ಸೋಮವಾರ, ಮಾರ್ಚ್ 17, 2025

ಅನಾಮಧೇಯ ಮಹಿಳೆ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮಾ.17(ಕರ್ನಾಟಕ ವಾರ್ತೆ): ನಗರದ ಬೆಂಗಳೂರು ರಸ್ತೆಯ ಸುಧಾ ಬಾರ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದ ಸುಮಾರು 50 ವರ್ಷದ ಅನಾಮಧೇಯ ಮಹಿಳೆಗೆ ಹಿಂದಿನಿAದ ಯಾವುದೋ 3 ಚಕ್ರದ ಗುಡ್ಸ್ ವಾಹನದ ಚಾಲಕನು ತನ್ನ ನಿರ್ಲಕ್ಷö್ಯತನದಿಂದ ಅಪಘಾತಪಡಿಸಿ ಪರಾರಿಯಾಗಿದ್ದು, ಸದ್ಯ ಅನಾಮಧೇಯ ಮಹಿಳೆಯು ಟ್ರಾಮಾಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಾರಸುದಾರರು ತಿಳಿದಿರುವುದಿಲ್ಲ. ವಾರಸುದಾರರ ಪತ್ತೆಗಾಗಿ ಸಹಕರಿಸಬೇಕು ಎಂದು ಸಂಚಾರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ: ಅಂದಾಜು 5 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈ ಬಣ್ಣ, ತೆಳ್ಳನೇಯ ಮೈ ಕಟ್ಟು, ತಲೆಯ ಮೇಲೆ ಕಪ್ಪು ಕೂದಲು ಹೊಂದಿದ್ದು, ಹಸಿರು ಬಣ್ಣದ ನೈಟಿ ಮತ್ತು ಕಪ್ಪು ಬಣ್ಣದ ಬುರ್ಖಾ ಧರಿಸಿರುತ್ತಾಳೆ. ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಚಾರಿ ಪೊಲೀಸ್ ಠಾಣೆಯ ದೂ.08392-275722, ಪಿಐ ಮೊ.9480803048 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ