ಮಂಗಳವಾರ, ಮಾರ್ಚ್ 18, 2025

ಮಾ.20, 21 ರಂದು ಎರಡು ದಿನಗಳ ರಾಷ್ಟçಮಟ್ಟದ ವಿಚಾರ ಸಂಕಿರಣ

ಬಳ್ಳಾರಿ,ಮಾ.18(ಕರ್ನಾಟಕ ವಾರ್ತೆ): ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ 12 ನಿಕಾಯಗಳಲ್ಲಿ ಒಂದಾದ ಮಾನವಿಕ ಮತ್ತು ಭಾಷಾ ನಿಕಾಯದ ಕನ್ನಡ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಛೇರಿ ಕಲಬುರಗಿ ವತಿಯಿಂದ 2025ರ ಮಾರ್ಚ್ 20 ಮತ್ತು 21ರಂದು “ಹೈದರಾಬಾದ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ” ಎಂಬ ವಿಷಯದ ಮೇಲೆ ಎರಡು ದಿನಗಳ ರಾಷ್ಟçಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನಿವೃತ್ತ ಸಮಕುಲಪತಿಗಳಾದ ಪ್ರೊ. ಎಸ್. ಚಂದ್ರಶೇಖರ ಅವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಪ್ರಧಾನ ಭಾಷಣವನ್ನು ಮಾಡಲಿದ್ದಾರೆ. ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಬಟ್ಟು ಸತ್ಯನಾರಾಯಣ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪತ್ರಾಗಾರ ಇಲಾಖೆಯ ನಿರ್ದೇಶಕರಾದ ಡಾ. ಗವಿಸಿದ್ದಯ್ಯ, ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಆರ್.ಆರ್.ಬಿರಾದಾರ, ಹಿರಿಯ ಸಾಹಿತಿಗಳಾದ ಅಪ್ಪಾರಾವ ಅಕ್ಕೋಣಿ ಹಾಗೂ ಡಾ.ವೀರಶೆಟ್ಟಿ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪ್ರೊ.ವಿಕ್ರಮ ವಿಸಾಜಿಯವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಶಿವಗಂಗಾ ರುಮ್ಮಾ ಅವರು ವಿಚಾರ ಸಂಕಿರಣದ ಸಂಯೋಜಕರಾಗಿರುತ್ತಾರೆ. ಎರಡು ದಿನಗಳ ಕಾಲ ನಡೆಯಲಿರುವ ವಿಚಾರ ಸಂಕಿರಣದಲ್ಲಿ ನಾಡಿನ ಹಲವು ಇತಿಹಾಸ ತಜ್ಞರು ಒಟ್ಟು ಎಂಟು ಉಪನ್ಯಾಸಗಳನ್ನು ಮಂಡಿಸಲಿದ್ದಾರೆ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ದೇಶದ ಪ್ರತಿಷ್ಠಿತ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಯಾಗಿದ್ದು, 2009ರಿಂದ ಇದು ಕಲಬುರಗಿಯ ಕಡಗಂಚಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಿಂದುಳಿದ ಪ್ರದೇಶವಾದ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಗುಣಮಟ್ಟವನ್ನು ಪರಿಣಾಮಕಾರಿಯಾಗಿ ಸುಧಾರಿಸುವ ಗುರಿಯೊಂದಿಗೆ ಇದನ್ನು ಇಲ್ಲಿ ಸ್ಥಾಪಿಸಲಾಗಿದ್ದು, ಕರ್ನಾಟಕದಾದ್ಯಂತ ಇದು ತನ್ನ ಪ್ರಾದೇಶಿಕ ವ್ಯಾಪ್ತಿಯನ್ನು ಹೊಂದಿದೆ. ಬೋಧನೆ, ಕಲಿಕೆ, ತರಬೇತಿ, ಸಂಶೋಧನೆ ಮತ್ತು ಕೌಶಲ್ಯಾಭಿವೃದ್ಧಿಯನ್ನು ಹೆಚ್ಚಿಸುವುದು ಇದರ ಮೂಲ ಉದ್ದೇಶವಾಗಿದ್ದು, ಪ್ರಸ್ತುತ ವಿಶ್ವವಿದ್ಯಾಲಯವು ಕಲಬುರಗಿ-ಆಳಂದ ರಸ್ತೆಗೆ ಹೊಂದಿಕೊAಡAತೆ, ಕಡಗಂಚಿ ಗ್ರಾಮದ ಹತ್ತಿರ ವಿಶಾಲ 654 ಎಕರೆಯಲ್ಲಿ ಹರಡಿಕೊಂಡಿದೆ. ಮೊದಲ ದಿನ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನ ಉಪನಿರ್ದೇಶಕರಾದ ಡಾ.ಎಸ್.ಕೆ.ಅರುಣಿಯವರು ‘ಹೈದರಾಬಾದ ನಿಜಾಮರ ಆಳ್ವಿಕೆಯಲ್ಲಿ ಇತಿಹಾಸ ಮತ್ತು ಪುರಾತತ್ವ ಅಧ್ಯಯನಗಳು ಮತ್ತು ಕನ್ನಡ ನಾಡಿನ ಚರಿತ್ರೆ ರಚನೆಯ ಬೆಳವಣಿಗೆ’, ಡಾ. ರಘುಶಂಖ ಭಾತಂಬ್ರಾ ಅವರು ‘ಹೈದರಾಬಾದ ಸಂಸ್ಥಾನ ಮತ್ತು ಬ್ರಿಟಿಷರ ಸಂಬAಧಗಳುʼ, ಅಬ್ದುಲ್ ಅಜೀಜ್ ರಜಪೂತ್ ಅವರು ‘ಹೈದರಾಬಾದ ನಿಜಾಮರ ಕಾಲದ ರತ್ನಾಭರಣಗಳುʼ ಎಂಬ ವಿಷಯಗಳ ಮೇಲೆ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಎರಡನೆ ದಿನದ ಗೋಷ್ಠಿಗಳಲ್ಲಿ ಡಾ.ಬಸವರಾಜ ಕೋಡಗುಂಟಿಯವರು ‘ಹೈದರಾಬಾದ ಸಂಸ್ಥಾನ: ಭಾಷಿಕ ಪರಿಸರʼ, ಡಾ. ವೀರಶೆಟ್ಟಿಯವರು ‘ಮುಲ್ಕಿ ಚಳುವಳಿ: ಇತಿಹಾಸ ಮತ್ತು ಸ್ವರೂಪʼ, ಬೋಡೆ ರಿಯಾಜ್ ಅಹ್ಮದ್ ಅವರು ‘ಹೈದರಾಬಾದ ಸಂಸ್ಥಾನ: ಶೈಕ್ಷಣಿಕ ಕೊಡುಗೆಗಳುʼ, ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಅವರು ‘ಹೈದರಾಬಾದ ಸಂಸ್ಥಾನ: ಚಿತ್ರಕಲೆʼ ಹಾಗೂ ಡಾ. ಅಬ್ದುಲ್ ಮಾಜಿದ್ ಅವರು ‘ಮರೆಯಿಂದ ಬೆಳಕಿಗೆ: ಮಹಿಳಾ ಶಿಕ್ಷಣʼ ಎಂಬ ವಿಷಯಗಳ ಮೇಲೆ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಡಾ. ಲಕ್ಷö್ಮಣ ದಸ್ತಿಯವರು ಕಾರ್ಯಕಗ್ರಮದ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಇದುವರೆಗೆ ಈ ಕಾಲಘಟ್ಟದ ಮೇಲೆ ಹೇಳಿಕೊಳ್ಳುವಂತ ಅಧ್ಯಯನಗಳು ಆಗಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಂಡು “ಹೈದರಾಬಾದ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ” ಎಂಬ ವಿಷಯದ ಮೇಲೆ ಎರಡು ದಿನಗಳ ರಾಷ್ಟçಮಟ್ಟದ ವಿಚಾರ ಸಂಕಿರಣವನ್ನು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಎರಡು ಸಂಸ್ಥೆಗಳು ತಮ್ಮ ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ. ನಾಡಿನ ಸಂಶೋಧಕರಿಗೆ ಪ್ರಬಂಧ ಮಂಡನೆಗೆ ಅವಕಾಶವನ್ನು ಒದಗಿಸಲಾಗಿದ್ದು, ಆಯ್ಕೆಯಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ (ಐಎಸ್‌ಬಿಎನ್) ಪ್ರಕಟಿಸಲಾಗುವುದು ಎಂದು ತಿಳಿಸಿರುತ್ತಾರೆ. *ವಿಷಯಗಳು:* ಅಸಫಜಾಹಿ ಮನೆತನದ ರಾಜಕೀಯ ಚರಿತ್ರೆ, ಅಸಫಜಾಹಿ ಮನೆತನದ ಆಡಳಿತ ಮತ್ತು ಸುಧಾರಣೆಗಳು, ಹೈದರಾಬಾದ ಸಂಸ್ಥಾನದ ಭೌಗೋಳಿಕ ಪರಿಸರ, ಹೈದರಾಬಾದ ಸಂಸ್ಥಾನದ ಅಧಿಕಾರಿಗಳು ಮತ್ತು ಮಂತ್ರಿಗಳು, ಹೈದರಾಬಾದ ಸಂಸ್ಥಾನದ ಭಾಷಿಕ ಪರಿಸರ, ಹೈದರಾಬಾದ ಸಂಸ್ಥಾನದ ಧಾರ್ಮಿಕ ಪರಿಸರ, ಹೈದರಾಬಾದ ಸಂಸ್ಥಾನದ ಕೃಷಿ, ನೀರಾವರಿ, ಕೈಗಾರಿಕೆ, ಶಿಕ್ಷಣ ನೀತಿಗಳು. ಹೈದರಾಬಾದ ಸಂಸ್ಥಾನಕ್ಕೆ ಪುರಾತತ್ವ ವರದಿಗಳು, ನೆಲೆಗಳು. ಅಸಫಜಾಹಿ ಮನೆತನಕ್ಕೆ ಸಂಬAಧಿಸಿದ ದಾಖಲೆಗಳು. ಹೈದರಾಬಾದ ಸಂಸ್ಥಾನದ ತೆರಿಗೆ ಪದ್ದತಿ, ವಿದೇಶಿ ವ್ಯಾಪಾರ, ಇತ್ಯಾದಿ. ಹೈದರಾಬಾದ ಸಂಸ್ಥಾನ ಮತ್ತು ಸಾಹಿತ್ಯಿಕ ಚಟುವಟಿಕೆಗಳು. ಹೈದರಾಬಾದ ಸಂಸ್ಥಾನ ಮತ್ತು ದೇಶಮುಖ/ದೇಶಗತಿ/ಜಹಗೀರು ಮನೆತನಗಳು. ಹೈದರಾಬಾದ ಸಂಸ್ಥಾನ ಮತ್ತು ಬ್ರಿಟಿಷರ ನಡುವಿನ ಸಂಬAಧಗಳು. ಹೈದರಾಬಾದ ಸಂಸ್ಥಾನ ಮತ್ತು ಸ್ಥಳೀಯ ಸಂಸ್ಥಾನಗಳ ನಡುವಿನ ಸಂಬAಧಗಳು. ಅಸಫಜಾಹಿಗಳ ಕಾಲದ ಸಾಮಾಜಿಕ ನೆಲೆಗಳು. ವಸಾಹತು ಕಾಲ(ಹೈದರಾಬಾದ ಸಂಸ್ಥಾನ)ದ ಸಂಗೀತ, ಚಿತ್ರಕಲೆ, ಇತ್ಯಾದಿ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ