ಶನಿವಾರ, ಮಾರ್ಚ್ 1, 2025
ಪಿ.ಎಂ ಇಂಟರ್‌ಶಿಪ್ ತರಬೇತಿ ಕಾರ್ಯಗಾರ ಬಗ್ಗೆ ಅರಿವು ಕಾರ್ಯಕ್ರಮ
ಬಳ್ಳಾರಿ,ಮಾ.01(ಕರ್ನಾಟಕ ವಾರ್ತೆ):
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಪಿ.ಎಂ ಇಂಟರ್‌ಶಿಪ್ ಮತ್ತು ಅಪ್ರೆಂಟೀಸ್ ತರಬೇತಿ ಕಾರ್ಯಗಾರ ಬಗ್ಗೆ ಉದ್ಯಮಿದಾರರಿಗೆ ಮತ್ತು ತರಬೇತಿದಾರರಿಗೆ ಅರಿವು ಮೂಡಿಸುವ ಕಾರ್ಯಕ್ರಮವು ಇತ್ತಿಚೇಗೆ ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನಡೆಯಿತು.
ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಗುಲ್ಬರ್ಗಾ ವಿಭಾಗಿಯ ಕಛೇರಿಯ ಜಂಟೀ ನಿರ್ದೇಶಕರಾದ ರಾಜೇಶ.ಬಿ.ಬಾವಗಿ, ಗುಲ್ಬರ್ಗಾ ವಿಭಾಗೀಯ ಕಚೇರಿ ತರಬೇತಿ ಅಧಿಕಾರಿ ಪ್ರವೀಣ ಮಳ್ಳಿ, ಸಂಸ್ಥೆಯ ಪ್ರಾಚಾರ್ಯರಾದ ಪಂಡಿತಾರಾಧ್ಯ ಕೆ.ಹೆಚ್.ಎಂ, ತರಬೇತಿ ಅಧಿಕಾರಿಗಳಾದ ರಿಜ್ವಾನ್ ನಸೀರ್ ಖಾನ್, ಶೇಶಣ್ಣ ವಿ. ಸೇರಿದಂತೆ ಮುಖ್ಯ ಅಥಿತಿಗಳಾದ ತೊರಣಗಲ್ಲು ಪ್ರಾಚಾರ್ಯ ಎಂ.ಸಿ ಸುರೇಶ್ ಬಾಬು, ಕುಡತಿನಿ ಪ್ರಾಚಾರ್ಯ ಖುದ್ರತ್ ಆಲಿ, ಕುರಗೋಡುಪ್ರಾಭಾರೆ ಪ್ರಾಚಾರ್ಯ ತಿಮ್ಮರಾಜು ಇನ್ನಿತರರು ಉಪಸ್ಥಿತರಿದ್ದರು.
---------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ