೆ ಪದಾರ್ಥಗಳನ್ನು ಸೇವಿಸಬಾರದು. ಬಿಸಿಲಿನಿಂದ ಸುಸ್ತಾದಾಗ ತಕ್ಷಣವೇ ಅತಿ ತಣ್ಣಗಿನ ಐಸ್ ನೀರನ್ನು ಮೈಗೆ ಹಾಕಿಕೊಳ್ಳಬೇಡಿ. ಇದರಿಂದ ರಕ್ತನಾಳಗಳು ಸಂಕುಚಿತಗೊAಡು ದೇಹದ ಒಳಗಿನ ಉಷ್ಣತೆ ಏರಿಕೆಯಾಗಿ ಅಂಗಾAಗಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ. *ಶಾಖಾಘಾತದ ಲಕ್ಷಣಗಳು ಮತ್ತು ಚಿಕಿತ್ಸೆ:* ತೊದಲು ಮಾತು, ಅರೆಪ್ರಜ್ಞೆ, ಅತಿಯಾದ ದೇಹದ ಉಷ್ಣತೆ ಮತ್ತು ಉಸಿರಾಟದ ತೊಂದರೆ ಕಂಡುಬAದರೆ ಅದು ಶಾಖಾಘಾತದ ಲಕ್ಷಣಗಳಾಗಿವೆ. ಇಂತಹ ಸಂದರ್ಭದಲ್ಲಿ ತಕ್ಷಣ ವ್ಯಕ್ತಿಯನ್ನು ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಕಾಲುಗಳನ್ನು ಸ್ವಲ್ಪ ಮೇಲಕ್ಕೆ ಎತ್ತಿ ಮಲಗಿಸಿ, ಬಟ್ಟೆಗಳನ್ನು ಸಡಿಲಗೊಳಿಸಬೇಕು. ಸಾಮಾನ್ಯ ನೀರಿನಿಂದ (ಐಸ್ ನೀರಲ್ಲ) ದೇಹವನ್ನು ಒರೆಸಿ ತಂಪು ಮಾಡಬೇಕು. ಸ್ಥಿತಿ ಗಂಭೀರವಾಗಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಹೇಳಿದ್ದಾರೆ. *ವಾಂತಿ-ಬೇಧಿ ತಡೆಗಟ್ಟಲು ಕ್ರಮಗಳು:* ಬೇಸಿಗೆಯಲ್ಲಿ ಕಲುಷಿತ ನೀರಿನಿಂದ ವಾಂತಿ-ಬೇಧಿ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಸಾರ್ವಜನಿಕರು ಶುದ್ಧೀಕರಿಸಿದ ನೀರನ್ನೇ ಕುಡಿಯಬೇಕು. ಆಹಾರ ಸೇವಿಸುವ ಮುನ್ನ ಹಾಗೂ ಶೌಚದ ನಂತರ ಕೈಗಳನ್ನು ಸಾಬೂನಿನಿಂದ ಕನಿಷ್ಠ 45 ಸೆಕೆಂಡ್‌ಗಳ ಕಾಲ ತೊಳೆಯಬೇಕು. ಮನೆಯಲ್ಲಿ ತಯಾರಿಸಿದ ತಾಜಾ ಆಹಾರವನ್ನೇ ಸೇವಿಸಬೇಕು. ತುರ್ತು ಸಂದರ್ಭದಲ್ಲಿ ನೆರವಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 108 ಕ್ಕೆ ಕರೆ ಮಾಡಬಹುದು ಎಂದು ಡಾ.ರಮೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ರಂಗನಿರ್ದೇಶಕ ಡಾ.ಸಿ.ಬಸಲಿಂಗಯ್ಯ ಅಭಿಪ್ರಾಯ | ರಂಗಭೂಮಿ ಕಲೆ ಆಳವಾದ ಪ್ರಭಾವ ಬೀರುವಂತಹದ್ದು

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ರಂಗಭೂಮಿ ಒಂದು ಮುಕ್ತ ವಿಶ್ವವಿದ್ಯಾಲಯವಾಗಿದ್ದು, ರಂಗಭೂಮಿಗೆ ಅಳಿವಿಲ್ಲ. ಅದು ಕಲೆಗಳ ಸಾರವನ್ನು ಹೊಂದಿದೆ. ಜೀವನದ ಮೇಲೆ ಆಳವಾದ ಪ್ರಭಾವ ಬೀರುವಂತಹದ್ದಾಗಿದೆ ಎಂದು ಮೈಸೂರಿನ ರಂಗನಿರ್ದೇಶಕ ಡಾ.ಸಿ.ಬಸಲಿಂಗಯ್ಯ ಅವರು ಹೇಳಿದರು. ಶುಕ್ರವಾರ ವಿವಿಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ವಿವಿಯ ಪ್ರದರ್ಶನ ಕಲೆ ಮತ್ತು ನಾಟಕ ವಿಭಾಗದ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ-2026 ಪ್ರಯುಕ್ತ ಆಯೋಜಿಸಿದ್ದ “ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಂಗಭೂಮಿಯ ಉಳಿವಿನ ಸವಾಲುಗಳು” ಒಂದು ದಿನದ ರಾಷ್ಟಿçÃಯ ವಿಚಾರ ಸಂಕೀರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದೆಲ್ಲೆಡೆ ಶಾಂತಿ ಬಯಸುವುದು ರಂಗಭೂಮಿಯ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದರು. ಜೀವನದಲ್ಲಿ ಫೇಲಾದವರೆ ಮಹಾನ್ ವ್ಯಕ್ತಿಗಳಾಗಿದ್ದಾರೆ. ಪ್ರಶ್ನಿಸದೆ ಯಾವುದನ್ನು ಒಪ್ಪಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಆದಿ ಕವಿ ಪಂಪ, ಅಲ್ಲಮಪ್ರಭು, ಬುದ್ಧ, ರಾಮ- ಸೀತೆ, ಅಕ್ಕಮಹಾದೇವಿ, ಬಸವಣ್ಣನವರ ಕುರಿತಾದ ವಿಚಾರಗಳನ್ನು ವ್ಯಕ್ತಪಡಿಸಿದರು. ಧಾರವಾಡದ ಹಿರಿಯ ರಂಗಕರ್ಮಿ ಡಾ.ಶಶಿಧರ್ ನರೇಂದ್ರ ಅವರು ದಿಕ್ಸೂಚಿ ಭಾಷಣಕಾರರಾಗಿ ಮಾತನಾಡಿ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಕೆಗೆ ಪ್ರತಿಯೊಂದಕ್ಕೆ ಆಜ್ಞೆ ನೀಡಬೇಕಾಗುತ್ತದೆ. ಕೃತಕ ಬುದ್ಧಿಮತ್ತೆಯ ಯುಗದಲ್ಲಿ ರಂಗ ಪರಂಪರೆಯನ್ನು ಆಧುನಿಕತೆಗೆ ಒಳಪಡಿಸುವ ಕ್ರಮವಾಗಿದೆ ಎಂದು ಹೇಳಿದರು. ಎಐ ಬರವಣಿಗೆಯ ಹಕ್ಕುಗಳಿಗೆ ಸಾಮ್ಯತೆ ಕೊಡುವುದು ಪ್ರಶ್ನೆಯಾಗಿ ಉಳಿದಿದೆ. ಎಐ ತಂತ್ರಜ್ಞಾನ ಬಳಸುವಲ್ಲಿ ಉಪಾಯ ಅಪಾಯಗಳೆರಡು ಇವೆ ಎಂದು ತಿಳಿಸಿದ ಅವರು, ‘ಗೌಹರ್ ಜಾನ್’ ಕೃತಿಯನ್ನು ಎಐ ನಿಂದ ಭಾಷಾಂತರವಾಗಿದ್ದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕುಲಪತಿ ಪ್ರೊ.ಎಂ ಮುನಿರಾಜು ಅವರು ಮಾತನಾಡಿ, ಒತ್ತಡದ ಜೀವನದಲ್ಲಿ ನಾಟಕಗಳು ತುಂಬಾ ಪ್ರಭಾವ ಬೀರುತ್ತವೆ. ಕಲಾವಿದರು ಹಲವಾರು ವರ್ಷಗಳ ಶ್ರಮದಿಂದ ಪ್ರತಿಭೆಗೆ ಪಾತ್ರರಾಗುತ್ತಾರೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಹೊರತುಪಡಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಒತ್ತಡವನ್ನು ಹೋಗಲಾಡಿಸಬಹುದು ಎಂದು ಒತ್ತಿ ಹೇಳಿದರು. ಈ ಸಂದರ್ಭದಲ್ಲಿ ಸಂಶೋಧನಾ ಲೇಖನಗಳ ಸಾರಾಂಶಗಳ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು. ವಿಶ್ವ ರಂಗಭೂಮಿ ಸಂದೇಶವನ್ನು ಡಾ.ಅಣ್ಣಾಜಿ ಕೃಷ್ಣಾರೆಡ್ಡಿ ಓದಿದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎನ್.ಎಂ ಸಾಲಿ, ಕಲಾ ನಿಕಾಯದ ಡೀನ್ ಪ್ರೊ.ರಾಬರ್ಟ್ ಜೋಸ್, ಕಿರುತೆರೆ ಮತ್ತು ಹಿರಿತರೆ ಕಲಾವಿದರಾದ ಲಕ್ಷಿö್ಮà ನಾಡಗೌಡ್ ವೇದಿಕೆಯಲ್ಲಿದ್ದರು. ಒಂದು ದಿನದ ರಾಷ್ಟಿçÃಯ ವಿಚಾರ ಸಂಕಿರಣದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಂಶೋಧನಾರ್ಥಿಗಳು ಸೇರಿದಂತೆ 100ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಿದ್ದರು. ವಿಚಾರ ಸಂಕಿರಣದ ಸಂಚಾಲಕ ಪ್ರೊ.ಎನ್.ಶಾಂತನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ.ಕೆ.ಎಸ್ ಶಿವಪ್ರಕಾಶ ನಿರೂಪಿಸಿದರು. ಕನ್ನಡ ಅಧ್ಯಯನ ವಿಭಾಗದ ಸಂಯೋಜಕ ಡಾ.ಸಂತೋಷ ಜಿ.ಕೆ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ------------

ಕುರೇಕುಪ್ಪ ಪುರಸಭೆ: ಶೇ.03 ರಷ್ಟು ಆಸ್ತಿ ತೆರಿಗೆ ಹೆಚ್ಚಳ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಪೌರಾಡಳಿತ ನಿರ್ದೇಶನಾಲಯದ ಆದೇಶ ಹಾಗೂ ಕುರೇಕುಪ್ಪ ಪುರಸಭೆಯ ಸಾಮಾನ್ಯ ಸಭೆಯ ತೀರ್ಮಾನದಂತೆ ಕುರೇಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ 2026-27ನೇ ಸಾಲಿಗೆ ಅನ್ವಯವಾಗುವಂತೆ ಆಸ್ತಿ ತೆರಿಗೆಯನ್ನು ಶೇ.03 ರಷ್ಟು ಹೆಚ್ಚಳ ಮಾಡಲಾಗಿದೆ ಎಂದು ಕುರೇಕುಪ್ಪ ಪುರಸಭೆಯ ಮುಖ್ಯಾಧಿಕಾರಿಯವರು ತಿಳಿಸಿದ್ದಾರೆ. 2025-27ನೇ ಆರ್ಥಿಕ ಸಾಲಿನಲ್ಲಿ ಮಾರುಕಟ್ಟೆ ದರಸೂಚಿಗಳು ಪರಿಷ್ಕರಣೆಯಾಗದಿದ್ದ ಪಕ್ಷದಲ್ಲಿ, ಆಸ್ತಿ ತೆರಿಗೆಯನ್ನು ಕನಿಷ್ಠ ಶೇ.03 ರಿಂದ ಶೇ.05 ರಷ್ಟು ಹೆಚ್ಚಿಸಲು ಸೂಚಿಸಲಾಗಿತ್ತು. ಕುರೇಕುಪ್ಪ ಪುರಸಭೆಯ ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಸಾರ್ವಜನಿಕರ ಹಿತದೃಷ್ಟಿಯಿಂದ ಕನಿಷ್ಠ ಪ್ರಮಾಣದ ಹೆಚ್ಚಳಕ್ಕೆ ಅಂದರೆ, ಶೇ.03 ರಷ್ಟು ತೆರಿಗೆಯನ್ನು ಹೆಚ್ಚುವರಿ ಮಾಡಲು ಸಭೆಯು ಅನುಮೋದನೆ ನೀಡಿದೆ. ಹಾಗಾಗಿ 2026-27ನೇ ಸಾಲಿನಿಂದ ಜಾರಿಗೆ ಬರುವಂತೆ ಆಸ್ತಿ ತೆರಿಗೆ ದರದಲ್ಲಿ ಶೇ.03 ರಷ್ಟು ಪರಿಷ್ಕರಣೆ ಮಾಡಲಾಗಿದ್ದು, ಪುರಸಭೆ ವ್ಯಾಪ್ತಿಯ ಸಾರ್ವಜನಿಕರು ಹಾಗೂ ಆಸ್ತಿ ಮಾಲೀಕರು ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. -----------

ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಕಂಪ್ಲಿ ತಾಲ್ಲೂಕಿನ ಅರಳ್ಳಿಹಳ್ಳಿ ತಾಂಡದ ಬಸ್ ನಿಲ್ದಾಣದ ಹತ್ತಿರದ ಅನಾರೋಗ್ಯದಿಂದ ಬಳಲುತ್ತಿದ್ದ ಸುಮಾರು 55-60 ವರ್ಷದ ಅನಾಮಧೇಯ ವ್ಯಕ್ತಿಯನ್ನು ಕಂಪ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಬಿಎಂಸಿಆರ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆಯಿಂದ ಗುಣಮುಖನಾಗದೇ ಮಾ.11 ರಂದು ಮೃತಪಟ್ಟಿದ್ದು, ಅನಾಮದೇಯ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ, ಈ ಕುರಿತು ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು ವಾರುಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ. ವ್ಯಕ್ತಿಯ ಚಹರೆ: ಎತ್ತರ 4.3 ಅಡಿ, ತೆಳುವಾದ ಮೈಕಟ್ಟು ಮತ್ತು ಕಪ್ಪು ಮೈಬಣ್ಣ ಹೊಂದಿದ್ದು, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಕೂದಲು, ಬಿಳಿ ಮೀಸೆ ಮತ್ತು ಗಡ್ಡ ಬಿಟ್ಟಿರುತ್ತಾನೆ. ಕಡು ನೀಲಿ ಬಣ್ಣದ ಅರ್ಧ ತೋಳಿನ ಟಿ-ಶರ್ಟ್ ಮತ್ತು ಕಡು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತ ವಾರಸುದಾರನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕಂಪ್ಲಿ ಪೊಲೀಸ್ ಠಾಣೆ ಪಿ.ಐ ಮೊ.8277977722, 9480803038, ತೋರಣಗಲ್ ಡಿ.ಎಸ್.ಪಿ ಮೊ.9480803010, ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. -------------

ಮಾ.31 ರಂದು ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ

ಬಳ್ಳಾರಿ,ಮಾ.27(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಮಾ.31 ರಂದು ಬೆಳಿಗ್ಗೆ 11 ಗಂಟೆಗೆ ನಗರದ ತೇರು ಬೀದಿಯ ಶ್ರೀ ಪಾರ್ಶ್ವನಾಥ್ ಭವನದಲ್ಲಿ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದರಾದ ಈ.ತುಕರಾಮ್, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ರಾಜ್ಯಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರ ಮಹಾಮಂಡಳಿ ನಿಯಮಿತ(ಕಾವೇರಿ ಹ್ಯಾಂಡ್‌ಲೂಮ್ಸ್)ದ ಅಧ್ಯಕ್ಷರೂ ಆದ ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ಮುಂಡರಗಿ ನಾಗರಾಜ್, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ, ಸಂಡೂರು ಶಾಸಕಿ ಈ.ಅನ್ನಪೂರ್ಣ, ವಿಧಾನ ಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ, ಬಳ್ಳಾರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನ ಉಪಾಧ್ಯಕ್ಷ ಹೆಚ್.ಲಕ್ಷö್ಮಣ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾ ಜೈನ್ ಸಂಘದ ಅಧ್ಯಕ್ಷ ಸುರಜ್ ಮಲ್ ಜೈನ್ ಸೇರಿದಂತೆ ಇತರರು ಭಾಗವಹಿಸುವರು. ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಆಲಂಭಾಷ ಅವರು ಜಯಂತಿ ಕುರಿತು ವಿಶೇಷ ಉಪಪನ್ಯಾಸ ನೀಡುವರು. ಶ್ರೀ ಶಿರಡಿ ಸಾಯಿ ಸೇವಾ ಸತ್ಸಂಗ ಟ್ರಸ್ಟ್ ವತಿಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ಇರಲಿದೆ. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪನ್ನೇಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿರುವರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿಸಿದ್ದಾರೆ. ------------

ಗುರುವಾರ, ಮಾರ್ಚ್ 26, 2026

ಮೂರು ಕರಡಿಗಳ ಯಶಸ್ವಿ ಸೆರೆ

ಬಳ್ಳಾರಿ,ಮಾ.26(ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಜಿಂದಾಲ್ ವಿದ್ಯಾನಗರ ಟೌನ್‌ಶಿಪ್ ವ್ಯಾಪ್ತಿಯಲ್ಲಿ ಕಳೆದ ಹತ್ತು ತಿಂಗಳಿನಿAದ ಬೀಡುಬಿಟ್ಟಿದ್ದ ತಾಯಿ ಕರಡಿ ಹಾಗೂ ಎರಡು ಮರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಅತ್ಯಾಧುನಿಕ ‘ಆಟೋಮ್ಯಾಟಿಕ್ ಮೊಬೈಲ್ ಆಪ್ ಆಧಾರಿತ ಕೇಜ್ ಲಾಕಿಂಗ್ ಸಿಸ್ಟಮ್' ಬಳಸುವ ಮೂಲಕ ಮೂರೂ ಕರಡಿಗಳನ್ನು ಏಕಕಾಲಕ್ಕೆ ಬಂಧಿಸಿರುವುದು ವಿಶೇಷವಾಗಿದೆ. ಕಳೆದ ಸುಮಾರು 10 ತಿಂಗಳಿನಿAದ ಈ ಕರಡಿಗಳ ಕುಟುಂಬ ಜಿಂದಾಲ್ ವಿದ್ಯಾನಗರ ಟೌನ್‌ಶಿಪ್‌ನಲ್ಲಿ ಕಾಣಿಸಿಕೊಳ್ಳುತ್ತಿತ್ತು. ಇದರಿಂದ ನಿವಾಸಿಗಳಲ್ಲಿ ಭೀತಿ ಉಂಟಾಗಿದ್ದರೂ, ಅರಣ್ಯ ಇಲಾಖೆಯ ಮುನ್ನೆಚ್ಚರಿಕೆಯಿಂದಾಗಿ ಯಾವುದೇ ಅಹಿತಕರ ಘಟನೆ ಸಂಭವಿಸಿರಲಿಲ್ಲ. ವನ್ಯಜೀವಿ ವಿಭಾಗದ ಪಿಸಿಸಿಎಫ್ ಅವರ ಆದೇಶದನ್ವಯ, ಬಳ್ಳಾರಿ ಡಿಸಿಎಫ್ ಕೆ.ಎನ್.ಬಸವರಾಜ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಎಸಿಎಫ್ ಶರಣ್ ಕುಮಾರ್, ಆರ್‌ಎಫ್‌ಒಗಳಾದ ಸಯ್ಯದ್ ದಾದಾ ಖಲಂದರ್ ಮತ್ತು ಮಂಜುನಾಥ್, ಡಿಆರ್‌ಎಫ್‌ಒಗಳಾದ ಮೋಹನ್ ಹಾಗೂ ಗುರುಸ್ವಾಮಿ, ಬಿಎಫ್‌ಒಗಳಾದ ವೆಂಕಟೇಶ್ ಮತ್ತು ಶ್ರೀಧರ್ ಅವರ ತಂಡ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಇವರಿಗೆ ಪಶುವೈದ್ಯರಾದ ಡಾ. ಪ್ರಕೃತಿ ಹಾಗೂ ವೈಲ್ಡ್ ಲೈಫ್ ಎಸ್‌ಒಎಸ್ ಎನ್‌ಜಿಒ ಸಂಸ್ಥೆಯವರು ಸಾಥ್ ನೀಡಿದ್ದರು. ಸೆರೆಹಿಡಿದ ತಾಯಿ ಕರಡಿಗೆ ಮುಂದಿನ ದಿನಗಳಲ್ಲಿ ಅದರ ಚಲನವಲನದ ಮೇಲೆ ನಿಗಾ ಇಡಲು ‘ರೇಡಿಯೋ ಕಾಲರ್' ಅಳವಡಿಸಲಾಗಿದೆ. ನಂತರ ಮೇಲಾಧಿಕಾರಿಗಳ ಸೂಚನೆಯಂತೆ, ಸುರಕ್ಷಿತ ಅರಣ್ಯ ಪ್ರದೇಶದಲ್ಲಿ ತಾಯಿ ಹಾಗೂ ಮರಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಬಳ್ಳಾರಿ ವಲಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ್ ಅವರು ತಿಳಿಸಿದ್ದಾರೆ. ------------

ಮಾ.27 ರಂದು ವಿದ್ಯುತ್ ಗ್ರಾಹಕರ ಸಂವಾದ ಸಭೆ

ಬಳ್ಳಾರಿ,ಮಾ.26(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣ ಉಪ-ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಸಮಸ್ಯೆಗಳನ್ನು ಆಲಿಸಲು ಮತ್ತು ಇತ್ಯರ್ಥಗೊಳಿಸಲು ಮಾ.27 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಬಳ್ಳಾರಿ ಜೆಸ್ಕಾಂ ಗ್ರಾಮೀಣ ಉಪ-ವಿಭಾಗ ಕಚೇರಿಯಲ್ಲಿ ವಿದ್ಯುತ್ ಗ್ರಾಹಕರ ಸಂವಾದ ಸಭೆ ಆಯೋಜಿಸಲಾಗಿದೆ. ಗ್ರಾಹಕರು ತಮ್ಮ ವಿದ್ಯುತ್ ಸಂಪರ್ಕ, ಬಿಲ್ಲಿಂಗ್ ಸಮಸ್ಯೆಗಳು, ವೋಲ್ಟೇಜ್ ಏರುಪೇರು ಸೇರಿದಂತೆ ಇತರೆ ಯಾವುದೇ ದೂರು ಅಥವಾ ಸಲಹೆಗಳಿದ್ದಲ್ಲಿ ಸಭೆಯಲ್ಲಿ ಭಾಗವಹಿಸಿ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಬಳ್ಳಾರಿ ಜೆಸ್ಕಾಂ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. -----------

ಮಾ.27 ರಂದು ಜೆಸ್ಕಾಂ ಗ್ರಾಹಕರ ಕುಂದುಕೊರತೆ ಸಭೆ

ಬಳ್ಳಾರಿ,ಮಾ.26(ಕರ್ನಾಟಕ ವಾರ್ತೆ): ಬಳ್ಳಾರಿ ನಗರದ ಜೆಸ್ಕಾಂ ಉಪ-ವಿಭಾಗ 1 ಮತ್ತು 2ರ ವಿದ್ಯುತ್ ಗ್ರಾಹಕರ ಕುಂದುಕೊರತೆಗಳ ಸಭೆಯನ್ನು ಮಾ.27 ರಂದು ಮಧ್ಯಾಹ್ನ 03.30 ಗಂಟೆಗೆ ನಗರದ ಹೆಚ್.ಆರ್. ಗವಿಯಪ್ಪ ವೃತ್ತದ ಬಳಿಯಿರುವ ಜೆಸ್ಕಾಂ ವಲಯ ಕಚೇರಿಯ ಮೊದಲ ಮಹಡಿಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಜೆಸ್ಕಾಂ ನಗರ ವಿಭಾಗದ (ಕಾರ್ಯ ಮತ್ತು ಪಾಲನೆ) ಕಾರ್ಯನಿರ್ವಾಹಕ ಅಭಿಯಂತರರು (ಇಇ) ಅಧ್ಯಕ್ಷತೆ ವಹಿಸುವರು. ಬಳ್ಳಾರಿ ನಗರದ ಜೆಸ್ಕಾಂ ವ್ಯಾಪ್ತಿಯ ವಿದ್ಯುತ್ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ವಿದ್ಯುತ್ ಬಿಲ್, ಸಂಪರ್ಕ ಹಾಗೂ ಇತರೆ ತಾಂತ್ರಿಕ ಸಮಸ್ಯೆಗಳಿಗೆ ಸಂಬAಧಿಸಿದ ತಮ್ಮ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ಬಳ್ಳಾರಿ: ನಿರುದ್ಯೋಗಿ ಯುವಕ-ಯುವತಿಯರಿಗೆ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನ

ಬಳ್ಳಾರಿ,ಮಾ.26(ಕರ್ನಾಟಕ ವಾರ್ತೆ): ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಗ್ರಾಮೀಣ ಭಾಗದ ನಿರುದ್ಯೋಗಿ ಯುವಕ-ಯುವತಿಯರು ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ವಿವಿಧ ವೃತ್ತಿಪರ ತರಬೇತಿಗಳಿಗೆ ಅರ್ಜಿ ಆಹ್ವಾನಿಸಿದೆ. ಗ್ರಾಮೀಣ ಪ್ರದೇಶದ 19 ರಿಂದ 45 ವರ್ಷ ವಯೋಮಿತಿಯ ಆಸಕ್ತ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯದೊಂದಿಗೆ ತರಬೇತಿಗಳನ್ನು ಆಯೋಜಿಸಲಾಗಿದೆ. *ತರಬೇತಿಗಳ ವಿವರ:* ಏ.06 ರಿಂದ ಮೊಬೈಲ್ ಸರ್ವಿಸಿಂಗ್ ತರಬೇತಿ (30 ದಿನ). ಏ.09 ರಿಂದ ಕೃತಕ ಆಭರಣ ತಯಾರಿಕೆ ತರಬೇತಿ (14 ದಿನ). ಏ.15 ರಿಂದ ಕೃಷಿ ಉದ್ಯಮಿ ತರಬೇತಿ (13 ದಿನ). ಏ.14 ರಿಂದ ಅಗರಬತ್ತಿ ತಯಾರಿಕೆ ತರಬೇತಿ (12 ದಿನ). ಮೇ 04 ರಿಂದ ಮೋಟಾರ್ ರಿವೈಂಡಿAಗ್ ಮತ್ತು ಪಂಪ್ ಸೆಟ್ ರಿಪೇರಿ ತರಬೇತಿ (30 ದಿನ). ಮೇ 18 ರಿಂದ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ (30 ದಿನ). ಮೇ 25 ರಿಂದ ಫಾಸ್ಟ್ ಫುಡ್ ತಯಾರಿಕೆ ತರಬೇತಿ (14 ದಿನ). ಜೂ.04 ರಿಂದ ಬ್ಯೂಟಿ ಪಾರ್ಲರ್ ತರಬೇತಿ (35 ದಿನ). ತರಬೇತಿಗೆ ಸೇರಬಯಸುವ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ತೇರ್ಗಡೆಯಾಗಿರಬೇಕು. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಪ್ರತಿ, ಉದ್ಯೋಗ ಖಾತ್ರಿ ಕಾರ್ಡ್, 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಡಿ.ಐ.ಸಿ ಕಾಂಪೌAಡ್, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ, ಹೊಸಪೇಟೆ ರಸ್ತೆ, ಬಳ್ಳಾರಿ. ದೂ.08392-299117, ಮೊ.9449860659, 9008464120, 9980123603 ಗೆ ಸಂಪರ್ಕಿಸಬಹುದು. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಉಚಿತ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಿಲಿಟರಿ ಬಾಲಕಿಯರ ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬಳ್ಳಾರಿ,ಮಾ.26(ಕರ್ನಾಟಕ ವಾರ್ತೆ): ಧಾರವಾಡ ನಗರದ ಸಪ್ತಾಪುರ ರಸ್ತೆಯಲ್ಲಿರುವ ಮಿಲಿಟರಿ ಬಾಲಕಿಯರ ವಸತಿ ನಿಲಯದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕಾಗಿ ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ, ಗದಗ, ಹಾವೇರಿ ಮತ್ತು ಬಳ್ಳಾರಿ ಜಿಲ್ಲೆಗಳ ಗ್ರಾಮೀಣ ಪ್ರದೇಶದ ಹಾಗೂ ರಾಜ್ಯದ ಇತರ ಜಿಲ್ಲೆಗಳ ಯುದ್ಧದಲ್ಲಿ ಮಡಿದ ಯೋಧರ ಮತ್ತು ಮಾಜಿ ಸೈನಿಕರ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗುತ್ತದೆ. 5ನೇ ತರಗತಿಯಿಂದ ಪಿಯುಸಿ - 2ನೇ ವರ್ಷದವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ವಸತಿ ನಿಲಯದಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಧಾರವಾಡ ನಗರದ ಶಾಲಾ-ಕಾಲೇಜುಗಳಲ್ಲಿಯೇ ಪ್ರವೇಶ ಪಡೆದಿರಬೇಕು. ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಅರ್ಜಿ ಸಲ್ಲಿಸಲು ಏ.30 ಕೊನೆಯ ದಿನವಾಗಿದೆ. ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಉದಯ ಹಾಸ್ಟೆಲ್ ಸರ್ಕಲ್, ಸೈನಿಕ ವಿಶ್ರಾಂತಿ ಗೃಹ ಆವರಣ, ಧಾರವಾಡ (ದೂ.0836-2440176) ಇಲ್ಲಿಗೆ ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ: ಏ.12 ರಂದು ಪ್ರವೇಶ ಪರೀಕ್ಷೆ

ಬಳ್ಳಾರಿ,ಮಾ.26(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ (ಆಂಗ್ಲ ಮಾಧ್ಯಮ) ಶಾಲೆಗಳ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿ (ಸಿ.ಬಿ.ಎಸ್.ಇ) ಶಾಲೆಯ ದಾಖಲಾತಿಗಾಗಿ 2026-27ನೇ ಶೈಕ್ಷಣಿಕ ವರ್ಷಕ್ಕೆ 6ನೇ ತರಗತಿಗೆ ಉಚಿತ ಪ್ರವೇಶಕ್ಕಾಗಿ ಏ.12 ರಂದು ಪ್ರವೇಶ ಪರೀಕ್ಷೆ ನಡೆಸಲು ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮAದಿರ ಹತ್ತಿರದ ಮೌಲಾನ ಅಜಾದ ಭವನದ ಜಿಲ್ಲಾ ಅಲ್ಪಸಂಖ್ಯಾತರ ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ ಅಥವಾ ದೂ.08392-200125/224, ಸಹಾಯವಾಣಿ ಕೇಂದ್ರ (24*7) – 8277799990 ಗೆ ಸಂಪರ್ಕಿಸಬಹುದು ಎಂದು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಬುಧವಾರ, ಮಾರ್ಚ್ 25, 2026

ಬಳ್ಳಾರಿ: ಹಜ್ ಯಾತ್ರಿಕರಿಗೆ ಆರೋಗ್ಯ ಜಾಗೃತಿ ಹಾಗೂ ಲಸಿಕಾ ಶಿಬಿರ

ಬಳ್ಳಾರಿ,ಮಾ.25(ಕರ್ನಾಟಕ ವಾರ್ತೆ): ನಗರದ ಮಹಮ್ಮದಿಯ ಕಾಲೇಜಿನಲ್ಲಿ ಹಜ್ ಯಾತ್ರೆಗೆ ತೆರಳಲಿರುವ ಮುಸ್ಲಿಂ ಸಮುದಾಯದ ಯಾತ್ರಿಕರಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಬುಧವಾರ ಆರೋಗ್ಯ ಜಾಗೃತಿ ಹಾಗೂ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಅವರು ಮಾತನಾಡಿ, ವಿದೇಶ ಪ್ರಯಾಣದ ಸಂದರ್ಭದಲ್ಲಿ ಯಾತ್ರಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ಹೆಣ್ಣು ಮಕ್ಕಳಲ್ಲಿ ಕಾಣಿಸಿಕೊಳ್ಳುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಹೆಚ್‌ಪಿವಿ (ಹ್ಯೂಮನ್ ಪ್ಯಾಪಿಲೋಮಾ ವೈರಸ್) ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತಪ್ಪು ಮಾಹಿತಿ ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು. 14 ವರ್ಷದ ಹೆಣ್ಣು ಮಕ್ಕಳಿಗೆ ಈ ಲಸಿಕೆ ಹಾಕಿಸುವುದು ಅತ್ಯಂತ ಸುರಕ್ಷಿತ. ಗರ್ಭಕಂಠದ ಕ್ಯಾನ್ಸರ್ ಮುಕ್ತ ನಾಡಿಗಾಗಿ ಪ್ರತಿಯೊಬ್ಬ ಪೋಷಕರು ತಮ್ಮ ಹೆಣ್ಣು ಮಕ್ಕಳಿಗೆ ಲಸಿಕೆ ಕೊಡಿಸಬೇಕು ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ಯಾತ್ರಿಕರಿಗೆ ಖುದ್ದಾಗಿ ಮೆನಿಂಗೊಕೊಕಲ್ ಮೆನಿಂಜೈಟಿಸ್ ಲಸಿಕೆ ಹಾಗೂ 64 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬಿ-ಒಪಿವಿ ಮತ್ತು ಇನ್‌ಫ್ಲೂö್ಯಯೆಂಜಾ ಲಸಿಕೆ ಹಾಗೂ ಇತರೆ ಅಗತ್ಯ ಲಸಿಕೆಗಳನ್ನು ಹಾಕಿಸಿದರು. ಬಳ್ಳಾರಿಯ ದಾರುಲ್ ಸರ್ಕಾರಿ ಖಾಜಿಗಳಾದ ಗುಲಾಮ್ ಮೊಹಮ್ಮದ್ ಸಿದ್ದಿಖಿ ಅವರು ಮಾತನಾಡಿ, ಲಸಿಕೆಯ ಬಗ್ಗೆ ಸಮುದಾಯದಲ್ಲಿ ಯಾರು ಭಯ ಪಡುವ ಅಗತ್ಯವಿಲ್ಲ. ಹೆಣ್ಣು ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಲ್ಲರೂ ಸಹಕರಿಸಬೇಕು ಎಂದು ಜಾಗೃತಿ ಮೂಡಿಸಿದರು. ಡಿ.ಡಬ್ಲ್ಯೂ.ಎ.ಸಿ ಮಾಜಿ ಅಧ್ಯಕ್ಷ ಹುಮಾಯುನ್ ಖಾನ್ ಅವರು ಮಾತನಾಡಿ, ಈ ಲಸಿಕಾ ಕಾರ್ಯಕ್ರಮವು ಒಟ್ಟು 90 ದಿನಗಳ ಕಾಲ ನಡೆಯಲಿದೆ. 14 ವರ್ಷದ ಹೆಣ್ಣು ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಇದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಶೇ.99 ರಷ್ಟು ತಡೆಯಬಹುದಾಗಿದೆ. ಲಸಿಕೆ ಪಡೆಯಲು ಬರುವವರು ಕಡ್ಡಾಯವಾಗಿ ಪೋಷಕರನ್ನು ಹಾಗೂ ಜನ್ಮ ದಿನಾಂಕವಿರುವ ಗುರುತಿನ ಚೀಟಿಯನ್ನು ತರಬೇಕು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಹನುಮಂತಪ್ಪ, ಪ್ರಭಾರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಖುರ್ಶಿದ್ ಬೇಗಮ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಶಾಂತಮ್ಮ, ಹಿರಿಯ ಪ್ರಾಥಮಿಕ ಸುರಕ್ಷಾಧಿಕಾರಿ ಗಂಗಮ್ಮ ಹಾಗೂ ಡಿ.ಡಬ್ಲ್ಯೂ.ಎ.ಸಿ ಮಾಜಿ ಅಧ್ಯಕ್ಷರುಗಳಾದ ಹುಸೇನ್ ಪೀರ್, ಮೊಹಮ್ಮದ್ ಗೌಸ್, ಅಯಾಜ್ ಅಹಮ್ಮದ್, ಅಲ್ಲಾ ಭಕ್ಷಿ ಮತ್ತು ತೌಹಿದ್ ಸಾಬ್, ಸಾದತ್ತ್ ಸಾಬ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. -----------

ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ

ಬಳ್ಳಾರಿ,ಮಾ.25(ಕರ್ನಾಟಕ ವಾರ್ತೆ): ನಗರದ ಕೌಲ್ ಬಜಾರ್ ನ ತಿಲಕ್ ನಗರದ ಸಾಯಿಬಾಬಾ ದೇವಸ್ಥಾನದ ಹತ್ತಿರ ನಿವಾಸಿ ಯುವರಾಜ್ ಎನ್ನುವ 26 ವರ್ಷದ ವ್ಯಕ್ತಿ ಮಾ.23 ರಂದು ಮನೆಯಿಂದ ಹೋದವನು ಮನೆಗೆ ಬಾರದೇ ಕಾಣೆಯಾಗಿರುವ ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ: ಎತ್ತರ ಅಂದಾಜು 5 ಅಡಿ, ದುಂಡು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈ ಬಣ್ಣ ಹೊಂದಿದ್ದು, ಕುರುಚಲು ಗಡ್ಡ ಮತ್ತು ಮೀಸೆ ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ದೂ.08392240731, 08392244145, ಪಿ.ಐ ಮೊ.9480803047, ಪಿಎಸ್‌ಐ 94808203084, 9480803085 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. -----------

ಮಾ.27 ರಂದು ಮಹಿಳಾ ನೌಕರರ ಪ್ರಾತಿನಿಧ್ಯ ಕುರಿತು ‘ವಿಚಾರ ಸಂಕಿರಣ’

ಬಳ್ಳಾರಿ,ಮಾ.25(ಕರ್ನಾಟಕ ವಾರ್ತೆ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬಳ್ಳಾರಿ ಜಿಲ್ಲಾ ಶಾಖೆ ವತಿಯಿಂದ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಸರ್ಕಾರಿ ಸೇವೆಯಲ್ಲಿ ಮಹಿಳಾ ನೌಕರರ ಪ್ರಾತಿನಿಧ್ಯ ಕುರಿತು ಮಾ.27 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಆಸ್ಪತ್ರೆ ಆವರಣದ ಡಿ.ಎನ್.ಬಿ. ಸಭಾಂಗಣದಲ್ಲಿ “ವಿಚಾರ ಸಂಕೀರಣ” ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರು ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಘನ ಉಪಸ್ಥಿತಿ ಇರುವರು. ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ ಆಲೂರು ಅವರು ಕಾರ್ಯಕ್ರಮದ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಸೇರಿದಂತೆ ಜಿಲ್ಲಾ ಮಟ್ಟದ ಮಹಿಳಾ ಅಧಿಕಾರಿಗಳು ಭಾಗವಹಿಸುವರು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ಶಾಖೆ ಜಿಲ್ಲಾಧ್ಯಕ್ಷ ಸದಾನಂದ ನೆಲ್ಕುದ್ರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------

ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾ.ರಾಜೇಶ್ ಎನ್.ಹೊಸಮನೆ ಅಭಿಪ್ರಾಯ | ಗ್ರಾಹಕರ ಜಾಗೃತಿಯೇ ಪ್ರಗತಿಯ ಹಾದಿ

ಬಳ್ಳಾರಿ,ಮಾ.25(ಕರ್ನಾಟಕ ವಾರ್ತೆ): ಗ್ರಾಹಕರು ತಮಗಿರುವ ಹಕ್ಕುಗಳ ಬಗ್ಗೆ ಜಾಗೃತಿ ಹೊಂದಿದಾಗ ಮಾತ್ರ ಸದೃಢ ದೇಶದ ಪ್ರಗತಿಯ ಹಾದಿ ಕಾಣಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಅವರು ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆಹಾರ ಸುರಕ್ಷತಾ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ‘ಸುರಕ್ಷಿತ ಉತ್ಪನ್ನಗಳು ಆತ್ಮ ವಿಶ್ವಾಸದ ಗ್ರಾಹಕರು’ ಎಂಬ ಘೋಷವಾಕ್ಯದಡಿ ನಗರದ ಕೋಟೆ ಮುಖ್ಯ ರಸ್ತೆಯ ಮೇದಾ ಪದವಿ ಪೂರ್ವ ವಿದ್ಯಾಲಯದ ಮೇದಾ ಆಡಿಟೋರಿಯಮ್ ಹಾಲ್ ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಿಂದೆ ‘ಖರೀದಿದಾರರೇ ಎಚ್ಚರ' ಎಂಬ ನಿಯಮವಿತ್ತು. ಆದರೆ ಇಂದು ಕಾಲ ಬದಲಾಗಿದ್ದು, ‘ಮಾರಾಟಗಾರರೇ ಎಚ್ಚರ' ಎಂಬ ಸಿದ್ಧಾಂತ ಜಾರಿಯಲ್ಲಿದೆ. ಗ್ರಾಹಕರಿಗೆ ತಾವು ಪಡೆಯುವ ವಸ್ತು ಅಥವಾ ಸೇವೆಯಲ್ಲಿ ಯಾವುದೇ ಲೋಪ ಕಂಡುಬAದಲ್ಲಿ ಅದನ್ನು ಪ್ರಶ್ನಿಸುವ ಮತ್ತು ಪರಿಹಾರ ಪಡೆಯುವ ಸಂಪೂರ್ಣ ಹಕ್ಕಿದೆ ಎಂದು ತಿಳಿಸಿದರು. ಇಂದಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚಾಗುತ್ತಿದ್ದು, ಇ-ಕಾಮರ್ಸ್ ಸಂಸ್ಥೆಗಳ ಮೂಲಕ ನಡೆಯುವ ವಂಚನೆಗಳ ಬಗ್ಗೆಯೂ ಪ್ರತಿಯೊಬ್ಬರೂ ತಿಳುವಳಿಕೆ ಹೊಂದಬೇಕು. ಗ್ರಾಹಕರು ತಮ್ಮ ದೈನಂದಿನ ಜೀವನದಲ್ಲಿ ಗ್ರಾಹಕ ಹಕ್ಕುಗಳನ್ನು ಚಲಾಯಿಸಬೇಕು. ಯಾವುದೇ ವಸ್ತುವಿನ ಗುಣಮಟ್ಟದಲ್ಲಿ ಕೊರತೆ ಇದ್ದರೆ ಅಥವಾ ಸೇವೆಯಲ್ಲಿ ವ್ಯತ್ಯಯವಾದರೆ ಗ್ರಾಹಕರು ನೇರವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಬಹುದು ಎಂದು ತಿಳಿಸಿದರು. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ತಿಪ್ಪೇಸ್ವಾಮಿ.ಎನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬ ಹಣ ಪಾವತಿಸಿ ಸೇವೆ ಅಥವಾ ವಸ್ತುವನ್ನು ಪಡೆಯುವ ವ್ಯಕ್ತಿಯೂ ಗ್ರಾಹಕನೇ. ನಾವು ಜಾಗೃತರಾದಾಗ ಮಾತ್ರ ಮೋಸವನ್ನು ತಡೆಯಲು ಸಾಧ್ಯ. ಗ್ರಾಹಕರಿಗೆ ಆಗುವ ಅನ್ಯಾಯ, ಮೋಸ ಅಥವಾ ಗುಣಮಟ್ಟದ ಸೇವೆಯಲ್ಲಿನ ಲೋಪಗಳ ವಿರುದ್ಧ ಧ್ವನಿ ಎತ್ತಲು ಪ್ರತಿ ಜಿಲ್ಲೆಯಲ್ಲೂ ಗ್ರಾಹಕ ವೇದಿಕೆ ಅಥವಾ ಆಯೋಗಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು. 1962 ರಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್ ಕೆನಡಿ ಅವರು ಮೊದಲ ಬಾರಿಗೆ ಗ್ರಾಹಕರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಭಾರತದಲ್ಲಿ ಗ್ರಾಹಕರ ರಕ್ಷಣಾ ಕಾಯ್ದೆಯನ್ನು 1986 ರಲ್ಲಿ ಜಾರಿಗೆ ತರಲಾಯಿತು. ಹಾಗಾಗಿ ಪ್ರತಿವರ್ಷ ಮಾರ್ಚ್ 15 ರಂದು ವಿಶ್ವ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು. ರಕ್ಷಣೆಯ ಹಕ್ಕು, ಮಾಹಿತಿ ಪಡೆಯುವ ಹಕ್ಕು, ಆಯ್ಕೆಯ ಹಕ್ಕು, ಆಲಿಸುವ ಹಕ್ಕು, ಪರಿಹಾರ ಪಡೆಯುವ ಹಕ್ಕು, ಗ್ರಾಹಕ ಶಿಕ್ಷಣದ ಹಕ್ಕು ಸೇರಿದಂತೆ ಈ ಆರು ಹಕ್ಕುಗಳು ಗ್ರಾಹಕರಿಗೆ ಸಂವಿಧಾನಾತ್ಮಕವಾಗಿ ಒದಗಿಸಲಾಗಿದೆ ಎಂದು ತಿಳಿಸಿದರು. ಹಿರಿಯ ವಕೀಲ ಅಂಕಲಯ್ಯ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಗ್ರಾಹಕರು ತಾವು ಬಳಸುವ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಹೆಚ್ಚಿನ ನಿಗಾ ವಹಿಸುವುದು ಅತ್ಯಗತ್ಯವಾಗಿದೆ ಎಂದರು. ಇನ್ನೋರ್ವ ಹಿರಿಯ ವಕೀಲ ಎನ್.ಪ್ರಕಾಶ್ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಗ್ರಾಹಕನೇ ಅಧಿಪತಿ. ಯಾವುದೇ ವಸ್ತುವನ್ನು ಖರೀದಿ ಮಾಡುವಾಗ ಅದರ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನಿಸುವ ಹಕ್ಕು ಗ್ರಾಹಕನಿಗಿದೆ. ವಸ್ತುಗಳನ್ನು ಖರೀದಿಸುವಾಗ ಉತ್ಪಾದನಾ ದಿನಾಂಕ, ಮುಕ್ತಾಯದ ದಿನಾಂಕ, ವಾರಂಟಿ ಮತ್ತು ಗ್ಯಾರಂಟಿ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಗ್ರಾಹಕರಿಗೆ ಮೋಸವಾದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಬಹುದು. ಇಲ್ಲಿ ಆರು ತಿಂಗಳ ಒಳಗಾಗಿ ಪ್ರಕರಣಗಳ ವಿಲೇವಾರಿ ಮಾಡಲಾಗುತ್ತದೆ ಎಂದು ವಿವರವಾಗಿ ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ದೇವರಾಜ್ ಕೆ.ಆರ್., ಶ್ರೀ ಮೇದಾ ಪದವಿ ಪೂರ್ವ ಶಿಕ್ಷಣ ಸಂಸ್ಥೆಯ ವಾಣಿಜ್ಯ ಶಾಸ್ತç ವಿಭಾಗದ ಮುಖ್ಯಸ್ಥ ಖುಷ್ವಂತ್, ಕಾನೂನು ಮಾಪನ ಶಾಸ್ತç ಇಲಾಖೆಯ ಸಹಾಯಕ ನಿಯಂತ್ರಕ ಮನೋಜ್ ಕುಮಾರ್ ಸೇರಿದಂತೆ ಅಧಿಕಾರಿ- ಸಿಬ್ಬಂದಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ನ್ಯಾಯಬೆಲೆ ಅಂಗಡಿ ವಿತರಕರು, ಗ್ಯಾಸ್ ವಿತರಕ ಏಜೆನ್ಸಿದಾರರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. ---------------

ಪ್ರಯೋಗಾತ್ಮಕ ಸಂಶೋಧನೆಗಳಿಗೆ ತಂತ್ರಜ್ಞಾನ ಬಳಸಿರಿ: ಪ್ರೊ.ಎಂ.ಸಿ ಎರಿಸ್ವಾಮಿ

ಬಳ್ಳಾರಿ,ಮಾ.25(ಕರ್ನಾಟಕ ವಾರ್ತೆ): ಎಐ ಮತ್ತು ಮಷಿನ್ ಲರ್ನಿಂಗ್ ನಂತಹ ತಂತ್ರಜ್ಞಾನಗಳನ್ನು ಎಲ್ಲದಕ್ಕೂ ಬಳಕೆ ಮಾಡದೆ ಉತ್ತಮ ಸಾಮಾಜಿಕ ಸಂಶೋಧನೆಗಳು ಹೊರತರಲು ಪ್ರಯೋಗಾತ್ಮಕವಾಗಿ ಬಳಸಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ನಿಕಾಯದ ಡೀನರು ಮತ್ತು ಪ್ರ‍್ರಾಧ್ಯಾಪಕರಾದ ಪ್ರೊ.ಎಂ.ಸಿ ಎರಿಸ್ವಾಮಿ ಅವರು ಅಭಿಪ್ರಾಯಪಟ್ಟರು. ಇಲ್ಲಿನ ವಿವಿಯ ಡಾ.ಬಿ.ಆರ್ ಅಂಬೇಡ್ಕರ್ ಸಭಾಂಗಣದಲ್ಲಿ ಬುಧವಾರ ಶಿಕ್ಷಣ ಅಧ್ಯಯನ ವಿಭಾಗವು ಆಯೋಜಿಸಿದ್ದ ಒಂದು ದಿನದ “ಮುಂದಿನ ಪೀಳಿಗೆಯ ಉದಯೋನ್ಮುಖ ಸಂಶೋಧನಾ ಕೌಶಲ್ಯಗಳ ತಂತ್ರಜ್ಞಾನದೊAದಿಗೆ ಡೇಟಾ ವಿಶ್ಲೇಷಣೆ” ಎಂಬ ವಿಷಯ ಕುರಿತು ರಾಷ್ಟಿçÃಯ ಕಾರ್ಯಾಗಾರದ ಉದ್ಘಾಟನಾ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡಿದರು. ಇಂದು ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಅವುಗಳು ನಮ್ಮನ್ನು ಆವರಿಸಿಕೊಂಡಿವೆ. ಇದರಿಂದಾಗಿ ನಮ್ಮಲ್ಲಿರುವಂತ ವೈಚಾರಿಕ ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬ ವಿಷಾದವಿದೆ. ಆದರೆ ಎಐ ನಿಂದಾಗಿ ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಬೋಧನೆ ಸಾಧ್ಯವಾಗಿದೆ ಎಂದು ಹೇಳಿದರು. ತಾಂತ್ರಿಕ ಕೌಶಲ್ಯಗಳಿಂದ ದತ್ತಾಂಶಗಳನ್ನು ಹೆÀಚ್ಚು ಕಲೆಹಾಕುವ ಮೂಲಕ ಸಂಶೋಧನೆಯಲ್ಲಿ ಒಳ್ಳೆಯ ಫಲಿತಾಂಶವನ್ನು ಪಡೆಯಬಹುದು. ಸಮೀಕ್ಷೆ, ಸಂಶೋಧನೆಯ ಅಂತರಗಳ ವಿಸ್ತರಣೆಯ ಮೂಲಕ ಸಾಮಾಜಿಕ ಸಂಬAಧಗಳನ್ನು ಸುಧಾರಿಸಲು ತಂತ್ರಜ್ಞಾನ ಆಧಾರಿತ ಅಧ್ಯಯನಗಳಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ.ಎಂ.ಮುನಿರಾಜು ಅವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಶಿಕ್ಷಕನಿಗೆ ಸಮನಾಗಿ ಯಾವುದು ಇಲ್ಲ. ತಂತ್ರಜ್ಞಾನಗಳ ಬಳಕೆಯಿಂದಾಗಿ ತರಗತಿಗಳು ಇಂದು ಆಧುನಿಕ ಸ್ವರೂಪ ಪಡೆದುಕೊಂಡಿವೆ. ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಸಂಬAಧಗಳಲ್ಲಿ ಸಾಮರಸ್ಯಗಳ ಕೊರತೆ ಉಂಟಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ರಾಷ್ಟಿçÃಯ ಕಾರ್ಯಾಗಾರದ ಸಂಚಾಲಕರಾದ ಡಾ.ಸುಷ್ಮಾ ಎನ್ ಜೋಗನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿಯ ಕುಲಸಚಿವರಾದ ಪ್ರೊ.ಎನ್.ಎಂ ಸಾಲಿ, ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ.ಕೆ.ತಿಯಾಗು, ಆಂಧ್ರಪ್ರದೇಶದ ಪ್ರಾದೇಶಿಕ ಎನ್‌ಸಿಇಆರ್‌ಟಿ ಕೇಂದ್ರ ನೆಲ್ಲೂರಿನ ಸಹ ಪ್ರಾಧ್ಯಾಪಕರಾದ ಡಾ.ಪ್ರಕಾಶ ಬಡಿಗೇರ್, ಕಾರ್ಯಾಗಾರದ ಸಹ ಸಂಚಾಲಕರಾದ ಡಾ.ಗೋಪಾಲ್ ಎನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಒಂದು ದಿನದ ರಾಷ್ಟಿçÃಯ ಕಾರ್ಯಾಗಾರದಲ್ಲಿ ವಿವಿಧ ಬಿ.ಇಡಿ ಕಾಲೇಜುಗಳ ಅಧ್ಯಾಪಕರುಗಳು, ಸಂಶೋಧನಾರ್ಥಿಗಳು ಸೇರಿದಂತೆ 200ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಜರಿದ್ದರು. ಪಾಂಡುರAಗ ನಿರೂಪಿಸಿದರು. ವಿವಿಯ ಶಿಕ್ಷಣ ನಿಕಾಯದ ಡೀನರು ಮತ್ತು ವಿಭಾಗದ ಮುಖ್ಯಸ್ಥರಾದ ಡಾ ಸಾಹೇಬ್ ಅಲಿ ಹೆಚ್ ನಿರಗುಡಿ ಅತಿಥಿಗಳನ್ನು ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ ಪ್ರಶಾಂತ ಕುಮಾರ ಟಿ ಎಂ ವಂದಿಸಿದರು. ವಿವಿಯ ಎಲ್ಲ ನಿಕಾಯದ ಡೀನರು, ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ------------

ಬಳ್ಳಾರಿ: 40 ಗಂಟೆಗಳ ಮಧ್ಯಸ್ಥಿಕೆ ತರಬೇತಿ ಶಿಬಿರಕ್ಕೆ ನ್ಯಾ.ಕೆ.ಜಿ ಶಾಂತಿ ಚಾಲನೆ | ನ್ಯಾಯಾಂಗ ವ್ಯವಸ್ಥೆಯಲ್ಲಿ ಮಧ್ಯಸ್ಥಿಕೆದಾರರ ಪಾತ್ರ ಮಹತ್ತರ

ಬಳ್ಳಾರಿ,ಮಾ.25(ಕರ್ನಾಟಕ ವಾರ್ತೆ): ನ್ಯಾಯಾಲಯಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಪ್ರಕರಣಗಳ ಹೊರೆ ತಗ್ಗಿಸಲು ಮತ್ತು ಸಾರ್ವಜನಿಕರಿಗೆ ತ್ವರಿತ ನ್ಯಾಯ ಒದಗಿಸಲು ‘ಮಧ್ಯಸ್ಥಿಕೆ' ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು. ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಮಧ್ಯಸ್ಥಿಕೆದಾರರಿಗೆ ಮಾ.25 ರಿಂದ 29 ರ ವರೆಗೆ ನಗರದ ತಾಳೂರು ರಸ್ತೆಯ ಹೊಸ ನ್ಯಾಯಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ 40 ಗಂಟೆಗಳ ಮಧ್ಯಸ್ಥಿಕೆ ತರಬೇತಿ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಾಂಪ್ರದಾಯಿಕ ನ್ಯಾಯಾಲಯದ ಪ್ರಕ್ರಿಯೆಗಿಂತ ಮಧ್ಯಸ್ಥಿಕೆಯು ಭಿನ್ನವಾಗಿದೆ. ಇಲ್ಲಿ ಮಧ್ಯಸ್ಥಿಕೆದಾರರು ಕೇವಲ ಸಮಸ್ಯೆಯನ್ನು ಆಲಿಸದೆ, ಉಭಯ ಪಕ್ಷಗಳ ನಡುವೆ ಸೌಹಾರ್ದಯುತ ವಾತಾವರಣ ನಿರ್ಮಿಸಿ ಸಮಸ್ಯೆ ಇತ್ಯರ್ಥಕ್ಕೆ ಅನುವು ಮಾಡಿಕೊಡುತ್ತಾರೆ. ಈ 5 ದಿನಗಳ ತರಬೇತಿಯು ಕೇವಲ ಕಾನೂನು ತಿಳುವಳಿಕೆಯನ್ನಷ್ಟೇ ನೀಡದೆ, ಮಧ್ಯಸ್ಥಿಕೆದಾರರ ಶಾಂತಿಯುತ ಚಿಂತನೆಯನ್ನು ವೃದ್ಧಿಸಿ ಅವರ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮಧ್ಯಸ್ಥಿಕೆಯಿಂದ ಪ್ರಕರಣಗಳು ಶಾಶ್ವತವಾಗಿ ಇತ್ಯರ್ಥಗೊಳ್ಳುತ್ತವೆ ಮತ್ತು ಮೇಲ್ಮನವಿ ಸಲ್ಲಿಸುವ ಅಗತ್ಯವಿರುವುದಿಲ್ಲ. ‘ನಾನು’ ಎಂಬ ಅಹಂಕಾರದಿAದಲೇ ಸಮಾಜದಲ್ಲಿ ಹೆಚ್ಚಿನ ವಿವಾದಗಳು ಹುಟ್ಟಿಕೊಳ್ಳುತ್ತವೆ. ಈ ಅಹಂಕಾರವನ್ನು ಬಿಟ್ಟು ‘ನಾವು’ ಎಂಬ ಭಾವನೆಯೊಂದಿಗೆ ಕೆಲಸ ಮಾಡಿದರೆ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡ ಕಡಿಮೆಯಾಗಿ ಸಮಾಜದಲ್ಲಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ನ್ಯಾಯಾಧೀಶರು ಕಿವಿಮಾತು ಹೇಳಿದರು. ಹಿರಿಯ ತರಬೇತುದಾರರಾದ ಬ್ರಿಂದಾ ನಂದಕುಮಾರ್ ಅವರು ಮಾತನಾಡಿ, ಇಂದಿನ ವೇಗದ ಯುಗದಲ್ಲಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಸೌಹಾರ್ದಯುತವಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ‘ಮಧ್ಯಸ್ಥಿಕೆ' ಅತ್ಯಂತ ಅವಶ್ಯಕ. ಮಧ್ಯಸ್ಥಿಕೆ ಎಂಬುದು ಕೇವಲ ವಕೀಲರಿಗೆ ಅಥವಾ ಮಧ್ಯಸ್ಥಿಕೆದಾರರಿಗೆ ಸೀಮಿತವಾದ ತಾಂತ್ರಿಕ ಪ್ರಕ್ರಿಯೆಯಲ್ಲ. ಇದೊಂದು ಜೀವನ ಕೌಶಲ್ಯ. ಇದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಉತ್ತಮ ಬಾಂಧವ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು. ಹಳೆಯ ಕಾಲದಂತೆ ದಶಕಗಳ ಕಾಲ ನ್ಯಾಯಾಲಯದ ಮೊರೆ ಹೋಗಿ ಕಾಯುವ ತಾಳ್ಮೆ ಇಂದಿನ ಪೀಳಿಗೆಗೆ ಇಲ್ಲ. ಹಾಗಾಗಿ, ಕಾಲಕ್ಕೆ ತಕ್ಕಂತೆ ನಾವು ಬದಲಾಗಬೇಕಿದೆ ಮತ್ತು ಮಧ್ಯಸ್ಥಿಕೆಯಂತಹ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಿದೆ. ಬಳ್ಳಾರಿಗೆ ಇದು ತಮ್ಮ ಮೊದಲ ಭೇಟಿಯಾಗಿದ್ದು, ಇಲ್ಲಿನ ಕಾನೂನು ಆಸಕ್ತರೊಂದಿಗೆ ಸಂವಹನ ನಡೆಸುತ್ತಿರುವುದು ಸಂತಸ ತಂದಿದೆ ಎಂದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಮ್ ಬ್ರಹ್ಮಂ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ, ‘ಮಧ್ಯಸ್ಥಿಕೆ' ಪ್ರಕ್ರಿಯೆಯು ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವಲ್ಲಿ ಪ್ರಬಲ ಅಸ್ತçವಾಗಿ ಹೊರಹೊಮ್ಮುತ್ತಿದೆ ಎಂದು ಹೇಳಿದರು. ಪ್ರಪಂಚದ ದೊಡ್ಡ ದೊಡ್ಡ ಯುದ್ಧಗಳನ್ನೇ ಮಧ್ಯಸ್ಥಿಕೆಯ ಮೂಲಕ ನಿಲ್ಲಿಸಲು ಸಾಧ್ಯವಿರುವಾಗ, ಇಬ್ಬರು ಕಕ್ಷಿದಾರರ ನಡುವಿನ ವಿವಾದಗಳನ್ನು ಬಗೆಹರಿಸುವುದು ಅಸಾಧ್ಯವಲ್ಲ. ಪ್ರಸ್ತುತ ನ್ಯಾಯಾಲಯಗಳಿಂದ ಮಧ್ಯಸ್ಥಿಕೆಗೆ ಬರುವ ಪ್ರಕರಣಗಳಲ್ಲಿ ಸುಮಾರು ಶೇ.95 ಪ್ರಕರಣಗಳು ಸರಿಯಾದ ಸಂಧಾನವಾಗದೆ ವಾಪಸ್ ಹೋಗುತ್ತಿವೆ. ಈ ಸ್ಥಿತಿಯನ್ನು ಬದಲಾಯಿಸಿ, ತರಬೇತಿಯ ನಂತರ ವಕೀಲರು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು. ಈ ತರಬೇತಿ ಕಾರ್ಯಾಗಾರವು ವಕೀಲರಿಗೆ ಹೊಸ ದೃಷ್ಟಿಕೋನವನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳು ನ್ಯಾಯಾಲಯದ ಹೊರಗಡೆಯೇ ಸುಗಮವಾಗಿ ಇತ್ಯರ್ಥವಾಗಲಿವೆ ಎಂಬ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಎನ್.ಹೊಸಮನೆ ಸೇರಿದಂತೆ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ನೂತನವಾಗಿ ಆಯ್ಕೆಯಾದ ಮಧ್ಯಸ್ಥಿಕೆದಾರರು, ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳು ಉಪಸ್ಥಿತರಿದ್ದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತ್ರೀವೇಣಿ ಪತ್ತಾರ್ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. -------------

ಮಂಗಳವಾರ, ಮಾರ್ಚ್ 24, 2026

ವಿವಿಧೆಡೆ ದಾಳಿ: ಓರ್ವ ಬಾಲಕಾರ್ಮಿಕನ ರಕ್ಷಣೆ

ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮಂಗಳವಾರ ನಗರದ ವಿವಿಧೆಡೆ ದಾಳಿ ನಡೆಸಿ ಓರ್ವ ಬಾಲ ಕಾರ್ಮಿಕನನ್ನು ರಕ್ಷಿಸಲಾಗಿದೆ. ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಹಾಗೂ ಪ್ಯಾನ್-ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ಅಂಗವಾಗಿ ಉಪತಹಶೀಲ್ದಾರ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಟಾಸ್ಕ್ಪೋರ್ಸ್ ಸಮಿತಿ ಸಭೆ ನಡೆಸಿ ಈ ದಾಳಿ ಕೈಗೊಳ್ಳಲಾಗಿದೆ. ನಗರದ ಬೆಂಗಳೂರು ರಸ್ತೆ, ಬಾಪೂಜಿ ನಗರ, ಎ.ಪಿ.ಎಂ.ಸಿ ಹತ್ತಿರದ ವಿವಿಧ ಸ್ಥಳಗಳಲ್ಲಿರುವ ಗ್ಯಾರೇಜ್, ಮೆಕ್ಯಾನಿಕ್ ಶಾಪ್, ಬೇಕರಿ, ಜೀನ್ಸ್ ಹೊಲಿಗೆ ಘಟಕಗಳ ಮೇಲೆ ಟಾಸ್ಕ್ ಪೋರ್ಸ್ ಸಮಿತಿ ಮೂಲಕ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳು ಕೆಲಸ ಮಾಡುತ್ತಿರುವುದನ್ನು ಗಮನಿಸಲಾಯಿತು. ತಕ್ಷಣ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದ 01 ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ವಶಕ್ಕೆ ಪಡೆದು ಮಕ್ಕಳ ಹೇಳಿಕೆಗಳನ್ನು ಸ್ಥಳದಲ್ಲಿಯೇ ಪಡೆದುಕೊಂಡು ಪೋಷಕರ ವಶಕ್ಕೆ ಒಪ್ಪಿಸಲಾಯಿತು. ಇದೇ ವೇಳೆ ಎಲ್ಲಾ ಉದ್ದಿಮೆಗಳ ಮಾಲೀಕರಿಗೆ ಕರಪತ್ರ ಹಾಗೂ ಪೋಸ್ಟರ್‌ಗಳನ್ನು ನೀಡಿ ಜಾಗೃತಿ ಮೂಡಿಸಲಾಯಿತು. ಈ ಟಾಸ್ಕ್ ಪೋರ್ಸ್ ಸಮಿತಿಯಲ್ಲಿ ಬಳ್ಳಾರಿಯ 1ನೇ ವೃತ್ತದ ಕಾರ್ಮಿಕ ನಿರೀಕ್ಷಕ ರಮೇಶ್, 2ನೇ ವೃತ್ತದ ಕಾರ್ಮಿಕ ನಿರೀಕ್ಷಕ ಪರಶುರಾಮ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಮೌನೇಶ್, ಆರೋಗ್ಯ ಇಲಾಖೆಯ ಮುಸ್ತಾಕ್ ಅಹಮದ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನೂರಪ್ಪ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಕಾರ್ತಿಕ್ ಮತ್ತು ರೀಚ್ ಸಂಸ್ಥೆಯ ಸಂಯೋಜಿಕಿ ಲಕ್ಷಿö್ಮÃ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ----------- --

ಮಾ.26 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಗಳ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದÀ 11 ಕೆ.ವಿ ಫೀಡರ್ ಗಳಾದ ಎಫ್-33, ಎಫ್-73 ವ್ಯಾಪ್ತಿಯ ವಿವಿಧೆಡೆ ಮಾ.26 ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು: ಎಫ್-33 ರ ವ್ಯಾಪ್ತಿಯ ಕೆ.ಚ್.ಬಿ. ಕಾಲೋನಿ, ನೇತಾಜಿ ನಗರ, ಇನ್ನಾರೆಡ್ಡಿ ಲೇಔಟ್, ಇನ್ ಫ್ಯಾಂಟರಿ ರಸ್ತೆ, ವಾಸವಿ ಶಾಲೆ, ಕೊಳಗಲ್ ರಸ್ತೆ, ವಿದ್ಯಾನಗರ, ಕಲ್ಯಾಣಿ ಕಾಲೋನಿ, ಭತ್ರಿ ರಸ್ತೆ, ಭತ್ರಿ, ಗುರು ಕಾಲೋನಿ, ಸತ್ಯವಾಣಿ ನಗರ, ಸಿದ್ಧಾರ್ಥ ನಗರ, ವಿಯಾನಿ ಶಾಲೆ. ಎಫ್-73 ರ ವ್ಯಾಪ್ತಿಯ ಬಸವನಕುಂಟೆ, ಕೋಟೆ ಪ್ರದೇಶ, 1 ನೇ ಗೇಟ್, 2 ನೇ ಗೇಟ್, ಸಿದ್ದಾರ್ಥ ನಗರ, ಸುಧಾಕ್ರಾಸ್, ಒ.ಪಿ.ಡಿ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಾಗಾಗಿ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -----------------

ಯುವಕರು ಕೌಶಲ್ಯಕ್ಕೆ ಒತ್ತು ನೀಡಿ: ಪಿ.ಎಸ್.ಹಟ್ಟಪ್ಪ

ಬಳ್ಳಾರಿ,ಮಾ.24(ಕರ್ನಾಟಕ ವಾರ್ತೆ): ಇಂದಿನ ಯುವಕರು ಕೌಶಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್ ಹಟ್ಟಪ್ಪ ಅವರು ಹೇಳಿದರು. ಕೇಂದ್ರ ಸರ್ಕಾರದ ಮೇರಾ ಯುವ ಭಾರತ ಬಳ್ಳಾರಿ ಹಾಗೂ ಬಿಡಿಡಿಎಸ್ ಸಹಯೋಗದಲ್ಲಿ ಬಿಡಿಡಿಎಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಂತರ ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಪೀಳಿಗೆ ಕೌಶಲ್ಯ ಚಟುವಟಿಕೆಗಳನ್ನು ಅಳವಡಿಸಿಕೊಂಡಾಗ ಮಾತ್ರ ದೇಶಕ್ಕೆ ಅಮೂಲ್ಯವಾದ ತಮ್ಮ ಕೊಡುಗೆ ನೀಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಮೇರಾ ಯುವ ಭಾರತ ಕೇಂದ್ರದ ಯುವ ಅಧಿಕಾರಿ ಬುಕ್ಕ ಸಂಜೀವ್ ಅವರು ಮಾತನಾಡಿ, ಭಾರತದಲ್ಲಿ ಪ್ರತಿ 50 ಕಿಲೋಮೀಟರ್ ಗೆ ಭಾಷೆ, ಸಂಸ್ಕೃತಿ, ಆಹಾರ ಪದ್ಧತಿ ಬದಲಾವಣೆ ಕಾಣಬಹುದು. ಈಗಿನ ಯುವಕರಿಗೆ ಇವುಗಳ ಪರಿಚಯ ಉತ್ತಮ ಮನೋಭಾವನೆ ಬೆಳೆಸಿಕೊಳ್ಳಲು ಸಹಕಾರಿ ಎಂದು ತಿಳಿಸಿದರು. ಸಿಇಡಿಒಕೆ ವಿನೋದ್ ಕುಮಾರ್ ಅವರು ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿರುವ ವಿಶೇಷತೆಗಳ ಕುರಿತು ವಿವರಣೆ ನೀಡಿದರು. ಎಸ್‌ಜಿಆರ್‌ಸಿಎಂ ಕಾಲೇಜಿನ ಪ್ರಾಂಶುಪಾಲ ಡಿ.ರಾಮಕೃಷ್ಣ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಳ್ಳಾರಿಯ ಸಂಸ್ಕೃತಿ, ಬಿಸಿಲಿನ ಗಮ್ಮತ್ತು ಹಾಗೂ ಇಲ್ಲಿನ ಆಹಾರ ಪದ್ಧತಿ ಬಗ್ಗೆ ತಿಳಿಸಿಕೊಟ್ಟರು. ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮರಿ ಗಾದಿಲಿಂಗಪ್ಪ ಅವರು ಮಾತನಾಡಿ, ಯುವ ಜನತೆ ದೇಶದ ಶಕ್ತಿ ಎಂದು ಹೇಳುವ ಮೂಲಕ ಅಂತರ ಜಿಲ್ಲಾ ಯುವ ವಿನಿಮಯದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಟಿ.ಎನ್ ಮಾರುತಿ ಪ್ರಸನ್ನ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇತರರು ಉಪಸ್ಥಿತರಿದ್ದರು. -----------