ಶನಿವಾರ, ಜನವರಿ 14, 2023

ಬಳ್ಳಾರಿ ಉತ್ಸವ ಜ.21, 22ರಂದು ಬಳ್ಳಾರಿ,ಜ.14(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಜನವರಿ 21 ಮತ್ತು 22 ರಂದು ನಗರದ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಮೈದಾನದ ಬಳ್ಳಾರಿ ರಾಘವ ವೇದಿಕೆ ಮತ್ತು ನಗರದ ಕೋಟೆ ಮಲ್ಲೇಶ್ವರ ದೇವಸ್ಥಾನ ಆವರಣದ ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆಗಳಲ್ಲಿ ಎರಡು ದಿನಗಳ ಕಾಲ ಬಳ್ಳಾರಿ ಉತ್ಸವ ನಡೆಯಲಿದೆ. *ಉದ್ಘಾಟನಾ ಸಮಾರಂಭವು* ಜ.21ರಂದು ಸಂಜೆ 6ಕ್ಕೆ ಮುನಿಸಿಪಲ್ ಮೈದಾನದ ಬಳ್ಳಾರಿ ರಾಘವ ವೇದಿಕೆಯಲ್ಲಿ ಉದ್ಘಾಟನೆ ನಡೆಯಲಿದೆ. ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸುವರು. ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು, ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರಾದ ಆನಂದಸಿಂಗ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ವಿ.ಸುನೀಲ್‍ಕುಮಾರ್ ಅವರು ಘನಉಪಸ್ಥಿತಿ ಇರುವರು. ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅಧ್ಯಕ್ಷತೆ ವಹಿಸುವರು. ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಬಿ.ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಜೆ.ಎನ್.ಗಣೇಶ್, ಎಂಎಲ್‍ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ, ಮಹಾನಗರ ಪಾಲಿಕೆ ಮಹಾ ಪೌರರಾದ ಎಂ.ರಾಜೇಶ್ವರಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಾರುತಿ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. *ಸಮಾರೋಪ ಸಮಾರಂಭ:* ಎರಡು ದಿನಗಳ ಕಾಲ ಬಳ್ಳಾರಿ ಉತ್ಸವ ನಡೆಯಲಿದ್ದು, ಜ.22ರಂದು ಸಂಜೆ 6ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಸಮಾರೋಪ ಭಾಷಣ ಮಾಡುವರು. ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರಾದ ಆನಂದಸಿಂಗ್, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವರಾದ ವಿ.ಸುನೀಲ್‍ಕುಮಾರ್ ಅವರು ಘನಉಪಸ್ಥಿತಿ ಇರುವರು. ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅಧ್ಯಕ್ಷತೆ ವಹಿಸುವರು. ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ಶಾಸಕರಾದ ಈ.ತುಕಾರಾಂ, ಬಿ.ನಾಗೇಂದ್ರ, ಎಂ.ಎಸ್.ಸೋಮಲಿಂಗಪ್ಪ, ಜೆ.ಎನ್.ಗಣೇಶ್, ಎಂಎಲ್‍ಸಿಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ್, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಕರ್ನಾಟಕ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ, ಮಹಾನಗರ ಪಾಲಿಕೆ ಮಹಾ ಪೌರರಾದ ಎಂ.ರಾಜೇಶ್ವರಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಾರುತಿ ಪ್ರಸಾದ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ನಗರಾಭೀವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಅಜಯ್ ನಾಗಭೂಷಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಎನ್.ಮಂಜುಳಾ, ಕಲಬುರಗಿಯ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಬಾಜಪೇಯಿ, ಬಳ್ಳಾರಿ ವಲಯ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ಲೋಕೇಶ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಪ್ರಕಾಶ್ ಜಿ.ನಿಟ್ಟಾಲಿ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಚಲನಚಿತ್ರ ನಟರಾದ ರಾಘವೇಂದ್ರ ಮತ್ತು ಚಲನಚಿತ್ರ ನಿರ್ಮಾಪಕರಾದ ಆಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಆಗಮಿಸುವರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್‍ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಲಿಂಗಮೂರ್ತಿ, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಸೇರಿದಂತೆ ಇತರರು ಉಪಸ್ಥಿತರಿರಲಿದ್ದಾರೆ. *ಜ.21ರಂದು ಮುನಿಸಿಪಲ್ ಮೈದಾನದ ಬಳ್ಳಾರಿ ರಾಘವ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ:* ಸಂಜೆ 4ರಿಂದ 6ರವರೆಗೆ ಕೆ.ಸುನಿತಾರಿಂದ ವೀಣಾ ವಾದನ, ಚಾರುಲತಾರವರಿಂದ ನೃತ್ಯ ಪ್ರದರ್ಶನ, ಸಂಡೂರು ಬಿ.ವೆಂಕಟೇಶರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಎ.ಗೌಶಿಯಾ ತಂಡದವರಿಂದ ಜಾನಪದ ನೃತ್ಯ ವೈವಿಧ್ಯ, ಎ.ಎರ್ರಿಸ್ವಾಮಿ ಹಾಸ್ಯಗೋಷ್ಠಿ, ಸತೀಶ್ ತಂಡದಿಂದ ಸಮೂಹ ನೃತ್ಯ, ಯೋಗೇಶ್ ಬಣಗಾರ್ ಅವರಿಂದ ತಬಲಾ ವಾದನ (ಸೋಲೊ), ಸೃಷ್ಠಿ ಅವರಿಂದ ಕರ್ನಾಟಕ ಸಂಗೀತ, ಪ್ರವೀಣ್‍ಕುಮಾರ್ ತಂಡದಿಂದ ಜಾನಪದ ನೃತ್ಯ, ಕಂಪ್ಲಿಯ ಜಿ.ಕೆ.ಸಿಂಧುರವರು ಸುಗಮ ಸಂಗೀತ, ಇಂಧುಶ್ರೀ ಅವರಿಂದ ಮಾತನಾಡುವ ಗೊಂಬೆ ಕಾರ್ಯಕ್ರಮ ನಡೆಲಿದೆ. ಸಂಜೆ 6ರಿಂದ 6.45ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಂಜೆ 6.45ರಿಂದ ರಾತ್ರಿ 12ರವರೆಗೆ ಗಂಗಾವತಿ ಪ್ರಾಣೇಶ ತಂಡದವರಿಂದ ನಗೆಹಬ್ಬ, ಟಾಲಿವುಡ್ ಖ್ಯಾತ ಗಾಯಕಿ ಮಂಗ್ಲಿ ತಂಡದವರಿಂದ ರಸಮಂಜರಿ, ಎಂ.ಡಿ.ಪಲ್ಲವಿ ತಂಡದವರಿಂದ ಗೀತಗಾಯನ, ಅರ್ಜುನ ಜನ್ಯಾ ತಂಡದವರಿಂದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ. *ಜ.21ರಂದು ಕೋಟೆ ಶ್ರೀ ಮಲ್ಲೇಶ್ವರ ದೇವಸ್ಥಾನದ ಆವರಣದ ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ:* ಸಂಜೆ 4ರಿಂದ ರಾತ್ರಿ 12ರವರೆಗೆ ವಿ.ಎಂ.ವೀರಭದ್ರಯ್ಯ ಅವರಿಂದ ಸುಗಮ ಸಂಗೀತ, ಜಡಿಯಪ್ಪ ತಂಡದಿಂದ ನೃತ್ಯ ಪ್ರದರ್ಶನ, ಸಾಯಿಶೃತಿ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಆರ್.ಹೇಮಾವತಿ ತಂಡದಿಂದ ಸಮೂಹ ನೃತ್ಯ ವೈವಿಧ್ಯ, ಎ.ವರಲಕ್ಷ್ಮಿರವರಿಂದ ರಂಗಗೀತೆಗಳು, ಧ್ರುವ ಚಿರಡೋಣಿ ಕೂಚುಪುಡಿ ನೃತ್ಯ, ಕೆ.ಆರ್.ಎರ್ರೆಗೌಡ ಅವರಿಂದ ವಚನ ಸಂಗೀತ, ರೇಣುಕಾ.ಎ ಅವರಿಂದ ಸುಗಮ ಸಂಗೀತ, ಗೌರಮ್ಮ ಸಂಪದ್ರಾಯ ಪದಗಳು, ಆರ್.ಜಾನ್ಹವಿ ಇವರಿಂದ ಭರತ ನಾಟ್ಯ, ದಿಲ್‍ಸೇ ಡ್ಯಾನ್ಸ್ ಅಕಾಡೆಮಿಯಿಂದ ಜಾನಪದ ನೃತ್ಯ, ಗುರಪ್ಪ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಾಟ್ಯ ಭೈರವಿ ಕಲಾಕೇಂದ್ರದಿಂದ ಭರತನಾಟ್ಯ, ಬುರಕಥಾ ಕಲಾವಿದರ ಸಂಘದಿಂದ ಬುರ್ರಕಥಾ, ಮಾರಪ್ಪ ತಂಡದಿಂದ ಕಂಸಾಳೆ ನೃತ್ಯ, ವಿಶ್ವಂ ವಂದೇ ತತ್ವಪದ ಕಲಾಸಂಘದಿಂದ ತತ್ವಪದಗಳು, ಕಂಪ್ಲಿಯ ಅಶ್ವಿನಿ.ಎಮ್.ಎಸ್.ಸ್ವಾಮಿ ಅವರಿಂದ ಭರತ ನಾಟ್ಯ, ಕಂಪ್ಲಿ ಡಿ.ಶೈಲಾರಿಂದ ಸುಗಮ ಸಂಗೀತ, ಚಿಗುರು ಕಲಾತಂಡದಿಂದ ಜಾನಪದ ಸಂಗೀತ, ಶಾರದ ನಾಟ್ಯ ಅಕಾಡೆಮಿಯಿಂದ ಭರತನಾಟ್ಯ, ಸಿರುಗುಪ್ಪ ದೊಡ್ಡ ಹುಸೇನಪ್ಪ ಅವರಿಂದ ಶಾಸ್ತ್ರೀಯ ಸಂಗೀತ, ಈಶಾ ಸಕರೇ ಭರತ ನಾಟ್ಯ, ಹವಾಲ್ದಾರ್ ರಘುನಾಥ ಅವರಿಂದ ಕರ್ನಾಟಕ ಸಂಗೀತ, ಅಭಿನಯ ಕಲಾಕೇಂದ್ರದಿಂದ ನಾಟಕ, ರಂಗಜಂಗಮ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ನಾಟಕ, ಹೆಜ್ಜೆ ಗೆಜ್ಜೆ ಬಯಲಾಟ ಕಲಾ ಟ್ರಸ್ಟ್ ವತಿಯಿಂದ ಬಯಲಾಟ ಕಾರ್ಯಕ್ರಮ ನಡೆಯಲಿದೆ. *ಜ.22ರಂದು ಮುನಿಸಿಪಲ್ ಮೈದಾನದ ರಾಘವ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು:* ಸಂಜೆ 4ರಿಂದ 6ರವರೆಗೆ ಪ್ರಕೃತಿ ರೆಡ್ಡಿ ಅವರಿಂದ ಸುಗಮ ಸಂಗೀತ, ಸಂಡೂರು ಉಮೇಶ್ ವಾದ್ಯ ಸಂಗೀತ, ಕಲಾಂಜಲಿ ಕಲಾ ಟ್ರಸ್ಟ್ ವತಿಯಿಂದ ಜಾನಪದ ನೃತ್ಯರೂಪಕ, ದೊಡ್ಡಬಸಪ್ಪ ತಂಡದಿಂದ ಹಿಂದೂಸ್ತಾನಿ ಸಂಗೀತ, ಸುಜಾತಮ್ಮರವರಿಂದ ರಂಗಗೀತೆಗಳು, ಎಮ್ಮಿಗನೂರು ಜ್ಞಾನೇಶ್‍ರಿಂದ ಸುಗಮ ಸಂಗೀತ, ಸೂರ್ಯ ಕಲಾ ಟ್ರಸ್ಟ್ ವತಿಯಿಂದ ಸಮೂಹ ನೃತ್ಯ, ಶಿಡಗಿನಮೊಳ ಗೋವರ್ಧನ ರೆಡ್ಡಿ ಇವರಿಂದ ಕೊಳಲು ವಾದನ, ವೀರೇಶ್ ದಳವಾಯಿ ಮತ್ತು ಅಂಬಣ್ಣ ದಳವಾಯಿ ಅವರಿಂದ ಹಿಂದೂಸ್ತಾನಿ ಸಂಗೀತ, ಜಗದೀಶ್ ನಾಯ್ಕ ತಂಡದವರಿಂದ ಸುಗಮ ಸಂಗೀತ, ಅವಂತಿಕಾ ನವಿಲು ನೃತ್ಯ (ಸೋಲೋ), ಕು.ಭೂಮಿಕಾ ಮತ್ತು ಮೀರಾ ಅವರಿಂದ ಚಲನಚಿತ್ರ ಗೀತೆಗಳ ಕಾರ್ಯಕ್ರಮ ಜರುಗಲಿದೆ. ಸಂಜೆ 6ರಿಂದ 6.30ರವರೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಂಜೆ 6.30ರಿಂದ ರಾತ್ರಿ 12.30ರವರೆಗೆ ಪ್ರಕಾಶ್ ಹೆಮ್ಮಾಡಿ ತಂಡದಿಂದ ವಿಭಿನ್ನ ಜಾದು ಪ್ರದರ್ಶನ, ಬುಡಕಟ್ಟು ಜನಾಂಗದ ಕಲಾವಿದರಿಂದ ನೃತ್ಯ ರೂಪಕ, ಪ್ರಹ್ಲಾದ್ ಆಚಾರ್‍ರವರ ಶಾಡೋ ಷೋ, ಕೊಳಲುವಾದನ ಸಂದೀಪ್, ಕಿಬೋರ್ಡ್ ವೀಣಾ, ತಬಲಾ ಪ್ರತ್ಯುಬ ಸೊರಬ, ಡ್ರಮ್ ಸೆಟ್ ಪ್ರಕಾಶ್ ಅಂತೋನಿ, ವಾಯಲಿನ್ ಮನಿ ಇವರಿಂದ ವಾದ್ಯ ಸಂಗೀತ ಜುಗಲ್ ಬಂದಿ ಮತ್ತು ಬಾಲಿವುಡ್ ಖ್ಯಾತ ಗಾಯಕಿ ಸುನಿಧಿ ಚವ್ಹಾಣ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. *ಜ.22ರಂದು ಕೋಟೆ ಶ್ರೀ ಮಲ್ಲೇಶ್ವರ ದೇವಸ್ಥಾನದ ಆವರಣದ ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳು:* ಸಂಜೆ 4ರಿಂದ ರಾತ್ರಿ 12ರವರೆಗೆ ತೋರಣಗಲ್ಲು ಕೊಟ್ರೇಶ್.ಕೆ ಅವರಿಂದ ಗಜಲ್ ಗಾಯನ, ನಾಟ್ಯಲಕ್ಶ್ಮೀ ಕಲಾ ಟ್ರಸ್ಟ್ ವತಿಯಿಂದ ನೃತ್ಯ ಪ್ರದರ್ಶನ, ಹೆಚ್.ಕೆ.ಸುಂಕಪ್ಪ ಇವರಿಂದ ಜಾನಪದ ಸಂಗೀತ, ಭೂಮಿಕಾ ತಂಡದಿಂದ ಸಮೂಹ ನೃತ್ಯ, ಜಗದಾಂಭ ರೇಣುಕಾ ಟ್ರಸ್ಟ್ ವತಿಯಿಂದ ಚಲನಚಿತ್ರ ಗೀತೆಗಳು, ಬಸವರಾಜ ಬಲುಕುಂದಿ ಅವರಿಂದ ಕುಚಿಪುಡಿ ನೃತ್ಯ, ಸಂದೀಪ್ ಇವರಿಂದ ಜಾದು ಪ್ರದರ್ಶನ, ಕೆ.ತಿಮ್ಮಪ್ಪ ತಂಡದಿಂದ ಕ್ಲಾರಿಯೋನೆಟ್ ವಾದನ, ದೊಡ್ಡ ಮಾರೆಪ್ಪ ಅವರಿಂದ ಗೆಜ್ಜೆ ತಂಬೂರಿ ವಾದನ, ಎಂ.ನಾಗಭೂಷಣ ವಚನ ಗಾಯನ, ಇಂದ್ರಾಣಿ ತಂಡದಿಂದ ಸಮೂಹ ನೃತ್ಯ, ಗೀತಾಂಜಲಿ.ಹೆಚ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಶ್ಯಾವಳಿಗೆಪ್ಪರವರ ಸುಗಮ ಸಂಗೀತ, ಚೆನ್ನದಾಸರ ರಂಗಪ್ಪ ಇವರಿಂದ ತಬಲಾ ವಾದನ, ದೊಡ್ಡಯ್ಯ ಕಲ್ಲೂರ ಇವರ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಮೌನೇಶರವರ ಚೆನ್ನದಾಸರ ತತ್ವಪದಗಳು, ಮಾತಾ ರಾಮಕ್ಕ ಅವರಿಂದ ಜೋಗತಿ ನೃತ್ಯ, ವಿಶ್ವಾಸ್.ಎಂ ಇವರಿಂದ ವಚನ ಸಂಗೀತ, ದೇವೇಂದ್ರಪ್ಪ ಯಲ್ಲಾಪುರ ಇವರ ಜಾನಪದ ಸಂಗೀತ, ವಿಶ್ವ ಭಾರತಿ ಕಲಾನಿಕೇತನ ಮತ್ತು ಶಿಕ್ಷಣ ಸಂಸ್ಥೆಯಿಂದ ಸಮೂಹ ನೃತ್ಯ, ಚಿನ್ಮಯಿ ಜೋಷಿರವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ತೋರಣಗಲ್ಲು ತಮ್ಮನ್ನ ಸ್ಕೂಲ್‍ನಿಂದ ಜಾನಪದ ನೃತ್ಯ, ಮದಿರೆ ಮರಿಸ್ವಾಮಿ ಇವರ ವಾದ್ಯ ಸಂಗೀತ, ರವಿಶಂಕರ್ ಡ್ಯಾನ್ಸ್ ಸ್ಟುಡಿಯೋ ಇವರ ಮಾಡರ್ನ್ ಡ್ಯಾನ್ಸ್, ಅಮೋಘವರ್ಷ ತಂಡದಿಂದ ಚಿತ್ರಗೀತೆಗಳು, ಬೆಳಗಲ್ ವೀರಣ್ಣ ತಂಡದಿಂದ ತೊಗಲುಗೊಂಬೆ ಪ್ರದರ್ಶನ, ಆಲಾಪ್ ಸಂಗೀತ ಕಲಾ ಟ್ರಸ್ಟ್ ವತಿಯಿಂದ ನಾಟಕ, ಕರ್ನಾಟಕ ಬಯಲಾಟ ಕಲಾವಿದರ ಕ್ಷೇಮಾಭಿವೃದ್ಧಿ ಸಮಿತಿ ವತಿಯಿಂದ ದೊಡ್ಡಾಟ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು, ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣೆಯ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. -------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ