ಗುರುವಾರ, ಸೆಪ್ಟೆಂಬರ್ 4, 2025
ಸೆ.06 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಸೆ.04(ಕರ್ನಾಟಕ ವಾರ್ತೆ):
ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯ 11 ಕೆ.ವಿ.ಫೀಡರ್ ನ ವಿದ್ಯುತ್ ಲೈನ್ ಗಳ ನಿರ್ವಹಣೆ ಕಾರ್ಯ ಕೈಗೊಳ್ಳುತ್ತಿರುವುರಿಂದ ಸೆ.06 ರಂದು ಮಧ್ಯಾಹ್ನ 01 ರಿಂದ ಸಂಜೆ 05 ಗಂಟೆಯವರೆಗೆ ಎಫ್-09 ಮತ್ತು ಎಫ್-07 ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-09 ಫೀಡರ್ ಮಾರ್ಗದ ನೆಹರು ಕಾಲೋನಿ, ಎಸ್.ಎನ್.ಪೇಟೆ 1ನೇ, 2ನೇ, 4ನೇ, 5ನೇ, 6ನೇ ಅಡ್ಡರಸ್ತೆ, ಶಂಕರ್ ಕಾಲೋನಿ, ಡಿಎಆರ್ ಗ್ರೌಂಡ್, ಕೂಲ್ ಕಾರ್ನರ್, ಡಬಲ್ ರಸ್ತೆ, ಕೋಲಾಚಲಂ ಕಾಂಪೌAಡ್, ರಾಯಲ್ ಸರ್ಕಲ್, ಗಾಂಧಿಭವನ, ಸಿಎಂಸಿ, ಅಂಬಲಿ ಬಾಗ್, ಹಳೆಯ ತಾಲ್ಲೂಕು ಅಫೀಸ್, ಡಿಸಿ ಕಚೇರಿ, ಸ್ಟೇಷನ್ ರೋಡ್.
ಎಫ್-07 ಫೀಡರ್ ಮಾರ್ಗದ ಸಂಗನಕಲ್ಲು ರಸ್ತೆ, ಎಸ್.ಎನ್.ಪೇಟೆ 3ನೇ ಕ್ರಾಸ್, ಜಿಲ್ಲಾಸ್ಪತ್ರೆ, ರಾಘವ ಕಲಾ ಮಂದಿರ, ಅನಂತಪುರ ರಸ್ತೆ, ವಡ್ಡರ ಬಂಡೆ, ಅಗಡಿ ಮಾರೆಪ್ಪ ಕಾಂಪೌAಡ್, ರೂಪನಗುಡಿ ರಸ್ತೆ, ಮುಬರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ.ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ದುಗ್ಗಪ್ಪ ಬೀದಿ, ರೆಡ್ಡಿ ಬೀದಿ, ಆಲ್ಲಂ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ರೂಪನಗುಡಿ ನರಪ್ಪ ಬೀದಿ, ತಾಯಮ್ಮ ಕಟ್ಟೆ ಸೇರಿದಂತೆ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ