ಸೋಮವಾರ, ಮಾರ್ಚ್ 17, 2025

ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿ ಪ್ರಕಟ

ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): 2021ರಲ್ಲಿ ಮುದ್ರಣಗೊಂಡು ಪ್ರಕಟಣೆಗೊಂಡ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಪುಸ್ತಕಗಳ ಪಟ್ಟಿಯನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ ಎಂದು ಬಳ್ಳಾರಿ ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನರಸಣ್ಣ ಅವರು ತಿಳಿಸಿದ್ದಾರೆ. 2021ರಲ್ಲಿ ಮುದ್ರಣಗೊಂಡ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಗಾಗಿ ಸ್ವೀಕರಿಸಿದ ಕನ್ನಡ, ಆಂಗ್ಲ ಹಿಂದಿ ಮತ್ತು ಭಾರತೀಯ ಇತರ ಭಾಷಾ ಪುಸ್ತಕಗಳನ್ನು ಆಯ್ಕೆ ಸಮಿತಿ ಮುಂದೆ ಮಂಡಿಸಲಾಗಿತ್ತು. ಆಯ್ಕೆ ಸಮಿತಿಯು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳ್ಳಿಸಿದ್ದು, ಆಯ್ಕೆಯಾದ ಪುಸ್ತಕಗಳನ್ನು ಇಲಾಖೆಯ ಜಾಲತಾಣ dpl.karnataka.gov.in ರಲ್ಲಿ ಮಾ.15 ರಂದು ಪ್ರಕಟಿಸಲಾಗಿದೆ. ಲೇಖಕರು, ಲೇಖಕ-ಪ್ರಕಾಶಕರು ಮತ್ತು ಪ್ರಕಾಶಕರು ಮತ್ತು ಪುಸ್ತಕ ಸರಬರಾಜುದಾರರು ಸಲ್ಲಿಸಿದ ಪುಸ್ತಕಗಳ ಹೆಸರು, ಲೇಖಕರ ಹೆಸರು, ಪುಟ ಸಂಖ್ಯೆ ಮುಖ ಬೆಲೆ, ನಿಗದಿತ ಬೆಲೆ, ಪುಸ್ತಕ ಅಳತೆ ಹಾಗೂ ಇತರೆ ತಾಂತ್ರಿಕ ವ್ಯತ್ಯಾಸಗಳಿದ್ದಲ್ಲಿ ಮಾ.18 ರೊಳಗಾಗಿ ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ, ವಿಶ್ವೇಶ್ವರಯ್ಯ ಮುಖ್ಯಗೋಪುರ, 4ನೇ ಮಹಡಿ, ಡಾ. ಅಂಬೇಡ್ಕರ್ ವೀದಿ, ಬೆಂಗಳೂರು-560001. ಇಲ್ಲಿಗೆ ಲಿಖಿತವಾಗಿ ಅಥವಾ ಇ-ಮೇಲ್ ಮೂಲಕ ಮನವಿಗಳನ್ನು ಸಲ್ಲಿಸಬಹುದಾಗಿದೆ. ನಂತರ ಬಂದ ಮನವಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ