ಶನಿವಾರ, ಮಾರ್ಚ್ 1, 2025
ಮಾ.08 ರಂದು ಬಳ್ಳಾರಿಯಲ್ಲಿ ರಾಜ್ಯಮಟ್ಟದ ಬುಡಕಟ್ಟು ಉತ್ಸವ
ಬಳ್ಳಾರಿ,ಮಾ.01(ಕರ್ನಾಟಕ ವಾರ್ತೆ):
ರಾಜ್ಯ ಮಟ್ಟದ ಬುಡಕಟ್ಟು ಉತ್ಸವ-2025 ರ ಕಾರ್ಯಕ್ರಮವನ್ನು ಮಾ.08 ರಂದು ಬಳ್ಳಾರಿ ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಅವರು ತಿಳಿದ್ದಾರೆ
*ಕಾರ್ಯಕ್ರಮದ ವಿವರಗಳು:*
ಮಾ.08 ರಂದು ಬೆಳಿಗ್ಗೆ 09 ಗಂಟೆಗೆ ಸ್ಥಳೀಯ ಹಾಗೂ ಇತರೆ ಜಿಲ್ಲೆಗಳ 40 ಜಾನಪದ ಕಲಾತಂಡಗಳಿAದ ಜಾನಪದ ವಾಹಿನಿ ಮೆರವಣಿಗೆಯು ನಗರದ ಡಾ.ರಾಜ್ ಕುಮಾರ್ ರಸ್ತೆಯ ಮುನ್ಸಿಪಾಲ್ ಕಾಲೇಜು ಮೈದಾನದಿಂದ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೆ ಬ್ರೂಸ್‌ಪೇಟೆ ಪೊಲೀಸ್ ಠಾಣೆ, ತೇರು ಬೀದಿ ರಸ್ತೆ, ಹೆಚ್.ಆರ್.ಗವಿಯಪ್ಪ ವೃತ್ತದ ಮೂಲಕ ಡಾ.ಜೋಳರಾಶಿ ದೊಡ್ಡನಗೌಡ ರಂಗಮAದಿರದ ವರೆಗೆ ನಡೆಯಲಿದೆ.
ಬಳಿಕ ಬೆಳಿಗ್ಗೆ 10.30 ರಿಂದ ಮದ್ಯಾಹ್ನ 01.30 ರ ವರೆಗೆ ಡಾ.ಜೋಳರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಕವಿತೆ ಮತ್ತು ಚಿತ್ರ ಸಂಗೀತ ಕಾರ್ಯಕ್ರಮದಲ್ಲಿ 10 ಕವಿಗಳಿಂದ ಕಾವ್ಯವಾಚನ, 10 ಚಿತ್ರ ಕಲಾವಿದರಿಂದ ಚಿತ್ರ ಬಿಡಿಸುವುದು, 10 ಗಾಯಕರಿಂದ ಸಂಗೀತ ಗಾಯನ ಪ್ರಸ್ತುತ ಪಡಿಸುವರು.
ನಂತರ ಮಧ್ಯಾಹ್ನ 02.30 ರಿಂದ ಸಂಜೆ 05.30 ರ ವರೆಗೆ ಸ್ಥಳೀಯ ಹಾಗೂ ಇತರೆ ಜಿಲ್ಲೆಯ ಕಲಾವಿದರಿಂದ ವಿವಿಧ ಕಲಾ ಪ್ರಕಾರಗಳ ಸಾಂsಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 05.30 ಗಂಟೆಗೆ ಬುಡಕಟ್ಟು ಉತ್ಸವದ ಉದ್ಘಾಟನಾ ಸಮಾರಂಭ ಹಾಗೂ 10 ಮಳಿಗೆಗಳಲ್ಲಿ ಚಿತ್ರಕಲಾ/ಶಿಲ್ಪಕಲಾ, ಆಹಾರ ಮೇಳ, ಕರಕುಶಲ ಪ್ರದರ್ಶನ ಮತ್ತು ಮಾರಾಟ ಹಾಗೂ ಬುಡಕಟ್ಟು ಸಮುದಾಯದ ವೇಷ ಭೂಷಣ, ಆಭರಣಗಳ ಪ್ರದರ್ಶನ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಜರುಗಲಿದೆ.
ಸಂಜೆ 06.30 ರಿಂದ ರಾತ್ರಿ 10.30 ರ ವರೆಗೆ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಸ್ಥಳೀಯ ಹಾಗೂ ಇತರೆ ಜಿಲ್ಲೆಯ ಕಲಾವಿದರಿಂದ ವಿವಿಧ ಕಲಾ ಪ್ರಕಾರಗಳ ಸಾಂsಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಿಲ್ಲೆಯ ಪರಿಶಿಷ್ಟ ವರ್ಗಗಳ ವಸತಿ ನಿಲಯ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬುಡಕಟ್ಟು ಸಮುದಾಯ ಕುರಿತು ಸಾಂsಸ್ಕೃತಿಕ ಪರಂಪರೆ, ನಮ್ಮ ಸಂಸ್ಕೃತಿ-ನಮ್ಮ ಹೆಮ್ಮೆ, ನಮ್ಮ ನಾಡು ನಮ್ಮ ಜನಾಂಗ, ಭಾರತ ಸಂವಿಧಾನ-ನಾವು ವಿಷಯಗಳ ಬಗ್ಗೆ ಪ್ರಬಂಧ, ಕಾವ್ಯ ವಾಚನ, ರಸಪ್ರಶ್ನೆ, ಚಿತ್ರಕಲೆ, ಭಾಷಣ ಸ್ಪರ್ಧೆಗಳನ್ನು ವಸತಿ ನಿಲಯ, ಪ್ರೌಡಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಹಂತದಲ್ಲಿ ಏರ್ಪಡಿಸಲಾಗುವುದು ಮತ್ತು ವಿಜೇತರಿಗೆ ಪ್ರಮಾಣ ಪತ್ರದ ಜೊತೆಗೆ ಪದಕಗಳನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ