ಸೋಮವಾರ, ಡಿಸೆಂಬರ್ 15, 2025

ಸಿರುಗುಪ್ಪ ನಗರಸಭೆ: ಬೀದಿನಾಯಿ ದತ್ತು ಪಡೆದು ಪೋಷಿಸಲು ಆಸಕ್ತರಿದ್ದಲ್ಲಿ ಸಂಪರ್ಕಿಸಿ

ಬಳ್ಳಾರಿ,ಡಿ.15(ಕರ್ನಾಟಕ ವಾರ್ತೆ): ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿನ ಬೀದಿನಾಯಿಗಳನ್ನು ದತ್ತು ಪಡೆದು ಪೋಷಣೆ ಮಾಡಲು ಇಚ್ಚಿಸುವವರು ಹಾಗೂ ಆಶ್ರಣ ತಾಣದಲ್ಲಿರುವ ಬೀದಿನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವ ಪ್ರಾಣಿಗಳ ಸಂರಕ್ಷಣೆ ಸಂಕಲ್ಪ ಹೊಂದಿರುವವರು, ಪ್ರಾಣಿಗಳ ಮೇಲೆ ದಯೆ ಇರುವವರು ಕೂಡಲೇ ಸಿರುಗುಪ್ಪ ನಗರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದಾಗಿದೆ. ಬೀದಿನಾಯಿಗಳಿAದ ಸಾರ್ವಜನಿಕರಿಗೆ ಹಾಗೂ ಸಂಚರಿಸುವ ವಾಹನ ಸವಾರರಿಗೆ ಆಗುವ ತೊಂದರೆ ನಿಯಂತ್ರಿಸಲು ನಗರÀಸಭೆ ವತಿಯಿಂದ ಹಿಡಿದು ಅವುಗಳನ್ನು ಆಶ್ರಯತಾಣಕ್ಕೆ ಸಾಗಿಸಲಾಗುತ್ತಿದೆ. ಹಾಗಾಗಿ ಆಶ್ರಣ ತಾಣದಲ್ಲಿರುವ ಬೀದಿನಾಯಿಗಳಿಗೆ ಆಹಾರ ಪೂರೈಸಲು ಇಚ್ಚಿಸುವವರು ಇದ್ದಲ್ಲಿ ಎನ್.ಜಿ.ಓ ಸಂಘ ಸಂಸ್ಥೆಗಳು, ಪ್ರಾಣಿದಯಾ ಸಂಘಗಳು ಹಾಗೂ ಇತರೆ ಪ್ರಾಣಿ ಪ್ರಿಯರು ಸಿರುಗುಪ್ಪ ನಗರಸಭೆ ಕಾರ್ಯಾಲಯಕ್ಕೆ ಸಂಪರ್ಕಿಸಬಹುದು ಎಂದು ಸಿರುಗುಪ್ಪ ನಗರಭೆಯ ಪೌರಾಯುಕ್ತ ಗಂಗಾಧರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ