ಮಂಗಳವಾರ, ಜೂನ್ 9, 2026

ಕಾಣೆಯಾದ ಯುವಕನ ಪತ್ತೆಗೆ ಮನವಿ

ಬಳ್ಳಾರಿ,ಜೂ.09(ಕನಾಟಕ ವಾರ್ತೆ): ಸಿರುಗುಪ್ಪ ತಾಲ್ಲೂಕಿನ ರುದ್ರಪಾದ ಗ್ರಾಮದ ಮಸೀದಿ ಹತ್ತಿರದ ಮನೆ ನಂಬರ್ 106 ರ ನಿವಾಸಿ ವಿ.ಕೆ.ಹೊನ್ನೂರ ಸ್ವಾಮಿ ಎನ್ನುವ 23 ವರ್ಷದ ಮಾನಸಿಕ ಅಸ್ವಸ್ಥ ಯುವಕ ಜೂ.06 ರಂದು ನಗರದ ಟ್ರಾಮ್ ಕೇರ್ ಆಸ್ಪತ್ರೆಗೆ ಬಂದಿದ್ದಾಗ ಆಸ್ಪತ್ರೆಯ ಸೈಕಲ್ ಸ್ಟಾö್ಯಂಡ್‌ನಿAದ ಕಾಣೆಯಾಗಿರುವ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ. ಚಹರೆ ಗುರುತು: ಅಂದಾಜು 5 ಅಡಿ ಎತ್ತರ, ಸಾಧಾರಣ ಕಪ್ಪು ಮೈಬಣ್ಣ, ಕೋಲು ಮುಖ, ತಲೆಯ ಮೇಲೆ ಹಳೆಯ ಗಾಯದ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಶರ್ಟ್ ಹಿಂಭಾಗ ‘ಭಜರಂಗಿ’ ಎನ್ನುವ ಪ್ರಿಂಟ್ ಹಾಕಿಸಿರುವ ಹಳದಿ ಬಣ್ಣದ ತುಂಬು ತೋಳಿನ ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಯುವಕನ ಬಗ್ಗೆ ಸುಳಿವು ಸಿಕ್ಕಲ್ಲಿ ಕೌಲ್ ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145 ಅಥವಾ ಪಿಎಸ್‌ಐ ಮೊ.94808203085, ಪಿಐ ಮೊ.9480803047, ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ---------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ