ಶುಕ್ರವಾರ, ಮಾರ್ಚ್ 7, 2025

ಏ.09 ರಂದು ರಂದು ಪರಿಸರ ಸಾರ್ವಜನಿಕ ಆಲಿಕೆ ಸಭೆ

ಬಳ್ಳಾರಿ,ಮಾ.07(ಕರ್ನಾಟಕ ವಾರ್ತೆ): ಸಂಡೂರು ತಾಲ್ಲೂಕಿನ ಜೈಸಿಂಗ್ ಪುರ ಗ್ರಾಮದಲ್ಲಿ ಜೆ.ಎಸ್.ಡಬ್ಲೂö್ಯ ಸ್ಟೀಲ್ ಲಿಮಿಟೆಡ್ ಇವರು ‘ಜೈಸಿಂಗ್ ಪುರ ಸೌಥ್ ಐರನ್ ಒರ್ ಬ್ಲಾಕ್’ ನಲ್ಲಿ ವಾರ್ಷಿಕ 1.6 ಮಿಲಿಯನ್ ಟನ್ ಉತ್ಪಾದನಾ ಸಾಮರ್ಥ್ಯ ಕಬ್ಬಿಣದ ಗಣಿಗಾರಿಕೆ ಯೋಜನೆಯನ್ನು ಒಟ್ಟು 297.38 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಯನ್ನು 05 ಹಳೆಯ ಗುತ್ತಿಗೆಗಳು ವಿಲೀನಗೊಳಿಸುವ ಹರಾಜು ಅರಣ್ಯ ಪ್ರದೇಶದಲ್ಲಿ ಯೋಜನೆ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದು, ಇದರ ಸಂಬAಧ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಅಧ್ಯಕ್ಷತೆಯಲ್ಲಿ ಏ.09 ರಂದು ಬೆಳಿಗ್ಗೆ 11 ಗಂಟೆಗೆ ಜೆ.ಎಸ್.ಡಬ್ಲೂö್ಯ ಸ್ಟೀಲ್ ಲಿಮಿಟೆಡ್ ಇವರು ಜೈಸಿಂಗ್ ಪುರ ಗ್ರಾಮ(ಜೈಸಿಂಗ್ ಪುರ ಸೌಥ್ ಬ್ಲಾಕ್)ದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆ ನಡೆಸಲಾಗುವುದು. ಇದಕ್ಕೆ ಸಂಬAಧಿಸಿದAತೆ ಉದ್ದೇಶಿತ ಯೋಜನೆಯ ಕಾರ್ಯ ನಿರ್ವಾಹಕ ಸಾರಾಂಶ ಪ್ರತಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಸಂಬAಧಿಸಿದ ಕಚೇರಿಗಳಲ್ಲಿ ಸಾರಾಂಶ ಪ್ರತಿಯನ್ನು ಸಾರ್ವಜನಿಕರ ಗಮನಕ್ಕೆ ಇಡಲಾಗಿದೆ. ಸುತ್ತಮುತ್ತಲಿನ ಸಾರ್ವಜನಿಕರು ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ, ಅಹವಾಲು ಸಲ್ಲಿಸಬಹುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಸಿದ್ದೇಶ್ವರ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ