ಬುಧವಾರ, ಮೇ 13, 2026

ಮೇ 28 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ

ಬಳ್ಳಾರಿ,ಮೇ 13(ಕರ್ನಾಟಕ ವಾರ್ತೆ): ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯ ಬಳ್ಳಾರಿ ಪ್ರಾದೇಶಿಕ ಕಚೇರಿಯು ‘ನಿಧಿ ಆಪ್ಕೆ ನಿಕಟ್ 2.0’ (ಭವಿಷ್ಯ ನಿಧಿ ನಿಮ್ಮ ಹತ್ತಿರಕ್ಕೆ) ಎಂಬ ವಿಸ್ತೃತ ಕಾರ್ಯಕ್ರಮವನ್ನು ಮೇ 28 ರಂದು ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಅಂದು ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಬಳ್ಳಾರಿ, ಚಿತ್ರದುರ್ಗ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಆಯ್ದ ಸ್ಥಳಗಳಲ್ಲಿ ನಡೆಯಲಿದೆ. *ಕಾರ್ಯಕ್ರಮದ ಸ್ಥಳಗಳು:* ಬಳ್ಳಾರಿ ನಗರದ ಕೌಲ್ ಬಜಾರ್‌ನ ಜೀನತ್ ಟ್ರಾನ್ಸ್ಪೋರ್ಟ್ ಕಂಪನಿ, ಕೊಪ್ಪಳ ದುದ್ದೇಶ್ ಮೆಟಲ್ಸ್, ವಿಜಯನಗರ ಜಿಲ್ಲೆಯ ಪೋಲಿಪ್ಯಾಕ್ ಇಂಡಸ್ಟಿçÃಸ್, ಚಿತ್ರದುರ್ಗದ ಅರವಿಂದ್ ಲಿಮಿಟೆಡ್. ಈ ವಿಶೇಷ ಶಿಬಿರವು ಕಾರ್ಮಿಕರು, ಪಿಂಚಣಿದಾರರು ಮತ್ತು ಉದ್ಯೋಗದಾತರ ಕುಂದುಕೊರತೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಗುರಿಯನ್ನು ಹೊಂದಿದೆ. ಇದರ ಜೊತೆಗೆ ಉದ್ಯೋಗದಾತರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸುವುದು. ಕಾರ್ಮಿಕರು ಮತ್ತು ಉದ್ಯೋಗದಾತರಿಗೆ ಲಭ್ಯವಿರುವ ಆನ್‌ಲೈನ್ ಸೇವೆಗಳ ಬಗ್ಗೆ ಮಾಹಿತಿ ನೀಡುವುದು. ಹೊಸ ಉಪಕ್ರಮಗಳು ಹಾಗೂ ಸುಧಾರಣೆಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಈ ಕಾರ್ಯಕ್ರಮದ ಮುಖ್ಯ ಭಾಗವಾಗಿದೆ. ಆಯಾ ಭಾಗದ ಕಾರ್ಮಿಕರು, ಪಿಂಚಣಿದಾರರು ಮತ್ತು ಉದ್ಯೋಗದಾತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಭವಿಷ್ಯ ನಿಧಿ ಬಳ್ಳಾರಿ ಪ್ರಾದೇಶಿಕ ಕಚೇರಿಯ ಆಯುಕ್ತ ಕೆ.ವಿ ಪ್ರವೀಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ