ಶನಿವಾರ, ಜನವರಿ 14, 2023
ಬಳ್ಳಾರಿ ಉತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳು, ಕಾರ್ಯಕ್ರಮಗಳು ಆಯೋಜನೆ
ಬಳ್ಳಾರಿ,ಜ.14(ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಜ.21 ಮತ್ತು 22ರಂದು ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ವಿವಿಧ ಸ್ಪರ್ಧೆಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
*ಜ.16ರಂದು* ಬೆಳಗ್ಗೆ 11ಕ್ಕೆ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದಲ್ಲಿ ಚಿತ್ರಕಲಾ ಶಿಬಿರ ಏರ್ಪಡಿಸಲಾಗಿದ್ದು, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್ ಅವರು ಚಾಲನೆ ನೀಡುವರು.
ಶಿಬಿರದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ಧಲಿಂಗೇಶ್ ರಂಗಣ್ಣನವರ್ ಅವರ ಮೊ.9481715941 ಗೆ ಸಂಪರ್ಕಿಸಬಹುದು.
*ಜ.18ರಂದು* ಬೆಳಗ್ಗೆ 7ಕ್ಕೆ ಸಿರಿಧಾನ್ಯ ನಡಿಗೆಯನ್ನು ಏರ್ಪಡಿಸಲಾಗಿದೆ. ರಾಜ್ಯ ಜವಳಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಗುತ್ತಿಗನೂರು ವಿರುಪಾಕ್ಷಗೌಡ ಅವರು ಚಾಲನೆ ನೀಡುವರು. ಈ ನಡಿಗೆಯು ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಆರಂಭವಾಗಿ ಮೋತಿ ವೃತ್ತದಿಂದ ಎಸ್.ಪಿ. ಸರ್ಕಲ್ ಮಾರ್ಗವಾಗಿ ದುರ್ಗಮ್ಮ ದೇವಸ್ಥಾನ ಮೂಲಕ ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಸಾಗಲಿದೆ. ಸಾರ್ವಜನಿಕರು ಸೇರಿದಂತೆ ಎಲ್ಲರೂ ಈ ನಡಿಗೆಯಲ್ಲಿ ಭಾಗವಹಿಸಬಹುದಾಗಿದೆ.
*ಗಾಳಿಪಟ ಸ್ಪರ್ಧೆ;* ಜ.18ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಗಾಳಿಪಟ ಸ್ಪರ್ಧೆ ಏರ್ಪಡಿಸಲಾಗಿದ್ದು, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಚಾಲನೆ ನೀಡುವರು.
*ಸೈಕಲ್ ಜಾಥಾ;* ಜ.19ರಂದು ಬೆಳಗ್ಗೆ 9ಕ್ಕೆಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ. ಜಾಥಾಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಚಾಲನೆ ನೀಡುವರು.
*ಬಳ್ಳಾರಿ ಬೈಸ್ಕೈ;* ಉತ್ಸವದ ಅಂಗವಾಗಿ ಅಂತರಿಕ್ಷದಲ್ಲಿ ಬಳ್ಳಾರಿ ವೀಕ್ಷಿಸಲು ಜ.19ರಂದು ಬೆಳಗ್ಗೆ 11ಕ್ಕೆ ಬಳ್ಳಾರಿ ಬೈಸ್ಕೈ ಕೊಳಗಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಹಾರಾಟ ಆರಂಭವಾಗಲಿದೆ. ಶಾಸಕ ಈ.ತುಕಾರಾಂ ಅವರು ಚಾಲನೆ ನೀಡುವರು. ಆಗಸದಿಂದ ಬಳ್ಳಾರಿಯನ್ನು ಹೆಲಿಕಾಫ್ಟರ್ ಮೂಲಕ ವೀಕ್ಷಿಸಬಹುದಾಗಿದ್ದು, ಒಬ್ಬರಿಗೆ ರೂ.3500 ದರ ನಿಗದಿಪಡಿಸಲಾಗಿದೆ. ನೊಂದಣಿಗಾಗಿ https://helitaxii.com/
ಗೆ ಭೇಟಿ ನೀಡಬಹುದು ಅಥವಾ ಮಾಹಿತಿಗಾಗಿ ಪ್ರವಾಸೋದ್ಯಮ ಇಲಾಖೆಯ ಶ್ರೀಹರಿ ಅವರ ಮೊ.9620301866 ಗೆ ಸಂಪರ್ಕಿಸಬಹುದು.
*ಎತ್ತಿನ ಬಂಡಿ ಮೆರವಣಿಗೆ;* ಉತ್ಸವದ ಅಂಗವಾಗಿ ಜ.19ರಂದು ಸಂಜೆ 5ಕ್ಕೆ ನೂರಾರು ಅಲಂಕೃತ ಎತ್ತಿನ ಗಾಡಿಗಳ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯು ಕೃಷಿ ಮಾರುಕಟ್ಟೆ (ಎಪಿಎಂಸಿ)ಯಿಂದ ಮೋತಿ ವೃತ್ತ, ಎಸ್‍ಪಿ ಸರ್ಕಲ್ ಮಾರ್ಗವಾಗಿ ದುರುಗಮ್ಮ ದೇವಸ್ಥಾನದಿಂದ ಮುನಿಸಿಪಲ್ ಮೈದಾನದವರೆಗೆ ಎತ್ತಿನಗಾಡಿ ಉತ್ಸವದೊಂದಿಗೆ ರೈತ ಹಬ್ಬ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಚಾಲನೆ ನೀಡುವರು.
*ದೀಪಾಂಲಕಾರ;* ಜ.19ರಂದು ಸಂಜೆ 5ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದಲ್ಲಿ (ಮೋತಿ ಸರ್ಕಲ್) ದೀಪಾಲಂಕಾರ ಆಯೋಜಿಸಲಾಗಿದ್ದು, ಸಂಸದರಾದ ವೈ.ಎಂ.ಸತೀಶ್ ಅವರು ಚಾಲನೆ ನೀಡುವರು.
*ಕಿಡ್ಸ್ ಜೋನ್;* ಜ.20 ರಂದು ಬೆಳಗ್ಗೆ 9ಕ್ಕೆ ಎಸ್.ಜಿ ಕಾಲೇಜು ಮೈದಾನದಲ್ಲಿ ಕಿಡ್ಸ್ ಜೋನ್ ಇರಲಿದೆ.
*ರಂಗೋಲಿ ಸ್ಪರ್ಧೆ;* ಇದೇ ದಿನ ಬೆಳಗ್ಗೆ 11ಕ್ಕೆ ದುರ್ಗಮ್ಮ ದೇವಸ್ಥಾನ ಆವರಣದಲ್ಲಿ ರಂಗೋಲಿ ಸ್ಪರ್ಧೆ, ಪ್ರದರ್ಶನವಿರಲಿದೆ. ಮಹಾನಗರ ಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ ರವರು ಚಾಲನೆ ನೀಡುವರು. ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶಕೀನಾ ಮೊ.9008118429ಗೆ ಸಂಪರ್ಕಿಸಬಹುದು.
*ಮೆಹಂದಿ ಸ್ಪರ್ಧೆ;* ಜ.20 ರಂದು ಬೆಳಗ್ಗೆ 11ಕ್ಕೆ ಮುನಿಸಿಪಲ್ ಮೈದಾನದಲ್ಲಿ ಮೆಹಂದಿ ಸ್ವರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯನ್ನು ಮಹಾನಗರ ಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ ಅವರು ಚಾಲನೆ ನೀಡುವರು. ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶಕೀನಾ ಅವರ ಮೊ.9008118429 ಗೆ ಸಂಪರ್ಕಿಸಬಹುದು.
*ಬಿರುಸು ಬಾಣ;* ಜ.20 ರಂದು ಮಧ್ಯಾಹ್ನ 3ಕ್ಕೆ ಮುನಿಸಿಪಲ್ ಮೈದಾನದಲ್ಲಿ ಬಿರುಸು ಬಾಣಗಳ ಪ್ರದರ್ಶನ ಏರ್ಪಡಿಸಲಾಗಿದೆ.
ಜ.21ರ ಕಾರ್ಯಕ್ರಮಗಳು; ಜ.21ರಂದು ಬೆಳಗ್ಗೆ 8ಕ್ಕೆ ನಗರದ ಕೋಟೆ ಆವರಣದಲ್ಲಿ ಜಿಪ್‍ಲೈನ್, ರಾಕ್ ಕ್ಲೈಂಬಿಂಗ್, ಪ್ಯಾರಾ ಸೀಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಬೆಳಗ್ಗೆ 9ಕ್ಕೆ ಮುನಿಸಿಪಲ್ ಮೈದಾನದಲ್ಲಿ ಮರಳು ಶಿಲ್ಪಕಲೆ ಪ್ರದರ್ಶನ ಏರ್ಪಡಿಸಲಾಗಿದ್ದು, ಶಾಸಕ ಎಂ.ಎಸ್.ಸೋಮಲಿಂಗಪ್ಪ ಅವರು ಚಾಲನೆ ನೀಡುವರು.
ಬೆಳಗ್ಗೆ 10ಕ್ಕೆ ಜಿಲ್ಲಾಡಳಿತ ಭವನದ ಆವರಣದಲ್ಲಿ ಬೈಕ್ ಸ್ಟಂಟ್ ನಡೆಯಲಿವೆ. ಮಾಹಿತಿಗಾಗಿ ಶಕೀಬ್ ಅವರ ಮೊ.9845145046 ಗೆ ಸಂಪರ್ಕಿಸಬಹುದು.
ಬೆಳಗ್ಗೆ 10ಕ್ಕೆ ವಿಮ್ಸ್ ಮೈದಾನದಲ್ಲಿ ಗ್ರಾಮೀಣ ಕ್ರೀಡೆ ಕಬ್ಬಡ್ಡಿ ಆಯೋಜಿಲಾಗಿದ್ದು, ಶಾಸಕ ಜೆ.ಎನ್.ಗಣೇಶ್ ಅವರು ಚಾಲನೆ ನೀಡುವರು. ಮಾಹಿತಿಗಾಗಿ ಮೊ.7929612786 ಗೆ ಸಂಪರ್ಕಿಸಬಹುದು.
ಬೆಳಗ್ಗೆ 10ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣ ಕ್ರೀಡೆ ಮಲ್ಲಕಂಭ ಆಯೋಜಿಸಲಾಗಿದೆ.
ಬೆಳಗ್ಗೆ 10.30ಕ್ಕೆ ಮುನಿಸಿಪಲ್ ಮೈದಾನದಲ್ಲಿ ಫಲ, ಪುಷ್ಪ ಪ್ರರ್ದಶನ ಏರ್ಪಡಿಸಲಾಗಿದ್ದು, ಸಂಸದರಾದ ವೈ.ದೇವೇಂದ್ರಪ್ಪ ಅವರು ಚಾಲನೆ ನೀಡುವರು.
ಬೆಳಗ್ಗೆ 10.30ಕ್ಕೆ ಮುನಿಸಿಪಲ್ ಮೈದಾನದಲ್ಲಿ ಮತ್ಸ್ಯ ಮೇಳ ಆಯೋಜಿಸಲಾಗಿದ್ದು, ಸಂಸದರಾದ ಡಾ.ಸೈಯದ್ ನಾಸೀರ್ ಹುಸೇನ್ ಅವರು ಚಾಲನೆ ನೀಡುವರು.
ಬೆಳಗ್ಗೆ 11.30ಕ್ಕೆ ಮುನಿಸಿಪಲ್ ಮೈದಾನದಲ್ಲಿ ಆಹಾರ ಮೇಳ ಆಯೋಜಿಸಲಾಗಿದೆ.
*ಜ.22ರಂದು* ಬೆಳಗ್ಗೆ 10ಕ್ಕೆ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಶ್ವಾನ ಪ್ರದರ್ಶನ ಆಯೋಜಿಸಲಾಗಿದ್ದು, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಚಾಲನೆ ನೀಡುವರು. ನೊಂದಣಿಗಾಗಿ ಮೊ.9448233756, 9901075744, 9980254131 ಗೆ ಸಂಪರ್ಕಿಸಬಹುದು.
ಬೆಳಗ್ಗೆ 10ಕ್ಕೆ ವಿಮ್ಸ್ ಮೈದಾನದಲ್ಲಿ ಗ್ರಾಮೀಣ ಕ್ರೀಡೆ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿದ್ದು, ಶಾಸಕ ಜೆ.ಎನ್.ಗಣೇಶ್ ಅವರು ಚಾಲನೆ ನೀಡುವರು.
ಬೆಳಗ್ಗೆ 11ಕ್ಕೆ ನಗರದ ಕೋರ್ಟ್ ರಸ್ತೆಯ ಕಮ್ಮ ಭವನದಲ್ಲಿ ಅಡುಗೆ ಸ್ವರ್ಧೆ, ಪ್ರದರ್ಶನವಿರಲಿದ್ದು, ಮಹಾನಗರ ಪಾಲಿಕೆ ಮಹಾಪೌರರಾದ ಎಂ.ರಾಜೇಶ್ವರಿ ರವರು ಚಾಲನೆ ನೀಡುವರು. ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶಕೀನಾ ಅವರನ್ನು ಸಂಪರ್ಕಿಸಬಹುದು.
ಉತ್ಸವದಲ್ಲಿ ವಿವಿಧ ರಸಮಂಜರಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಉತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಸಮಿತಿ ಕಾರ್ಯಕಾರಿ ಸದಸ್ಯರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ