ಮಂಗಳವಾರ, ಮಾರ್ಚ್ 4, 2025

ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮಾ.04(ಕರ್ನಾಟಕ ವಾರ್ತೆ): ನಗರದ ರೈಲ್ವೇ ನಿಲ್ದಾಣದ ಮುಂದಿನ ಆಟೋ ನಿಲ್ದಾಣ ಹತ್ತಿರ ಅಂದಾಜು 25 ರಿಂದ 30 ವರ್ಷದ ಅನಾಮಧೇಯ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ಮಲಗಿದ್ದ ವ್ಯಕ್ತಿಯನ್ನು ವಿಮ್ಸ್ ಆಸ್ಪತ್ರೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಫೆ.24 ರಂದು ಮೃತಪಟ್ಟಿದ್ದು, ಈ ಕುರಿತು ಬಳ್ಳಾರಿ ಗಾಂಧಿನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಅವರು ಮನವಿ ಮಾಡಿದ್ದಾರೆ. ಮೃತನ ಚಹರೆ: ಎತ್ತರ 5.5 ಅಡಿ, ಕೋಲು ಮುಖ, ಕಪ್ಪು ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ಬಿಳಿ ಕೂದಲು, ಕಪ್ಪು ಮತ್ತು ಬಿಳಿ ಮೀಸೆ ಗಡ್ಡ ಇರುತ್ತದೆ. ಮೃತ ದೇಹದ ಮೈಮೇಲೆ ಒಂದು ಗ್ರೇ ಕಲರ್ ತುಂಬು ತೋಳಿನ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಗಾಂಧಿನಗರ ಪೋಲಿಸ್ ಠಾಣೆ ದೂರವಾಣಿ ಸಂಖ್ಯೆ; 08392-272192, 9480803046 ಅಥವಾ ಪೋಲಿಸ್ ಕಂಟ್ರೋಲ್ ರೂಂ, ಬಳ್ಳಾರಿ ದೂರವಾಣಿ ಸಂಖ್ಯೆ; 08392258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ