ಸೋಮವಾರ, ಜೂನ್ 1, 2026

ಜೂ.03 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.01(ಕರ್ನಾಟಕ ವಾರ್ತೆ): ಬಳ್ಳಾರಿ ಗ್ರಾಮೀಣಾ ಜೆಸ್ಕಾಂ ಉಪ ವಿಭಾಗಾದ 33/11ಕೆ.ವಿ ರ‍್ರಗುಡಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಶಿಥಿಲಗೊಂಡ ಜಿ.ಒ.ಎಸ್ ಬದಲಾಯಿಸುವ ಕಾರ್ಯ, ತ್ರೆöÊಮಾಸಿಕ ನಿರ್ವಹಣೆ ದುರಸ್ತಿ ಕಾರ್ಯ ಹಾಗೂ ಜಂಗಲ್ ಕಟ್ಟಿಂಗ್ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಜೂ.03 ರಂದು ಬೆಳಿಗ್ಗೆ 08 ರಿಂದ ಮಧ್ಯಾಹ್ನ 02 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣಾ ಜೆಸ್ಕಾಂ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. *ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:* ಎಫ್1 ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಳ್ಳಿ, ಬ್ಯಾಳಚಿಂತೆ ಕೃಷಿ ಪ್ರದೇಶಗಳು. ಎಫ್2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಳ್ಳಿ, ಬ್ಯಾಳಚಿಂತೆ ಕೃಷಿ ಪ್ರದೇಶಗಳು. ಎಫ್3 ಹಳೆ ರ‍್ರಗುಡಿ ಐಪಿ ಮಾರ್ಗದ ಹಳೆ ಯ್ರ‍್ರಗುಡಿ, ಹೊಸ ರ‍್ರಗುಡಿ, ಸಿಂಧುವಾಳ, ಬೆಣಕಲ್ಲುಕೃಷಿ ಪ್ರದೇಶಗಳು. ಎಫ್4 ವೇದಾವತಿ ಐಪಿ ಮಾರ್ಗದ ಡಿ.ಎನ್ ಹಳ್ಳಿ, ಮೋಕಾ ಕೃಷಿ ಪ್ರದೇಶಗಳು. ಎಫ್5 ಸಿಂಧುವಾಳ, ಸೋಲಾರ್ ಮಾರ್ಗದ ಹಳೆ ರ‍್ರಗುಡಿ, ಹೊಸ ರ‍್ರಗುಡಿ, ಸಿಂಧುವಾಳ, ಬೆಣಕಲ್ಲು ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು. ಎಫ್6- ಜಾಲಿಹಾಳ್ ಐಪಿ ಮಾರ್ಗದ ಎಮ್. ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್, ಡಿ.ಎನ್‌ಹಳ್ಳಿ ಕೃಷಿ ಪ್ರದೇಶ ಹಾಗೂ ಇನ್ನೂ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ