ಬುಧವಾರ, ಜನವರಿ 18, 2023
ಬಳ್ಳಾರಿ ಉತ್ಸವದ ಅಂಗವಾಗಿ ಜ.19ರಂದು ನಡೆಯಲಿರುವ ಕಾರ್ಯಕ್ರಮಗಳು
ಬಳ್ಳಾರಿ,ಜ.17(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಜನವರಿ 19 ರಂದು ಬೆಳಗ್ಗೆ 9ಕ್ಕೆ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸಿರುಗುಪ್ಪ ಶಾಸಕರಾದ ಎಂ.ಎಸ್.ಸೋಮಲಿಂಗಪ್ಪ ಅವರು ಚಾಲನೆ ನೀಡುವರು. ಈ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ಆರಂಭವಾಗಲಿದೆ. ಸಾರ್ವಜನಿಕರು ಭಾಗವಹಿಸಬಹುದಾಗಿದೆ.
*ಬಳ್ಳಾರಿ ಬೈಸ್ಕೈ;* ಜ.19 ರಂದು ಉತ್ಸವದ ಅಂಗವಾಗಿ ಅಂತರಿಕ್ಷದಲ್ಲಿ ಬಳ್ಳಾರಿ ವೀಕ್ಷಿಸಲು ಬೆಳಗ್ಗೆ 11 ಕ್ಕೆ ಬಳ್ಳಾರಿ ಬೈಸ್ಕೈ ಕೊಳಗಲ್ ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಹಾರಾಟ ಆರಂಭವಾಗಲಿದೆ. ಸಂಡೂರು ಶಾಸಕ ಈ.ತುಕಾರಾಂ ಅವರು ಚಾಲನೆ ನೀಡುವರು.
ಸಾರ್ವಜನಿಕರು ಆಗಸದಿಂದ ಬಳ್ಳಾರಿಯನ್ನು ಹೆಲಿಕಾಫ್ಟರ್ ಮೂಲಕ ವೀಕ್ಷಿಸಬಹುದಾಗಿದ್ದು, ಒಬ್ಬರಿಗೆ ರೂ.3500 ದರ ನಿಗದಿಪಡಿಸಲಾಗಿದೆ. ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯ ಶ್ರೀಹರಿ ಅವರ ಮೊ.9620301866 ಗೆ ಸಂಪರ್ಕಿಸಬಹುದು.
*ಎತ್ತಿನ ಬಂಡಿ ಮೆರವಣಿಗೆ;* ಜ.19ರಂದು ಸಂಜೆ 5 ಕ್ಕೆ ನೂರಾರು ಅಲಂಕೃತ ಎತ್ತಿನ ಗಾಡಿಗಳ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯು ಕೃಷಿ ಮಾರುಕಟ್ಟೆ (ಎಪಿಎಂಸಿ)ಯಿಂದ ಮೋತಿ ವೃತ್ತ, ಎಸ್‍ಪಿ ಸರ್ಕಲ್ ಮಾರ್ಗವಾಗಿ ದುರುಗಮ್ಮ ದೇವಸ್ಥಾನದಿಂದ ಮುನಿಸಿಪಲ್ ಮೈದಾನದವರೆಗೆ ಎತ್ತಿನಗಾಡಿ ಉತ್ಸವದೊಂದಿಗೆ ರೈತ ಹಬ್ಬ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಚಾಲನೆ ನೀಡುವರು.
*ದೀಪಾಂಲಕಾರ;* ಜ.19ರಂದು ಸಂಜೆ 5 ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ (ಮೋತಿ ಸರ್ಕಲ್) ದೀಪಾಲಂಕಾರ ಆಯೋಜಿಸಲಾಗಿದ್ದು, ಸಂಸದರಾದ ವೈ.ಎಂ.ಸತೀಶ್ ಅವರು ಚಾಲನೆ ನೀಡುವರು.
ಉತ್ಸವದ ಅಂಗವಾಗಿ ನಡೆಸಲಾಗುತ್ತಿರುವ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
-----
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ