ಸೋಮವಾರ, ಜೂನ್ 8, 2026

ಬಳ್ಳಾರಿ ಮಹಾನಗರ ಪಾಲಿಕೆ: ಶಿಥಿಲಗೊಂಡ ಕಟ್ಟಡ, ಕಾಂಪೌAಡ್, ಗೋಡೆ ಕಂಡುಬAದಲ್ಲಿ ಮಾಹಿತಿ ನೀಡಲು ಮನವಿ

ಬಳ್ಳಾರಿ,ಜೂ.08(ಕರ್ನಾಟಕ ವಾರ್ತೆ): ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 1 ರಿಂದ 39 ರವರೆಗೆ ಬರುವ ಎಲ್ಲಾ ಸರ್ಕಾರಿ ಶಾಲಾ ಕಟ್ಟಡಗಳು, ಸರ್ಕಾರಿ ಕಾಂಪೌAಡ್‌ಗಳು, ಇತರೆ ಸರ್ಕಾರಿ ಕಟ್ಟಡಗಳು, ಗೋಡೆಗಳು ಅಥವಾ ಯಾವುದೇ ಅಪಾಯಕಾರಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿರುವುದು ಕಂಡುಬAದಲ್ಲಿ, ಸಾರ್ವಜನಿಕರು ತಕ್ಷಣವೇ ಮಹಾನಗರಪಾಲಿಕೆಗೆ ದೂರವಾಣಿ ಅಥವಾ ವಾಟ್ಸಾಪ್ ಮೂಲಕ ಮಾಹಿತಿ ನೀಡಬಹುದಾಗಿದೆ ಎಂದು ಪಾಲಿಕೆಯ ಉಪ-ಆಯುಕ್ತರು ತಿಳಿಸಿದ್ದಾರೆ. ಖಾಸಗಿ ಶಾಲೆಗಳು, ಖಾಸಗಿ ಕಟ್ಟಡಗಳು ಹಾಗೂ ಅವುಗಳ ಕಾಂಪೌAಡ್ ಗೋಡೆಗಳು ಶಿಥಿಲಾವಸ್ಥೆಯಲ್ಲಿದ್ದರೆ ಅಥವಾ ಅಪಾಯಕಾರಿಯಾಗಿದ್ದರೆ, ಅಂತಹ ಕಟ್ಟಡಗಳ ಮಾಲೀಕರು ವಿಷಯವನ್ನು ತಕ್ಷಣವೇ ಮಹಾನಗರಪಾಲಿಕೆಯ ಗಮನಕ್ಕೆ ತರಬೇಕು. ಅಲ್ಲದೆ, ಯಾವುದೇ ಅವಘಡಗಳಿಗೆ ಆಸ್ಪದ ನೀಡದಂತೆ ಸ್ವಂತ ಖರ್ಚಿನಲ್ಲಿಯೇ ಅವುಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿದ್ದಾರೆ. ಅನಧಿಕೃತವಾಗಿ ಕುಂಟೆ, ರಾಜಕಾಲುವೆ ಹಾಗೂ ಚರಂಡಿಗಳ ಮೇಲೆ ವಾಸಿಸುತ್ತಿರುವವರು ತಕ್ಷಣವೇ ಸದರಿ ಜಾಗಗಳನ್ನು ಖಾಲಿ ಮಾಡಬೇಕು. ಮುಂಬರುವ ಮಳೆಗಾಲದಲ್ಲಿ ಯಾವುದೇ ರೀತಿಯ ಅವಘಡಗಳು ಸಂಭವಿಸಿದಲ್ಲಿ ಅದಕ್ಕೆ ಸಾರ್ವಜನಿಕರೇ ನೇರ ಜವಾಬ್ದಾರರಾಗಬೇಕಾಗುತ್ತದೆ ಎಂದು ತಿಳಿಸಿದ್ದಾರೆ. *ತುರ್ತು ಸಂಪರ್ಕಕ್ಕಾಗಿ ಹೆಲ್ಪ್ಲೈನ್:* ಯಾವುದೇ ತುರ್ತು ಸಂದರ್ಭ ಹಾಗೂ ಮಾಹಿತಿ ನೀಡಲು ವಾರ್ಡ್ವಾರು ನಿಯೋಜನೆಗೊಂಡಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಪಾಲಿಕೆಯ ಕಂಟ್ರೋಲ್ ರೂಂ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ವಾರ್ಡ್ ನಂ. 25, 26, 27, 28, 29, 30, 31, 32, 33, 37, 38 ಮತ್ತು 9: ಮಂಜುನಾಥ.ಟಿ.ಎ (ಮೊ.9742138927). ವಾರ್ಡ್ ನಂ. 3, 7, 8, 9, 10, 11, 12, 13 ಮತ್ತು 14: ಶ್ರೀನಾಥ್ ಹೂಗಾಡೆ (ಮೊ.9738349471). ವಾರ್ಡ್ ನಂ. 2, 4, 5 ಹಾಗೂ 15 ರಿಂದ 20: ಪ್ರದೀಪ (ಮೊ.8217314224). ವಾರ್ಡ್ ನಂ. 1, 21, 22, 23, 24, 34, 36: ಜಿ.ಎಂ.ವಿರೇಶ್ (ಮೊ.8867204172). ಬಳ್ಳಾರಿ ಮಹಾನಗರಪಾಲಿಕೆ ಕಂಟ್ರೋಲ್ ರೂಮ್/ಹೆಲ್ಪ್ಲೈನ್: 7975629447. ಸಾರ್ವಜನಿಕರು ಮಳೆಗಾಲದಲ್ಲಿ ಸುರಕ್ಷತೆಗೆ ಆದ್ಯತೆ ನೀಡಿ, ಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಬಳ್ಳಾರಿ ಮಹಾನಗರಪಾಲಿಕೆಯ ಉಪ-ಆಯುಕ್ತರು (ಅಭಿವೃದ್ಧಿ) ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ