ಬುಧವಾರ, ಮೇ 14, 2025
ಕುರುಗೋಡು: ಐಟಿಐ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಮೇ 14(ಕರ್ನಾಟಕ ವಾರ್ತೆ):
ಕುರುಗೋಡು ಪಟ್ಟಣದಲ್ಲಿನ ಸರ್ಕಾರಿ ಕೈಗಾರಿಕಾ ಸಂಸ್ಥೆ(ಐಟಿಐ) ವತಿಯಿಂದ ಪ್ರಸ್ತಕ ಸಾಲಿಗೆ ವಿವಿಧ ವೃತ್ತಿ ಘಟಕಗಳಿಗೆ ಆನ್ ಲೈನ್ ಮೂಲಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ವಿ.ತಿಮ್ಮರಾಜು ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ವೆಬ್ ಸೈಟ್ ವಿಳಾಸ www.cite.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದ್ದು, ಇಲ್ಲವೇ ನೇರವಾಗಿ ಸಂಸ್ಥೆಗೆ ಭೇಟಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿದ ಸಂಸ್ಥೆಯಲ್ಲಿ ಮಾತ್ರ ದಾಖಲೆ ಪರಿಶೀಲನೆಗೆ ಕಡ್ಡಾಯವಾಗಿ ಹಾಜರಾಗಬೇಕು.
*ವೃತ್ತಿಗಳ ವಿವರ:*
2 ವರ್ಷದ ಎಲೆಕ್ಟಿçಷಿಯನ್ (ಎನ್‌ಸಿವಿಟಿ), 2 ವರ್ಷದ ಫಿಟ್ಟರ್ (ಎನ್‌ಸಿವಿಟಿ), 2 ವರ್ಷದ ಮೆಕ್ಯಾನಿಕ್ ಎಲೆಕ್ಟಿçಕ್ ವೆಹಿಕಲ್ (ಎನ್‌ಸಿವಿಟಿ), 2 ವರ್ಷದ ಸಿಎನ್‌ಸಿ ಮಷಿನಿಂಗ್ ಟೆಕ್ನಿನಿಷಿಯನ್, ವರ್ಚುವಲ್ ಅನಾಲಿಸಿಸ್ ಮತ್ತು ಡಿಸೈನರ್-ಫೆಮ್ (ಫಿನೈಟ್ ಎಲಿಮೆಂಟ್ ಮೆಥಡ್) (ಎನ್‌ಸಿವಿಟಿ) 2 ವರ್ಷದ ಕೋರ್ಸ್, ಇಂಡಸ್ಟಿçಯಲ್ ರೊಬೊಟಿಕ್ಸ್ ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಿಷಿಯನ್ (ಎನ್‌ಸಿವಿಟಿ) 1 ವರ್ಷದ ಕೋರ್ಸ್, ಮ್ಯಾನುಫ್ಯಾಕ್ಚರಿಂಗ್ ಪ್ರೊಸೆಸ್ ಕಂಟ್ರೋಲ್ ಮತ್ತು ಆಟೊಮೇಷನ್ (ಎನ್‌ಸಿವಿಟಿ) 1 ವರ್ಷ ಮತ್ತು ಎಂಜಿನಿಯರಿAಗ್ ಡಿಸೈನ್ ಟೆಕ್ನಿಷಿಯನ್ (ಎನ್‌ಸಿವಿಟಿ) 1 ವರ್ಷ.
ಹೆಚ್ಚಿನ ಮಾಹಿತಿಗಾಗಿ ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವಿ.ತಿಮ್ಮರಾಜು ಮೊ.9980715718, ಸತೀಶ್.ಡಿ.ಜಿ ಮೊ.9481175925, ಮಹೇಶ್.ಟಿ ಮೊ.7892431265, ಓಬಳೇಶ.ಎಂ ಮೊ.9108127275, ರಾಜಶೇಖರ.ಪಿ.ಜಿ ಮೊ.7975845633 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ