ಸೋಮವಾರ, ಮೇ 5, 2025
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಮೇ 05(ಕರ್ನಾಟಕ ವಾರ್ತೆ):
ಬಳ್ಳಾರಿ ರೈಲ್ವೇ ವ್ಯಾಪ್ತಿಯ ಹೊಸಪೇಟೆ ಮತ್ತು ಕಾರಿಗನೂರು ರೈಲು ನಿಲ್ದಾಣದ ಮಧ್ಯೆ ಸ್ಟೀಲ್ ಬ್ರಿಡ್ಜ್ ಹತ್ತಿರ ಸುಮಾರು 60 ರಿಂದ 70 ವಷÀðದ ಅನಾಮದೇಯ ವ್ಯಕ್ತಿಯು ರೈಲು ಹಳಿಯನ್ನು ದಾಟುವಾಗ ರೈಲುಗಾಡಿಗೆ ಸಿಲುಕಿ ಆಕಸ್ಮಿಕವಾಗಿ ಏ.27 ರಂದು ಮೃತಪಟ್ಟಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಈ ಕುರಿತು ಬಳ್ಳಾರಿ ರೈಲ್ವೇ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ರೈಲ್ವೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಚಹರೆ ಗುರುತು:
ಎತ್ತರ 5.6 ಅಡಿ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಅಗಲವಾದ ಹಣೆ, ಮುರ್ಲಿ ಕಿವಿ, ನೆಟ್ಟನೆ ಮೂಗು ಮತ್ತು ಮೃತನ ತಲೆ ಮದ್ಯದಲ್ಲಿ ಬೋಳು ಇದ್ದು, ತಲೆ ಸುತ್ತಲೂ ಬಿಳಿ ಕೂದಲು ಮತ್ತು ಮುಖದಲ್ಲಿ ಬಿಳಿ ಗಡ್ಡ, ಮೀಸೆ ಇರುತ್ತದೆ.
ಮೃತನ ದೇಹದ ಮೇಲೆ ಬಿಳಿ ಬಣ್ಣದ ತುಂಬು ತೋಳಿನ ಬನಿಯನ್, ನಶಿ ಬಣ್ಣದ ಅಂಡರವೇರ್ ಮತ್ತು ಬಿಳಿ ಬಣ್ಣದ ದೊತಿ ಸೊಂಟದಲ್ಲಿ ಉಡುದಾರ ಇರುತ್ತದೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆ ಮೊ.9480802131 ಅಥವಾ ರಾಯಚೂರು ರೈಲ್ವೇ ಪೊಲೀಸ್ ವೃತ್ತದ ಮೊ.9480800471 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ