ಶನಿವಾರ, ಜನವರಿ 21, 2023

ಬಳ್ಳಾರಿ ಉತ್ಸವ ಸಮಾರೋಪ ಸಮಾರಂಭ ಜ.22ರಂದು ಬಳ್ಳಾರಿ,ಜ.21(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಬಳ್ಳಾರಿ ಉತ್ಸವದ ಸಮಾರೋಪ ಸಮಾರಂಭವು ಜ.22 ಸಂಜೆ 6ಕ್ಕೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಮೈದಾನದ ಬಳ್ಳಾರಿ ರಾಘವ ವೇದಿಕೆಯಲ್ಲಿ ನಡೆಯಲಿದೆ. ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಸಮಾರೋಪ ಭಾಷಣ ಮಾಡುವರು. ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರಾದ ಆನಂದಸಿಂಗ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ವಿ.ಸುನೀಲ್‍ಕುಮಾರ್ ಅವರು ಘನಉಪಸ್ಥಿತಿ ಇರುವರು. ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅಧ್ಯಕ್ಷತೆ ವಹಿಸುವರು. ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಬಿ.ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಜೆ.ಎನ್.ಗಣೇಶ್, ಎಂಎಲ್‍ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ, ಮಹಾನಗರ ಪಾಲಿಕೆ ಮಹಾ ಪೌರರಾದ ಎಂ.ರಾಜೇಶ್ವರಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಾರುತಿ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಪ್ರಕಾಶ್ ಜಿ.ನಿಟ್ಟಾಲಿ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ. ಜ.22ರಂದು ಮುನಿಸಿಪಲ್ ಮೈದಾನದ ರಾಘವ ವೇದಿಕೆಯಲ್ಲಿ ಸಂಜೆ 6.30ರಿಂದ ರಾತ್ರಿ 12.30ರವರೆಗೆ ಪ್ರಕಾಶ್ ಹೆಮ್ಮಾಡಿ ತಂಡದಿಂದ ವಿಭಿನ್ನ ಜಾದು ಪ್ರದರ್ಶನ, ಬುಡಕಟ್ಟು ಜನಾಂಗದ ಕಲಾವಿದರಿಂದ ನೃತ್ಯ ರೂಪಕ, ಪ್ರಹ್ಲಾದ್ ಆಚಾರ್‍ರವರ ಶಾಡೋ ಷೋ, ಕೊಳಲುವಾದನ ಸಂದೀಪ್, ಕಿಬೋರ್ಡ್ ವೀಣಾ, ತಬಲಾ ಪ್ರತ್ಯುಬ ಸೊರಬ, ಡ್ರಮ್ ಸೆಟ್ ಪ್ರಕಾಶ್ ಅಂತೋನಿ, ವಾಯಲಿನ್ ಮನಿ ಇವರಿಂದ ವಾದ್ಯ ಸಂಗೀತ ಜುಗಲ್ ಬಂದಿ ಮತ್ತು ಬಾಲಿವುಡ್ ಖ್ಯಾತ ಗಾಯಕಿ ಸುನಿಧಿ ಚವ್ಹಾಣ್ ತಂಡದಿಂದ ರಸಮಂಜರಿ ಕಾರ್ಯಕ್ರಮ ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆಯಲಿದೆ. ಇದೇ ದಿನದಂದು ಎರಡನೇಯ ವೇದಿಕೆಯಾದ ಕೋಟೆ ಶ್ರೀ ಮಲ್ಲೇಶ್ವರ ದೇವಸ್ಥಾನದ ಆವರಣದ ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆಯಲ್ಲಿಯೂ ಸಂಜೆ 4ರಿಂದ ರಾತ್ರಿ 12ರವರೆಗೆ ವಿವಿಧ ಕಲಾತಂಡಗಳಿಂದ ಸಂಗೀತ, ವಿವಿಧ ನೃತ್ಯ, ಬಯಲಾಟ ಸೇರಿದಂತೆ ಹಲವಾರು ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. -----
ಬಳ್ಳಾರಿ ಉತ್ಸವ: ಮಳಿಗೆಗಳ ಮುಂದೆ ಜನಸ್ತೋಮ ಸರ್ಕಾರದ ಯೋಜನೆಗಳ ಮಹತ್ವ ಸಾರಿದ ವಿವಿಧ ಇಲಾಖೆ ಮಳಿಗೆಗಳು ಉಚಿತ ಆರೋಗ್ಯ ಶಿಬಿರ, ಒಗ್ಗರಣೆ ಮಂಡಕ್ಕಿ ಮಿರ್ಚಿ ಸವಿ ಬಳ್ಳಾರಿ,ಜ.21(ಕರ್ನಾಟಕ ವಾರ್ತೆ): ಮೊದಲ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವಕ್ಕೆ ಜಿಲ್ಲೆಯ ಜನತೆ ಮನಃಪೂರ್ವಕ ಸ್ಪಂದನೆ ನೀಡಿದ್ದಾರೆ. ಉತ್ಸವದ ಮೊದಲ ದಿನ ನಗರದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ತಂಡೋಪತಂಡವಾಗಿ ಮುನಿಸಿಪಲ್ ಮೈದಾನಕ್ಕೆ ಆಗಮಿಸುತ್ತಿರುವ ಜನರು ಫಲಪುಷ್ಪ, ಮತ್ಸ್ಯಲೋಕ, ಮರಳು ಶಿಲ್ಪ, ವಿವಿಧ ಇಲಾಖೆ, ಆಹಾರ, ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ಉತ್ಸವದಲ್ಲಿ ಸಂಭ್ರಮದಲ್ಲಿ ಪಾಲ್ಗೊಂಡು ಸಂತಸ ವ್ಯಕ್ತ ಪಡಿಸುತ್ತಿದ್ದಾರೆ. ಮುನ್ಸಿಪಲ್ ಮೈದಾನದ ರಾಘವ ವೇದಿಕೆ ಮುಂಭಾಗದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ಕೃಷಿ ಇಲಾಖೆಯಿಂದ ಮಾದರಿ ಕಿರು ಜಲಾನಯನ ಪ್ರದೇಶ, ಕೃಷಿ ವಸ್ತ ಪ್ರದರ್ಶನ, ಸಾಂಪ್ರಾದಾಯಿಕ ಕೃಷಿ ಉಪಕರಣಗಳ ಪ್ರದರ್ಶನ, ಸಿರಿ ಧಾನ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಆರೋಗ್ಯ ಇಲಾಖೆಯಿಂದ ಸಾರ್ವಜನಿಕ ಆರೋಗ್ಯ, ಭ್ರೂಣ ಹತ್ಯೆ ನಿμÉೀಧ, ಧೂಮಪಾನದ ಅಡ್ಡ ಪರಿಣಾಮಗಳು, ಗರ್ಭಿಣಿ ಪೆÇೀಷಣೆ ಕುರಿತು ವಸ್ತು ಪ್ರದರ್ಶನ ಮಳಿಗೆ ತೆರೆಯಲಾಗಿದೆ. ಸ್ಥಳದಲ್ಲಿ ತೆರೆಯಲಾಗಿರುವ ಆಯμÁ್ಮನ್ ಭಾರತ್, ಪ್ರಧಾನ ಮಂತ್ರಿ ಆರೋಗ್ಯ ಯೋಜನೆ, ಆರೋಗ್ಯ ಕರ್ನಾಟಕ ಮಳಿಗೆಯಲ್ಲಿ ಯೋಜನೆ ಕುರಿತು ಮಾಹಿತಿ ನೀಡುವುದರೊಂದಿಗೆ, ಎಬಿಆರ್‍ಕೆ ಕಾರ್ಡ್ ಸಹ ಮುದ್ರಿಸಿ ಕೊಡಲಾಗುತ್ತಿದೆ. ಉತ್ಸವದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಮಳಿಗೆಗಳಲ್ಲಿ ಉದ್ಯೋಗ ಖಾತರಿ ಯೋಜನೆ, ಜಲ ಜೀವನ್ ಮಿಷನ್, ಮಳೆ ನೀರು ಕೊಯ್ಲು, ಬೂದು ನೀರು ನಿರ್ವಹಣೆ, ಘನ ತ್ಯಾಜ್ಯ ನಿರ್ವಹಣೆ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆ ಜಾಗೃತಿ ಮೂಡಿಸಲು ಉಚಿತ ಮಕ್ಕಳ ಸಹಾಯವಾಣಿ ಮಳಿಗೆ ತೆರೆಯಲಾಗಿದೆ. ಬಾಲ ಕಾರ್ಮಿಕ ಯೋಜನೆ ಕುರಿತು ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಮಹಾನಗರ ಪಾಲಿಕೆ ಮಳಿಗೆಯಲ್ಲಿ ಘನ ಹಾಗೂ ದ್ರವ ತ್ಯಾಜ್ಯಗಳ ವಿಂಗಡಣೆ, ನಿರ್ವಹಣೆ ಹಾಗೂ ವಿಲೇವಾರಿ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬಳ್ಳಾರಿ ನಗರ ಸಂಚಾರಿ ಪೆÇಲೀಸ್ ಇಲಾಖೆ ಮಳಿಗೆಯಲ್ಲಿ ರಸ್ತೆ ನಿಯಮಗಳ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ರೇμÉ್ಮ ಬೆಳೆ ಉತ್ತೇಜನ ನೀಡಲು ಹಾಗೂ ರೇμÉ್ಮ ಉಪ ಉತ್ಪನ್ನಗಳ ಮಾಹಿತಿ ನೀಡಲು ರೇμÉ್ಮ ಇಲಾಖೆ ವತಿಯಿಂದ ಮಳಿಗೆ ತೆರೆಯಲಾಗಿದೆ. ರೇμÉ್ಮಯಿಂದ ತಯಾರಿಸಿದ ಹಾರಗಳು ನೋಡುಗರ ಗಮನ ಸಳೆಯುತ್ತಿವೆ. ಇದರೊಂದಿಗೆ ಅರಣ್ಯ, ಪ್ರವಾಸೋದ್ಯಮ, ಜಿಲ್ಲಾ ಕೈಗಾರಿಕಾ ಕೇಂದ್ರ, ಅಂಚೆ ಇಲಾಖೆ ಮಳಿಗೆಗಳಿವೆ. ಒಗ್ಗರಣೆ ಮಂಡಕ್ಕಿ ಮಿರ್ಚಿ ಸವಿ; ಬಳ್ಳಾರಿ ಜಿಲ್ಲೆಯ ಪ್ರಸಿದ್ದ ಖಾದ್ಯ ಒಗ್ಗರಣೆ ಮಂಡಕ್ಕಿ ಮಿರ್ಚಿ ಸವಿಯಲು ಜನರು ಆಹಾರ ಮಳಿಗೆ ಮುಂದೆ ಜಮಾಯಿಸಿರುವುದು ಉತ್ಸವದಲ್ಲಿ ಸರ್ವೇ ಸಾಮಾನ್ಯ ದೃಶ್ಯವಾಗಿತ್ತು. ಇದರೊಂದಿಗೆ ಕುರುಕುಲು ತಿಂಡಿ, ಬೆಲ್ಲದ ಚಹಾ, ಪಾನೀಪುರಿ, ಗೋಬಿ ಮಂಚೂರಿ, ಪ್ರಸಿದ್ಧ ಬಿಸಿಮಿಲ್ಲಾ ಬಿರಿಯಾನಿ ಸೇರಿದಂತೆ ತರಹೇವಾರಿ ತಿಂಡಿ ತಿನಿಸುಗಳ ಮಳಿಗೆಗಳು ಇವೆ. ಇದರೊಂದಿಗೆ ಹಳೆ ಕಾಲದ ನಾಣ್ಯಗಳು ಹಾಗೂ ಅಂಚೆ ಚೀಟಿ ಪ್ರದರ್ಶನ, ಶ್ರವಣ ಸಾಧನಗಳ ಕುರಿತ ಶ್ರವಣ ಎಜ್ಯುಕೇಷನ್ ಟ್ರಸ್ಟ್ ಮಳಿಗಗಳು ಜನರನ್ನು ಆಕರ್ಷಿಸುತ್ತಿವೆ. ಇಂಡಿಯನ್ ಬ್ಯಾಂಕ್, ಕೆನರಾ, ಬ್ಯಾಂಕ್ ಆಪ್ ಬರೋಡಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಳಿಗೆಗಳು ಸ್ವ ನಿಧಿ ಮಹೋತ್ಸವ ಕುರಿತು ಮಳಿಗೆ ತೆರೆದು ಸಾರ್ವಜನಿಕರಿಗೆ ಮಾಹಿತಿ ನೀಡುತ್ತವೆ. ಮಹಿಳಾ ಸಂಘ ಸಂಸ್ಥೆಗಳ ಉತ್ಪನ್ನ, ಗೃಹ ಕೈಗಾರಿಕೆ, ಬಟ್ಟೆ, ಜೀನ್ಸ್, ಕರಕುಶಲ ವಸ್ತಗಳು, ಸಾವಯವ ಪದಾರ್ಥಗಳು ಮುಂದೆ ಜನರ ಖರೀದಿ ಭರಾಟೆ ಹೆಚ್ಚು ಇದ್ದಿದ್ದು ಕಂಡು ಬಂದಿತು. -----
*ಬಳ್ಳಾರಿ ಉತ್ಸವ* *ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಿದ ಶಾಸಕ ಜೆ.ಎನ್.ಗಣೇಶ್* ಬಳ್ಳಾರಿ,ಜ.21(ಕರ್ನಾಟಕ ವಾರ್ತೆ): ಬಳ್ಳಾರಿ ಉತ್ಸವದ ಅಂಗವಾಗಿ ನಗರದ ವಿಮ್ಸ್ ಅವರಣದಲ್ಲಿ ಆಯೋಜಿಸಲಾಗಿದ್ದ ಗ್ರಾಮೀಣ ಕ್ರೀಡೆ ಕಬ್ಬಡ್ಡಿ ಪಂದ್ಯಾವಳಿಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರು ಶನಿವಾರ ಚಾಲನೆ ನೀಡಿ ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಪಂದ್ಯಾವಳಿಯಲ್ಲಿ 34 ಪುರುಷ ತಂಡ ಮತ್ತು 12 ಮಹಿಳಾ ತಂಡಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರೆಹಮತ್ ಉಲ್ಲಾ ಸೇರಿದಂತೆ ಇತರರು ಇದ್ದರು. ----
*ಉತ್ಸವದಲ್ಲಿ ಬೈಕ್ ಸ್ಟಂಟ್ ಕ್ರೇಜ್* ಬಳ್ಳಾರಿ,ಜ.21(ಕರ್ನಾಟಕ ವಾರ್ತೆ): ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶನಿವಾರ ನಡೆದ ಸಾಹಸ ಕ್ರೀಡೆಗಳಲ್ಲೊಂದಾದ ಬೈಕ್ ಸ್ಟಂಟ್ ಪ್ರದರ್ಶನವು ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿತು. ನೋಪಾಸನಾ ಅಡ್ವೆಂಚರ್ ಗೇಮ್ಸ್ ಇವರ ವತಿಯಿಂದ ಆಯೋಜಿಸಲಾದ ಬೈಕ್ ಸ್ಟಂಟ್ ಪ್ರದರ್ಶನವು ಸಾರ್ವಜನಿಕರು, ಯುವ ಸಮೂಹವನ್ನು ರಂಜಿಸಿತು. ಜಿಲ್ಲಾಡಳಿತ ವತಿಯಿಂದ ಮೊದಲ ಬಾರಿಗೆ ನಡೆಸಲಾಗುತ್ತಿರುವ ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳ ಜೊತೆಗೆ ಸಾಹಸ ಕ್ರೀಡೆಗಳನ್ನೂ ಆಯೋಜಿಸಿದೆ. ಈ ಸಾಹಸ ಪ್ರದರ್ಶನಕ್ಕೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಚಾಲನೆ ನೀಡಿದರು. ಬೈಕ್ ಸಾಹಸ ಪ್ರದರ್ಶನದಲ್ಲಿ ‘ಹಾಟ್ ಬೈ ಸ್ಟಂಟ್’ ತಂಡದವರಿಂದ ನಡೆಸಿದ್ದು, ಎರಡು ದ್ವಿಚಕ್ರ ವಾಹನ, ಎರಡು ಕ್ವಾಡ್ ಬೈಕ್‍ಗಳಿಂದ ನಡೆಸಿದ ವಿವಿಧ ರೀತಿಯ ಸ್ಟಂಟ್‍ಗಳಿಗೆ ಸಾರ್ವಜನಿಕರಿಗೆ ಮೆಚ್ಚುಗೆಗೆ ವ್ಯಕ್ತವಾಯಿತು. ಪ್ರದರ್ಶನ ನಡೆಸಿದ ಭಟ್ಕಳ ಮೂಲದ ಬೈಕ್ ರೈಡರ್‍ಗಳಾದ ಮೊಹಮ್ಮದ್ ಗೌಸ್, ಅಖಿಲ್ ಮತ್ತು ಗೋವಾದ ಮೂಲದ ಸಮೀರ್ ತಮ್ಮ ವಿಭಿನ್ನ ರೀತಿಯ ಬೈಕ್ ಸ್ಟಂಟ್‍ಗಳು ಸುಮಾರು ಗಂಟೆಗೂ ಅಧಿಕ ಸಮಯ ನಡೆಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಎಡಿಸಿ ಪಿ.ಎಸ್.ಮಂಜುನಾಥ ಸೇರಿದಂತೆ ಸಾರ್ವಜನಿಕರು ಹಾಗೂ ಯುವಕರು ಇದ್ದರು. -----
*ಬಳ್ಳಾರಿ ಉತ್ಸವದ ಅಂಗವಾಗಿ ಆಯೋಜನೆ, 70ಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಭಾಗಿ* *ಮೆಹಂದಿ ಸ್ಪರ್ಧೆ: ಅಂಗೈನಲ್ಲಿ ಮೂಡಿದ ಕಲಾತ್ಮಕ ಚಿತ್ತಾರ* ಬಳ್ಳಾರಿ,ಜ.21(ಕರ್ನಾಟಕ ವಾರ್ತೆ): ಕಣ್ಮನ ಸೆಳೆಯುವ ವಿವಿಧ ವಿನ್ಯಾಸದ ಚಿತ್ರಗಳು, ಕಲಾತ್ಮಕತೆಯಿಂದ ಕೂಡಿದ ಬಗೆಬಗೆಯ ವಿನ್ಯಾಸಗಳು ಅಂಗೈನಲ್ಲಿ ಮೂಡಿದ ಸುಂದರ ಕ್ಷಣವದು. ನಗರ ಮುನಿಸಿಪಲ್ ಮೈದಾನದಲ್ಲಿ ಶನಿವಾರ ಬಳ್ಳಾರಿ ಜಿಲ್ಲಾ ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮೆಹಂದಿ ಸ್ಪರ್ಧೆಯಲ್ಲಿ ವಿವಿಧ ಶೈಲಿಯ ಮೆಹಂದಿಯ ಪ್ರದರ್ಶನ ಕಂಡುಬಂತು. ಮೆಹಂದಿ ಸ್ಪರ್ಧೆಯಲ್ಲಿ 70ಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು, ಎಲ್ಲರೂ ಗಮನ ಸೆಳೆಯುವಂತೆ ಮೆಹಂದಿ ಹಾಕಿಸಿಕೊಂಡರು. ಬೆಳಿಗ್ಗೆ 10.45 ಕ್ಕೆ ಆರಂಭವಾದ ಮೆಹಂದಿ ಸ್ಪರ್ಧೆಯು ಮಧ್ಯಾಹ್ನ 12.15 ರವರೆಗೂ ನಡೆಯಿತು. ಅಂಗೈನಲ್ಲಿ ತಮ್ಮ ಕಲ್ಪನೆಯ ಚಿತ್ತಾರ ಮೂಡಿಸಲು ಸುಮಾರು 1.30 ಗಂಟೆಯ ಕಾಲಾವಕಾಶ ನೀಡಲಾಗಿತ್ತು. ಮೆಹಂದಿ ಸ್ಪರ್ಧೆಯ ತೀರ್ಪುಗಾರರಾಗಿ ಪೆÇ್ರೀಬೇಷನರಿ ಐ ಎ ಎಸ್ ಅಧಿಕಾರಿ ರೂಪಿಂದರ್ ಕೌರ್ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿವರಿಗೆ ರೂ. 3000/-, ದ್ವಿತೀಯ ಸ್ಥಾನಕ್ಕೆ ರೂ. 2000/- ಹಾಗೂ ತೃತೀಯ ಸ್ಥಾನ ಪಡೆದವರಿಗೆ ರೂ. 1000/- ನಗದು ಬಹುಮಾನ, ಐದು ಸಮಾಧಾನಕರ ಬಹುಮಾನ ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ಬಳ್ಳಾರಿ ಉತ್ಸದ ನಿಮಿತ್ತ ಅಭಿನಂದನಾ ಪತ್ರ ನೀಡಲಾಯಿತು. ಬಳ್ಳಾರಿ ಉತ್ಸವಕ್ಕೆ ಮಹಿಳಾ ಮೆರಗು: ಪ್ರಥಮ ಬಾರಿಗೆ ಆಯೋಜಿಸಲಾಗಿರುವ ಬಳ್ಳಾರಿ ಉತ್ಸವದಲ್ಲಿ ನಗರದ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಉತ್ಸವಕ್ಕೆ ವಿಶೇಷ ಮೆರಗು ನೀಡಿದ್ದಾರೆ ಎಂದು ಪಾಲಿಕೆ ಮೇಯರ್ ರಾಜೇಶ್ವರಿ ಹೇಳಿದರು. ನಗರದ ಮುನಿಸಿಪಲ್ ಮೈದಾನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಮೆಹಂದಿ ಸ್ಪರ್ಧೆಯಲ್ಲಿ ಸ್ವತಃ ಅಂಗೈಗೆ ಮೆಹಂದಿ ಹಾಕಿಸಿಕೊಳ್ಳುವುದರ ಚಾಲನೆ ನೀಡಿ ಅವರು ಮಾತನಾಡಿದರು. ಉತ್ಸವದಲ್ಲಿ ಮಹಿಳೆಯರು ಪಾಲ್ಗೊಳ್ಳವ ನಿಟ್ಟಿನಲ್ಲಿ ರಂಗೋಲಿ, ಪಾನೀಪುರಿ, ಮೆಹಂದಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಮಹಿಳೆಯರು ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು, ಬಹಳಷ್ಟು ಯುವತಿಯರು ಮೆಹಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಮುಂದೆ ಯುವತಿಯರೆಲ್ಲರಿಗೂ ಮದುವೆ ಮೆಹಂದಿ ಹಾಕಿಸಿಕೊಳ್ಳವ ಅದೃಷ್ಟ ಬರಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶಕೀನಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಮತ್ತಿರರು ಇದ್ದರು. -----