ಸೋಮವಾರ, ಡಿಸೆಂಬರ್ 22, 2025
ಡಿ.23 ರಂದು ಸರಳಾದೇವಿ ಕಾಲೇಜಿನಲ್ಲಿ ರಾಷ್ಟçಮಟ್ಟದ ಭೌತಶಾಸ್ತç ಸಮ್ಮೇಳನ
ಬಳ್ಳಾರಿ,ಡಿ.22(ಕರ್ನಾಟಕ ವಾರ್ತೆ):
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಭೌತಶಾಸ್ತç ವಿಭಾಗದ ವತಿಯಿಂದ ರಾಷ್ಟಿçÃಯ ಉಚ್ಛತರ ಶಿಕ್ಷಣ ಅಭಿಯಾನ(ರುಸಾ) ಪ್ರಾಯೋಜಕತ್ವದಲ್ಲಿ ಒಂದು ದಿನದ ಕ್ಲೆöÊಮೇಟ್ ಚೇಂಜ್ ಅಂಡ್ ಎನ್ವಿರಾನ್ಮೆಂಟಲ್ ಸಸ್ಟೇನಬಿಲಿಟಿ ಎಂಬ ವಿಷಯ ಕುರಿತು ರಾಷ್ಟçಮಟ್ಟದ ಭೌತಶಾಸ್ತç ಸಮ್ಮೇಳನವನ್ನು ಡಿ.23 ರಂದು ಬೆಳಿಗ್ಗೆ 10 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾರಿ ನಗರ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ನಾರಾ ಭರತ್ ರೆಡ್ಡಿ, ಅತಿಥಿಗಳಾಗಿ ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಮಂಜುಶ್ರೀ. ಎನ್., ನಿರ್ದೇಶಕರಾದ ಡಾ.ಶೋಭಾ ಜಿ., ಬಳ್ಳಾರಿಯ ವಿ.ಎಸ್.ಕೆ. ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಮುನಿರಾಜು, ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಪ್ರಹ್ಲಾದ್ ಚೌದ್ರಿ, ರಾಷ್ಟಿçÃಯ ಸಲಹಾ ಮಂಡಳಿಯ ಹಾಗೂ ಅನಂತಪುರದ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ರಾಮಗೋಪಾಲ್, ವಿ.ಎಸ್.ಕೆ. ವಿಶ್ವವಿದ್ಯಾಲಯದ ಭೌತಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ತಿಪ್ಪೇರುದ್ರ ಜೆ., ತೆಲಂಗಾಣದ ವಾರಂಗಲ್‌ನ ರಾಷ್ಟಿçÃಯ ತಾಂತ್ರಿಕ ಸಂಸ್ಥೆಯ ಭೌತಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ. ಪಿ.ಅಬ್ದುಲ್ ಅಜೀಮ್, ಕೇರಳದ ತಿರುವನಂತಪುರAನ ಇಸ್ರೋ ಬಾಹ್ಯಾಕಾಶ ಭೌತಶಾಸ್ತç ಪ್ರಯೋಗಾಲಯದ ವಿಜ್ಞಾನಿ ಡಾ.ಸುರೇಶ್ ಕುಮಾರ್ ರೆಡ್ಡಿ ಬಿ ಅವರುಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಭೌತಶಾಸ್ತç ವಿಭಾಗದ ಮುಖ್ಯಸ್ಥರು ಹಾಗೂ ಸಮ್ಮೇಳನದ ಸಂಚಾಲಕ ಡಾ.ಮಂಜುನಾಥ ಎಸ್., ಸಂಘಟನಾ ಕಾರ್ಯದರ್ಶಿ ಡಾ.ಕುಂಚA ನರಸಿಂಹುಲು, ಸಂಘಟನಾ ಸದಸ್ಯರಾದ ಡಾ.ರಮಾಬಾಯಿ, ಡಾ.ಶಿಲ್ಪಾ ಕುಲಕರ್ಣಿ, ಡಾ.ಟಿ.ದೊಡ್ಡಬಸವರಾಜ ಹಾಗು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ