ಶನಿವಾರ, ಡಿಸೆಂಬರ್ 20, 2025

ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಆಯ್ಕೆ ಪಟ್ಟಿ ಪ್ರಕಟ | ಡಿ.24 ರಂದು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

ಬಳ್ಳಾರಿ,ಡಿ.20(ಕರ್ನಾಟಕ ವಾರ್ತೆ): ಪ್ರಸ್ತಕ ಸಾಲಿನ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಡಿ.24 ರಂದು ಬೆಳಿಗ್ಗೆ 09 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ ತಿಳಿಸಿದ್ದಾರೆ. ಪ್ರಶಸ್ತಿಗೆ ಜಿಲ್ಲೆಯ 04 ತಾಲ್ಲೂಕುಗಳಿಂದ ಸಲ್ಲಿಕೆಯಾದ ಪ್ರಸ್ತಾವನೆಗಳನ್ನು ಪರಿಶೀಲಿಸಿ ಕಿರಿಯ, ಹಿರಿಯ, ಪ್ರೌಢ ವಿಭಾಗಗಳಿಂದ ಪ್ರತಿ ತಾಲ್ಲೂಕಿಗೆ 03 ರಂತೆ ಒಟ್ಟು 12 ಜನ ಶಿಕ್ಷಕರನ್ನು ಜಿಲ್ಲಾ ಮಟ್ಟದ ಸಮಿತಿಯು ಪರಿಶೀಲನೆ ಮಾಡಿ ಆಯ್ಕೆ ಮಾಡಲಾಗಿದೆ. *ಶಿಕ್ಷಕರ ಪಟ್ಟಿ:* *ಪ್ರಾಥಮಿಕ ವಿಭಾಗ:* ಬಳ್ಳಾರಿ ಪೂರ್ವ ವಲಯದ ಹನುಮಾನ್ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಹಾಂತೇಶ, ಬಳ್ಳಾರಿಯ ಟಿ.ಜೆ ಆಯಿಲ್ ಮಿಲ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ(ಉರ್ದು)ಯ ಸಹ ಶಿಕ್ಷಕರಾದ ನಸೀಮಾ ಆರ್ ಕೆ. ಕುರುಗೋಡು ತಾಲ್ಲೂಕಿನ ಯರಂಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾಯದೇವಿ ಬಿ.ಎಂ., ಹವಂಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಜಯಲಕ್ಷಿö್ಮÃ ಗಂಗಣ್ಣನವರು. ಸAಡೂರು ತಾಲ್ಲೂಕಿನ 6ನೇ ವಾರ್ಡ್ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಜಿ.ಆರ್.ರೇಣುಕಮ್ಮ, ಸಂಡೂರು ತಾಲ್ಲೂಕಿನ ಆಶ್ರಯ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ರಾಜಣ್ಣ. ಸಿರುಗುಪ್ಪ ತಾಲ್ಲೂಕಿನ ಬಿ.ಬಿ.ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಹೇಶ್ ವೈ., ತೆಕ್ಕಲಕೋಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಾಂತಮ್ಮ ಎಸ್. *ಪ್ರೌಢ ವಿಭಾಗ:* ಬಳ್ಳಾರಿ ಪೂರ್ವ ವಲಯದ ಕೆ.ಪಿ.ಎಸ್ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ(ವಿಜ್ಞಾನ) ಶಿವಕುಮಾರ ಎ., ಕುರುಗೋಡು ತಾಲ್ಲೂಕಿನ ಯರಂಗಳಿಯ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಹುಲೆಪ್ಪ ಹೆಚ್., ಸಂಡೂರು ತಾಲ್ಲೂಕಿನ ಸಂಡೂರು ಛತ್ರಪತಿ ಶಿವಾಜಿ ವಿದ್ಯಾಮಂದಿರ ಸರ್ಕಾರಿ ಪ್ರೌಢ ಶಾಲೆಯ ಸಹಶಿಕ್ಷಕ ಮಹಮ್ಮದ್ ಜಾವೀದ್, ಸಿರುಗುಪ್ಪ ತಾಲ್ಲೂಕಿನ ಸಿರುಗುಪ್ಪ ಸರ್ಕಾರಿ ಪ್ರೌಢ ಶಾಲೆಯ ಸಹ ಶಿಕ್ಷಕ ಜೀವೇಶ್ ಕುಲಕರ್ಣಿ ಆಯ್ಕೆಯಾಗಿದ್ದಾರೆ. ಡಿ.24 ರಂದು ಬೆಳಿಗ್ಗೆ 09 ಗಂಟೆಗೆ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಉಮಾದೇವಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ