ಬುಧವಾರ, ಸೆಪ್ಟೆಂಬರ್ 3, 2025
ಅನಾಮಧೇಯ ಮೃತ ಶವ: ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಸೆ.03(ಕರ್ನಾಟಕ ವಾರ್ತೆ):
ತಾಲ್ಲೂಕಿನ ಕಪ್ಪಗಲ್ ಕ್ಯಾಂಪ್‌ನ ಕಪ್ಪಗಲ್ ಹೆಚ್‌ಎಲ್‌ಸಿ ಕಾಲುವೆಯ ಸಬ್ ಕಾಲುವೆ ಡಿಪಿ-13-14 ಆರ್ ವಿತರಣಾ ಕಾಲುವೆಯಲ್ಲಿ ಸುಮಾರು 45 ರಿಂದ 50 ವರ್ಷದ ಅನಾಮಧೇಯ ಮೃತ ಪುರುಷನ ಶವವು ಸೆ.02 ರಂದು ತೇಲಿಕೊಂಡು ಬಂದಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಪತ್ತೆಗೆ ಸಹರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಹರೆ ಗುರುತು: ಎತ್ತರ ಅಂದಾಜು 5 ಅಡಿ, ಮೃತನ ದೇಹದ ಮೇಲೆ ಕೆಂಪು ಬಣ್ಣದ ಟಾಂಗೋ ಕಂಪನಿಯ ಕಟ್ ಚಡ್ಡಿ ಇದ್ದು, ಕುತ್ತಿಗೆಯಲ್ಲಿ ರೋಲ್ ಗೋಲ್ಡ್ ಚೈನ್ ಮತ್ತು ಸೇಪ್ಟಿ ಪಿನ್ ಇರುತ್ತದೆ. ತಲೆಯಿಂದ ಪಾದಗಳ ವರೆಗೆ ಶರೀರವು ಬೆಳ್ಳಗಾಗಿದ್ದು, ಜಲಚರ ಪ್ರಾಣಿಗಳು ಕಿತ್ತು ತಿಂದAತೆ ಕಂಡುಬರುತ್ತಿದೆ. ಯಾವುದೇ ಚಹರೆ ಗುರುತುಗಳು ಕಂಡುಬAದಿರುವುದಿಲ್ಲ.
ಅನಾಮಧೇಯ ಮೃತನ ವಾರಸುದಾರರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392258100 ಅಥವಾ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461 ಹಾಗೂ ಮೊ.9480803049 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ