ಶುಕ್ರವಾರ, ಸೆಪ್ಟೆಂಬರ್ 12, 2025

ಬಳ್ಳಾರಿ: ಬಾಡಿಗೆ ಕಟ್ಟಡ ಬೇಕಾಗಿದೆ

ಬಳ್ಳಾರಿ,ಸೆ.12(ಕರ್ನಾಟಕ ವಾರ್ತೆ): ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಪ್ರಸಕ್ತ ಸಾಲಿನ ನಗರದ ಸರ್ಕಾರಿ ಮೆಟ್ರಿಕ್ ನಂತರದ ಬಾಲಕೀಯರ ವಿದ್ಯಾರ್ಥಿ ನಿಯಯದಲ್ಲಿ ಅಧಿಕ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದು, ವಿದ್ಯಾರ್ಥಿನಿಲಯ ನಿರ್ವಹಣೆಗಾಗಿ 100 ವಿದ್ಯಾರ್ಥಿಗಳ ವಾಸಕ್ಕೆ ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ಕಟ್ಟಡವನ್ನು ಬಾಡಿಗೆಗೆ ನೀಡಲು ಇಚ್ಚಿಸುವ ಕಟ್ಟಡಗಳ ಮಾಲೀಕರು ಸಂಪರ್ಕಿಸಬಹುದು. ಆಸಕ್ತ ಕಟ್ಟಡÀ ಮಾಲೀಕರು ಸೆಪ್ಟೆಂಬರ್ 11 ರೊಳಗೆ ಅಗತ್ಯ ದಾಖಲೆಗಳೊಂದಿಗೆ ನಗರದ ನಲ್ಲಚೆರುವು ಪ್ರದೇಶದ ವಾಲ್ಮೀಕಿ ಭವನದ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.9141004607 ಗೆ ಸಂಪರ್ಕಿಸಬಹುದು ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ