ಮಂಗಳವಾರ, ಜೂನ್ 9, 2026
ವಿಶ್ವ ರಕ್ತದಾನಿಗಳ ದಿನಾಚರಣೆ: 10ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ರೆಡ್ ಕ್ರಾಸ್ ಸಂಸ್ಥೆಯಿAದ ಸನ್ಮಾನ
ಬಳ್ಳಾರಿ,ಜೂ.09(ಕರ್ನಾಟಕ ವಾರ್ತೆ):
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಶಾಖೆಯ ವತಿಯಿಂದ 2026ನೇ ಸಾಲಿನ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ಜೂನ್ 14 ರಂದು ಆಚರಿಸಲಾಗುತ್ತಿದ್ದು, ಈ ವಿಶೇಷ ಸಂದರ್ಭದಲ್ಲಿ ಜಿಲ್ಲೆಯ ರಕ್ತದಾನಿಗಳನ್ನು ಗುರುತಿಸಿ ಗೌರವಿಸಲು ಸಂಸ್ಥೆಯು ನಿರ್ಧರಿಸಿದೆ. ತಮ್ಮ ಜೀವಿತಾವಧಿಯಲ್ಲಿ 10 ಕ್ಕಿಂತ ಹೆಚ್ಚು ಬಾರಿ ರಕ್ತದಾನ ಮಾಡಿರುವ ಬಳ್ಳಾರಿ ಜಿಲ್ಲೆಯ ರಕ್ತದಾನಿಗಳಿಗೆ ಈ ದಿನಾಚರಣೆಯ ನಿಮಿತ್ತ ರೆಡ್ ಕ್ರಾಸ್ ಸಂಸ್ಥೆಯಿAದ ಸನ್ಮಾನಿಸಿ ಗೌರವಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ತಿಳಿಸಿದ್ದಾರೆ.
10ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುವ ಅರ್ಹ ವ್ಯಕ್ತಿಗಳು ಸನ್ಮಾನಕ್ಕೆ ಅರ್ಹರಾಗಲು ತಮ್ಮ ರಕ್ತದಾನದ ಪ್ರಮಾಣಪತ್ರಗಳ ಜೆರಾಕ್ಸ್ ಪ್ರತಿಯನ್ನು ಜೂ.13 ರ ಸಂಜೆ 05 ಗಂಟೆಯ ಒಳಗಾಗಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಳ್ಳಾರಿ ಶಾಖೆಯ ವಿಳಾಸಕ್ಕೆ ತಲುಪಿಸಬಹುದಾಗಿದೆ.
ಈ ಹಿಂದೆ ರೆಡ್ ಕ್ರಾಸ್ ಸಂಸ್ಥೆಯಿAದ ಸನ್ಮಾನ ಸ್ವೀಕರಿಸಿರುವ ವ್ಯಕ್ತಿಗಳು ಈ ಸನ್ಮಾನಕ್ಕೆ ಮತ್ತೊಮ್ಮೆ ಅರ್ಹರಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಯದರ್ಶಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕೋರ್ಟ್ ರಸ್ತೆ, ಮಯೂರ ಹೋಟೆಲ್ ಹಿಂಭಾಗ, ಬಳ್ಳಾರಿ – 583101 ಅಥವಾ ಮೊ.9342768167 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ