ಸೋಮವಾರ, ಡಿಸೆಂಬರ್ 22, 2025

ಬಾಲಕ ಕಾಣೆ: ಪತ್ತೆಗೆ ಮನವಿ

ಬಳ್ಳಾರಿ,ಡಿ.22(ಕರ್ನಾಟಕ ವಾರ್ತೆ): ನಗರದ ಕಂಟೋನ್‌ಮೆAಟ್ ಪ್ರದೇಶದ ಸರ್ಕಾರಿ ಬಾಲಕರ ಬಾಲ ಮಂದಿರದ 14 ವರ್ಷದ ಅಪ್ಪು ಎನ್ನುವ ಬಾಲಕ ಡಿ.19 ರಂದು ಬಾಲಕರ ಬಾಲಮಂದಿರದ ಶಾಲೆಗೆ ಹೋಗಿಬರುತ್ತೇನೆ ಎಂದು ಹೋದ ಬಾಲಕ ಮರಳಿ ಬಾರದೇ ಕಾಣೆಯಾಗಿದ್ದು, ಪ್ರಕರಣ ದಾಖಲಾಗಿದೆ. ಬಾಲಕನ ಪತ್ತೆಗೆ ಸಹಕರಿಸಬೇಕು ಎಂದು ಕೌಲ್‌ಬಜಾರ್ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ. ಬಾಲಕನ ಚಹರೆ: ಎತ್ತರ ಅಂದಾಜು 4.9 ಅಡಿ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ನೇರಳೆ ಬಣ್ಣದ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ. ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ಬಾಲಕನ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಅಥವಾ ಕೌಲ್‌ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145, ಪಿ.ಎಸ್.ಐ ಮೊ.94808203085 ಪಿ.ಐ ಮೊ.9480803047 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ