ಬುಧವಾರ, ಜೂನ್ 3, 2026

ಚೋರ್‌ನೂರ್ ಮಸ್ಜಿದ್ ಎ ನೂರ್ ವಕ್ಫ್ ಸಂಸ್ಥೆಗೆ ಸದಸ್ಯರ ನೋಂದಣಿ ಆರಂಭ: ಜೂನ್ 16 ಕೊನೆಯ ದಿನಾಂಕ

ಬಳ್ಳಾರಿ,ಜೂ.03(ಕರ್ನಾಟಕ ವಾರ್ತೆ): ಜಿಲ್ಲೆಯ ಸಂಡೂರು ತಾಲ್ಲೂಕಿನ ಚೋರ್‌ನೂರ್ ಗ್ರಾಮದ ವಕ್ಫ್ ಸಂಸ್ಥೆಯಾದ 'ಮಸ್ಜಿದ್ ಎ ನೂರ್, ಈದ್ಗಾ ಮತ್ತು ಖಬರಸ್ತಾನ್' ಸಂಸ್ಥೆಗೆ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ ಎಂದು ನೋಂದಣಿ ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 3 ರಿಂದ ಜೂನ್ 16 ರವರೆಗೆ ಈ ನೋಂದಣಿ ಪ್ರಕ್ರಿಯೆ ನಡೆಯಲಿದೆ. *ಅರ್ಜಿ ಸಲ್ಲಿಕೆ ವಿವರ ಮತ್ತು ನಿಯಮಗಳು:* ಜೂನ್ 3 ರಿಂದ ಜೂನ್ 16 ರವರೆಗೆ ಪ್ರತಿದಿನ ಬೆಳಗ್ಗೆ 10.30 ರಿಂದ ಸಂಜೆ 05.30 ಗಂಟೆಯ ಅವಧಿಯಲ್ಲಿ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆಗಳನ್ನು ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿ ನಮೂನೆಯೊಂದಿಗೆ ಅರ್ಜಿದಾರರು ತಮ್ಮ 3 ಇತ್ತೀಚಿನ ಭಾವಚಿತ್ರಗಳು, ರೂ. 100 ಶುಲ್ಕ ಹಾಗೂ ಅಧಿಕೃತ ವಿಳಾಸವಿರುವ 2 ಗುರುತಿನ ಚೀಟಿಗಳನ್ನು ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 12ರ ಸಂಜೆ 5.30 ಗಂಟೆಯೊಳಗೆ ಚೋರ್‌ನೂರ್ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು. ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ದಿನಗಳಲ್ಲಿ ನೋಂದಣಿ ಕಚೇರಿಯು ಕಾರ್ಯನಿರ್ವಹಿಸಲಿದೆ. *ವೇಳಾಪಟ್ಟಿ:* ನೋಂದಾಯಿತ ಸದಸ್ಯರ ಮೊದಲ ಕರಡು ಪಟ್ಟಿಯನ್ನು ಜೂನ್ 16 ರಂದು ಪ್ರಕಟಿಸಲಾಗುವುದು. ಕರಡು ಪಟ್ಟಿಗೆ ಸಂಬAಧಿಸಿದAತೆ ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ ಜೂನ್ 17ರ ಬೆಳಗ್ಗೆ 11 ರಿಂದ ಸಂಜೆ 5.30 ಗಂಟೆಯೊಳಗೆ ಸಲ್ಲಿಸಬಹುದು. ಬಂದಿರುವ ಆಕ್ಷೇಪಣೆಗಳ ವಿಚಾರಣೆಯನ್ನು ಜೂನ್ 18ರ ಬೆಳಗ್ಗೆ 11 ಗಂಟೆಯಿAದ ನಡೆಸಲಾಗುತ್ತದೆ. ಸದಸ್ಯರ ಅಂತಿಮ ಪಟ್ಟಿಯನ್ನು ಜೂನ್ 23 ರಂದು ಚೋರ್‌ನೂರ್‌ನ ಮಸ್ಜಿದ್ ಎ ನೂರ್ ಹಾಗೂ ಬಳ್ಳಾರಿಯ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು. ಹೆಚ್ಚಿನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ