ಗುರುವಾರ, ಜನವರಿ 12, 2023

ಬಳ್ಳಾರಿ ಉತ್ಸವದ ಅಂಗವಾಗಿ ಬಳ್ಳಾರಿ ಬೈಸ್ಕೈ ಆಗಸದಿಂದ ಬಳ್ಳಾರಿ ವೀಕ್ಷಣಗೆ ಮುಕ್ತ ಅವಕಾಶ; ಜ.19ರಿಂದ ಆರಂಭ ಬಳ್ಳಾರಿ,ಜ.12(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳಾದ ಬಳ್ಳಾರಿ ಕೋಟೆ, ಮಿಂಚೇರಿ ಬೆಟ್ಟ, ತುಮಟಿ ಪ್ರದೇಶ ಸೇರಿದಂತೆ ಇತರೆ ಸ್ಥಳಗಳನ್ನು ಆಗಸದಿಂದ ವೀಕ್ಷಿಸಲು ಪ್ರಥಮ ಬಾರಿಗೆ ಬಳ್ಳಾರಿ ಬೈಸ್ಕೈ ಅನ್ನು ಜ.19ರಿಂದ ನಗರದ ಕೊಳಗಲ್ ಏರ್‍ಸ್ಟ್ರಿಪ್ ಬಳಿಯಿಂದ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪವನ್‍ಕುಮಾರ್ ಮಾಲಪಾಟಿ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಪ್ರಸಿದ್ಧ ಸ್ಥಳಗಳನ್ನು ವೀಕ್ಷಿಸಲು ವೈಮಾನಿಕ ಸಂಸ್ಥೆಯಾದ ತುಂಬೆ ಏವಿಯೇಷನ್ ಅವರಿಂದ ಬಳ್ಳಾರಿ ಬೈಸ್ಕೈನ್ನು ಜ.19 ರಿಂದ 23 ರವರೆಗೆ ಏರ್ಪಡಿಸಲಾಗಿದೆ. ಒಬ್ಬರಿಗೆ ಟಿಕೇಟ್ ರೂ.3,500 ದರ ನಿಗದಿಪಡಿಸಲಾಗಿದ್ದು, 6-8 ನಿಮಿಷಗಳ ಕಾಲ ಹೆಲಿಕಾಪ್ಟರ್ ಮೂಲಕ ಬಳ್ಳಾರಿಯನ್ನು ವೀಕ್ಷಿಸಬಹುದಾಗಿದೆ. ಬಳ್ಳಾರಿಯ ಕೊಳಗಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಹಾರಾಟ ಪ್ರಾರಂಭವಾಗಿ ಬಳ್ಳಾರಿ ಕೋಟೆ, ಮಿಂಚೇರಿ ಗುಡ್ಡ, ತುಮಟಿ ಪ್ರದೇಶ ಸೇರಿದಂತೆ ವಿವಿಧ ಪ್ರದೇಶಗಳ ಬಳ್ಳಾರಿ ನಗರದ ವಿಹಂಗಮ ನೋಟ ವೀಕ್ಷಿಸಬಹುದಾಗಿದೆ. ಇದು ಸಾರ್ವಜನಿಕರಿಗೆ ಮುಕ್ತ ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ