ಗುರುವಾರ, ಸೆಪ್ಟೆಂಬರ್ 25, 2025

ಸಂಡೂರು, ಹಗರಿಬೊಮ್ಮನಹಳ್ಳಿ ನ್ಯಾಯಾಲಯಗಳಲ್ಲಿ ಇ-ಸೇವಾ ಕೇಂದ್ರ, ಹೆಲ್ಪ್ ಡೆಸ್ಕ್ ಆರಂಭ | ನ್ಯಾಯಾಲಯದ ಸೇವೆಗಳನ್ನು ಇ-ಸೇವಾ ಕೇಂದ್ರಗಳ ಮೂಲಕ ಸುಲಭವಾಗಿ ಪಡೆದುಕೊಳ್ಳಿ: ನ್ಯಾ.ಕೆ.ಜಿ.ಶಾಂತಿ

ಬಳ್ಳಾರಿ,ಸೆ.25(ಕರ್ನಾಟಕ ವಾರ್ತೆ): ಇ-ಕೋರ್ಟ್ಸ್ ಮಿಷನ್ ಮೋಡ್ ಯೋಜನೆಯಡಿ ನಾಗರಿಕ-ಕೇಂದ್ರಿತ ಸೇವೆಗಳನ್ನು ಒದಗಿಸುವಲ್ಲಿ ಇ-ಸೇವಾ ಕೇಂದ್ರಗಳ ಸ್ಥಾಪನೆಯು ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಜಿ.ಶಾಂತಿ ಅವರು ಹೇಳಿದರು. ಮಂಗಳವಾರ, ಸಂಡೂರು ನ್ಯಾಯಾಲಯ ಮತ್ತು ಹಗರಿಬೊಮ್ಮನಹಳ್ಳಿ ನ್ಯಾಯಾಲಯದಲ್ಲಿ ಇ-ಸೇವಾ ಕೇಂದ್ರ, ಹೆಲ್ಪ್-ಡೆಸ್ಕ್, ವಿ.ಸಿ ಕ್ಯಾಬಿನ್‌ಗಳನ್ನು ವರ್ಚುವಲ್ ಮೂಲಕ ಉದ್ಫಾಟಿಸಿ ಅವರು ಮಾತನಾಡಿದರು. ಇ-ಸೇವಾ ಕೇಂದ್ರಗಳ ಮೂಲಕ ದಾವೆದಾರರು, ವಕೀಲರು ಮತ್ತು ಸಾರ್ವಜನಿಕರು ಈಗ ಪ್ರಕರಣದ ಸ್ಥಿತಿಯನ್ನು ಸುಲಭವಾಗಿ ನೋಡಿ ಪ್ರಮಾಣೀಕೃತ ಪ್ರತಿಗಳನ್ನು ಪಡೆಯಬಹುದು. ಆನ್‌ಲೈನ್ ಪಾವತಿ ಮತ್ತು ಎಲೆಕ್ಟಾçನಿಕ್ ರೂಪದಲ್ಲಿ ಪ್ರಕರಣಗಳನ್ನು ದಾಖಲಿಸಬಹುದು ಹಾಗೂ ವಿವಿಧ ಡಿಜಿಟಲ್ ಸೌಲಭ್ಯಗಳನ್ನು ತೊಂದರೆ-ಮುಕ್ತ ರೀತಿಯಲ್ಲಿ ಪಡೆಯಬಹುದು ಎಂದು ತಿಳಿಸಿದರು. ಇ-ಸೇವಾ ಕೇಂದ್ರಗಳು ನ್ಯಾಯಾಲಯದ ಸೇವೆಗಳನ್ನು ಹೆಚ್ಚು ಸುಲಭವಾಗಿ, ಕೈಗಟುಕುವ ಮತ್ತು ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಮೂಲಕ ದಾವೆ ಹೂಡುವವರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನರಿಗೆ ಪ್ರಯೋಜನವನ್ನು ನೀಡುತ್ತವೆ ಎಂದರು. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೆ ಅನಕ್ಷರಸ್ಥ ಎಂದು ಕರೆಯಲಾಗುತ್ತಿದ್ದು, ವಕೀಲರು ಕಂಪ್ಯೂಟರ್ ಬಗ್ಗೆ ಜ್ಞಾನವನ್ನು ಹೊಂದಬೇಕು. ಮಾನವನ ಎಲ್ಲಾ ಕೆಲಸ ಕಾರ್ಯಗಳಿಗೆ ಡಿಜಿಟಲ್ ಮೆರಗು ಬಂದಿದ್ದರಿAದ ಕಂಪ್ಯೂಟರ್ ಜ್ಞಾನದ ಅವಶ್ಯಕತೆ ಎಂದಿಗಿAತಲೂ ಈಗ ಹೆಚ್ಚಾಗಿ ಬೇಕಾಗಿದೆ ಎಂದು ಹೇಳಿದರು. ವಕೀಲರು ತಮ್ಮ ಕಕ್ಷಿದಾರರಿಗೆ ಯಾವ ರೀತಿ ಇ-ಸೇವಾ ಕೇಂದ್ರದ ಪ್ರಯೋಜನ ಪಡೆಯಬಹುದು ಎಂಬುದನ್ನು ತಿಳಿಸಬೇಕು ಮತ್ತು ನ್ಯಾಯಾಲಯದ ತಂತ್ರಜ್ಞರಿAದ ಎಲ್ಲಾ ವಕೀಲರು ಹಾಗೂ ಸಿಬ್ಬಂದಿ ವರ್ಗದವರು ಮಾಹಿತಿ ಪಡೆದು ಇ-ಸೇವಾ ಕೇಂದ್ರಗಳ ಉಪಯೋಗ ಪಡೆಯಬೇಕು. ತ್ವರಿತ ಮತ್ತು ಪಾರದರ್ಶಕ ನ್ಯಾಯ ವಿತರಣೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ತಂತ್ರಜ್ಞಾನ-ಸಕ್ರಿಯಗೊಳಿಸಿದ ಸೇವೆಗಳ ಮಹತ್ವವನ್ನು ನ್ಯಾಯಾಧೀಶರು ವಿವರಿಸಿದರು. ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿ ಮತ್ತು ಸಂಡೂರು ನ್ಯಾಯಾಲಯದ ನ್ಯಾಯಾಂಗ ಅಧಿಕಾರಿಗಳು, ವಕೀಲರ ಸಂಘದ ಸದಸ್ಯರು, ನ್ಯಾಯಾಲಯದ ಸಿಬ್ಬಂದಿ ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ