ಗುರುವಾರ, ಸೆಪ್ಟೆಂಬರ್ 11, 2025

ಅ.19 ರಂದು ಮಾಜಿ ಸೈನಿಕರಿಗೆ ಸಂಪರ್ಕ ಶಿಬಿರ

ಬಳ್ಳಾರಿ,ಸೆ.11(ಕರ್ನಾಟಕ ವಾರ್ತೆ): ಬೆಳಗಾವಿಯ ರಕ್ಷಣಾ ಇಲಾಖೆಯ ಮರಾಠಾ ಲೈಟ ಇನ್‌ಫಂಟ್ರಿ ಸೆಂಟರ್ ವತಿಯಿಂದ ಅಕ್ಟೋಬರ್ 19 ರಂದು ಬೆಳಿಗ್ಗೆ 8.30 ರಿಂದ ಸಂಜೆ 04 ಗಂಟೆಯವರೆಗೆ ಬೆಳಗಾವಿ ನಗರದ ಶಿವಾಜಿ ಸ್ಟೇಡಿಯಂನಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗಾಗಿ ಸಂಪರ್ಕ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಮಾಜಿ ಸೈನಿಕರ ನಿವೃತ್ತಿ ಪಿಂಚಣಿ, ಕುಟುಂಬ ಪಿಂಚಣಿ, ಸ್ಪರ್ಶ್ (SPಂಖSಊ) ಮತ್ತು ಇಸಿಹೆಚ್‌ಎಸ್ ಗೆ ಸಂಬAಧಿಸಿದ ವಿಷಯಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳುವ ಫಲಾನುಭವಿಗಳು ತಮ್ಮ ಕುಂದು-ಕೊರತೆ ಕುರಿತು ವಿವರಗಳನ್ನು ನೋಂದಾಯಿಸಿಕೊAಡು, ನೋಂದಣಿ ಸಂಖ್ಯೆ ಪಡೆಯಬೇಕು. ನೋಂದಣಿ ಮಾಡಿಸುವ ಫಲಾನುಭವಿಗಳು ತಮ್ಮ ಕುಂದು ಕೊರತೆಗಳಿಗೆ ಸಂಬAಧಿಸಿದ ದಾಖಲೆಗಳನ್ನು ಮೊಬೈಲ್ (ವಾಟ್ಸಾಪ್) ಸಂಖ್ಯೆ 8317350584, ದೂ.0831-2402821 ಮತ್ತು ಇಮೇಲ್ greatgorilla@nic.in ಗಳ ಮೂಲಕ ಅಪ್‌ಲೋಡ್ ಮಾಡಲು ಅವಕಾಶ ಇರುತ್ತದೆ. ಹಾಗಾಗಿ ಶಿಬಿರದಲ್ಲಿ ಬಳ್ಳಾರಿ ಜಿಲ್ಲೆಯ ಮಾಜಿ ಸೈನಿಕರು ಹಾಗೂ ಅವರ ಅವಲಂಬಿತರು ಶಿಬಿರದಲ್ಲಿ ಪಾಲ್ಗೊಂಡು ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಎಂಎಲ್‌ಐಆರ್‌ಸಿ ಅಭಿಲೇಖಾಧಿಕಾರಿ ತಿಳಿಸಿದ್ದಾರೆ. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ