ಶುಕ್ರವಾರ, ಜನವರಿ 20, 2023

ಬಳ್ಳಾರಿ ಉತ್ಸವದ ಅಂಗವಾಗಿ ಜ.22ರಂದು ನಡೆಯಲಿರುವ ಕಾರ್ಯಕ್ರಮಗಳು ಬಳ್ಳಾರಿ,ಜ.20(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಅಂಗವಾಗಿ ಜನವರಿ 22ರಂದು ಬೆಳಗ್ಗೆ 10ಕ್ಕೆ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿದ್ದು, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಚಾಲನೆ ನೀಡುವರು. ಈ ಪ್ರದರ್ಶನದಲ್ಲಿ ರೂ.20 ಕೋಟಿ ಬೆಲೆಯ ಕಕೇಶಿಯಾ ಶೇಫರ್ಡ್ ಎಂಬ ತಳಿಯ ಬೆಂಗಳೂರಿನ ಕೆಡಬಾಮ್ಸ್ ಹೈದರ್ ಎನ್ನುವ ಶ್ವಾನವು ಬರಲಿದೆ. ಮತ್ತು ನಗರವಾಸಿಗಳ ಶ್ವಾನಗಳು ಭಾಗವಹಿಸಲಿವೆ. ಬೆಳಗ್ಗೆ 10 ಕ್ಕೆ ವಿಮ್ಸ್ ಮೈದಾನದಲ್ಲಿ ಗ್ರಾಮೀಣ ಕ್ರೀಡೆ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದ್ದು, ಶಾಸಕ ಜೆ.ಎನ್.ಗಣೇಶ್ ಅವರು ಚಾಲನೆ ನೀಡುವರು. ಬೆಳಗ್ಗೆ 11 ಕ್ಕೆ ನಗರದ ಕೋರ್ಟ್ ರಸ್ತೆಯ ಕಮ್ಮ ಭವನದಲ್ಲಿ ಅಡುಗೆ ಸ್ವರ್ಧೆ, ಪ್ರದರ್ಶನವಿರಲಿದ್ದು, ಮಹಾನಗರ ಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ ರವರು ಚಾಲನೆ ನೀಡುವರು. ಮಾಹಿತಿಗಾಗಿ ಮೊ.9620325653 ಗೆ ಸಂಪರ್ಕಿಸಬಹುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಸಮಿತಿ ಕಾರ್ಯಕಾರಿ ಸದಸ್ಯರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ