ಶುಕ್ರವಾರ, ಜನವರಿ 20, 2023
ಬಳ್ಳಾರಿ ಉತ್ಸವ 2023
ಅಂತಿಮ ಹಂತದ ಸಿದ್ಧತೆಗಳ ಪರಿಶೀಲನೆ
ಬಳ್ಳಾರಿ,ಜ.20(ಕರ್ನಾಟಕ ವಾರ್ತೆ): ಬಳ್ಳಾರಿ ಉತ್ಸವದ ಮುಖ್ಯ ವೇದಿಕೆಯ ಅಂತಿಮ ಹಂತದ ಸಿದ್ಧತೆಯನ್ನು ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ವೇಳೆಯಲ್ಲಿ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರುಗಳು ಪರಿಶೀಲಿಸಿದರು.
ಇದೇ ಪ್ರಥಮ ಬಾರಿಗೆ ಬಳ್ಳಾರಿ ಉತ್ಸವವನ್ನು ಆಯೋಜಿಸಲಾಗಿದ್ದು, ಉತ್ಸವದಲ್ಲಿ ಈಗಾಗಲೇ ಚಕ್ಕಡಿ ಬಂಡಿ, ಚಿತ್ರಕಲೆ, ಗಾಳಿಪಟ, ಮ್ಯಾರಥಾನ್ ಓಟ, ರಂಗೋಲಿ ಪ್ರದರ್ಶನಗಳನ್ನು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮೂಲಕ ಯಶಸ್ವಿಯಾಗಿ ನಡೆಸಲಾಗಿದೆ. ಅದರಂತೆ ಶನಿವಾರ, ಭಾನುವಾರ ಉತ್ಸವವನ್ನು ಇನ್ನಷ್ಟು ವ್ಯವಸ್ಥಿತವಾಗಿ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಉತ್ಸವದ ಮುಖ್ಯ ವೇದಿಕೆಯನ್ನು ಮುನ್ಸಿಪಲ್ ಮೈದಾನದಲ್ಲಿ ಸಿದ್ದಪಡಿಸಲಾಗಿದೆ, ಶನಿವಾರ ಸಂಜೆ 6 ಗಂಟೆಗೆ ಉದ್ಘಾಟನೆ ನಡೆಯಲಿದ್ದು, ಅತಿಥಿಗಳಿಗೆ, ಸಾರ್ವಜನಿಕರಿಗೆ ಮುಖ್ಯ ವೇದಿಕೆಯಲ್ಲಿ 50 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಆಗಮನದ ಅನುಗುಣವಾಗಿ ಆಸನಗಳನ್ನು ಹಾಕಲಾಗುವುದು ಎಂದರು.
ಅತಿಥಿಗಳಿಗೆ ಹಾಗೂ ಮಾಧ್ಯಮ ಪ್ರತಿನಿಧಿಗಲಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.
ಸಾರಿಗೆ ವ್ಯವಸ್ಥೆ: ಜಿಲ್ಲೆಯ ಗ್ರಾಮೀಣ ಜನರು ಉತ್ಸವಕ್ಕೆ ಆಗಮಿಸಲು ಪ್ರತಿ ಗ್ರಾಮ ಪಂಚಾಯತ್‍ನಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೂ ತಾಲ್ಲೂಕ ಕೇಂದ್ರಗಳಿಂದ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹೆಚ್ಚುವರಿ ಬಸ್ ಓಡಿಸಲು ಸಾರಿಗೆ ಸಂಸ್ಥೆಗೆ ತಿಳಿಸಲಾಗಿದೆ. ಒಟ್ಟಾರೆ ಉತ್ಸವಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಾರಿಗೆ ವ್ಯವಸ್ಥೆ ಕಲಿಸಿದೆ ಎಂದರು.
ಪ್ರದರ್ಶನ ಮಳಿಗೆ: ಮುಖ್ಯ ವೇದಿಕೆಯ ಕೊನೆಗೆ ಸುತ್ತಲೂ ಮಳಿಗೆಗಳನ್ನು ಹಾಕಲಾಗಿದೆ. ಮಲಿಗೆಗಳಲ್ಲಿ ವಿವಿಧ ಇಲಾಖೆಗಳಿಂದ ಆಹಾರ, ಸಿರಿಧಾನ್ಯ, ಕೃಷಿ, ಆಹಾರ ತಿನಿಸುಗಳ ಪ್ರದರ್ಶನ ಮಾರಾಟ ಏರ್ಪಡಿಸಲಾಗಿದೆ. ವಿಶೇಷವಾಗಿ ಬಳ್ಳಾರಿಯ ತಿನಿಸುಗಳ ಮಾರಾಟ ಕೂಡ ಇರಲಿದೆ ಜೊತೆಗೆ ತೋಟಗಾರಿಕೆ ಇಲಾಖೆಯ ಫಲ ಪುಷ್ಪ ಪ್ರದರ್ಶನ ಸಹ ಇರಲಿದೆ.
ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿ, ಉತ್ಸವಕ್ಕೆ ಬರುವ ಸಾರ್ವಜನಿಕರಿಗೆ ಸುಗಮ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ದುರ್ಗಮ್ಮ ದೇವಸ್ಥಾನ ಆವರಣ, ನೂತನ ಡಿಸಿ ಕಚೇರಿ ಆವರಣ, ಕಮ್ಮಭವನ ಹಾಗೂ ಪುಟ್ಬಾಲ್ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿನ ನಲ್ಲಚೇರುವು ಕೆರೆಯ ಹತ್ತಿರ ಡಾ.ಪುನೀತ್‍ರಾಜ್‍ಕುಮಾರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಹೇಮಂತ್, ಎಡಿಸಿ ಪಿ.ಎಸ್ ಮಂಜುನಾಥ, ತಹಶೀಲ್ದಾರ ವಿಶ್ವನಾಥ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಇತರರು ಹಾಜರಿದ್ದರು.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)














ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ