ಬುಧವಾರ, ಜನವರಿ 18, 2023

ಬಳ್ಳಾರಿ ಉತ್ಸವದ ಅಂಗವಾಗಿ ಜ.20ರಂದು ನಡೆಯಲಿರುವ ಕಾರ್ಯಕ್ರಮಗಳು ಬಳ್ಳಾರಿ,ಜ.18(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಜನವರಿ 20ರಂದು ಬೆಳಗ್ಗೆ 9ಕ್ಕೆ ಎಸ್.ಜಿ ಕಾಲೇಜು ಮೈದಾನದಲ್ಲಿ ಕಿಡ್ಸ್ ಜೋನ್ ಇರಲಿದೆ. *ರಂಗೋಲಿ ಸ್ಪರ್ಧೆ;* ಇದೇ ದಿನ ಬೆಳಗ್ಗೆ 11ಕ್ಕೆ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ರಂಗೋಲಿ ಸ್ಪರ್ಧೆ, ಪ್ರದರ್ಶನವಿರಲಿದೆ. ಮಹಾನಗರ ಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ ರವರು ಚಾಲನೆ ನೀಡುವರು. ಮಾಹಿತಿಗಾಗಿ ಮೊ.9480919001 ಗೆ ಸಂಪರ್ಕಿಸಬಹುದು. *ಮೆಹಂದಿ ಸ್ಪರ್ಧೆ;* ಜ.20 ರಂದು ಬೆಳಗ್ಗೆ 11ಕ್ಕೆ ಮುನಿಸಿಪಲ್ ಮೈದಾನದಲ್ಲಿ ಮೆಹಂದಿ ಸ್ವರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯನ್ನು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ ಅವರು ಚಾಲನೆ ನೀಡುವರು. ಮಾಹಿತಿಗಾಗಿ ಮೊ.9480919001 ಗೆ ಸಂಪರ್ಕಿಸಬಹುದು. *ಬಿರುಸು ಬಾಣ;* ಜ.20 ರಂದು ಮಧ್ಯಾಹ್ನ 3ಕ್ಕೆ ಮುನಿಸಿಪಲ್ ಮೈದಾನದಲ್ಲಿ ಬಿರುಸು ಬಾಣಗಳ ಪ್ರದರ್ಶನ ಏರ್ಪಡಿಸಲಾಗಿದೆ. ಉತ್ಸವದ ಅಂಗವಾಗಿ ನಡೆಸಲಾಗುತ್ತಿರುವ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಸಾರ್ವಜನಿಕರೆಲ್ಲರೂ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. ----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ