ಗುರುವಾರ, ಮೇ 8, 2025
ಕಾಣೆಯಾದ ಬಾಲಕನ ಪತ್ತೆಗಾಗಿ ಮನವಿ
ಬಳ್ಳಾರಿ,ಮೇ 08(ಕರ್ನಾಟಕ ವಾರ್ತೆ)
ಸಂಡೂರು ತಾಲ್ಲೂಕಿನ ವಡ್ಡು ಗ್ರಾಮದ ರೈಲ್ವೇ ಗೇಟ್ ಹತ್ತಿರದ ನಿವಾಸಿಯಾದ ಸುಶಾಂತ್.ಕೆ ಎನ್ನುವ 16 ವರ್ಷದ ಬಾಲಕ ಮೇ 03 ರಂದು ಕಾಣೆಯಾಗಿದ್ದು, ಈ ಕುರಿತು ತೋರಣಗಲ್ಲು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ತೋರಣಗಲ್ಲು ಪೊಲೀಸ್ ಸಬ್ ಇನ್ಸೆ÷್ಪಕ್ಟರ್ ಮನವಿ ಮಾಡಿದ್ದಾರೆ.
ಚಹರೆ: ಅಂದಾಜು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ದುಂಡು ಮುಖ, ಹೊಂದಿರುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ ಭಾಷೆ ಮಾತನಾಡುತ್ತಾನೆ.
ಕಾಣೆಯಾದ ಬಾಲಕನÀ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100, 102 ಬಳ್ಳಾರಿ ಎಸ್.ಪಿ ಅವರ ಕಚೇರಿ ದೂ.08392-258300, ತೋರಣಗಲ್ಲು ಡಿ.ಎಸ್.ಪಿ ದೂ.9480803010, ಸಂಡೂರು ವೃತ್ತ ಸಿ.ಪಿ.ಐ ಮೊ.08395-260100, 9480803036, ತೋರಣಗಲ್ಲು ಪೊಲೀಸ್ ಠಾಣೆ ದೂ.08395-250100, ಮೊ.9480803062 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ