ಗುರುವಾರ, ಸೆಪ್ಟೆಂಬರ್ 11, 2025
ಸೆ.25 ರಂದು ಬಳ್ಳಾರಿ ಹಾಪ್ ಕಾಮ್ಸ್ 56ನೇ ಸರ್ವ ಸದಸ್ಯರ ವಾರ್ಷಿಕ ಮಹಾಜನ ಸಭೆ
ಬಳ್ಳಾರಿ,ಸೆ.11(ಕರ್ನಾಟಕ ವಾರ್ತೆ):
ಜಿಲ್ಲಾ ತೋಟಗಾರಿಕೆ ಉತ್ಪನ್ನ ಬೆಳೆಗಾರರ ಸಹಕಾರಿ ಮಾರುಕಟ್ಟೆ ಮತ್ತು ಕೃಷಿ ಸಂಸ್ಕರಣ ಸಂಘ ಬಳ್ಳಾರಿ ಹಾಪ್ ಕಾಮ್ಸ್ ನ 56ನೇ ಸರ್ವ ಸದಸ್ಯರ ಮಹಾಜನ ಸಭೆಯನ್ನು ಸೆ.25ರಂದು ಬೆಳಿಗ್ಗೆ 11.30 ಕ್ಕೆ ನಗರದ ಅನಂತಪುರ ರಸ್ತೆಯ ಅಲ್ಲಂ ಭವನ ಎದುರುಗಡೆಯ ಬಿ.ಗೋನಾಳ್ ಕ್ಷೇತ್ರದಲ್ಲಿನ ಸಂಗ್ರಹಣ ಕೇಂದ್ರ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬಳ್ಳಾರಿ ಜಿಲ್ಲಾ ಹಾಪ್ ಕಾಮ್ಸ್ ನ ಅಧ್ಯಕ್ಷರಾದ ಸುವರ್ಣಮ್ಮ ಅವರು ಅಧ್ಯಕ್ಷತೆ ವಹಿಸುವರು ಎಂದು ಜಿಲ್ಲಾ ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ