ಬುಧವಾರ, ಮೇ 14, 2025

ಮೇ 15 ರಂದು ಗೃಹರಕ್ಷಕರ ಆಯ್ಕೆ ಪ್ರಕ್ರಿಯೆ

ಬಳ್ಳಾರಿ,ಮೇ 14(ಕರ್ನಾಟಕ ವಾರ್ತೆ): ಜಿಲ್ಲೆಯ ಸಂಡೂರು, ಕುಡುತಿನಿ, ತೆಕ್ಕಲಕೋಟೆ, ತೋರಣಗಲ್ಲು, ಸಿರುಗುಪ್ಪ ಮತ್ತು ಕುರುಗೋಡು ಘಟಕದಲ್ಲಿ ಖಾಲಿ ಇರುವ ಗೃಹರಕ್ಷಕರ ಸ್ವಯಂಸೇವಕ ಸ್ಥಾನಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಮೇ 15 ರಂದು ಬೆಳಿಗ್ಗೆ 06 ಗಂಟೆಗೆ ಬಳ್ಳಾರಿ ಜಿಲ್ಲಾ ಸಶಸ್ತç ಮೀಸಲು ಪಡೆ (ಡಿಎಆರ್) ಮೈದಾನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ಮತ್ತು ಸಂದರ್ಶನ ಕೈಗೊಳ್ಳಲಾಗುವುದು. *ದೈಹಿಕ ಪರೀಕ್ಷೆ ಮತ್ತು ದೈಹಿಕ ಸಹಿಷ್ಣುತೆ ಪರೀಕ್ಷೆ:* ಪುರುಷ ಅಭ್ಯರ್ಥಿಗಳು 168 ಸೆಂ.ಮೀ ಎತ್ತರ ಇರಬೇಕು. ಎದೆ ಸುತ್ತಳತೆ 86 ಸೆಂ.ಮೀ. ಹೊಂದಿರಬೇಕು. ತೂಕ 50 ಕೆ.ಜಿ. ಹೊಂದಿರಬೇಕು. 400 ಮೀಟರ್ ಓಟವನ್ನು 02 ನಿಮಿಷಗಳ ಒಳಗೆ ಓಡಬೇಕು. ಗುಂಡು ಎಸೆತ (4 ಕೆ.ಜಿ) 3.75 ಮೀಟರ್ ಎಸೆಯಬೇಕು. *ಸೂಚನೆ:* ಅಭ್ಯರ್ಥಿಗಳು ದೈಹಿಕ ಪರೀಕ್ಷೆ ಮತ್ತು ಸಂದರ್ಶನಕ್ಕೆ ಹಾಜರಾಗುವಾಗ ವಿದ್ಯಾರ್ಹತೆಗೆ ಸಂಬAಧಿಸಿದAತೆ ಕೆಳಕಂಡ ದಾಖಲೆಗಳನ್ನು ತರಬೇಕು. ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ ಜೆರಾಕ್ಸ್ ಪ್ರತಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಕುಟುಂಬ ಪಡಿತರ ಚೀಟಿ ಮೂಲ ಪ್ರತಿ. ಸಂದರ್ಶನಾ ಪತ್ರ ಮೂಲ ಪ್ರತಿ. ಜೆರಾಕ್ಸ್ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ. ದೈಹಿಕ ಪರೀಕ್ಷೆ ಮತ್ತು ಸಂದರ್ಶನಾ ಹಾಜರಾಗುವ ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಆಗಮಿಸುವುದು (ಯಾವುದೇ ರೀತಿಯ ಭತ್ಯೆ ನೀಡಲಾಗುವುದಿಲ್ಲ ಎಂದು ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಹಾಗೂ ಗೃಹರಕ್ಷಕರ ಆಯ್ಕೆ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ