ಸೋಮವಾರ, ಡಿಸೆಂಬರ್ 22, 2025
ವ್ಯಕ್ತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಡಿ.22(ಕರ್ನಾಟಕ ವಾರ್ತೆ):
ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಪ್ಪಳದ 37 ವರ್ಷದ ಶಿವರಾಜ ರಾಮು ಭಜಂತ್ರಿ ಎನ್ನುವ ವ್ಯಕ್ತಿಯು ಡಿ.18 ರಂದು ಜನತಾ ನಗರದಲ್ಲಿರುವ ಕಾಟೇಗುಡ್ಡ ಮಾರೆಮ್ಮ ದೇವಸ್ಥಾನಕ್ಕೆ ಅಕ್ಕಿ ಕೊಟ್ಟು ಬರುತ್ತೇನೆಂದು ಹೇಳಿ ಮರಳಿ ಬಾರದೇ ಕಾಣೆಯಾಗಿದ್ದು, ಪ್ರಕರಣ ದಾಖಲಾಗಿದೆ. ವ್ಯಕ್ತಿಯ ಪತ್ತೆಗೆ ಸಹಕರಿಸಬೇಕು ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಮನವಿ ಮಾಡಿದ್ದಾರೆ.
ವ್ಯಕ್ತಿಯ ಚಹರೆ:
ಎತ್ತರ ಅಂದಾಜು 6 ಅಡಿ, ದುಂಡು ಮುಖ, ಧೃಡವಾದ ಮೈಕಟ್ಟು ಹೊಂದಿದ್ದು, ಹಣೆ ಮತ್ತು ಬಲಗೈ ಮೇಲೆ ಹಳೆಯ ಗಾಯದ ಗುರುತು ಹಾಗೂ ಬಲಕಣ್ಣಿನ ಬಳಿ ಬಿಳಿ ಬಣ್ಣದ ನರುಳಿ ಇದೆ. ಎಡಗೈ ಬೆರಳಿಗೆ 5 ಗ್ರಾಂ ತೂಕದ ಜೆ ಅಕ್ಷರವಿರುವ ಬಂಗಾರದ ಉಂಗುರವಿದೆ. ಕೆಎ 26-ಇಸಿ-1888 ನಂಬರ್ ಇರುವ ಪರ್ಪಲ್ ಬಣ್ಣದ ಟಿವಿಎಸ್ ಜೂಪಿಟರ್ ಸ್ಕೂಟರ್‌ನ್ನು ತೆಗೆದುಕೊಂಡು ಹೋಗಿರುತ್ತಾನೆ.
ಕಾಣೆಯಾದ ಸಂದರ್ಭದಲ್ಲಿ ಬಿಳಿ ಬಣ್ಣದ ಪುಲ್ ಶರ್ಟ್, ಬಿಳಿ ಕಟ್ ಬನಿನ್ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಅಥವಾ ಎಪಿಎಂಸಿ ಯಾರ್ಡ್ ಪೊಲೀಸ್ ಠಾಣೆಯ ದೂ.08392-250033, ಮೊ.948080396 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ