ಶುಕ್ರವಾರ, ಡಿಸೆಂಬರ್ 5, 2025

ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಎರಡು ದಿನಗಳ ‘ಅಂತರ ಕಾಲೇಜು ಯುವಜನೋತ್ಸವ-2025’ ಕಾರ್ಯಕ್ರಮಕ್ಕೆ ಚಾಲನೆ | ಕಲೆ ಎಂಬುದು ಅಗೋಚರ ಶಕ್ತಿ: ಶಾಂತಿಬಾಯಿ.ಕೆ

ಬಳ್ಳಾರಿ,ಡಿ.05(ಕರ್ನಾಟಕ ವಾರ್ತೆ): ಕಲೆ ಎಂಬುದು ಎಲ್ಲರಲ್ಲಿಯೂ ಇರುವ ಒಂದು ಅಗೋಚರ ಶಕ್ತಿಯಾಗಿದ್ದು, ನಮ್ಮಲ್ಲಿರುವ ಪ್ರತಿಭೆಗಳ ಪ್ರದರ್ಶನಕ್ಕೆ ನಮ್ಮ ಸ್ಥಿತಿಗತಿಗಳು ಕಾರಣೀಭೂತವಲ್ಲ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶಾಂತಿಬಾಯಿ.ಕೆ ಅವರು ಹೇಳಿದರು. ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮAದಿರದಲ್ಲಿ ಆಯೋಜಿಸಲಾದ ಎರಡು ದಿನಗಳ ‘ಅಂತರ ಕಾಲೇಜು ಯುವಜನೋತ್ಸವ 2025’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಡೂರು ಕುಶಲಕಲಾ ಕೇಂದ್ರದಲ್ಲಿ 32 ವರ್ಷಗಳ ಹಿಂದೆ ಸಾಮಾನ್ಯ ಕೆಲಸಗಾರರಾಗಿ ಸೇವೆ ಆರಂಭಿಸಿ, ಇಂದು ಅದೇ ಕೇಂದ್ರದ ಉನ್ನತ ಕಸೂತಿ ತರಬೇತುದಾರ ಎಂಬ ಹುದ್ದೆ ಪಡೆದಿರುವುದರ ಹಿಂದೆ ಶ್ರಮ ಮತ್ತು ಶ್ರದ್ಧೆ ಅಡಗಿದೆ ಎಂದರು. ಪ್ರಾಥಮಿಕ ಶಿಕ್ಷಣವನ್ನು ಪೂರೈಸದ ನಾನು ಲಂಬಾಣಿ ಕನ್ನಡಿ ಮತ್ತು ಕಸೂತಿ ಕಲೆಯ ಪ್ರದರ್ಶನಕ್ಕೆ ಹತ್ತಕ್ಕೂ ಅಧಿಕ ದೇಶಗಳಿಗೆ ಭೇಟಿ ನೀಡಿದ್ದೇನೆ. ಸಾಧನೆ ಎಂಬುದನ್ನು ಸವಾಲಾಗಿ ಸ್ವೀಕರಿಸಿದಾಗ ಅವುಗಳು ವರದಾನವಾಗಿ ಪರಿಣಮಿಸುತ್ತವೆ ಎಂದು ಅಭಿಪ್ರಾಯಪಟ್ಟರು. 2023ರಲ್ಲಿ ಹಂಪಿಯಲ್ಲಿ ನಡೆದಿದ್ದ ಜಿ-20 ಶೃಂಗಸಭೆಯಲ್ಲಿ ಸಂಡೂರು ಕುಶಲ ಕಲಾ ಕೇಂದ್ರದ ವತಿಯಿಂದ ಪ್ರದರ್ಶಿಸಿದ್ದ 1755 ಬಟ್ಟೆಗಳ ಕಸೂತಿ ಕಲೆಯು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿರುವುದು ನೂರಾರು ಲಂಬಾಣಿ ಕಲಾವಿದರಿಗೆ ಆದರ್ಶವಾಗಿದೆ ಎಂದರು. ನಮ್ಮಲ್ಲಿರುವ ಕಲೆಯನ್ನು ಗುರುತಿಸಿ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ನೀಡಿದ ಎಲ್ಲರನ್ನೂ ಅವರು ಈ ಸಂದರ್ಭದಲ್ಲಿ ಸ್ಮರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿವಿಯ ಕುಲಪತಿ ಪ್ರೊ. ಎಂ ಮುನಿರಾಜು ಮಾತನಾಡಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಯುವಜನೋತ್ಸವ ಮಾದರಿಯ ಕಾರ್ಯಕ್ರಮಗಳು ಸೂಕ್ತ ವೇದಿಕೆಯಾಗಿವೆ. ವಿದ್ಯಾರ್ಥಿಗಳು ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಅವರÀ ಸರ್ವತೋಮುಖ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಭಾರ ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಎನ್.ಎಮ್ ಸಾಲಿ, ಡೀನರುಗಳಾದ ಪ್ರೊ ರಾಬರ್ಟ್ ಜೋಸ್, ಪ್ರೊ ಸದ್ಯೋಜಾತಪ್ಪ ಎಸ್, ಪ್ರೊ ಗೌರಿ ಮಾಣಿಕ್ ಮಾನಸ, ಪ್ರೊ ಸಾಹೇಬ್ ಅಲಿ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಸಾಂಸ್ಕೃತಿಕ ಸಂಯೋಜಕರಾದ ಪ್ರೊ. ಶಿರಗಾನಹಳ್ಳಿ ಶಾಂತನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಡಾ. ಸುಷ್ಮಾ ಜೋಗನ್ ನಿರೂಪಿಸಿದರು. ಡಾ ಕೆ ಎಸ್ ಶಿವಪ್ರಸಾದ್ ವಂದಿಸಿದರು. ಎರಡು ದಿನಗಳ ಉತ್ಸವದÀಲ್ಲಿ ವಿವಿಧ 20ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿಶ್ವವಿದ್ಯಾಲಯದ ಅಧೀನದ 30ಕ್ಕೂ ಹೆಚ್ಚು ಕಾಲೇಜುಗಳ 500 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದಾರೆ. ಶನಿವಾರ ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಲ್ಟ್ ಕನ್ನಡ ಚಲನಚಿತ್ರದ ನಟ, ನಟಿಯರಾದ ಜೈದ್‌ಖಾನ್, ಮಲೈಕ ವಸುಪಾಲ್ ಭಾಗವಹಿಸಲಿದ್ದಾರೆ. ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ---------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ