ಮಂಗಳವಾರ, ಮಾರ್ಚ್ 25, 2025
ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಮಾ.25(ಕರ್ನಾಟಕ ವಾರ್ತೆ):
ನಗರದ ಹನುಮಾನ್ ನಗರ ಬಡಾವಣೆಯ ನಿವಾಸಿಯಾದ ಗಣೇಶ್ ಎನ್ನುವ 28 ವರ್ಷದ ವ್ಯಕ್ತಿಯು ಮಾ.20 ರಂದು ಕಾಣೆಯಾಗಿದ್ದು, ಈ ಕುರಿತು ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ತಿಳಿಸಿದ್ದಾರೆ.
ಚಹರೆ ಗುರುತು:
ಅಂದಾಜು 5.6 ಅಡಿ ಎತ್ತರ, ದುಂಡು ಮುಖ, ಗೋದಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮೀಸೆ ಹಾಗೂ ಗಡ್ಡ ಹೊಂದಿರುತ್ತಾನೆ. ಎಡಗೈ ಮೇಲೆ ವಿಕ್ರಮ್ ಎಂದು ಆಂಗ್ಲ ಭಾಷೆಯಲ್ಲಿ ಹಚ್ಚೆ ಹಾಕಿಸಿರುತ್ತಾನೆ.
ಕಾಣೆಯಾದ ಸಂದರ್ಭದಲ್ಲಿ ಬಿಳಿ ಮತ್ತು ನೀಲಿ ಬಣ್ಣದ ತುಂಬು ತೋಳಿನ ಚೆಕ್ಸ್ ಶರ್ಟ್ ಹಾಗೂ ಬೂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ.
ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ದೂ.08392-272022 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ