ಸೋಮವಾರ, ಮೇ 5, 2025
ಮೇ 06 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸುವ ಕಾರ್ಯ ಕೈಗೊಳ್ಳುತ್ತಿರುವುರಿಂದÀ ಮೇ 06 ರಂದು ಬೆಳಿಗ್ಗೆ 09 ಗಂಟೆಯಿAದ ಸಂಜೆ 05 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು (ವಿ) ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-14 ವ್ಯಾಪ್ತಿಯ ಗಣೇಶ ಕಾಲೋನಿ, ಸಿದ್ಗಿಕಾಲೋನಿ, ಗೊಲ್ಲನರಸಪ್ಪ ಕಾಲೋನಿ, ಎಂಎAಟಿಸಿ ಕಾಲೋನಿ, ಮಾರುತಿ ನಗರ, ಹುಸೇನ ನಗರ, ರಾಮಯ್ಯ ಕಾಲೋನಿ, ರಾಘವೇಂದ್ರ ಕಾಲೋನಿ 1ನೇ ಹಂತ, ಅನಂತಪುರ ರಸ್ತೆ, ಪಟೇಲ್ ನಗರ, ಹದ್ದಿನಗುಂಡು ರಸ್ತೆ, ಎಸ್‌ಎನ್ ಪೇಟೆ 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ವಿಶಾಲ ನಗರ, ದತ್ತಸಾಯಿ ನಗರ, ಹನುಮನ್ ನಗರ, ಎಚ್‌ಎಲ್‌ಸಿ ಕಾಲೋನಿ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ