ಮಂಗಳವಾರ, ಮೇ 13, 2025
ಯುವಕ ಕಾಣೆ ನಾಪತ್ತೆ ಮನವಿ
ಬಳ್ಳಾರಿ,ಮೇ 13(ಕರ್ನಾಟಕ ವಾರ್ತೆ):
ನಗರದ ಸಿ.ಎಂ.ಸಿ ಕಾಲೋನಿಯ ನಿವಾಸಿಯಾದ ತೌಸಿಫ್ ಅಹಮದ್ ಎನ್ನುವ 19 ವರ್ಷದ ಯುವಕ ಮೇ 07 ರಂದು ಕಾಣೆಯಾಗಿದ್ದು, ಈ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್ಪೆಕ್ಟರ್ ಮನವಿ ತಿಳಿಸಿದ್ದಾರೆ.
ಚಹರೆ ಗುರುತು:
ಅಂದಾಜು 5.10 ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ತೆಳುವಾದ ಮೈಕಟ್ಟು, ಕನ್ನಡಕ ಧರಿಸುತ್ತಾನೆ. ಕಾಣೆಯಾದ ಸಂದರ್ಭದಲ್ಲಿ ಗ್ರೀನ್ ಲೈಟ್ ಕ್ರಿಮ್ ಕಲರ್ ಮಿಕ್ಸಿಂಗ್ ಕಾಲರ್ ನೆಕ್ ಟೀ ಅಪ್ ಸ್ಲೀವ್ಸ್ ಟಿಶರ್ಟ್ ಹಾಗೂ ಕ್ರೀಮ್ ಕಲರ್ ನೈಟ್‌ಪ್ಯಾಂಟ್ ಧರಿಸಿರುತ್ತಾನೆ. ಬ್ಲೂ ಕಲರ್ ಚಪ್ಪಲಿ ಮತ್ತು ಬ್ಲೂ ಕಲರ್ ಬ್ಯಾಗ್ ಇರುತ್ತದೆ.
ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731,244145, ಪಿ.ಐ ಮೊ.9480803047, ಪಿಎಸ್‌ಐ 94808203084 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ