ಬುಧವಾರ, ಜನವರಿ 11, 2023
ಬಳ್ಳಾರಿ ಉತ್ಸವದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು
ಬಳ್ಳಾರಿ,ಜ.11(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಜನವರಿ 21 ಮತ್ತು 22ರಂದು ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ‘ಬಳ್ಳಾರಿ ಉತ್ಸವ’ದಲ್ಲಿ ವಿವಿಧ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಜನವರಿ 21ರಂದು ಸಂಜೆ ಟಾಲಿವುಡ್ ಖ್ಯಾತ ಗಾಯಕಿ ಮಂಗ್ಲಿ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ, ಎಂ.ಡಿ ಪಲ್ಲವಿ ಅವರಿಂದ ಗೀತಗಾಯನ ಕಾರ್ಯಕ್ರಮ, ಅರ್ಜುನ್ ಜನ್ಯಾ ಹಾಗೂ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಜ.22ರಂದು ವಿಶ್ವ ದಾಖಲೆಯ ಜಾದುಗಾರ ಪ್ರಕಾಶ್ ಹೆಮ್ಮಾಡಿ ಹಾಗೂ ನೇತ್ರಾವತಿ ಹೆಮ್ಮಾಡಿ ಅವರಿಂದ ವಿಭಿನ್ನ ಜಾದು ಕಾರ್ಯಕ್ರಮ, ಪ್ರಹ್ಲಾದ್ ಆಚಾರ್ ಇವರಿಂದ ಶಾಡೋ ಷೋ, ಸಂದೀಪ್ ಕೊಳಲು ವಾದನ, ಕೀಬೋರ್ಡ್ ವೀಣು, ತಬಲಾ ಪ್ರತ್ಯುಬ್ನ ಸೊರಬ, ಡ್ರಮ್ ಸೆಟ್, ಪ್ರಕಾಶ್ ಅಂತೋನಿ, ವಾಯಲಿನ ಮನಿ ಇವರಿಂದ ವಾದ್ಯ ಸಂಗೀತ ಜುಗಲ್ ಬಂದಿ ಕಾರ್ಯಕ್ರಮ ಹಾಗೂ ಬಾಲಿವುಡ್ ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಹಾಗೂ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರಿಗೆ ಮುಕ್ತವಾಗಿ ಪ್ರವೇಶವಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)



ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ