ಗುರುವಾರ, ಸೆಪ್ಟೆಂಬರ್ 18, 2025

ಕಂಪ್ಲಿ: ಪಶುಸಂಗೋಪನೆ, ಮೀನುಗಾರಿಕೆ ತರಬೇತಿ ಕಾರ್ಯಕ್ರಮಕ್ಕೆ ನೋಂದಾಯಿಸಲು ಅವಕಾಶ

ಬಳ್ಳಾರಿ,ಸೆ.18(ಕರ್ನಾಟಕ ವಾರ್ತೆ): ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕಂಪ್ಲಿಯ ಸಹಾಯಕ ನಿರ್ದೇಶಕರ ಕಚೇರಿ ವತಿಯಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ರೈತರು ಮತ್ತು ಮಹಿಳಾ ರೈತರಿಗೆ ಪಶುಸಂಗೋಪನೆ ಹಾಗೂ ಮೀನುಗಾರಿಕೆ ಕುರಿತು ಸೆ.22 ರಿಂದ ಸೆ.27 ರವರೆಗೆ ಆರು ದಿನಗಳ ವಿಶೇಷ ಸಾಂಸ್ಥಿಕ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರ್ಹರು ನೋಂದಾಯಿಸಿಕೊಳ್ಳಬಹುದು. ತರಬೇತಿಗೆ ಭಾಗವಹಿಸುವ ರೈತರಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆ ಇದ್ದು, ಆಸಕ್ತಿಯುಳ್ಳ ರೈತರು ಸೆ.21 ರೊಳಗಾಗಿ ಜಮೀನಿನ ಎಫ್.ಐ.ಡಿ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯೊAದಿಗೆ ನೋಂದಣಿ ಮಾಡಿಕೊಳ್ಳಬಹುದು. ಹೆಸರನ್ನು ನೊಂದಾಯಿಸಿಕೊಳ್ಳಲು ಇಚ್ಛಿಸುವವರು ಕೃಷಿ ಅಧಿಕಾರಿಗಳಾದ ಯೇಸುಬಾಬು-ಮೊ.6360645255, ಮತ್ತು ನವ್ಯಾ ನಾ.ಚೂರಿ-ಮೊ.6360139316 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಕಂಪ್ಲಿಯ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ