ಸೋಮವಾರ, ಮಾರ್ಚ್ 3, 2025

ಶೇ.20ರಷ್ಟು ರಿಯಾಯಿತಿ ದರದಲ್ಲಿ ಲಿಡ್‌ಕರ್ ವಸ್ತುಗಳು ಮಾರಾಟ

ಬಳ್ಳಾರಿ,ಮಾ.03(ಕನಾಟಕ ವಾರ್ತೆ): ಲಿಡ್‌ಕರ್ ವತಿಯಿಂದ ನಗರದ ಬುಡಾ ಕಾಂಪ್ಲೆಕ್ಸ್ ನ ಶಾಪ್ ನಂ.24 ರ ಲಿಡ್‌ಕರ್ ಲೆದರ್ ಎಂಪೋರಿಯಮ್ ಮಳಿಗೆಯಲ್ಲಿ ಲಿಡ್‌ಕರ್ ನ ಎಲ್ಲಾ ಚರ್ಮವಸ್ತುಗಳನ್ನು ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಲಿಡ್‌ಕರ್ ನ ಜಿಲ್ಲಾ ವ್ಯವಸ್ಥಾಪಕ ಟಿ.ಸಂಜೀವಪ್ಪ ಅವರು ತಿಳಿಸಿದ್ದಾರೆ. ಮಾ.03 ರಿಂದ 23 ರವರೆಗೆ (21 ದಿನ) ಎಲ್ಲಾ ಚರ್ಮವಸ್ತುಗಳಿಗೂ ಶೇ.20 ರಷ್ಟು ರಿಯಾಯಿತಿ ನೀಡಲಾಗುವುದು. ಸಾರ್ವಜನಿಕರು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರ ವರೆಗೆ ಮತ್ತು ಸಂಜೆ 4 ರಿಂದ 8 ಗಂಟೆಯವರೆಗೆ ಭೇಟಿ ನೀಡಬಹುದು. ಮಾಹಿತಿಗಾಗಿ ದೂ.08392271741, ಮೊ.7676591259 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ