ಸೋಮವಾರ, ಡಿಸೆಂಬರ್ 29, 2025
ಜ.05 ರಂದು ಅಂಚೆ ಕಚೇರಿ ದೂರುಗಳ ಕುರಿತು ‘ಡಾಕ್ ಅದಾಲತ್’
ಬಳ್ಳಾರಿ,ಡಿ.29(ಕರ್ನಾಟಕ ವಾರ್ತೆ):
ಅಂಚೆ ಇಲಾಖೆ ಬಳ್ಳಾರಿ ವಿಭಾಗದ ವತಿಯಿಂದ ಜನವರಿ 05 ರಂದು ಬೆಳಿಗ್ಗೆ 11 ಗಂಟೆಗೆ ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ‘ಡಾಕ್ ಅದಾಲತ್’ ಏರ್ಪಡಿಸಲಾಗಿದೆ.
ಅಂಚೆ ಕಚೇರಿಗಳಿಗೆ ಸಂಬAಧಿಸಿದAತೆ ಅಂಚೆ ವಿಷಯಗಳ ಕುರಿತು ಕುಂದು-ಕೊರತೆಗಳಿದ್ದಲ್ಲಿ ತಮ್ಮ ಕುಂದು-ಕೊರತೆಗಳನ್ನು ವಿವರವಾಗಿ ಬರೆದು ಅಂಚೆ ಅಧೀಕ್ಷಕರು, ಬಳ್ಳಾರಿ ವಿಭಾಗ, ಬಳ್ಳಾರಿ-583102 ಈ ವಿಳಾಸಕ್ಕೆ ಜನವರಿ 02 ರ ಸಂಜೆ 04 ಗಂಟೆಯೊಳಗೆ ಅಥವಾ ಇದಕ್ಕೂ ಮುಂಚಿತವಾಗಿ ಕಳುಹಿಸಬೇಕು.
ಕುಂದು-ಕೊರತೆಗಳನ್ನು doballari.ka@indiapost.gov.in ಗೆ ಸಹ ಕಳುಹಿಸಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ