ಮಂಗಳವಾರ, ಜೂನ್ 9, 2026
ಜೂ.11 ರಂದು ಡಾಕ್ ಅದಾಲತ್: ಸಾರ್ವಜನಿಕರ ಕುಂದುಕೊರತೆ ಆಲಿಕೆಗೆ ಅವಕಾಶ
ಬಳ್ಳಾರಿ,ಜೂ.09(ಕರ್ನಾಟಕ ವಾರ್ತೆ):
ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಅಂಚೆ ಕಚೇರಿಗಳಿಗೆ ಸಂಬAಧಿಸಿದ ಸಾರ್ವಜನಿಕರ ದೂರುಗಳು ಹಾಗೂ ಕುಂದುಕೊರತೆಗಳ ನಿವಾರಣೆಗಾಗಿ ಜೂನ್ 11 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೋಟೆ ಪ್ರದೇಶದಲ್ಲಿರುವ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ಡಾಕ್ ಅದಾಲತ್ (ಅಂಚೆ ಅದಾಲತ್) ಹಮ್ಮಿಕೊಳ್ಳಲಾಗಿದೆ.
ಅಂಚೆ ಇಲಾಖೆಯ ಸೇವೆಗಳಿಗೆ ಸಂಬAಧಿಸಿದAತೆ ಸಾರ್ವಜನಿಕರು ತಮ್ಮಲ್ಲಿರುವ ಕುಂದುಕೊರತೆಗಳು ಅಥವಾ ದೂರುಗಳನ್ನು ಲಿಖಿತ ರೂಪದಲ್ಲಿ ಸವಿಸ್ತಾರವಾಗಿ ಬರೆದು, ಜೂನ್ 10 ರ ಸಂಜೆ 04 ಗಂಟೆಯ ಒಳಗಾಗಿ ತಲುಪುವಂತೆ ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ಬಳ್ಳಾರಿ-583102 ಈ ವಿಳಾಸಕ್ಕೆ ಕಳುಹಿಸಿಕೊಡಬೇಕು.
ಸಾರ್ವಜನಿಕರು ತಮ್ಮ ದೂರುಗಳನ್ನು doballari.ka@indiapost.gov.in ಇ-ಮೇಲ್ ವಿಳಾಸಕ್ಕೂ ಸಹ ಕಳುಹಿಸಬಹುದಾಗಿದೆ. ದೂರು ಸಲ್ಲಿಸಲು ಕೊನೆಯ ದಿನಾಂಕ ಜೂನ್ 10.
ದೂರು ಸಲ್ಲಿಸಿದ ಅರ್ಜಿದಾರರು ಜೂನ್ 11 ರಂದು ನಡೆಯುವ ಡಾಕ್ ಅದಾಲತ್‌ನಲ್ಲಿ ಖುದ್ದಾಗಿ ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-----------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ