ಶನಿವಾರ, ಜನವರಿ 14, 2023

ವಸಂತ ವೈಭವ; ನೂರಾರು ವಿವಿಧ ಕಲಾತಂಡಗಳಿಂದ ಭವ್ಯ ಮೆರವಣಿಗೆ ಜ.20ರಂದು ಬಳ್ಳಾರಿ,ಜ.14(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಚೊಚ್ಚಲ ಬಾರಿಗೆ ನಡೆಸುತ್ತಿರುವ ಬಳ್ಳಾರಿ ಉತ್ಸವಕ್ಕೆ ಮೆರಗು ನೀಡಲು ಜ.20ರಂದು ಮಧ್ಯಾಹ್ನ 3ಕ್ಕೆ ನೂರಾರು ವೈವಿಧ್ಯಮಯ ಕಲಾತಂಡಗಳೊಂದಿಗೆ ವಸಂತ ವೈಭವ ಭವ್ಯ ಮೆರವಣಿಗೆಯು ನಡೆಯಲಿದೆ. *ಮೆರವಣಿಗೆ ನಡೆಯುವ ಮಾರ್ಗ;* ವಿಮ್ಸ್ ಆವರಣದಿಂದ ಆರಂಭವಾಗಿ ಸುಧಾ ಸರ್ಕಲ್, ಇನ್‍ಫೆಂಟ್ರಿ ರಸ್ತೆ, ವಾಲ್ಮೀಕಿ ವೃತ್ತ, ಶ್ರೀ ದುರುಗಮ್ಮ ದೇವಸ್ಥಾನ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಡಾ.ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಮೈದಾನದವರೆಗೆ (ಡಾ.ಜೋಳದ ರಾಶಿ ದೊಡ್ಡನಗೌಡರ ವೇದಿಕೆವರಗೆ) ಆಯೋಜಿಸಲಾಗಿದೆ. ವಸಂತ ವೈಭವ ಭವ್ಯ ಮೆರವಣಿಗೆಗೆ ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಚಾಲನೆ ನೀಡುವರು. ಮೆರವಣಿಗೆಯಲ್ಲಿ ರಮೇಶ್ ಬಂಗಾ ಅವರ ಹುಲಿಕುಣಿತ, ಸುರೇಶ್ ಅವರ ಚಿಟ್ಟಿ ಮೇಳ, ರಾಜೇಶ್.ಪಿ ಅವರ ಬೊಂಬೆ ಕುಣಿತ, ಅಣ್ಣಪ್ಪ ಕೆ.ಎಂ ಬೊಂಬೆ ಮೇಳ, ಮಾರುತಿ ಹೆಚ್.ಎಂ ಸೋಮನ ಕುಣಿತ, ಚಂದ್ರಕಾಂತ ಬಿ ಆಗೇರ ಅವರಿಂದ ಗಾರುಡಿಗೊಂಬೆ ಕುಣಿತ, ಪುರುμÉೂೀತ್ತಮ ಗೌಡರಿಂದ ಸುಗ್ಗಿಕುಣಿತ, ಹರೀಶ ಅಚ್ಯುತ ಪಾಲೇಕರರಿಂದ ಬೇಡರ ವೇಷ, ಸುರೇಶ್ ನಾಯ್ಕರಿಂದ ಗುಮಟೆ ಪಾಂಗ, ಶಿವಾನಂದ ಸಿದ್ಧಿ ಅವರಿಂದ ಧಮಾಮಿ ನೃತ್ಯ, ಹೊನ್ನಾ ಬುದ್ಧು ಗೌಡರಿಂದ ಗುಮುಟಾಪಾಂಗ, ದೀಪಾ ಸಿದ್ದಿ ಅವರಿಂದ ಪುಗಡಿ ನೃತ್ಯ, ಗುರುಚರಣ್‍ರಿಂದ ಕಂಗೀಲು, ಚಂದ್ರರಿಂದ ಕುಡುಬಿ ನೃತ್ಯ, ವಾಸುದೇವ ಬನ್ನಂಜೆರ ಚಂಡೆವಾದನ, ಮುರಳೀಧರ ನಕ್ಷತ್ರರ ಘಟೋಧ್ವಜ, ಸುಮೀತ್ ಅವರ ವೀರಗಾಸೆ, ಗಣೇಶ್ ಬಾರ್ಕೂರು ಅವರ ಕೊರಗರ ಡೋಲು, ಈಶ್ವರ ಬಿಜಾಪುರ ಕುದುರೆ ಕುಣಿತ, ರಾಜಮ್ಮ ಮದ್ದೂರು ಇವರ ಮಹಿಳಾ ಪಟಕುಣಿತ, ಸೋಮೇಶ್ವರ ಅವರ ಆಲಾಯಿ ಹೆಜ್ಜೆಮೇಳ, ಬಸವರಾಜ ಕೊರವರ ಕರಡಿಮಜಲು, ಶಂಕರಪ್ಪ ಮಾದಾರ್ ಅವರ ಜಗ್ಗಲಿಗಿ, ಯೇಸುದಾಸ ಅಲಿಯಂಬುರೆ ಅವರ ಮುಖವಾಡ, ಅಮರೇಶ ಅವರ ಸಿಂಗಾರಿ ಮೇಳ, ಹನುಮಂತಪ್ಪ ಡಿ. ಬೊಬ್ಬಲ್‍ರ ಸಮಾಳ, ಕುಮಾರ ಕೊಂಬುಕಹಳೆ, ವಿರೂಪಾಕ್ಷಯ್ಯ ಅವರ ಕೀಲು ಕುದುರೆ, ಶಂಕರಯ್ಯ ಅವರ ಸೋಮನ ಕುಣಿತ, ಸೂರಜ್ ಹುಡಿಕೇರಿಯವರ ಬೊಳಕಟ್ಟೆ ನೃತ್ಯ, ಹೆಚ್.ಕೆ.ಶ್ರೀನಿವಾಸ್‍ರವರ ಕೊಡವ ನೃತ್ಯ, ಮಹದೇವು ಕೆ.ಎಸ್‍ರವರ ಕಂಸಾಳೆ, ಸಿದ್ದರಾಮು ಇವರ ಕಂಸಾಳೆ, ಶಿವಕುಮಾರ ನಗಾರಿ, ಕರಿಯಪ್ಪ ತಮಟೆ ನಗಾರಿ, ಸವಿತಾ ಅವರ ಮಹಿಳಾ ಪೂಜಾಕುಣಿತ, ಜನಾರ್ಧನ ತಂಡದಿಂದ ಹುಲುವೇಷ, ಪರಮೇಶ್ ತಂಡದಿಂದ ಮರಗಾಲು ಕುಣಿತ, ಭೀಮಪ್ಪ ಅವರಿಂದ ಗಂಡುಗೊಡಲಿ, ಕುಸುಮಾಬಾಯಿ ತಂಡದವರಿಂದ ಲಂಬಾಣಿ ನೃತ್ಯ, ಹೆಚ್.ಪಿ.ಶಿಕಾರಿರಾಮು ಅವರ ತಾಷರಂಡೋಲ್, ಜಿ.ಮೋಹನ್ ತಾಷರಂಡೋಲ್, ರಾಮು ತಾಷರಂಡೋಲ್, ಎಸ್.ಸೋಮು ಚೌಹಾಣ್ ತಾಷರಂಡೋಲ್, ಹೆಚ್.ರಾಮಪ್ಪ ಅವರಿಂದ ಹಲಗೆವಾದನ, ರೇವಣಸಿದ್ಧಯ್ಯಸ್ವಾಮಿ ಅವರ ವೀರಗಾಸೆ, ಭುಜಂಗನಗರ ವೀರಗಾಸೆ, ಎಂ.ನಾಗರಾಜಸ್ವಾಮಿ ನಾದಸ್ವರ, ರಘು ಅವರ ನಾದಸ್ವರ, ಎಂ.ಶ್ರೀನಿವಾಸುಲು ಅವರ ಕಹಳೆವಾದನ, ಕೆ.ವಸಂತಕುಮಾರ್ ಅವರ ಕಹಳೆವಾದನ, ಕೆ.ಶರಣಪ್ಪ ಅವರ ಡೊಳ್ಳುಕುಣಿತ, ಹೆಚ್.ಕೆ.ಕಾರಮಂಚಪ್ಪ ಅವರ ಡೊಳ್ಳುಕುಣಿತ, ಮಲ್ಲಿಕಾರ್ಜುನ ಅವರ ಹಗಲುವೇಷ, ಅಶ್ವರಾಮಣ್ಣ ಅವರ ಹಗಲುವೇಷ, ಕೆ.ರಾಮು ಅವರ ಉರುಮೆವಾದ್ಯ, ದೊಡ್ಡರಾಮಣ್ಣರ ಮಹಿಳಾ, ಆರ್.ಲಕ್ಷ್ಮೀ ಅವರಿಂದ ಉರುಮೆವಾದ್ಯ, ಎಂ.ಜಿ.ಶಿವನಾಗಪ್ಪ ಅವರಿಂದ ಕುದುರೆ ಕುಣಿತ, ವೀರಭದ್ರೇಶ್ವರ ವಾದ್ಯ ವೃಂದದಿಂದ ನಂದಿಧ್ವಜ, ಸಣ್ಣಕ್ಕಿ ವೀರಭದ್ರೇಶ್ವರ ನಂದಿಧ್ವಜ ಸಂಘದಿಂದ ನಂದಿಧ್ವಜ, ಯೂಸೂಫ್ ಅವರಿಂದ ಮರಗಾಲು ಕುಣಿತ, ಜಿ.ಕೋಟೆಪ್ಪ ಅಲಬೂರು ಅವರ ಕೋಲಾಟ, ಮಾಲತೇಶಪ್ಪರ ಗೊರವರಕುಣಿತ, ನಾರಾಯಣಪ್ಪರ ಹಗಲುವೇಷ, ಷಣ್ಮುಖಯ್ಯ ನಂದಿಧ್ವಜ, ಮಂಜುನಾಥರ ವೀರಗಾಸೆ, ಗವಿಹನುಮಪ್ಪರ ಕೋಲಾಟ, ಚಂದ್ರಶೇಖರ್ ಅವರ ಡೊಳ್ಳುಕುಣಿತ, ನೂರುಲ್ಲಾ ತಂಡದಿಂದ ಕೀಲುಕುದುರೆ, ಮೆಹಬೂಬ್ ತಂಡದಿಂದ ಅಲಾಯಿ ಹೆಜ್ಜೆಮೇಳ, ರವಿಕಿರಣ ಅವರ ಶಿವಕುಣಿತ, ನಗರದಬಸಪ್ಪ ಅವರ ಡೊಳ್ಳುಕುಣಿತ, ಮಹೇಶ್‍ರವರ ವೀರಭದ್ರಕುಣಿತ, ಕುಮಾರ ಗೊರವರಕುಣಿತ, ಗುರುದೇವ ಕಲಾತಂಡದಿಂದ ಕೋಲಾಟ, ವೀರೇಶ್ ಅವರಿಂದ ನಂದಿಧ್ವಜ, ಮಲ್ಲಯ್ಯ ಅವರಿಂದ ಗೊರವರಕುಣಿತ, ಎಸ್.ಜಾನಕಿ ಕಂಪ್ಲಿ ಅವರ ಹಕ್ಕಿಪಿಕ್ಕಿ ನೃತ್ಯ, ಅಂಜಲಿ ಅವರ ಹಕ್ಕಿಪಿಕ್ಕಿ ನೃತ್ಯ, ವಿ.ತಿಮ್ಮಪ್ಪ ಹಳೇದರೋಜಿ ಅವರ ಹುಲಿವೇಷ, ಎಸ್.ಕರಿಬಸಪ್ಪರ ಗೊಂಬೆಕುಣಿತ ಈ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. *ವಸಂತ ವೈಭವದಲ್ಲಿನ ಅಂತರ್‍ರಾಜ್ಯದ ವಿಶೇಷ ಕಲಾತಂಡಗಳು:* ಕೇರಳದ ಕಾಳೆವೇಷ, ಮಯೂರ ನೃತ್ಯಂ, ಟೇಯಾಂ, ಕಥಕಳಿ, ಹಂಸನೃತ್ಯ, ಪೂಜಾಕುಣಿತ, ಸೋಮನಕುಣಿತ ಕಲಾತಂಡಗಳು ಆಗಮಿಸಲಿವೆ. ಮೈಸೂರಿನ ಪಾತರಗಿತ್ತಿ ನೃತ್ಯ, ತಮಿಳುನಾಡಿನ ಚಂಡೆವಾದನ, ನಗಾರಿ, ಕಂಸಾಳೆ, ಕೋಳಿ ನೃತ್ಯ, ವೇಷಧಾರಿ, ಪಂಜಾಬಿ ಡೋಲ್, ಆಂಜನೇಯವೇಷ ಮತ್ತು ಆಂಧ್ರಪ್ರದೇಶದ ಗೊರವರಕುಣಿತ, ಗಾರುಡಿಗೊಂಬೆ ಕುಣಿತ ಹಾಗೂ ಮಹಾರಾಷ್ಟ್ರದ ಝಾಂಜ್ ಪತಕ್, ಮಹಿಳಾ ಡೊಳ್ಳು ಕುಣಿತ ಈ ಅಂತರ್‍ರಾಜ್ಯ ವಿಶೇಷ ಕಲಾತಂಡಗಳು ವಸಂತ ವೈಭವ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. -----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ