ಶುಕ್ರವಾರ, ಮೇ 31, 2024
ಲೋಕಸಭೆ ಸಾರ್ವತ್ರಿಕ ಚುನಾವಣೆ-2024 | ಮತ ಎಣಿಕೆಗೆ ಜಿಲ್ಲಾಡಳಿತ ಸಕಲ ಸಜ್ಜು: ಡಿಸಿ ಮಿಶ್ರಾ
ಬಳ್ಳಾರಿ,ಮೇ 31(ಕರ್ನಾಟಕ ವಾರ್ತೆ):
ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧ ಬಳ್ಳಾರಿ (ವಿಜಯನಗರ ಜಿಲ್ಲೆ ಒಳಗೊಂಡಂತೆ) ಜಿಲ್ಲೆಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 08 ಕ್ಷೇತ್ರಗಳ ಮತ ಎಣಿಕೆ ಕಾರ್ಯ ಜೂನ್ 04 ರಂದು ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ. ಇದಕ್ಕೆ ಜಿಲ್ಲಾಡಳಿತವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಲೋಕಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಕುರಿತಂತೆ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜೂ.04 ರಂದು ಬೆಳಿಗ್ಗೆ 08 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗಲಿದೆÉ. ಮತ ಎಣಿಕೆ ಕೇಂದ್ರದ ಕಟ್ಟಡದಲ್ಲಿ 20 ಇವಿಎಂ ಸ್ಟ್ರಾಂಗ್ ರೂಂ ಮತ್ತು 02 ಅಂಚೆ ಮತಗಳ ಸ್ಟ್ರಾಂಗ್ ರೂಂಗಳಿದ್ದು, ಮತ ಎಣಿಕೆ ಕಾರ್ಯ ಒಟ್ಟು 08 ಹಾಲ್‍ಗಳಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 14 ಟೇಬಲ್‍ಗಳನ್ನು ಸಜ್ಜುಗೊಳಿಸಲಾಗಿದೆ. ಪ್ರತಿ ಟೇಬಲ್‍ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯೋಜಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಒಟ್ಟು 112 ಟೇಬಲ್‍ಗಳಂತೆ, 150 ಎಣಿಕಾ ಮೇಲ್ವಿಚಾರಕರು, 159 ಎಣಿಕಾ ಸಹಾಯಕರು ಮತ್ತು 146 ಎಣಿಕಾ ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಅಧಿಕಾರಿಗಳು, ಸಹಾಯಕರಿಗೆ ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದ್ದು, ಎರಡನೆ ಹಂತದ ತರಬೇತಿಯನ್ನೂ ನೀಡಲಾಗುವುದು. 121 ಜನರಿಗೆ ಈಗಾಗಲೆ ಕೌಂಟಿಂಗ್ ಏಜೆಂಟ್ ಆಗಿ ವೀಕ್ಷಣೆಗೆ ಪಾಸ್ ನೀಡಲಾಗಿದೆ ಎಂದರು.
88-ಹಡಗಲಿ ಕ್ಷೇತ್ರದಲ್ಲಿ ಒಟ್ಟು 218 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ 16 ಸುತ್ತು ಮತ ಎಣಿಕೆ ನಡೆಯಲಿದೆ. 89-ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಒಟ್ಟು 254 ಮತಗಟ್ಟೆಗಳಿದ್ದು, 19 ಸುತ್ತು ಮತ ಎಣಿಕೆ ನಡೆಯಲಿದೆ. 90-ವಿಜಯನಗರ ಕ್ಷೇತ್ರದಲ್ಲಿ ಒಟ್ಟು 259 ಮತಗಟ್ಟೆಗಳಿದ್ದು, ಕ್ಷೇತ್ರಕ್ಕೆ ಸಂಬಂಧಿಸಿದಂತೆ 19 ಸುತ್ತು ಮತ ಎಣಿಕೆ ನಡೆಯಲಿದೆ.
91-ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 242 ಮತಗಟ್ಟೆಗಳಿದ್ದು, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಾರು 18 ಸುತ್ತು ಮತ ಎಣಿಕೆ ನಡೆಯಲಿದೆ. 93-ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 235 ಮತಗಟ್ಟೆಗಳಿದ್ದು, 17 ಸುತ್ತು. 94-ಬಳ್ಳಾರಿ ನಗರ ಕ್ಷೇತ್ರದಲ್ಲಿ 261 ಮತಗಟ್ಟೆಗಳಿದ್ದು, 19 ಸುತ್ತು. 95-ಸಂಡೂರು ಕ್ಷೇತ್ರದಲ್ಲಿ ಒಟು 253 ಮತಗಟ್ಟೆಗಳಿದ್ದು, 19 ಸುತ್ತು ಹಾಗೂ 96-ಕೂಡ್ಲಿಗಿ ಕ್ಷೇತ್ರದಲ್ಲಿ 250 ಮತಗಟ್ಟೆಗಳಿದ್ದು, ಒಟ್ಟು 18 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ.
ನಗರದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮತ ಎಣಿಕೆಗೆ ಸಕಲ ವ್ಯವಸ್ಥೆ ಕೈಗೊಳ್ಳಲಾಗಿದೆ. ಪ್ರತಿ ಹಂತದ ಮತ ಎಣಿಕೆ ವಿವರವನ್ನು ಮಾಧ್ಯಮಗಳ ಮೂಲಕ ಪ್ರಚುರಪಡಿಸಲು ಅನುವಾಗುವಂತೆ ಮಾಧ್ಯಮದವರಿಗೆ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗುವುದು ಎಂದರು.
ಮತ ಎಣಿಕೆ ಕೇಂದ್ರ ಸುತ್ತಲೂ 100 ಮೀಟರ್ ಪ್ರದೇಶ ಆವರಣದಲ್ಲಿ ವಾಹನಗಳ ಪ್ರವೇಶವಿರುವುದಿಲ್ಲ. ಮತ ಎಣಿಕೆ ಅಂಗವಾಗಿ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿμÉೀಧಿಸಲಾಗಿದೆ ಎಂದು ಹೇಳಿದರು.
*ಪೊಲೀಸ್ ಅಧಿಕಾರಿ, ಸಿಬ್ಬಂದಿ ನಿಯೋಜನೆ:*
ಜಿಲ್ಲೆಯ 8 ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾದ ರಾವ್ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸುತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲಿ 01-ಎಸ್‍ಪಿ, 02-ಎಎಸ್ಪಿ, 05-ಡಿವೈಎಸ್ಪಿ, 15-ಸಿಪಿಐ, 25-ಪಿಎಸ್‍ಐ, 40-ಎಎಸ್‍ಐ, 250-ಪಿಸಿ, 04-ಕೆಎಸ್‍ಆರ್‍ಪಿ, 04 ಡಿ.ಆರ್ ತಂಡ ಸಹಿತ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.
--------
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ | ಜೂನ್ 03 ರಂದು ಮತದಾನ, 24 ಮತಗಟ್ಟೆ ಕೇಂದ್ರಗಳು ಸ್ಥಾಪನೆ: ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಮೇ 31(ಕರ್ನಾಟಕ ವಾರ್ತೆ):
ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಜೂನ್ 03 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ಒಟ್ಟು 24 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಇಂದು, ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಸಭಾಂಗಣದಲ್ಲಿ ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದಲ್ಲಿ ಒಟ್ಟು 04 ಮತಗಟ್ಟೆ ಕೇಂದ್ರಗಳಿದ್ದು, 2,568 ಪುರುಷರು, 1,170 ಮಹಿಳೆಯರು ಸೇರಿ ಒಟ್ಟು 3,738 ಪದವೀಧರ ಮತದಾರರಿದ್ದಾರೆ. ಸಿರುಗುಪ್ಪ ಕ್ಷೇತ್ರದಲ್ಲಿ 04 ಮತಗಟ್ಟೆ ಕೇಂದ್ರಗಳಿದ್ದು, 2,522 ಪುರುಷರು, 921 ಮಹಿಳೆಯರು ಸೇರಿ ಒಟ್ಟು 3,443 ಪದವೀಧರ ಮತದಾರರಿದ್ದಾರೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 05 ಮತಗಟ್ಟೆ ಕೇಂದ್ರಗಳಿದ್ದು, ಇಲ್ಲಿ 3,098 ಪುರುಷರು, 2,030 ಮಹಿಳೆಯರು ಮತ್ತು 01 ಇತರೆ ಸೇರಿ ಒಟ್ಟು 5,129 ಪದವೀಧರ ಮತದಾರರಿದ್ದಾರೆ. ಬಳ್ಳಾರಿ ನಗರ ಕ್ಷೇತ್ರದಲ್ಲಿ 07 ಮತಗಟ್ಟೆ ಕೇಂದ್ರಗಳಿದ್ದು, ಇಲ್ಲಿ 4,552 ಪುರುಷರು, 3,681 ಮಹಿಳೆಯರು ಮತ್ತು 02 ಇತರೆ ಸೇರಿ ಒಟ್ಟು 8,235 ಪದವೀಧರ ಮತದಾರರಿದ್ದಾರೆ. ಸಂಡೂರು ಕ್ಷೇತ್ರದಲ್ಲಿ 04 ಮತಗಟ್ಟೆ ಕೇಂದ್ರಗಳಿದ್ದು, 2,241 ಪುರುಷರು, 1,396 ಮಹಿಳೆಯರು ಮತ್ತು 01 ಇತರೆ ಸೇರಿ ಒಟ್ಟು 3,638 ಪದವೀಧರ ಮತದಾರರು ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 24 ಮತದಾನ ಕೇಂದ್ರಗಳಿದ್ದು, 24,183 ಪದವೀಧರ ಮತದಾರರಿದ್ದಾರೆ ಎಂದು ಅವರು ವಿವರಿಸಿದರು.
ಚುನಾವಣೆಯನ್ನು ಅಚ್ಚುಕಟ್ಟಾಗಿ ನಡೆಸಲು ಪಿಆರ್‍ಓ, ಎಪಿಆರ್‍ಓ, ಪಿಓ ಮತ್ತು ಮೈಕ್ರೋ ಅಬ್ಸರ್ವಸ್ ಸೇರಿದಂತೆ ಒಟ್ಟು 140 ಚುನಾವಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಈಗಾಗಲೇ ಎರಡು ಹಂತದ ತರಬೇತಿ ನೀಡಲಾಗಿದೆ. 06 ಮತಗಟ್ಟೆ ಕೇಂದ್ರಗಳಲ್ಲಿ ವಿಡಿಯೋಗ್ರಾಫಿ ಮತ್ತು 18 ಮತಗಟ್ಟೆ ಕೇಂದ್ರಗಳಲ್ಲಿ ವೆಬ್‍ಕಾಸ್ಟಿಂಗ್ ಅಳವಡಿಸಿ ನೇರವಾಗಿ ವೀಕ್ಷಿಸಲಾಗುವುದು ಎಂದು ಡಿಸಿ ಅವರು ತಿಳಿಸಿದರು.
ಜೂನ್ 02 ರಂದು ಆಯಾ ತಾಲ್ಲೂಕು ತಹಶೀಲ್ದಾರ ಕಚೇರಿಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆಯಲಿದೆ. ಮಸ್ಟರಿಂಗ್ ನಂತರ ಮತದಾನ ಸಿಬ್ಬಂದಿಗಳು ಮತಪೆಟ್ಟಿಗೆ ಮತ್ತು ಮತದಾನ ಸಾಮಗ್ರಿಗಳೊಂದಿಗೆ ನಿಗದಿಪಡಿಸಿದ ಮತಗಟ್ಟೆಗಳಿಗೆ ತೆರಳುವರು. ಜೂನ್ 03 ರಂದು ಬೆಳಿಗ್ಗೆ 08 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯವಾದ ಬಳಿಕ ಆಯಾ ತಾಲ್ಲೂಕು ತಹಶೀಲ್ದಾರರ ಕಚೇರಿಯಲ್ಲಿ ಡಿ-ಮಸ್ಟರಿಂಗ್ ಕಾರ್ಯವನ್ನು ಕೈಗೊಂಡು, ಬಳ್ಳಾರಿಯ ತಹಶೀಲ್ದಾರರ ಕಚೇರಿಗೆ ಎಲ್ಲಾ ಮತದಾನ ಕೇಂದ್ರಗಳ ಮತಪೆಟ್ಟಿಗೆ ಮತ್ತು ದಾಖಲಾತಿಗಳನ್ನು ತೆಗೆದುಕೊಂಡು ಸಂಗ್ರಹಿಸಿಡಲಾಗುವುದು ಎಂದು ಹೇಳಿದರು.
ನೋಂದಾಯಿತ ಪದವೀಧರ ಮತದಾರರಿಗೆ ಈಗಾಗಲೇ ಮತಗಟ್ಟೆ ಕೇಂದ್ರ ಮಾಹಿತಿ, ಮತದಾನದ ದಿನ ವಿವರ ಸೇರಿ ಕ್ಯೂಆರ್ ಕೋಡ್ ಒಳಗೊಂಡ ಮತದಾರ ಚೀಟಿಗಳನ್ನು ವಿತರಿಸಲಾಗಿದೆ ಮತ್ತು ಸಂಬಂಧಪಟ್ಟ ಮತದಾರರ ಮೊಬೈಲ್ ಸಂಖ್ಯೆಗೂ ಎಸ್‍ಎಂಎಸ್ ಮೂಲಕ ಮಾಹಿತಿ ರವಾನಿಸಲಾಗಿದೆ ಎಂದರು.
ಮತದಾನ ಕೇಂದ್ರಗಳ ಬಗ್ಗೆ ಹಾಗೂ ಮತದಾರರ ಪಟ್ಟಿಯಲ್ಲಿ ಪದವೀಧರ ಮತದಾರರ ಹೆಸರುಗಳು ನೋಂದಣಿಯಾಗಿರುವ ಬಗ್ಗೆ ಮತದಾರರಿಗೆ ಮಾಹಿತಿ ನೀಡಲು ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ಮತ್ತು ಎಲ್ಲಾ ತಾಲ್ಲೂಕು ತಹಶೀಲ್ದಾರರ ಕಚೇರಿಗಳಲ್ಲಿ ಮತದಾರರ ಸೌಲಭ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದರು.
*ಮತದಾರರ ಸೌಲಭ್ಯ ಕೇಂದ್ರದ ದೂರವಾಣಿ ಸಂಖ್ಯೆಗಳ ವಿವರ:*
ಜಿಲ್ಲಾಧಿಕಾರಿಗಳ ಕಚೇರಿ- ದೂ.08392-277100, ಬಳ್ಳಾರಿ ತಹಶೀಲ್ದಾರರ ಕಚೇರಿ- ದೂ.08392-297472, ಸಂಡೂರು ತಹಶೀಲ್ದಾರರ ಕಚೇರಿ- ದೂ.08395-260241, ಸಿರುಗುಪ್ಪ ತಹಶೀಲ್ದಾರರ ಕಚೇರಿ- ದೂ.08396-220238, ಕುರುಗೋಡು ತಹಶೀಲ್ದಾರರ ಕಚೇರಿ- ದೂ.08393-200014, ಕಂಪ್ಲಿ ತಹಶೀಲ್ದಾರರ ಕಚೇರಿ- ದೂ.08394-295554 ಗೆ ನೋಂದಣಿಯಾಗಿರುವ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಬಗ್ಗೆ ಮಾಹಿತಿ ಪಡೆಯಲು ಮತ್ತು ಮತದಾನ ಕೇಂದ್ರಗಳ ಮಾಹಿತಿ ಪಡೆಯಲು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ವಿಧಾನ ಪರಿಷತ್ ಚುನಾವಣೆಯು ಬ್ಯಾಲೆಟ್ ಪೇಪರ್ ಮತದಾನ ಪ್ರಕ್ರಿಯೆ ಆಗಿದ್ದು, ಅದರ ವ್ಯಾಲಿಡ್ ಮತ್ತು ಇನ್ ವ್ಯಾಲಿಡ್ ಮತಪತ್ರದ ಬಗ್ಗೆ ಮತ್ತು ಹೇಗೆ ಮತದಾನ ಚಲಾಯಿಸಬೇಕು ಎನ್ನುವುದರ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ನೋಂದಾಯಿತರಾದ ಎಲ್ಲಾ ಪದವೀಧರ ಮತದಾರರು ಜೂನ್ 03 ರಂದು ತಪ್ಪದೇ ನಿಗದಿತ ಮತದಾನ ಕೇಂದ್ರಗಳಿಗೆ ತೆರಳಿ ಮತ ಚಲಾಯಿಸಬೇಕು. ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಯನ್ನು ಯಶಸ್ವಿಗೊಳಿಸಬೇಕು ಎಂದರು.
ಈ ವೇಳೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಪಿ.ರವಿಕುಮಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
--------
ತಂಬಾಕು ತ್ಯಜಿಸಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ನ್ಯಾ.ರಾಜೇಶ್.ಎನ್ ಹೊಸಮನೆ
ಬಳ್ಳಾರಿ, ಮೇ 31(ಕರ್ನಾಟಕ ವಾರ್ತೆ):
ತಂಬಾಕು ಸೇವನೆ ಜೀವನಕ್ಕೆ ಮಾರಕವಾಗಿದ್ದು, ತಂಬಾಕು ತ್ಯಜಿಸಿ ಸದೃಢ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನೆ ಅವರು ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಮತ್ತು ಜಿಲ್ಲಾ ಆಸ್ಪತ್ರೆ ಇವರ ಸಹಯೋಗದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಹಾಗೂ ಗುಲಾಬಿ ಆಂದೋಲನ ಅಂಗವಾಗಿ ಶುಕ್ರವಾರದಂದು ನಗರದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಏರ್ಪಡಿಸಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ತಮ ರಾಷ್ಟ್ರ ಕಟ್ಟುವಲ್ಲಿ ಯುವ ಪೀಳಿಗೆಯ ಪಾತ್ರ ಬಹಳ ಮುಖ್ಯವಾಗಿದ್ದು, ಯುವಕರು ತಂಬಾಕು ಪದಾರ್ಥಗಳಿಗೆ ಬಲಿಯಾಗದೇ, ಅವುಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ತಂಬಾಕು ಸೇವನೆಯಿಂದಾಗಿ ಭಾರತಲ್ಲಿ ಪ್ರತಿ 7 ನಿಮಿಷಕ್ಕೊಮ್ಮೆ 2500 ಮಂದಿ ಸಾವನ್ನಪ್ಪಿದರೆ, ವಿಶ್ವದಲ್ಲಿ ಪ್ರತಿ 6 ಸೆಕೆಂಡ್‍ಗೆ ಒಬ್ಬರು ತಂಬಾಕು ಸೇವನೆಯಿಂದ ಮಾರಕ ಖಾಯಿಲೆಗೆ ತುತ್ತಾಗಿ ಅಸುನೀಗುತ್ತಿದ್ದಾರೆ ಎಂದು ವಿಷಾದಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅಧ್ಯಕ್ಷತೆ ವಹಿಸಿ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್, ಕ್ಷಯರೋಗ, ಸ್ಟ್ರೋಕ್ಸ್‍ನಂತಹ ಗಂಭೀರ ಖಾಯಿಲೆಗಳಿಗೆ ತುತ್ತಾಗುವ ಸಂಭವವಿದ್ದು, 15-25 ವರ್ಷದ ವಯೋಮಾನದವರು ತಂಬಾಕು ವಸ್ತುಗಳಿಂದ ದೂರವಿರಬೇಕು ಎಂದರು.
ಧೂಮಪಾನ ಮಾಡುವವರಿಗಿಂತ ಹೆಚ್ಚಾಗಿ ಅಸುಪಾಸು ಇರುವವರು ಹೊಗೆ ಸೇವನೆಯಿಂದಲೇ ಅತ್ಯಂತ ಪರಿಣಾಮ ಬೀರುತ್ತದೆ. ಹಾಗಾಗಿ ಧೂಮಪಾನ ಸೇವನೆ ಮಾಡುವರು ಮನೆಯಲ್ಲಿ ಹಾಗೂ ಸಾರ್ವಜನಿಕರ ಸ್ಥಳಗಳಲ್ಲಿ ಧೂಮಪಾನ ಸೇವನೆ ಮಾಡದಂತೆ ಎಚ್ಚರವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಮಾತನಾಡಿ, ತಂಬಾಕು ದೇಹಕ್ಕೆ ಶತ್ರುವಾಗಿದ್ದು, ಹಲವಾರು ರೋಗಗಳಿಗೆ ಕಾರಣವಾಗುತ್ತದೆ. ಯುವಕರು ಕ್ಷಣಿಕ ಸಂತೃಪ್ತಿಗಾಗಿ ತಮ್ಮ ಅತ್ಯಮೂಲ್ಯ ಜೀವನದ ಮೇಲೆ ಅಡ್ಡ ಪರಿಣಾಮ ಬೀಳದಂತೆ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ತಂಬಾಕು ನಿಯಂತ್ರಣಾ ಕೋಶದ ನಿಯಂತ್ರಣಾಧಿಕಾರಿ ಡಾ.ಮರಿಯಂಬಿ ಅವರು ಪ್ರಾಸ್ತವಿಕವಾಗಿ ಮಾತನಾಡಿ, ತಂಬಾಕು ವ್ಯಸನದಿಂದ ಪ್ರತಿಯೊಬ್ಬರೂ ದೂರ ಉಳಿಯಬೇಕು. ಮಕ್ಕಳು, ಯುವಕರು ತಂಬಾಕು ವ್ಯಸನಗಳಿಗೆ ಒಳಗಾಗಬಾರದು. ಅತಿಹೆಚ್ಚಾಗಿ ಇಂದಿನ ಯುವಪೀಳಿಗೆಯು ಧೂಮಪಾನಕ್ಕೆ ತುತ್ತಾಗುತ್ತಿದ್ದು, ಧೂಮಪಾನದಿಂದ ಉಂಟಾಗಬಹುದಾದ ಪರಿಣಾಮ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 20 ರಲ್ಲಿ ರೋಗಿಗಳಿಗೆ ಶ್ವಾಸಕೋಶ ಪರೀಕ್ಷೆ ಕೈಗೊಳ್ಳಲಾಗುತ್ತದೆ ಮತ್ತು ತಂಬಾಕು ತ್ಯಜಿಸುವ ಕುರಿತು ಆಪ್ತ ಸಮಾಲೋಚನೆ ನಡೆಸಲಾಗುತ್ತದೆ. ದುಶ್ಚಟಗಳಿಗೆ ಒಳಗಾದವರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಜಾಥಾ ಮಾರ್ಗ ಮಧ್ಯದಲ್ಲಿ ಗುಲಾಬಿ ಆಂದೋಲನ ಅಂಗವಾಗಿ ಸಾರ್ವಜನಿಕರಿಗೆ ಗುಲಾಬಿ ಹೂ ವಿತರಿಸಲಾಯಿತು ಮತ್ತು ಕೋಟ್ಪಾ ಕಾಯ್ದೆ ಉಲ್ಲಂಘಿಸಿದವರಿಗೆ ಸ್ಥಳದಲ್ಲಿಯೇ ದಂಡ ವಿಧಿಸಲಾಯಿತು.
ಈ ಸಂದರ್ಭದಲ್ಲಿ ಡಿಎಲ್‍ಒ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ವಿ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ನರ್ಸಿಂಗ್ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
-------
ವಿಜಯಕುಮಾರ ಜಂಗಣ್ಣನವರ್ ಪಿಎಚ್.ಡಿ ಪ್ರದಾನ
ಬಳ್ಳಾರಿ,ಮೇ 31(ಕರ್ನಾಟಕ ವಾರ್ತೆ):
ಇಲ್ಲಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ ವಿಜಯಕುಮಾರ ಡಿ. ಜಂಗಣ್ಣನವರ್ ಅವರು ಮಂಡಿಸಿದ ‘ಸ್ಪೆÀಕ್ಟ್ರೋಸ್ಕೋಪಿಕ್ ಸ್ಟಡೀಸ್ ಆನ್ ದಿ ಇಂಟರ್ಯಾಕ್ಷನ್ ಆಫ್ ನ್ಯಾನೋಪಾರ್ಟಿಕಲ್ಸ್ ವಿಥ್ ಆಗ್ರ್ಯಾನಿಕ್ ಮಾಲಿಕ್ಯೂಲ್ಸ್’ ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ. ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕೊಟ್ರೇಶ್ ಎಂ.ಜಿ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಸಿದ್ಧಪಡಿಸಿದ್ದರು.
--------
ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆ; ಮತದಾರರ ಸಹಾಯವಾಣಿ ಕೇಂದ್ರ ಸ್ಥಾಪನೆ
ಬಳ್ಳಾರಿ,ಮೇ 30(ಕರ್ನಾಟಕ ವಾರ್ತೆ):
ಈಶಾನ್ಯ ಕರ್ನಾಟಕ ಪದವೀಧರರ ಕ್ಷೇತ್ರ ಚುನಾವಣೆಗೆ ಜೂನ್ 03 ರಂದು ಮತದಾನ ನಡೆಯಲಿದ್ದು, ಚುನಾವಣೆಗೆ ಸಂಬಂಧ ಮತದಾರರು ತಮ್ಮ ಮತದಾನ ಕೇಂದ್ರ, ಮತದಾರರ ಪಟ್ಟಿಯ ಭಾಗದ ಸಂಖ್ಯೆ ಮತ್ತು ಕ್ರಮ ಸಂಖ್ಯೆಯ ವಿವರಗಳನ್ನು ತಿಳಿದುಕೊಳ್ಳಲು ಜಿಲ್ಲಾ ಮತ್ತು ತಾಲ್ಲೂಕುವಾರು ಮತದಾರರ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಜಿಲ್ಲೆ, ತಾಲ್ಲೂಕುವಾರು ಸಹಾಯವಾಣಿ ಸಂಖ್ಯೆ:
ಜಿಲ್ಲಾಧಿಕಾರಿಗಳ ಕಚೇರಿ- ದೂ.08392-277100, ಬಳ್ಳಾರಿ ತಹಶೀಲ್ದಾರರ ಕಚೇರಿ- ದೂ.08392-297472, ಸಂಡೂರು ತಹಶೀಲ್ದಾರರ ಕಚೇರಿ- ದೂ.08395-260241, ಸಿರುಗುಪ್ಪ ತಹಶೀಲ್ದಾರರ ಕಚೇರಿ- ದೂ.08396-220238, ಕುರುಗೋಡು ತಹಶೀಲ್ದಾರರ ಕಚೇರಿ- ದೂ.08393-200014, ಕಂಪ್ಲಿ ತಹಶೀಲ್ದಾರರ ಕಚೇರಿ- ದೂ.08394-295554 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
—————
ಗುರುವಾರ, ಮೇ 30, 2024
ಭೂ ಒಡೆತನ ಯೋಜನೆಯಡಿ ಜಮೀನು ಖರೀದಿ; ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ಅವಕಾಶ
ಬಳ್ಳಾರಿ,ಮೇ 30(ಕರ್ನಾಟಕ ವಾರ್ತೆ):
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ವತಿಯಿಂದ ಭೂ ಒಡೆತನ ಯೋಜನೆಯಡಿ ಪರಿಶಿಷ್ಟ ಪಂಗಡದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ಉದ್ದೇಶಿಸಲಾಗಿದ್ದು, ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ನಡವಿ ಮತ್ತು ಮೈಲಾಪುರ ಗ್ರಾಮದಲ್ಲಿನ ಜಮೀನುಗಳನ್ನು ಐದು ಜನ ಭೂಮಾಲೀಕರು ತಮ್ಮ ಜಮೀನುಗಳನ್ನು ನಿಗಮಕ್ಕೆ ಮಾರಾಟ ಮಾಡಲು ಒಪ್ಪಿಗೆ ಸಲ್ಲಿಸಿರುತ್ತಾರೆ. ಜಮೀನುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಏನಾದರೂ ಅಕ್ಷೇಪಣೆಗಳಿದ್ದಲ್ಲಿ ಜೂನ್ 15 ರೊಳಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಲಿಖಿತವಾಗಿ ಅಕ್ಷೇಪಣೆ ಸಲ್ಲಿಸಬಹುದು.
ಸಾರ್ವಜನಿಕರಿಂದ ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ವ್ಯಕ್ತಿ ಕಾಣೆ; ಪ್ರಕರಣ ದಾಖಲು
ಬಳ್ಳಾರಿ,ಮೇ 30(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ಹಾಗಲೂರು ಗ್ರಾಮದ ಭೀರಪ್ಪ ಗುಡಿ ಹತ್ತಿರದ 2ನೇ ವಾರ್ಡ್‍ನ ನಿವಾಸಿಯಾದ ವೆಂಕಟೇಶಲು ಎನ್ನುವ 57 ವರ್ಷದ ವ್ಯಕ್ತಿ ಮೇ 29 ರಂದು ಕಾಣೆಯಾಗಿರುವ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಬ್ ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಚಹರೆ ಗುರುತು: ಅಂದಾಜು 5.2 ಅಡಿ, ಕೋಲುಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ತುಂಬು ತೋಳಿನ ಅಂಗಿ ಮತ್ತು ಬಿಳಿ ಪಂಚೆ, ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಟರ್ಕಿ ಟವಲ್ ಧರಿಸಿರುತ್ತಾನೆ. ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.
ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಿರಿಗೇರಿ ಪೊಲೀಸ್ ಠಾಣೆಯ ದೂ.08396-24446, 9480803056 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ
ಬಳ್ಳಾರಿ,ಮೇ 30(ಕರ್ನಾಟಕ ವಾರ್ತೆ):
ತಾಲ್ಲೂಕಿನ ಹಲಕುಂದಿ ಗ್ರಾಮದ ಬಳ್ಳಾರಿ-ಬೆಂಗಳೂರು ರಾ.ಹೆ.151ಎ ಹೊಸಬೈಪಾಸ್ ರಸ್ತೆಯಲ್ಲಿ ಬರುವ ಹೊಸ ಬಸ್‍ನಿಲ್ದಾಣದ ಪಕ್ಕದ ಮಣ್ಣಿನ ಕಾಲುವೆಯ ತಗ್ಗಿನಲ್ಲಿ ಅಂದಾಜು 35-40 ವರ್ಷದ ಅನಾಮಧೇಯ ಮೃತ ವ್ಯಕ್ತಿಯ ಶವವು ಮೇ 29 ರಂದು ಪತ್ತೆಯಾಗಿದ್ದು, ಮೃತನ ವಾರಸುದಾರನ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಚಹರೆ ಗುರುತು: ಎತ್ತರ ಸುಮಾರು 5.4 ಇಂಚು, ಕೋಲುಮುಖ, ಗೋಧಿಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಅಂದಾಜು 3 ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು, ಕುರುಚಲು ಹೊಂದಿದ್ದು, ಬಲಗೈಯಲ್ಲಿ ಒಂದು ಸ್ಟೀಲ್ ಕಡಗ, ಎಡಗೈ ಬೆರಳಲ್ಲಿ ಬೆಳ್ಳಿ ಲೋಹದ ಉಂಗುರ ಇದ್ದು, ಮೈಮೇಲೆ ಅರಿಶಿಣ ಮತ್ತು ಕೆಸರಿ ಮಿಶ್ರಿತ ಬಣ್ಣದ ಉಡುದಾರ ಇರುತ್ತದೆ.
ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಪಿಐ ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಲು ಮನವಿ
ಬಳ್ಳಾರಿ,ಮೇ 30(ಕರ್ನಾಟಕ ವಾರ್ತೆ):
ಪ್ರಸ್ತಕ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ನೋಂದಾಯಿಸಲು ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ತಿರುಮಲೇಶ್ ಅವರು ತಿಳಿಸಿದ್ದಾರೆ.
ಈ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದ ಬೆಳೆಗಳಾದ ಭತ್ತ, ಮುಸುಕಿನ ಜೋಳ ಹಾಗೂ ಹೋಬಳಿ ಮಟ್ಟದ ಬೆಳೆಗಳಾದ ಜೋಳ, ರಾಗಿ, ಸಜ್ಜೆ, ನವಣೆ, ತೊಗರಿ, ಹುರುಳಿ, ಸೂರ್ಯಕಾಂತಿ, ಎಳ್ಳು, ಹತ್ತಿ, ನೆಲಗಡಲೆ, ಈರುಳ್ಳಿ, ಭತ್ತ, ಕೆಂಪು ಮೆಣಸಿನಕಾಯಿ ಬೆಳೆಗಳಿಗೆ ವಿಮೆಯನ್ನು ಮಾಡಿಸಿಕೊಳ್ಳಬೇಕು.
*ಬೆಳೆ ವಿಮೆಯನ್ನು ಮಾಡಿಸಲು ವಿವಿಧ ಬೆಳೆಗಳಿಗೆ ಕೊನೆಯ ದಿನಾಂಕ ಇಂತಿವೆ:* ಮುಸುಕಿನ ಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, ಕೆಂಪು ಮೆಣಸಿನಕಾಯಿ, ಈರುಳ್ಳಿ ಮತ್ತು ಎಳ್ಳು ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ.
ಭತ್ತ, ತೊಗರಿ, ರಾಗಿ, ನವಣೆ, ಹುರುಳಿ, ನೆಲಗಡಲೆ ಮತ್ತು ಸಜ್ಜೆ ಬೆಳೆಗಳಿಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನ ಮತ್ತು ಎಳ್ಳು ಬೆಳೆಗೆ ವಿಮೆ ಮಾಡಲು ಜುಲೈ 15 ಕೊನೆಯ ದಿನವಾಗಿದೆ.
ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್, ಸಾರ್ವಜನಿಕ ಸೇವಾ ಕೇಂದ್ರ ಮತ್ತು ಗ್ರಾಮಪಂಚಾಯತ್‍ಗಳಲ್ಲಿ ಹೊಸದಾಗಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಒನ್ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
ಬೆಳೆ ಸಾಲ ಪಡೆದ ರೈತರು ಇಚ್ಛೆ ಪಡದೇ ಇದ್ದಲ್ಲಿ ತಮ್ಮ ವ್ಯಾಪ್ತಿಯ ಬ್ಯಾಂಕಿನ ವ್ಯವಸ್ಥಾಪಕರಿಗೆ ಬೆಳೆ ನೋಂದಣಿ ಅಂತಿಮ ದಿನಾಂಕಕ್ಕಿಂತ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮುಚ್ಛಳಿಕೆ ಪತ್ರವನ್ನು ನೀಡಿದಲ್ಲಿ ಅಂತಹ ರೈತರನ್ನು ಬೆಳೆ ವಿಮೆ ಯೋಜನೆಯಿಂದ ಕೈಬಿಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಜೂ.03 ರಂದು ವಿಧಾನ ಪರಿಷತ್ ಚುನಾವಣೆ: ವಿಶೇಷ ಸಾಂದರ್ಭಿಕ ರಜೆ ಮಂಜೂರು
ಬಳ್ಳಾರಿ,ಮೇ 30(ಕರ್ನಾಟಕ ವಾರ್ತೆ):
ಜೂನ್ 03 ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವ ಎಲ್ಲಾ ಪದವೀಧರ ಮತದಾರರಿಗೆ ಮತದಾನ ಮಾಡಲು ಜೂನ್ 03 ರಂದು ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ರಾಜ್ಯ ಸರ್ಕಾರವು ಅಧಿಸೂಚನೆ ಹೊರಡಿಸಿದೆ.
ವಿಧಾನ ಪರಿಷತ್ ಮತ ಕ್ಷೇತ್ರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನ ರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಾರ್ಖಾನೆಗಳು, ಉಳಿದ ಕೈಗಾರಿಕೆ ಸಂಸ್ಥೆಗಳು ಹಾಗೂ ಸಹಕಾರ ರಂಗದ ಸಂಘ ಸಂಸ್ಥೆಗಳು, ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳಲ್ಲಿ ಮತ್ತು ಇತರ ಎಸ್ಟಾಬ್ಲಿಷ್‍ಮೆಂಟ್‍ಗಳಲ್ಲಿ ಖಾಯಂ ಆಗಿ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುವ ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸುವ ಮತದಾರರಿಗೆ ಜೂನ್ 03 ಸೋಮವಾರದಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವಂತೆ ಸಿಆಸು ಇಲಾಖೆಯ ಅಧೀನ ಕಾರ್ಯದರ್ಶಿ-1 ವಿಜಯ್‍ಕುಮಾರ್ ಹೆಚ್.ಬಿ ಅವರು ಆದೇಶ ಹೊರಡಿಸಿದ್ದಾರೆ.
*ಕ್ಷೇತ್ರ ಮತ್ತು ವ್ಯಾಪ್ತಿಗೊಳಪಡುವ ಜಿಲ್ಲೆಗಳು:*
ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಬೀದರ್, ಗುಲ್ಬರ್ಗ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ (ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಒಳಗೊಂಡಂತೆ).
ಕರ್ನಾಟಕ ನೈರುತ್ಯ ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಶಿವಮೊಗ್ಗ (ದಾವಣಗೆರೆ ಜಿಲ್ಲೆಯ ಚನ್ನಗಿರಿ ಮತ್ತು ಹೊನ್ನಾಳಿ ತಾಲ್ಲೂಕುಗಳನ್ನೊಳಗೊಂಡಂತೆ) ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು.
ಬೆಂಗಳೂರು ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಚಿತ್ರದುರ್ಗ, ದಾವಣಗೆರೆ (ಚನ್ನಗಿರಿ, ಹೊನ್ನಾಳಿ ಮತ್ತು ಹರಪನಹಳ್ಳಿ ತಾಲ್ಲೂಕುಗಳನ್ನು ಹೊರತುಪಡಿಸಿ) ತುಮಕೂರು ಮತ್ತು ಕೋಲಾರ.
ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಶಿವಮೊಗ್ಗ (ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳನ್ನೊಳಗೊಂಡಂತೆ), ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು.
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ಮೈಸೂರು, ಚಾಮರಾಜ ನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತವೆ.
--------
ಬುಧವಾರ, ಮೇ 29, 2024
ಮೇ 31 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ):
110ಕೆ.ವಿ ಮೋಕಾ-ಮೀನಹಳ್ಳಿ ಮಾರ್ಗದ ಲಿಲೋ ನಿರ್ಮಾಣ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ 110/11ಕೆ.ವಿ ಮೀನಹಳ್ಳಿ, 110/11ಕೆ.ವಿ ಮೋಕಾ ಮತ್ತು 33/11ಕೆ.ವಿ ಯರ್ರಗುಡಿ ಉಪಕೇಂದ್ರದಲ್ಲಿ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳಲ್ಲಿ ಮೇ 31 ರಂದು ಬೆಳಿಗ್ಗೆ 07 ಗಂಟೆಯಿಂದ ಸಂಜೆ 07 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್‍ಬಾಬು ಅವರು ತಿಳಿಸಿದ್ದಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:*
ಎಫ್-1 ಬಿ.ಡಿ.ಹಳ್ಳಿ ಐಪಿ ಮಾರ್ಗದ ಮೋಕಾ, ಬಿ.ಡಿ.ಹಳ್ಳಿ ಕೃಷಿ ಪ್ರದೇಶಗಳು. ಎಫ್-2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಗೋಟೂರು, ಕೆ.ಕೆ.ಹಾಳ್, ಮಸೀದಿಪುರ, ವಣೆನೂರು, ಗುಡುದೂರು ಗ್ರಾಮಗಳು. ಎಫ್-4 ಮೋಕಾ, ಶಿವಪುರ ಐಪಿ ಮಾರ್ಗದ ಶಿವಪುರ, ಅಶೋಕನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ, ಸಂಗನಕಲ್ಲು, ಚಾಗನೂರು ಕೃಷಿ ಪ್ರದೇಶಗಳು. ಎಫ್-5 ವಾಟರ್ ವಕ್ರ್ಸ್ ಮಾರ್ಗದ ಶಿವಪುರ ವಾಟರ್ ವಕ್ರ್ಸ್.
ಎಫ್-12 ಬಸರಕೋಡು ಎನ್.ಜೆ.ವೈ ಮಾರ್ಗದ ಗೋಟೂರು, ಕೆ.ಕೆಹಾಳ್, ಮಸೀದಿಪುರ, ವಣೆನೂರು, ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಗ್ರಾಮಗಳು. ಎಫ್-13 ಬಸರಕೋಡು ಐಪಿ ಮಾರ್ಗದ ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಕೃಷಿ ಪ್ರದೇಶಗಳು. ಎಫ್-14 ಕಪ್ಪಗಲ್ಲು ಮತ್ತು ಸೋಲಾರ್ ಮಾರ್ಗದ ಶಿವಪುರ, ಅಶೋಕ ನಗರ ಕ್ಯಾಂಪ್, ಕಪ್ಪಗಲ್ಲು, ಸಿರಿವಾರ, ಚಾಗನೂರು ಗ್ರಾಮಗಳು.
ಎಫ್-15 ಮೋಕಾ ಮತ್ತು ಸೋಲಾರ್ ಮಾರ್ಗದ ಮೋಕಾ ಮತ್ತು ಬಿ.ಡಿ.ಹಳ್ಳಿ ಗ್ರಾಮಗಳು. ಎಫ್-1 ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಳ್ಳಿ, ಜಾಲಿಚಿಂತೆ ಕೃಷಿ ಪ್ರದೇಶಗಳು. ಎಫ್-2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಳ್ಳಿ ಕೃಷಿ ಪ್ರದೇಶಗಳು. ಎಫ್-3 ಹಳೆ ಯರ್ರಗುಡಿ ಐಪಿ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು ಕೃಷಿ ಪ್ರದೇಶಗಳು.
ಎಫ್-5 ಸಿಂಧುವಾಳ ಮತ್ತು ಸೋಲಾರ್ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು, ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು. ಎಫ್-6 ಜಾಲಿಹಾಳ್ ಐಪಿ ಮಾರ್ಗದ ಎಂ.ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಕೃಷಿ ಪ್ರದೇಶಗಳು. 33ಕೆ.ವಿ ಮಾರ್ಗದ 33 ಕೆ.ವಿ ಎನ್.ಡಿ.ಪಿ.ಎಲ್ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಎಫ್-2 ಚಾಗನೂರು ಐಪಿ ಫೀಡರ್ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ, ಕಾರೆಕಲ್ಲು, ಚಾಗನೂರು ಕೃಷಿ ಪ್ರದೇಶಗಳು. ಎಫ್-1 ಮೀನಹಳ್ಳಿ/ಕೆ.ವೀರಾಪುರ ಎನ್.ಜೆ.ವೈ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ ಕಾರೆಕಲ್ಲು ಗ್ರಾಮ.
ಎಫ್-4 ಎ.ಟಿ.ಪಿ.ಎಸ್ ಚೆಳ್ಳಗುರ್ಕಿ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಗ್ರಾಮ. ಎಫ್-5 ಹಗರಿ ಐಪಿ ಫೀಡರ್ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಕೃಷಿ ಪ್ರದೇಶಗಳು.
ಎಫ್-6 ಫೀಡರ್ ಮಾರ್ಗದ ಎ-ಒನ್ ಕೋಲ್ಡ್ ಸ್ಟೋರೆಜ್, ಮೆ.ಜಾನಕಿ ಕಾರ್ಪೋ,ಪ್ರೈ.ಲಿ, ಮೆ.ಬಸಾಯಿ ಸ್ಟೀಲ್ ಪ್ರೈ.ಲಿ, ಮೆ.ಕ್ಲೀನ್ ಮ್ಯಾಕ್ಸ್ ಸೊಲಾರ್, ಕ್ಲೀನ್ ಸೋಲಾರ್, ಮೆ.ಮೌರ್ಯ ಸೀಲಾಮ್ ಸೋಲಾರ್ ಐ.ಪಿ.ಪಿ ಸೇರಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಕನಿಷ್ಠ ಬೆಂಬಲ ಯೋಜನೆಯಡಿ ಜೋಳ ಖರೀದಿ; ನೋಂದಣಿ ಅವಧಿ ವಿಸ್ತರಣೆ
ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ):
2023-24 ನೇ ಸಾಲಿನಲ್ಲಿ ಬೆಳೆದ ಹಿಂಗಾರು ಋತುವಿನ ಜೋಳ ಬೆಳೆಯನ್ನು ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ ಖರೀದಿ ಮಾಡಲು ನೋಂದಣಿಗೆ ನಿಗದಿ ಪಡಿಸಿದ್ದ ಅವಧಿಯನ್ನು ಜೂನ್ 15 ರ ವರೆಗೆ ವಿಸ್ತರಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಸಕೀನಾ ಅವರು ತಿಳಿಸಿದ್ದಾರೆ.
*ನೋಂದಣಿ ಮತ್ತು ಖರೀದಿ ಅವಧಿ:*
ಕನಿಷ್ಠ ಬೆಂಬಲ ಯೋಜನೆಯಡಿ ಜೋಳ ನೋಂದಣಿಗೆ ಜೂನ್ 15 ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು, ಜೂನ್ 30 ರಂದು ಖರೀದಿ ಮುಕ್ತಾಯದ ಅವಧಿಯಾಗಿದೆ. ಬೆಂಗಳೂರಿನ ರಾಜ್ಯ ಕೃಷಿ ಮಾರಾಟ ಮಂಡಳಿಯು ಖರೀದಿ ಏಜೆನ್ಸಿಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ-2024 | ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಂತೆ 24,183 ಪದವೀಧರ ಮತದಾರರು, 24 ಮತಗಟ್ಟೆ ಕೇಂದ್ರಗಳು
ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ):
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆಗೆ ಸಂಬಂಧ ಅಂತಿಮ ಮತದಾರರ ಪಟ್ಟಿ ಅನ್ವಯ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರಿದ್ದಾರೆ ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
*ಕ್ಷೇತ್ರವಾರು ಮತದಾರರ ವಿವರ:*
91-ಕಂಪ್ಲಿ, 92-ಸಿರುಗುಪ್ಪ, 93-ಬಳ್ಳಾರಿ ಗ್ರಾಮೀಣ, 94-ಬಳ್ಳಾರಿ ನಗರ, 95-ಸಂಡೂರು ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 14,981 ಪುರುಷರು, 9,198 ಮಹಿಳೆಯರು ಮತ್ತು 4 ಜನ ಇತರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರಿದ್ದಾರೆ.
*ಕಂಪ್ಲಿ:*
ಕಂಪ್ಲಿ ಕ್ಷೇತ್ರದಲ್ಲಿ 2,568 ಪುರುಷರು, 1,170 ಮಹಿಳೆಯರು ಸೇರಿ ಒಟ್ಟು 3,738 ಪದವೀಧರ ಮತದಾರರು.
*ಸಿರುಗುಪ್ಪ:*
ಸಿರುಗುಪ್ಪ ಕ್ಷೇತ್ರದಲ್ಲಿ 2,522 ಪುರುಷರು, 921 ಮಹಿಳೆಯರು ಸೇರಿ ಒಟ್ಟು 3,443 ಪದವೀಧರ ಮತದಾರರು.
*ಬಳ್ಳಾರಿ ಗ್ರಾಮೀಣ:*
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 3,098 ಪುರುಷರು, 2,030 ಮಹಿಳೆಯರು ಮತ್ತು 01 ಇತರೆ ಸೇರಿ ಒಟ್ಟು 5,129 ಪದವೀಧರ ಮತದಾರರು.
*ಬಳ್ಳಾರಿ ನಗರ:*
ಬಳ್ಳಾರಿ ನಗರ ಕ್ಷೇತ್ರದಲ್ಲಿ 4,552 ಪುರುಷರು, 3,681 ಮಹಿಳೆಯರು ಮತ್ತು 02 ಇತರೆ ಸೇರಿ ಒಟ್ಟು 8,235 ಪದವೀಧರ ಮತದಾರರು.
*ಸಂಡೂರು:*
ಸಂಡೂರು ಕ್ಷೇತ್ರದಲ್ಲಿ 2,241 ಪುರುಷರು, 1,396 ಮಹಿಳೆಯರು ಮತ್ತು 01 ಇತರೆ ಸೇರಿ ಒಟ್ಟು 3,638 ಪದವೀಧರ ಮತದಾರರು.
*24 ಮತಗಟ್ಟೆ ಕೇಂದ್ರಗಳು:*
ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಒಟ್ಟು 24 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
*ಕಂಪ್ಲಿ:*
ಕಂಪ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಪ್ಲಿ ಪಟ್ಟಣದ ಪುರಸಭೆ ಕಚೇರಿಯಲ್ಲಿ 02 ಮತಗಟ್ಟೆ ಕೇಂದ್ರಗಳು, ಕುರುಗೋಡು ಪಟ್ಟಣದ ಅಂಗನವಾಡಿ ಕೇಂದ್ರ ಮತ್ತು ಕೋಳೂರು ಗ್ರಾಮದ ಗ್ರಾಮಪಂಚಾಯತ್ ಕಚೇರಿ ಸೇರಿ ಒಟ್ಟು 04 ಮತಗಟ್ಟೆ ಕೇಂದ್ರಗಳು.
*ಸಿರುಗುಪ್ಪ:*
ಸಿರುಗುಪ್ಪ ಕ್ಷೇತ್ರ ವ್ಯಾಪ್ತಿಯಲ್ಲಿ ಹಚ್ಚೋಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ, ಸಿರುಗುಪ್ಪ ಪಟ್ಟಣದ ಸರ್ಕಾರಿ ಪ್ರೌಢಶಾಲೆ, ತೆಕ್ಕಲಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಕರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಸೇರಿ 04 ಮತಗಟ್ಟೆ ಕೇಂದ್ರಗಳು.
*ಬಳ್ಳಾರಿ ಗ್ರಾಮೀಣ:*
ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಮೋಕಾದ ಗ್ರಾಮಪಂಚಾಯತ್ ಕಚೇರಿ, ಬಳ್ಳಾರಿಯ ಕೌಲ್‍ಬಜಾರ್‍ನ ಸೆಂಟ್ ಜೋಸೆಫ್ ಪ್ರೌಢಶಾಲೆಯ 4ನೇ ತರಗತಿ ಕೊಠಡಿ, 5 ನೇ ತರಗತಿ ಕೊಠಡಿ ಹಾಗೂ 6ನೇ ತರಗತಿ ಕೊಠಡಿ ಮತ್ತು ರೂಪನಗುಡಿ ಗ್ರಾಮಪಂಚಾಯತ್ ಕಚೇರಿ ಸೇರಿ 05 ಮತಗಟ್ಟೆ ಕೇಂದ್ರಗಳು.
*ಬಳ್ಳಾರಿ ನಗರ:*
ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಳ್ಳಾರಿ ನಗರದ ಅಂಬಲಿಬಾಗ್‍ನ ಅಂಚೆ ಕಚೇರಿ ಹತ್ತಿರದ ಸರ್ಕಾರಿ ಬಾಲಕೀಯರ ಕಾಲೇಜಿನ ಕೊಠಡಿ ಸಂಖ್ಯೆ 42, ಕೊಠಡಿ ಸಂಖ್ಯೆ 43, ಕೊಠಡಿ ಸಂಖ್ಯೆ 44, ಎಸ್.ಎನ್.ಪೇಟೆ ಮುಖ್ಯ ರಸ್ತೆಯ ಎಸ್‍ಎಸ್‍ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿ ಸಂಖ್ಯೆ 01, ಕೊಠಡಿ ಸಂಖ್ಯೆ 02, ಗಾಂಧಿನಗರದ ಬಾಲಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆಯ ಕೊಠಡಿ ಸಂಖ್ಯೆ 01, ಕೊಠಡಿ ಸಂಖ್ಯೆ 02 ಸೇರಿ ಒಟ್ಟು 07 ಮತಗಟ್ಟೆ ಕೇಂದ್ರಗಳು.
*ಸಂಡೂರು:*
ಸಂಡೂರು ಕ್ಷೇತ್ರ ವ್ಯಾಪ್ತಿಯಲ್ಲಿ ತೋರಣಗಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 01, ಕೊಠಡಿ ಸಂಖ್ಯೆ 02, ಸಂಡೂರು ಪಟ್ಟಣದ ತಾಲ್ಲೂಕು ಕಚೇರಿ ಮತ್ತು ಚೋರನೂರು ಹೋಬಳಿಯ ನಾಡಕಚೇರಿ ಕಾರ್ಯಾಲಯ ಸೇರಿ ಒಟ್ಟು 04 ಮತಗಟ್ಟೆ ಕೇಂದ್ರಗಳು.
‘ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಗೆ ಜೂನ್ 03 ರಂದು ಮತದಾನ ನಡೆಯಲಿದ್ದು, ಈಗಾಗಲೇ ನೋಂದಾಯಿಸಿಕೊಂಡಿರುವ ಎಲ್ಲಾ ಅರ್ಹ ಮತದಾರರು ಅಂದು ತಪ್ಪದೇ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನ ಮಾಡಬೇಕು’ ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ವಿಶ್ವ ತಂಬಾಕು ರಹಿತ ದಿನಾಚರಣೆ; ಮೇ 31 ರಂದು ಜಾಗೃತಿ ಜಾಥ
ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ):
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಘಟಕ ವತಿಯಿಂದ ‘ವಿಶ್ವ ತಂಬಾಕು ರಹಿತ ದಿನಾಚರಣೆ’ ಹಾಗೂ ‘ಗುಲಾಬಿ ಆಂದೋಲನ’ ಅಂಗವಾಗಿ “ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು” ಎಂಬ ಘೋಷವಾಕ್ಯದಡಿ ಮೇ 31 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಜಾಗೃತಿ ಜಾಥ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಅಧಿಕಾರಿ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ತಂಬಾಕು ಉತ್ಪನ್ನಗಳ ಉಪಯೋಗದಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಈ ಜಾಥಾಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಧೀಶರಾದ ರಾಜೇಶ್.ಎನ್ ಹೊಸಮನೆ ಅವರು ಚಾಲನೆ ನೀಡುವರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಯುವತಿ ಕಾಣೆ: ಪತ್ತೆಗೆ ಮನವಿ
ಬಳ್ಳಾರಿ,ಮೇ 29(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ತಾರಾನಗರ ಗ್ರಾಮದ 5 ನೇ ವಾರ್ಡ್‍ನ ನಿವಾಸಿ ವಿದ್ಯಾಶ್ರೀ ಎನ್ನುವ 19 ವರ್ಷದ ಯುವತಿ ಮೇ 22 ರಂದು ಕಾಣೆಯಾಗಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
ಯುವತಿಯ ಚಹರೆ ಗುರುತು: ಎತ್ತರ 5.4 ಅಡಿ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ, ತಲೆಯಲ್ಲಿ ಸುಮಾರು 15 ಇಂಚು ಕಪ್ಪು ಕೂದಲು ಇರುತ್ತದೆ.
ಕಾಣೆಯಾದ ಸಂದರ್ಭದಲ್ಲಿ ಕೆಂಪು ಬಣ್ಣದ ಚೂಡಿದಾರ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ವೇಲ್ ಧರಿಸಿದ್ದು, ಕನ್ನಡ, ಹಿಂದಿ (ಲಂಬಾಣಿ) ಭಾಷೆ ಮಾತನಾಡುತ್ತಾಳೆ.
ಯುವತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಸಂಡೂರು ಪೊಲೀಸ್ ಠಾಣೆಯ ಮೊ.9740604025 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಮಂಗಳವಾರ, ಮೇ 28, 2024
ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಲಭ್ಯ
ಬಳ್ಳಾರಿ,ಮೇ 28(ಕರ್ನಾಟಕ ವಾರ್ತೆ):
ಬಳ್ಳಾರಿ ಹಾಗೂ ಕುರುಗೋಡು ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅವಶ್ಯವಿರುವ ಬಿತ್ತನೆ ಬೀಜಗಳಾದ ತೊಗರಿ, ಸಜ್ಜೆ, ನವಣೆ, ಜೋಳ, ಮೆಕ್ಕೆಜೋಳ, ಶೇಂಗಾ ಮುಂತಾದ ಬಿತ್ತನೆ ಬೀಜಗಳು ದಾಸ್ತಾನೀಕರಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ರೈತರು ಸಹಾಯಧನದಡಿ ಬಿತ್ತನೆ ಬೀಜ ಪಡೆಯಲು ತಮ್ಮ ಆಧಾರ್ ಪ್ರತಿ, ಬ್ಯಾಂಕ್ ಖಾತೆಯ ಪುಸ್ತಕ ಪ್ರತಿ, ಪಹಣಿ ಹಾಗೂ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ರೈತರು ಖಾಸಗಿ ಮಳಿಗೆಯಲ್ಲಿ ಬಿತ್ತನೆ ಬೀಜ ಖರೀದಿಸಿದರೆ ಕಡ್ಡಾಯವಾಗಿ ರಶೀದಿಯನ್ನು ಪಡೆಯಬೇಕು. ಬಿತ್ತನೆ ಬೀಜಗಳನ್ನು ಬಿತ್ತುವ ಮುನ್ನ ಬೀಜೋಪಚಾರ ಮಾಡುವುದರಿಂದ ಮುಂದೆ ಸಂಭವಿಸಬಹುದಾದ ರೋಗ ಹಾಗೂ ಕೀಟಭಾದೆ ತಡೆಗಟ್ಟಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ತಾಯಿ-ಮಗುವಿನ ಸುರಕ್ಷತೆಗೆ ಆಸ್ಪತ್ರೆಯಲಿಯ್ಲೇ ಹೆರಿಗೆ ಮಾಡಿಸಿ: ಡಿಹೆಚ್‍ಒ ಡಾ.ರಮೇಶ್‍ಬಾಬು
ಬಳ್ಳಾರಿ,ಮೇ 28(ಕರ್ನಾಟಕ ವಾರ್ತೆ):
ತಾಯಿ-ಮಗುವಿಗೆ ಆರಂಭಿಕವಾಗಿ ಕಂಡುಬರುವ ಯಾವುದೇ ತೊಂದರೆಗಳನ್ನು ಸಕಾಲದಲ್ಲಿ ಗುರ್ತಿಸಿ ಚಿಕಿತ್ಸೆ ನೀಡಲು ಹಾಗೂ ಶಿಶು ಮರಣ ಮತ್ತು ತಾಯಿ ಮರಣ ತಡೆಗಟ್ಟಲು ಆಸ್ಪತ್ರೆಗಳಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ತಿಳಿಸಿದ್ದಾರೆ.
ಪ್ರಸ್ತುತ ದಿನಗಳಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ನಿರಂತರ ಜಾಗೃತಿ ನೀಡುವ ಮೂಲಕ ಮನೆಯಲ್ಲಿ ಹೆರಿಗೆ ಮಾಡುವ ಪದ್ದತಿ ತಡೆಯುವ ಪ್ರಯತ್ನವನ್ನು ಜಿಲ್ಲಾ ಆರೋಗ್ಯ ಇಲಾಖೆಯು ಮಾಡುತ್ತಿದೆ.
ಇತ್ತೀಚೆಗೆ ಬಳ್ಳಾರಿ ನಗರದ ಕೌಲ್‍ಬಜಾರ್ ವ್ಯಾಪ್ತಿಯಲ್ಲಿ ದಂಪತಿಯೊಬ್ಬರು ಆಸ್ಪತ್ರೆಗೆ ಪರೀಕ್ಷೆ ಮಾಡಿಸಲು ಹೋದಾಗ ಹೆರಿಗೆ ನೋವು ಕಂಡುಬಂದಿದ್ದು, ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುತ್ತೇವೆ ಎಂದು ಸಿಬ್ಬಂದಿಯವರಿಗೆ ತಿಳಿಸಿದಾಗ, ತಕ್ಷಣ ಅಲ್ಲಿಯ ವೈದ್ಯಾಧಿಕಾರಿ ಡಾ.ನರಸಿಂಹ ಮೂರ್ತಿ ಅವರು, ಗರ್ಭಿಣಿಯ ಕುಟುಂಬದ ಸದಸ್ಯರೊಂದಿಗೆ ಆಪ್ತ ಸಮಾಲೋಚನೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದ್ದರು. ರಕ್ತಹೀನತೆ ನಿಯಂತ್ರಣ ಮಾಡುವ ಚುಚ್ಚು ಮದ್ದು ನೀಡಿ, ಮನೆ ಹೆರಿಗೆಯಿಂದ ತಾಯಿ ಮತ್ತು ಮಗುವಿನ ಆರೋಗ್ಯದ ಸಮಸ್ಯೆಗಳ ಜೊತೆಗೆ ಗಂಭೀರ ಸಮಸ್ಯೆಗಳು ಕಂಡುಬರುವ ಸಾಧ್ಯತೆ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವುದು ಸೂಕ್ತ ಎಂದು ತಿಳಿಸಿ ಆಶಾಕಾರ್ಯಕರ್ತೆಯೊಂದಿಗೆ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿಸಿದ್ದರು. ನಂತರ ಹೆರಿಗೆಯಾಗಿದ್ದು ಪ್ರಸ್ತುತ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಬಂಡಿಹಟ್ಟಿ ವ್ಯಾಪ್ತಿಯ ವಟ್ಟಪ್ಪಕೇರಿಯ ಗರ್ಭಿಣಿಯೊಬ್ಬರು ವಿಮ್ಸ್‍ನಲ್ಲಿ ಪರೀಕ್ಷೆಗೆಂದು ತೆರಳಿದಾಗ ಮಗುವಿಗೆ ಕುತ್ತಿಗೆ ಸುತ್ತಲು ಕರಳು ಸುತ್ತಿಕೊಂಡಿರುವ ಕುರಿತು ತಿಳಿಸಿದಾಗ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳುವ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಹಾಗೂ ಗರ್ಭಿಣಿಯು ಆಸ್ಪತ್ರೆಯಲ್ಲಿ ಮಾಹಿತಿ ನೀಡದೇ ಮನೆಗೆ ಬಂದಿದ್ದರು. ವೈದ್ಯಾಧಿಕಾರಿ ಡಾ.ಯಾಸಿನ್ ಅವರು, ಆಶಾಕಾರ್ಯಕರ್ತೆಯರನ್ನು ಮನೆಗೆ ಕಳುಹಿಸಿ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ, ಆಸ್ಪತ್ರೆಗೆ ದಾಖಲು ಮಾಡಿದಾಗ ಮಾತ್ರ ಸಹಜ ಹೆರಿಗೆಯಿಂದ ನಿಮ್ಮ ಹಾಗೂ ಮಗುವಿನ ಕಾಳಜಿ ತೆಗೆದುಕೊಳ್ಳಲು ಸಾಧ್ಯವೆಂದು ಮನವೊಲಿಸಿದ ನಂತರವೇ ಜಿಲ್ಲಾ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿತ್ತು. ಅಲ್ಲಿಯೂ ಅವರು ದಾಖಲಾಗದೇ ಇಲ್ಲದ್ದನ್ನು ಕಂಡು ಗರ್ಭಿಣಿಯ ಮನೆಗೆ ಭೇಟಿ ನೀಡಿ ಪುನಃ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬಂದು ಹೆರಿಗೆ ಮಾಡಿಸಲಾಗಿದ್ದು, ಪ್ರಸ್ತುತ ತಾಯಿ ಮಗು ಆರೋಗ್ಯವಾಗಿದ್ದಾರೆ.
ಈ ಎರಡು ಘಟನೆಗಳಲ್ಲಿ ಪಾಲಕರ ಪಾತ್ರ ಅತ್ಯಂತ ಮಹತ್ವವಾಗಿದ್ದು ಮನೆಯಲ್ಲಿಯೇ ಹೆರಿಗೆ ಮಾಡಿಸುವುದರಿಂದ ತಾಯಿ ಮತ್ತು ಮಗುವಿಗೆ ಸೋಂಕು ಆಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಮನೆ ಹೆರಿಗೆಗಿಂತ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಗುವಿನ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಡಾ.ರಮೇಶ್‍ಬಾಬು ಅವರು ತಿಳಿಸಿದ್ದಾರೆ.
ಮಗುವಿನ ಹೊಟ್ಟೆಯಲ್ಲಿ ಹೊಲಸು ಪದಾರ್ಥ ಸೇರಿಕೊಂಡಿದ್ದರೆ ಅಥವಾ ಉಸಿರಾಟದ ತೊಂದರೆಯಿದ್ದರೆ, ಕರಳು ಬಳ್ಳಿ ಹೊಕ್ಕಳು ಸುತ್ತಲು ಸುತ್ತಿಕೊಂಡಂತಹ ತೊಂದರೆಯಿದ್ದರೆ, ಕಾಲು ಮೇಲಾಗಿ ಹೆರಿಗೆಯಾಗುವ ಸಾಧ್ಯತೆಗಳು ಇದ್ದಾಗ, ಗರ್ಭಿಣಿಯ ಜನನಾಂಗದಲ್ಲಿ ಗಾಯಗಳಾಗಿ ಅಧಿಕ ರಕ್ತಸ್ರಾವ ಆಗುವ ಮೂಲಕ ತಾಯಿ ಮತ್ತು ಮಗುವಿನ ಮರಣ ಸಾಧ್ಯತೆಗಳು ಹೆಚ್ಚಾಗಬಹುದು. ಕರಳು ಬಳ್ಳಿಯನ್ನು ಹಳೆಯದಾದ ಬ್ಲೇಡ್ ಅಥವಾ ಕುಡುಗೋಲಿನಿಂದ ಕತ್ತರಿಸುವ ಅಥವಾ ತರಬೇತಿ ಇಲ್ಲದವರಿಂದ ಹೆರಿಗೆ ಮಾಡಿಸಿದಲ್ಲಿ ಮಗುವಿಗೆ ಸೋಂಕು ಉಂಟಾಗಿ ಮರಣ ಹೊಂದುವ ಸಾಧ್ಯತೆಯಿರುತ್ತದೆ.
ಈ ಹಿನ್ನಲೆಯಲ್ಲಿ ಮನೆಯಲ್ಲಿ ಯಾವುದೇ ಇಂತಹ ಪ್ರಯತ್ನ ಮಾಡದೇ ಇವೆಲ್ಲವುಗಳನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆಯುಳ್ಳ ಸುಸಜ್ಜಿತ ಹೆರಿಗೆ ಕೊಠಡಿ, ಸೋಂಕು ರಹಿತ ಉಪಕರಣಗಳು, ನುರಿತ ವೈದ್ಯರು ಹಾಗೂ ಸಿಬ್ಬಂದಿ, ದಿನದ 24 ಗಂಟೆ ವಿದ್ಯುತ್, ನೀರಿನ ವ್ಯವಸ್ಥೆ, ಸುಸಜ್ಜಿತ ವಾರ್ಡ್, ಪೌಷ್ಠಿಕಾಂಶವುಳ್ಳ ಊಟದ ವ್ಯವಸ್ಥೆ ಎಲ್ಲವುಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕಲ್ಪಿಸಲಾಗಿದೆ.
ಹೆರಿಗೆ ತಕ್ಷಣದಲ್ಲಿ ಮಗುವಿಗೆ ಮಾರಕ ರೋಗಗಳನ್ನು ತಡೆಗಟ್ಟಲು ಬಿಸಿಜಿ ಹಾಗೂ ಪೆÇೀಲಿಯೋ ಹನಿ, ಹೆಪಟೈಟಸ್ ಬಿ ಮತ್ತು ಮಗುವಿನ ದೇಹದ ಒಳಗಡೆ ಆಂತರಿಕವಾಗಿ ರಕ್ತಸ್ರಾವವಾದಲ್ಲಿ ತಡೆಗಟ್ಟಲು ವಿಟಮಿನ್ ಕೆ ಲಸಿಕೆ ಹಾಕುವ ಮೂಲಕ ಮಗುವಿನ ಆರೋಗ್ಯವನ್ನು ಕಾಪಾಡಲು ಸಹಾಯಕವಾಗುತ್ತದೆ. ಈ ದಿಶೆಯಲ್ಲಿ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿಸುವ ಮೂಲಕ ಜಿಲ್ಲೆಯಲ್ಲಿ ಶಿಶು ಮತ್ತು ತಾಯಿ ಆರೋಗ್ಯವನ್ನು ಕಾಪಾಡಲು ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
---------
ಸೋಮವಾರ, ಮೇ 27, 2024
ಲೋಕಸಭೆ ಚುನಾವಣೆ; ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟ
ಬಳ್ಳಾರಿ,ಮೇ 27(ಕರ್ನಾಟಕ ವಾರ್ತೆ):
ಲೋಕಸಭಾ ಸಾರ್ವತ್ರಿಕ ಚುನಾವಣೆ - 2024 ರ ಅಂಗವಾಗಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಮಾಧ್ಯಮ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆ - 2024 ರ ಮತದಾನ ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತದಲ್ಲಿ ಜರುಗಿತ್ತು. ಜಗತ್ತಿನ ಅತಿದೊಡ್ಡ ಪ್ರಜಾಪಭುತ್ವ ದೇಶವಾಗಿರುವ ನಮ್ಮ ಭಾರತದಲ್ಲಿ ಚುನಾವಣೆಯನ್ನು ‘ಪ್ರಜಾಪ್ರಭುತ್ವದ ಹಬ್ಬ'ದಂತೆ ಆಚರಿಸಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆ - 2019 ಹಾಗೂ ಸಾರ್ವತ್ರಿಕ ಕರ್ನಾಟಕ ವಿಧಾನಸಭೆ ಚುನಾವಣೆ-2023 ರ ಸಂದರ್ಭದಲ್ಲಿ ಸಹ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರಿಗಾಗಿ ಮತದಾನದ ವಿಷಯದ ಬಗ್ಗೆ ರಾಜ್ಯ ಮಟ್ಟದ ಛಾಯಾ ಚಿತ್ರಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕಳೆದ ಎರಡು ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಛಾಯಾ ಚಿತ್ರ ಸ್ಪರ್ಧೆಯ ಮೂಲಕ ಚುನಾವಣಾ ಸಂಬಂಧಿತ ಅತ್ಯುತ್ತಮ ಹಾಗೂ ಸಂಗ್ರಹಯೋಗ್ಯ ಛಾಯಾಚಿತ್ರಗಳನ್ನು ಭಾರತ ಚುನಾವಣಾ ಆಯೋಗ ಪ್ರಶಂಸಿವುದರ ಜೊತೆಗೆ, ತನ್ನ ವರದಿ ಹಾಗೂ ಪುಸ್ತಕಗಳ ಮುಖಪುಟಗಳಲ್ಲಿ ನಮ್ಮ ರಾಜ್ಯದ ಈ ಛಾಯಾಚಿತ್ರಗಳನ್ನು ಬಳಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ರಾಜ್ಯಮಟ್ಟದ ಈ ಛಾಯಾಚಿತ್ರ ಸ್ಪರ್ಧೆಯ ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಮಾಧ್ಯಮ ವಿಭಾಗದ ವಿಶೇಷ ಅಧಿಕಾರಿ ಎ.ವಿ.ಸೂರ್ಯಸೇನ್, ಸದಸ್ಯರಾಗಿ ರಾಜ್ಯಮಟ್ಟದ ಸ್ವೀಪ್ ಹಿರಿಯ ಸಮಾಲೋಚಕರಾದ ನಿವೃತ್ತ ಐ.ಎ.ಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಸೇರಿದಂತೆ ವಿವಿಧ ಅಧಿಕಾರಿಗಳನ್ನು ನೇಮಿಸಲಾಗಿತ್ತು.
*ವಿಜೇತರ ಪಟ್ಟಿ ಹಾಗೂ ಬಹುಮಾನಗಳ ವಿವರ:*
ಪ್ರಥಮ ಬಹುಮಾನ(ರೂ.25 ಸಾವಿರ): ಮಂಗಳೂರಿನ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಛಾಯಾಗ್ರಾಹಕ ಹೆಚ್ ಫಕ್ರುದ್ದೀನ್.
ದ್ವಿತೀಯ ಬಹುಮಾನ(ರೂ.15 ಸಾವಿರ): ಬಾಗಲಕೋಟೆಯ ಹಳ್ಳಿ ಸಂದೇಶ ಪತ್ರಿಕೆಯ ಇಂದ್ರಕುಮಾರ್ ಬಿ ದಸ್ತೇನವರ.
ತೃತೀಯ ಬಹುಮಾನ(ರೂ.10 ಸಾವಿರ): ಮೂಡಬಿದಿರೆಯ ಹವ್ಯಾಸಿ ಛಾಯಾಗ್ರಾಹಕ ಜಿನೇಶ್ ಪ್ರಸಾದ್.
ಸಮಾಧಾನಕರ ಬಹುಮಾನ(ರೂ.3 ಸಾವಿರ) ಇಬ್ಬರು ಆಯ್ಕೆ: ಉಡುಪಿಯ ಉದಯವಾಣಿ ಪತ್ರಿಕೆಯ ಅಸ್ಟ್ರೋ ಮೋಹನ್ ಹಾಗೂ ಬೆಂಗಳೂರಿನ ಸಂಜೆ ಸಮಯ ಪತ್ರಿಕೆಯ ಪೂರ್ಣಿಮ ರವಿ.
ವಿಶೇಷ ಬಹುಮಾನ(ರೂ.2,500) ಇಬ್ಬರು ಆಯ್ಕೆ: ಮೈಸೂರಿನ ವಿಜಯವಾಣಿ ಪತ್ರಿಕೆಯ ಕೆ.ಹೆಚ್ ಚಂದ್ರು ಹಾಗೂ ಕಲಬುರಗಿಯ ವಿಜಯ ಕರ್ನಾಟಕ ಪತ್ರಿಕೆಯ ಶಿವಶರಣಪ್ಪ ಬೆನ್ನೂರ್ ಅವರು ವಿಜೇತರಾಗಿದ್ದಾರೆ.
ಪ್ರಸ್ತುತ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ನಿಮಿತ್ತ ರಾಜ್ಯಮಟ್ಟದ ಈ ಸ್ಪರ್ಧೆಯಲ್ಲಿ ಮಾಧ್ಯಮಗಳಲ್ಲಿ ಕಾರ್ಯ ನಿವರ್ಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಾಹಕರು ಸೇರಿ ಒಟ್ಟು 219 ಜನರು ಭಾಗವಹಿಸಿದ್ದರು. ಛಾಯಾಗ್ರಾಹಕರು ತಾವು ತೆಗೆದ ಗರಿಷ್ಠ 5 ಅತ್ಯುತ್ತಮ ಛಾಯಾಚಿತ್ರಗಳನ್ನು ಕಳುಹಿಸಿದ್ದರು. ಅತ್ಯುತ್ತಮ ಛಾಯಾಚಿತ್ರ ತೆಗೆದ ಛಾಯಾಗ್ರಾಹಕರಿಗೆ ಪ್ರಮಾಣ ಪತ್ರ ಹಾಗೂ ನಗದು ಬಹುಮಾನವನ್ನು ನೀಡಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಾದ ಮನೋಜ್ ಕುಮಾರ್ ಮೀನಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
----------
ಬಳ್ಳಾರಿ: ಮಳೆ, ಗಾಳಿಗೆ ವಿದ್ಯುತ್ ಆಡಚಣೆ ಉಂಟಾದರೆ ಈ ಕೆಳಕಂಡ ಅಧಿಕಾರಿಗಳಿಗೆ ಸಂಪರ್ಕಿಸಿ
ಬಳ್ಳಾರಿ,ಮೇ 27(ಕರ್ನಾಟಕ ವಾರ್ತೆ):
ಗ್ರಾಮೀಣ ಜೆಸ್ಕಾಂ ವಿಭಾಗದ ವ್ಯಾಪ್ತಿಯಲ್ಲಿ ಮಳೆಗಾಲ ಸಮಯದಲ್ಲಿ ವಿದ್ಯುತ್ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚಿದ್ದು, ಯಾವುದೇ ವಾಹಕಗಳು ತುಂಡಾಗಿ ಬಿದ್ದಲ್ಲಿ ಮತ್ತು ಕಂಬಗಳು ನೆಲಕ್ಕೆ ಉರುಳಿದ್ದಲ್ಲಿ ವಿದ್ಯುತ್ ಪರಿವರ್ತಕದ ಮೇಲೆ ಬೆಂಕಿ ಕಾಣಿಸಿಕೊಂಡರೆ, ವಿದ್ಯುತ್ ಗ್ರಾಹಕರು ಮುಂಜಾಗ್ರಾತರಾಗಿ ಯಾವುದೇ ವಿದ್ಯುತ್ ಸಂಪರ್ಕಕ್ಕೆ ಹೋಗದೇ ಈ ಕೆಳಕಂಡ ಜೆಸ್ಕಾಂ ಅಧಿಕಾರಿಗಳಿಗೆ ಸಂಪರ್ಕಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಂಗನಾಥಬಾಬು ಅವರು ತಿಳಿಸಿದ್ದಾರೆ.
*ಬಳ್ಳಾರಿ ಗ್ರಾಮೀಣ ಉಪ ವಿಭಾಗ (ಬಳ್ಳಾರಿ ಗ್ರಾಮೀಣ ಮತ್ತು ಕುರುಗೋಡು ತಾಲ್ಲೂಕಿಗೆ ಸಂಬಂಧಪಟ್ಟ):*
ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊ.9448482161, ಘಟಕ-01 (ಕೋಳೂರು, ಕೊರ್ಲಗುಂದಿ, ಹರಗಿನಡೋಣಿ ಭಾಗದ ಗ್ರಾಮಗಳ) ಶಾಖಾಧಿಕಾರಿ ಮೊ.9449597337, ಘಟಕ-02 (ಎಸ್‍ಜೆ ಕೋಟೆ, ಶಂಕರಬಂಡೆ, ಮಿಂಚೇರಿ ಭಾಗದ ಗ್ರಾಮಗಳ) ಶಾಖಾಧಿಕಾರಿ ಮೊ.9449597338, ಘಟಕ-03 (ಗುಗ್ಗರಹಟ್ಟಿ, ಹಲಕುಂದಿ, ಅಂದ್ರಾಳ್ ಭಾಗದ ಗ್ರಾಮಗಳ) ಶಾಖಾಧಿಕಾರಿ ಮೊ.9449597351, ಕುಡತಿನಿ ಶಾಖಾಧಿಕಾರಿ ಮೊ.9449597345, ಮೋಕಾ ಶಾಖಾಧಿಕಾರಿ ಮೊ.9449597346, ಪಿ.ಡಿ ಹಳ್ಳಿ ಶಾಖಾಧಿಕಾರಿ ಮೊ.9449597352, ಕುರುಗೋಡು ಶಾಖಾಧಿಕಾರಿ ಮೊ.9449597347, ಎಮ್ಮಿಗನೂರು ಶಾಖಾಧಿಕಾರಿ ಮೊ.9449597353.
*ಸಂಡೂರು ಉಪ ವಿಭಾಗ (ಸಂಡೂರು ತಾಲ್ಲೂಕಿಗೆ ಸಂಬಂಧಪಟ್ಟ):*
ಸಂಡೂರು ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊ.9448482159, ಸಂಡೂರು ಶಾಖಾಧಿಕಾರಿ ಮೊ.9449597343, ತೋರಣಗಲ್ಲು ಶಾಖಾಧಿಕಾರಿ ಮೊ.9449597344, ಚೋರನೂರು ಶಾಖಾಧಿಕಾರಿ ಮೊ.9449597350, ವಿಠ್ಠಲಾಪುರ ಶಾಖಾಧಿಕಾರಿ ಮೊ.9480846642, ಬಂಡ್ರಿ ಶಾಖಾಧಿಕಾರಿ ಮೊ.9449597350.
*ಸಿರುಗುಪ್ಪ ಉಪ ವಿಭಾಗ (ಸಿರುಗುಪ್ಪ ತಾಲ್ಲೂಕಿಗೆ ಸಂಬಂಧಪಟ್ಟ):*
ಸಿರುಗುಪ್ಪ ಜೆಸ್ಕಾಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೊ.9036502714, ಸಿರುಗುಪ್ಪ ನಗರ ಶಾಖಾಧಿಕಾರಿ ಮೊ.9986382872, ಹಚ್ಚೋಳ್ಳಿ ಶಾಖಾಧಿಕಾರಿ ಮೊ.9900169001, ಸಿರುಗುಪ್ಪ ಗ್ರಾಮೀಣ ಶಾಖಾಧಿಕಾರಿ ಮೊ.9448632907, ತೆಕ್ಕಲಕೋಟೆ ಶಾಖಾಧಿಕಾರಿ ಮೊ.8861297323, ಸಿರಿಗೇರಿ ಶಾಖಾಧಿಕಾರಿ ಮೊ.9743484634.
ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ ಗ್ರಾಮೀಣ ಜೆಸ್ಕಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಮೊ.9448359022 ಹಾಗೂ ಯಾವುದೇ ವಿದ್ಯುತ್ ಕುರಿತ ಸಮಸ್ಯೆ ಅಥವಾ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912 ನಂಬರಿಗೆ ಕರೆ ಮಾಡಿ ತಮ್ಮ ದೂರುಗಳನ್ನು ನೊಂದಾಯಿಸಿಕೊಳ್ಳಬಹುದು ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಂಗನಾಥಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಮೇ 31 ರಂದು ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ
ಬಳ್ಳಾರಿ,ಮೇ 27(ಕರ್ನಾಟಕ ವಾರ್ತೆ):
ನಗರದ ರೇಡಿಯೋ ಪಾರ್ಕ್ ಪ್ರದೇಶದಲ್ಲಿರುವ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 31 ರಂದು ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿನ ಟೊಯೋಟ ಕಿರ್ಲೋಸ್ಕರ ಕಂಪನಿಯಲ್ಲಿ ಅಪ್ರೆಂಟೀಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೆ.ಹೆಚ್.ಎಂ.ಪಂಡಿತಾರಾಧ್ಯ ಅವರು ತಿಳಿಸಿದ್ದಾರೆ.
ಸಂದರ್ಶನದಲ್ಲಿ ಫಿಟ್ಟರ್, ಟರ್ನರ್, ಎಲೆಕ್ಟ್ರಿಷಿಯನ್, ವೆಲ್ಡರ್, ಇ.ಎಂ, ಎಂ.ಎಂ.ವಿ, ಮೆಕ್ಯಾನಿಕ್ ಡೀಸಲ್ ವೃತ್ತಿಗಳ ಐ.ಟಿ.ಐ ಪಾಸಾದ ಅಭ್ಯರ್ಥಿಗಳು ಹಾಗೂ ಅಂತಿಮ ವರ್ಷದ ತರಬೇತಿದಾರರು ಭಾಗವಹಿಸಬಹುದು.
*ದಾಖಲೆಗಳು:*
ಸಂದರ್ಶನದಲ್ಲಿ ಭಾಗವಹಿಸುವವರು ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಎರಡು ಭಾವಚಿತ್ರಗಳು, ಆಧಾರ್ ಕಾರ್ಡ್‍ನ ಪ್ರತಿ ಹಾಗೂ ಸ್ವ-ವಿವರವುಳ್ಳ ಬಯೋಡೇಟಾ ಮತ್ತು ತಪ್ಪದೇ ಸ್ಮಾರ್ಟ್ ಮೊಬೈಲ್‍ನ್ನು ತರಬೇಕು. 18 ವರ್ಷ ಮೇಲ್ಪಟ್ಟವರು ಅರ್ಹರಾಗಿರುತ್ತಾರೆ.
ಮೇ 31 ರಂದು ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ನಡೆಯಲಿದ್ದು, ಜೂನ್ 01 ರಂದು ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಅರ್ಹರು ಕ್ಯಾಂಪಸ್ ಸಂದರ್ಶನಕ್ಕೆ ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ ಹಿನ್ನಲೆ; ಮದ್ಯ ಮಾರಾಟ ನಿಷೇಧ
ಬಳ್ಳಾರಿ,ಮೇ 27(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ, ದ್ವೈವಾರ್ಷಿಕ ಚುನಾವಣೆಯ ಹಿನ್ನಲೆಯಲ್ಲಿ ಜೂನ್ 3 ರಂದು ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ, 1951ರ ಕಲಂ 135-ಸಿ ಹಾಗೂ ಕರ್ನಾಟಕ ಅಬಕಾರಿ(ಸನ್ನದುಗಳ ಸಾಮಾನ್ಯ ಷರ್ತುಗಳು) ನಿಯಮಗಳು, 1967ರ ನಿಯಮ 10-ಬಿ ರಡಿಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಜಿಲ್ಲಾದ್ಯಂತ ಎಲ್ಲಾ ರೀತಿಯ ಮದ್ಯ ಮಾರಾಟವನ್ನು ನಿಷೇಧಿಸಿ ಒಣ ದಿನ (Dry day) ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ಜೂನ್ 1ರ ಸಂಜೆ 04 ಗಂಟೆಯಿಂದ ಜೂನ್ 3 ರ ಮಧ್ಯರಾತ್ರಿ 12 ಗಂಟೆಯವರೆಗೆ ಎಲ್ಲಾ ವಿವಿಧ ಮಧ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆಯೂ ಹಾಗೂ ಎಲ್ಲಾ ರೀತಿಯ ಮದ್ಯ ತಯಾರಿಕಾ ಹಾಗೂ ವಿತರಣ ಘಟಕಗಳು, ಸಾಗಾಣಿಕೆ, ಸಂಗ್ರಹಣೆಯನ್ನು ಮತ್ತು ಮದ್ಯ ಸಾಗಾಟವನ್ನು ನಿಷೇಧಿಸಿ ಆದೇಶಿಸಿದ್ದಾರೆ.
ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ಕಲಂ 135ಸಿ (2) ಮತ್ತು (3) ರನ್ವಯ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯೂ ಆದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.
--------
ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಮಿಶ್ರಾ ಆದೇಶ
ಬಳ್ಳಾರಿ,ಮೇ 27(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಮೇ 28 ರಂದು ನಗರದ 02 ಕೇಂದ್ರಗಳಲ್ಲಿ 2024-25ನೇ ಸಾಲಿಗೆ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರತಿಭಾವಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳನ್ನು 6ನೇ ತರಗತಿಗೆ ಅರ್ಹತಾ ಪರೀಕ್ಷೆಯ ಮೂಲಕ ಸೇರ್ಪಡೆ ಮಾಡಲು ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ಒಳಗಿನ ಆವರಣವನ್ನು ಸಿಆರ್‍ಪಿಸಿ ಕಲಂ 144ರ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ನಗರದ ರೇಡಿಯೋ ಪಾರ್ಕ್‍ನ ಸೇಂಟ್ ಜೋಸೆಫ್ (ಬಾಲಕಿಯರ) ಪ್ರೌಢಶಾಲೆ ಮತ್ತು ಸೇಂಟ್ ಜೋಸೆಫ್ (ಬಾಲಕಯರ) ಪ್ರೌಢಶಾಲೆ ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ಬೆಳಿಗ್ಗೆ 09.30 ಗಂಟೆಯಿಂದ ಮಧ್ಯಾಹ್ನ 02 ಗಂಟೆಯವರೆಗೆ ನಡೆಯಲಿವೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿಬರ್ಂಧಿತ ಪ್ರದೇಶವೆಂದು ಘೋಷಿಸಿದ್ದಾರೆ.
ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ನಿμÉೀಧಿಸಿದೆ ಹಾಗೂ ಬೆಳಿಗ್ಗೆ 08 ರಿಂದ ಮಧ್ಯಾಹ್ನ 03 ರ ವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಝೆರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
-------
ವ್ಯಕ್ತಿ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,ಮೇ 27(ಕರ್ನಾಟಕ ವಾರ್ತೆ):
ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ ಕಿರಣ್ ಎನ್ನುವ 37 ವರ್ಷದ ಟೈಲ್ಸ್ ಹಾಕುವ ಕಾಂಟ್ರ್ಯಾಕ್ಟ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಮೇ 25 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಅವರು ಮನವಿ ಮಾಡಿದ್ದಾರೆ.
ಕಾಣೆಯಾದ ವ್ಯಕ್ತಿಯ ಚಹರೆ: ಎತ್ತರ 5.7 ಅಡಿ, ಕೋಲು ಮುಖ, ಗೋಧಿ ಮೈಬಣ್ಣ, ದೃಢವಾದ ಮೈಕಟ್ಟು ಹೊಂದಿದ್ದು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆ ಮಾತನಾಡುತ್ತಾನೆ. ವ್ಯಕ್ತಿಯು ಕಾಣೆಯಾದ ಸಂದರ್ಭದಲ್ಲಿ ಮರೂನ್ ಮತ್ತು ಬಿಳಿ ಬಣ್ಣದ ಗೆರೆಯುಳ್ಳ ಅರ್ಧ ತೋಳಿನ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ.
ಈ ಮೇಲ್ಕಂಡ ಚಹರೆ ಗುರುತುಗಳುಳ್ಳ ವ್ಯಕ್ತಿಯ ಮಾಹಿತಿ ಸಿಕ್ಕಲ್ಲಿ ಬಳ್ಳಾರಿ ಕಂಟ್ರೋಲ್ ರೂಂ ದೂ:08392-258100 ಅಥವಾ ಗಾಂಧಿನಗರ ಪೊಲೀಸ್ ಠಾಣೆಯ ದೂ:08392272192, ಪಿಎಸ್‍ಐ ಮೊ:9480803082, ಪಿಐ ಮೊ:9480803046 ಇವರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಶುಕ್ರವಾರ, ಮೇ 24, 2024
ಮೇ 27 ರಂದು ಬಳ್ಳಾರಿ ಗ್ರಾಮೀಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮೇ 24(ಕರ್ನಾಟಕ ವಾತೆ):
ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ ಮೋಕಾ-ಮೀನಹಳ್ಳಿ ಮಾರ್ಗದ ಲಿಲೋ ನಿರ್ಮಾಣ ಕಾರ್ಯವನ್ನು ತುರ್ತಾಗಿ ಕೈಗೆತ್ತಿಕೊಳ್ಳುತ್ತಿರುವುದರಿಂದ 110/11ಕೆ.ವಿ ಮೀನಹಳ್ಳಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11ಕೆ.ವಿ ಮಾರ್ಗಗಳಲ್ಲಿ ಮೇ 27 ರಂದು ಬೆಳಿಗ್ಗೆ 07 ರಿಂದ ಸಂಜೆ 07 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂನ ಕಾರ್ಯ ಮತ್ತು ಪಾಲನಾ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಮೋಹನಬಾಬು ಅವರು ತಿಳಿಸಿರುತ್ತಾರೆ.
*ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು*
ಎಫ್-2 ಚಾಗನೂರು ಐಪಿ ಫೀಡರ್ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ, ಕಾರೆಕಲ್ಲು, ಚಾಗನೂರು. ಎಫ್-1 ಮೀನಹಳ್ಳಿ/ ಕೆ.ವೀರಾಪುರ ಎನ್.ಜೆ.ವೈ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ ಕಾರೆಕಲ್ಲು ಗ್ರಾಮ.
ಎಫ್-4 ಎ.ಟಿ.ಪಿ.ಎಸ್ ಚೆಳ್ಳಗುರ್ಕಿ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಗ್ರಾಮ. ಎಫ್-5 ಹಗರಿ ಐಪಿ ಫೀಡರ್ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಕೃಷಿ ಪ್ರದೇಶಗಳು.
ಎಫ್-6 ಫೀಡರ್ ಮಾರ್ಗದ ಎ-ಒನ್ ಕೋಲ್ಡ್ ಸ್ಟೋರೆಜ್, ಮೆ.ಜಾನಕಿ ಕಾರ್ಪೋ,ಪ್ರೈ.ಲಿ, ಮೆ.ಬಸಾಯಿ ಸ್ಟೀಲ್ ಪ್ರೈ.ಲಿ, ಮೆ.ಕ್ಲೀನ್ ಮ್ಯಾಕ್ಸ್ ಸೊಲಾರ್, ಕ್ಲೀನ್ ಸೋಲಾರ್, ಮೆ.ಮೌರ್ಯ ಸೀಲಾಮ್ ಸೋಲಾರ್ ಐ.ಪಿ.ಪಿ ಸೇರಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಮೇ 26 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮೇ 24(ಕರ್ನಾಟಕ ವಾತೆ):
ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11 ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 26 ರಂದು ಬೆಳಿಗ್ಗೆ 07 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಎಫ್-46 ಫೀಡರ್ ವ್ಯಾಪ್ತಿಯ ಇಂಡಸ್ಟ್ರೀಯಲ್ ಏರಿಯಾ ಹಂತ-1 ಮತ್ತು ಮಾರೆಮ್ಮನ ಗುಡಿ ಹಿಂಭಾಗ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಮೇ 25 ರಂದು ವಿದ್ಯುತ್ ವ್ಯತ್ಯಯ
ಬಳ್ಳಾರಿ,ಮೇ 24(ಕರ್ನಾಟಕ ವಾತೆ):
ನಗರ ಜೆಸ್ಕಾಂ ಉಪವಿಭಾಗ-1 ರ ವ್ಯಾಪ್ತಿಗೆ ಬರುವ 110/11 ಕೆವಿ ಸೌತ್ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮೇ 25 ರಂದು ಬೆಳಿಗ್ಗೆ 07 ರಿಂದ ಮಧ್ಯಾಹ್ನ 03 ಗಂಟೆಯವರೆಗೆ ಎಫ್-23 ಫೀಡರ್ ವ್ಯಾಪ್ತಿಯ ಮೋತಿ ವೃತ್ತ, ತೇರು ಬೀದಿ, ಜೈನ್ ಮಾರ್ಕೆಟ್, ಕಾಳಮ್ಮ ಸ್ಟ್ರೀಟ್, ಲಾರಿ ಟರ್ಮಿನಲ್, ರಂಗಮಂದಿರ, ಹೊಸ ಬಸ್‍ನಿಲ್ದಾಣ, ಬಂಡಿಮೋಟ, ಗೊಲ್ಲರಹಟ್ಟಿ ಮತ್ತು ಮಾರುತಿ ಕಾಲೋನಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಇ.ಟಿ.ಲಕ್ಷ್ಮೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಮೇ 28 ರಂದು ಪ್ರತಿಷ್ಠಿತ ಖಾಸಗಿ ಶಾಲೆಗಳ ದಾಖಲಾತಿಗೆ ಪ್ರವೇಶ ಪರೀಕ್ಷೆ
ಬಳ್ಳಾರಿ,ಮೇ 24 (ಕರ್ನಾಟಕ ವಾರ್ತೆ):
ಪರಿಶಿಷ್ಟ ವರ್ಗಗಗಳ ಕಲ್ಯಾಣ ಇಲಾಖೆಯ ವತಿಯಿಂದ 2024-25ನೇ ಸಾಲಿಗೆ 5 ನೇ ತರಗತಿಯಲ್ಲಿ ಶೇ.60 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 6 ನೇ ತರಗತಿಗೆ ಪ್ರತಿಷ್ಠಿತ ಖಾಸಗಿ ಶಾಲೆಗಳ ದಾಖಲಾತಿಗೆ ಅರ್ಹತಾ ಪ್ರವೇಶ ಪರೀಕ್ಷೆಯು ಮೇ 28 ರಂದು ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ರವರೆಗೆ ನಗರದ ಬೆಳಗಲ್ ಕ್ರಾಸ್‍ನ ಸಂತ ಜೋಸೆಫ್ ಬಾಲಕಿಯರ ಪ್ರೌಢ ಶಾಲೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಅವರು ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಆಯಾ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯಲ್ಲಿ ಪ್ರವೇಶ ಪತ್ರವನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ.9964268268, 9900658907, 9110224569, 9986302091 ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಬಳ್ಳಾರಿ: ಎಲ್ಲಾ ವಕ್ಫ್ ಸಂಸ್ಥೆಗಳು ಮಾದರಿ ನಿಯಮಾವಳಿ ಅನುಷ್ಠಾನಕ್ಕೆ ಸೂಚನೆ
ಬಳ್ಳಾರಿ,ಮೇ 24(ಕರ್ನಾಟಕ ವಾತೆ):
ಜಿಲ್ಲೆಯ ಎಲ್ಲಾ ವಕ್ಫ್ ಸಂಸ್ಥೆಗಳು ರಾಜ್ಯ ವಕ್ಫ್ ಮಂಡಳಿಯ ಮಾದರಿ ನಿಯಮಾವಳಿ ನಮೂನೆ ನಂ.42(ಬೈಲಾ) ಅಂಗೀಕರಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಉಮ್ಮೆರ್ ಅಹ್ಮದ್ ಅವರು ತಿಳಿಸಿದ್ದಾರೆ.
ಈಗಾಗಲೇ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾದ ಸಂಸ್ಥೆಗಳು ಉಚ್ಛ ನ್ಯಾಯಾಲಯವು 2024 ಏ.23 ರಂದು ಹೊರಡಿಸಿರುವ ಆದೇಶದಂತೆ ಮಾದರಿ ನಿಯಮಾವಳಿಯನ್ನು ಪಾಲಿಸಬೇಕು ಎಂದು ತಿಳಿಸಿದೆ.
ಈವರೆಗೂ ಮಾದರಿ ನಿಯಮಾವಳಿಯನ್ನು ಪಾಲಿಸದ ಜಿಲ್ಲೆಯ ವಕ್ಫ್ ಸಂಸ್ಥೆಗಳು ರಾಜ್ಯ ವಕ್ಫ್ ಮಂಡಳಿಯ ಅಂಗೀಕಾರಕ್ಕಾಗಿ ನಮೂನೆ.42 ನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಜಿಲ್ಲಾ ವಕ್ಫ್ ಕಚೇರಿಗೆ ಅತೀ ಶೀಘ್ರದಲ್ಲಿ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಹೋಟೆಲ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ವಿಫುಲ ಅವಕಾಶ || ನಿಷ್ಠೆಯಿಂದ ಕಾರ್ಯ ನಿರ್ವಹಿಸಿ, ಜೀವನ ರೂಪಿಸಿಕೊಳ್ಳಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ
ಬಳ್ಳಾರಿ,ಮೇ 24 (ಕರ್ನಾಟಕ ವಾರ್ತೆ):
ಹೋಟೆಲ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಹಲವಾರು ಉದ್ಯೋಗ ಅವಕಾಶಗಳಿದ್ದು, ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ನಿಷ್ಠೆಯಿಂದ ಕಾರ್ಯ ನಿರ್ವಹಿಸಿ, ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಸಲಹೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೈಗಾರಿಕಾ ಕೇಂದ್ರ, ಕೌಶಲ್ಯಾಭಿವೃದ್ಧಿ ಇಲಾಖೆ, ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆ ಹಾಗೂ ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್‍ಸಾಬ್ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನಡಿ 60 ದಿನದ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಪೀಳಿಗೆಯು ಕೌಶಲ್ಯ ಚಟುವಟಿಕೆಗಳಲ್ಲಿ ತರಬೇತಿ ಪಡೆದರೆ, ಹೋಟೆಲ್ ಮ್ಯಾನೇಜ್‍ಮೆಂಟ್ ಸೇರಿದಂತೆ ವಿವಿಧ ರಂಗಗಳಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರವು ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನಡಿ 60 ದಿನದ ಕೌಶಲ್ಯ ತರಬೇತಿ ನೀಡಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ವಿವಿಧ ಹೆಸರಾಂತ ಹೋಟೆಲ್‍ಗಳಲ್ಲಿ ಸಂದರ್ಶನದ ಮೂಲಕ ಉದ್ಯೋಗ ಕಲ್ಪಿಸಿದೆ. ಆಯ್ಕೆಯಾದವರು ಸಾಧನೆಯ ಹಾದಿ ಮುಂದುವರೆಸಬೇಕು ಎಂದು ಆಶಿಸಿದರು.
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಮಾತನಾಡಿ, ಒಂದು ದೇಶ ಅಭಿವೃದ್ಧಿಯಾಗಲು ಮೂರು ಪ್ರಮುಖ ಕ್ಷೇತ್ರಗಳಾದ ಕೃಷಿ, ಕೈಗಾರಿಕಾ ಮತ್ತು ಸೇವಾ ವಲಯಗಳ ಪಾತ್ರ ಬಹುಮುಖ್ಯವಾಗಿದ್ದು, ಅದರಲ್ಲಿ ಸೇವಾ ವಲಯದಿಂದ ಯುವ ಪೀಳಿಗೆಗೆ ಉದ್ಯೋಗಗಳು ಹೆಚ್ಚಾಗಿ ಸೃಷ್ಟಿಯಾಗುತ್ತವೆ ಎಂದು ಅಭಿಪ್ರಾಯ ಪಟ್ಟರು.
ಈ ಭಾಗದಲ್ಲಿ ಹೋಟೆಲ್ ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದ್ದು, ಆಸಕ್ತರು ಹೋಟೆಲ್ ಮ್ಯಾನೇಜ್‍ಮೆಂಟ್ ತರಬೇತಿ ಪಡೆದು ಉದ್ಯೋಗವಕಾಶದ ಸದುಪಯೋಗ ಪಡೆದುಕೊಳ್ಳಬೇಕು. ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಜೀವನದಲ್ಲಿ ಉತ್ತುಂಗ ಸ್ಥಾನಕ್ಕೆ ತಲುಪುವಿರಿ ಎಂದು ಹೇಳಿದರು.
ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ಕೌಶಲ್ಯ ಪೂರ್ಣ ತರಬೇತಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಅಂತಾರಾಷ್ಟ್ರೀಯ ದರ್ಜೆಯ ಹೋಟೆಲ್‍ಗಳಾದ ಎವಾಲ್ವ್ ಬ್ಲಾಕ್, ವಿಜಯಶ್ರೀ ಹೆರಿಟೇಜ್, ಹೋಟೆಲ್ ಪೆÇೀಲಾ ಪ್ಯಾರಡೈಸ್, ರಾಯಲ್ ಆರ್ಕಿಡ್, ಶಿವಲೀಲಾ ಪ್ಯಾಲೇಸ್ ಹೋಟೆಲ್‍ಗಳಲ್ಲಿ ಉದ್ಯೋಗವಕಾಶ ಲಭಿಸಿವೆ.
ತರಬೇತಿ ಪಡೆದ ಅಭ್ಯರ್ಥಿಗಳಿಗೆ ಇದೇ ವೇಳೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸೋಮಶೇಖರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ.ಮಹಾರುದ್ರಗೌಡ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಹಾಗೂ ಚೇಂಬರ್ ಆಫ್ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್‍ನ ಚೇರ್‍ಮನ್ ಯಶವಂತರಾಜ್ ನಾಗಿರೆಡ್ಡಿ ಸೇರಿದಂತೆ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯವರು ಹಾಗೂ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಪೆÇೀಷಕರು ಉಪಸ್ಥಿತರಿದ್ದರು.
ತರಬೇತಿ ಪಡೆದವರ ಅಭಿಪ್ರಾಯ:
ಹೋಟೆಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನಡಿ 60 ದಿನದ ಕೌಶಲ್ಯ ತರಬೇತಿಯಲ್ಲಿ ಆಸಕ್ತಿಯಿಂದ ಭಾಗವಹಿಸಿ, ಉಪಯುಕ್ತವಾದ ಕಾರ್ಯನುಭವ ಪಡೆದಿದ್ದೇನೆ ಹಾಗೂ ತರಬೇತಿಯಲ್ಲಿ ಉತ್ತಮ ಹೋಟೆಲ್‍ಗಳಿಗೆ ಭೇಟಿ ನೀಡಿ 5 ಸ್ಟಾರ್ ಮತ್ತು ಸಾಧಾರಣ ಹೋಟೆಲ್‍ಗಳ ಮಧ್ಯೆ ಇರುವ ವ್ಯತ್ಯಾಸ ಹಾಗೂ ಸೇವೆಗಳ ಕುರಿತು ಪ್ರತ್ಯಕ್ಷ ಮಾಹಿತಿ ದೊರೆಯಿತು.
- ಶ್ರಾವಣಿ.
ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹೋಟೆಲ್‍ಗಳಲ್ಲಿ ಉದ್ಯೋಗ ನಿರ್ವಹಿಸಲು ಈ ತರಬೇತಿಯಿಂದ ತುಂಬಾ ಉಪಯುಕ್ತವಾಗುತ್ತದೆ. ಈ ತರಬೇತಿಯಿಂದ ಉತ್ತಮ ಅನುಭವ ದೊರೆತಿದೆ.
- ಮಣಿಕಂಠ.
-------
“ಸ್ಕಿಜೋಪ್ರೀನಿಯಾ”- ಭಯಬೇಡ ತಿಳುವಳಿಕೆ ಇರಲಿ: ನ್ಯಾ.ರಾಜೇಶ್ ಹೊಸಮನೆ
ಬಳ್ಳಾರಿ,ಮೇ 24(ಕರ್ನಾಟಕ ವಾರ್ತೆ):
ಮಾನಸಿಕ ಖಾಯಿಲೆಗಳಲ್ಲಿಯೇ ತೀವ್ರ ಸ್ವರೂಪವಾದ ಸ್ಕಿಜೋಪ್ರೀನಿಯಾ ಖಾಯಿಲೆಯ ಬಗ್ಗೆ ಜಾಗೃತಿ ಇರಬೇಕು. ಭಯಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್ ಹೊಸಮನೆ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಸ್ಕಿಜೋಪ್ರೇನಿಯ ದಿನಾಚರಣೆ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಜನ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಮಾನ್ಯವಾಗಿ ಸ್ಕಿಜೋಫ್ರೇನಿಯ ರೋಗಿಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುವುದು ಅಪಾಯ ಎಂಬ ನಂಬಿಕೆ ಇತ್ತು. ಆದರೆ ಕಳೆದ 30 ವರ್ಷಗಳಿಂದ ಈಚೆಗೆ ವೈದ್ಯಕೀಯ ಕ್ಷೇತ್ರದಲ್ಲಾದ ಸಂಶೋಧನೆ ಹಾಗೂ ಬದಲಾದ ಚಿಕಿತ್ಸೆ ವಿಧಾನಗಳಿಂದ ಆರಂಭದಲ್ಲಿಯೇ ರೋಗಿಯ ಮನಃಸ್ಥಿತಿಗೆ ಅನುಸಾರವಾಗಿ ಕುಟುಂಬದ ಸದಸ್ಯರ ನೆರವಿನಿಂದ ಚಿಕಿತ್ಸೆ ನೀಡಿದರೆ ಖಾಯಿಲೆ ಬೇಗ ವಾಸಿಯಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‍ಬಾಬು ಅವರು ಮಾತನಾಡಿ, ಸಾಮಾನ್ಯವಾಗಿ 15 ರಿಂದ 25 ವರ್ಷ ವಯಸ್ಸಿನ ಅವಧಿಯ ತರುಣರಲ್ಲ್ಲಿ ಗ್ರಾಮೀಣ-ಪಟ್ಟಣ, ಬಡತನ-ಶ್ರೀಮಂತಿಕೆ ಎಂಬ ಬೇಧಬಾವವಿಲ್ಲದೇ ಎಲ್ಲರಿಗೂ ಬರಬಹುದಾದ ಖಾಯಿಲೆಯಾಗಿದೆ. ವ್ಯಕ್ತಿಯ ಮನಸ್ಸಿನ ಕ್ರಿಯೆಗಳಲ್ಲಿ ಆಲೋಚನೆ, ಭಾವನೆಗಳನ್ನು ಹಾಗೂ ಪಂಚೇಂದ್ರಿಯಗಳ ಮೂಲಕ ತನ್ನ ಸುತ್ತಲಿನ ಪರಿಸರವನ್ನು ಅರ್ಥಮಾಡಿಕೊಳ್ಳಲಾಗದ ಪರಿಸ್ಥಿತಿಗೆ ಹೋಗುತ್ತಾನೆ ಎಂದರು.
ಮಾತ್ರೆ ಮತ್ತು ಚುಚ್ಚು ಮದ್ದು ರೂಪದಲ್ಲಿ ಔಷದಿ ಲಭ್ಯವಿದ್ದು, ಖಾಯಿಲೆ ಕಾಣಿಸಿಕೊಂಡ ಕೆಲವೇ ವಾರದೊಳಗೆ ಔಷದೋಪಚಾರ ಪ್ರಾರಂಭಿಸಿದರೆ ಬೇಗನೇ ಹತೋಟಿಗೆ ಬರುತ್ತದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದಿಂದ ಮನೋಚೈತನ್ಯ ಕಾಯ್ದೆ ಕಾರ್ಯಕ್ರಮದಡಿ ಪ್ರತಿ ಮಂಗಳವಾರ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣೆ ಏರ್ಪಡಿಸಿ, ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರಮೇಶ್.ಜಿ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮ.ಎಸ್.ಕಟ್ಟಿಮನಿ, ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗದ ಮಾನಸಿಕ ತಜ್ಞೆ ಡಾ.ರೋಹನ್ ವನಗುಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಜಾಥಾದಲ್ಲಿ ವಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಶಿಕ್ಷಣಾಥಿಗಳು ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆಶಾ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಜಾಥಾವು ಜಿಲ್ಲಾ ಆಸ್ಪತ್ರೆಯ ಆವರಣದಿಂದ ಆರಂಭವಾಗಿ ಸಂಗಂ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಿಂದ ಮರಳಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಅಂತ್ಯಗೊಂಡಿತು. ಜಾಥಾದಲ್ಲಿ ಸ್ಕಿಜೋಪ್ರೀನಿಯ ಕುರಿತ ಜಾಗೃತಿ ಫಲಕಗಳನ್ನು ಪ್ರದರ್ಶಿಸಲಾಯಿತು.
--------
ಮೇ 27 ರಂದು ಮಿನಿ ಉದ್ಯೋಗ ಮೇಳ
ಬಳ್ಳಾರಿ,ಮೇ 24(ಕರ್ನಾಟಕ ವಾರ್ತೆ):
ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಮೇ 27 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪಿ.ಎಸ್.ಹಟ್ಟಪ್ಪ ಅವರು ತಿಳಿಸಿದ್ದಾರೆ.
ಈ ಮೇಳದಲ್ಲಿ 4 ರಿಂದ 5 ಕಂಪನಿಗಳು ಭಾಗವಹಿಸುತ್ತಿದ್ದು, ಇವರು ತಮ್ಮಲ್ಲಿನ ಖಾಲಿ ಇರುವ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುವರು. ಈ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.
ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಪ್ರತಿ ಮತ್ತು ಸ್ವ-ವಿವರ (RESUME) ಗಳೊಂದಿಗೆ ಹಳೆಯ ತಾಲ್ಲೂಕು ಕಚೇರಿ ಹಿಂಭಾಗದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ ಅಂದು ನಡೆಯುವ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.
ಆಸಕ್ತ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ, ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವಾ ಮೊ.9742718891, 8277000619 ಗೆ ಸಂಪರ್ಕಿಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಮೇ 24(ಕರ್ನಾಟಕ ವಾರ್ತೆ):
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ವತಿಯಿಂದ ಕಲಬುರಗಿಯ ಕರ್ನಾಟಕ ಇನ್‍ಸ್ಟಿಟ್ಯೂಟ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ಸಂಸ್ಥೆಯಲ್ಲಿ ತರಬೇತಿ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಸಂಸ್ಥೆಯ ಮೂಲಕ ಸಹಕಾರ ಸಂಘ ಸಂಸ್ಥೆ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ 6 ತಿಂಗಳು/180 ದಿನಗಳ ಅವಧಿಯ ಡಿಪೆÇ್ಲೀಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ನೀಡಲಾಗುತ್ತಿದ್ದು, ಜುಲೈನಿಂದ ಪ್ರಾರಂಭವಾಗಲಿವೆ. ತರಬೇತಿ ಪಡೆಯಲಿಚ್ಛಿಸುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಸಹಕಾರ ಸಂಘ, ಸಹಕಾರ ಇಲಾಖೆ, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ವೇತನ ಪಡೆಯುವ ನೌಕರರಾಗಿರಬೇಕು. ಖಾಸಗಿ ಅಭ್ಯರ್ಥಿಗಳಿಗೆ ನಿಯಮಿತವಾಗಿ ಅವಕಾಶವನ್ನು ಕಲ್ಪಿಸಲಾಗಿದೆ.
ವಯೋಮಿತಿ 16 ವರ್ಷ ದಾಟಿದವರಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇ.18 ರಷ್ಟು ಸ್ಥಾನಗಳನ್ನು ತರಬೇತಿಗಾಗಿ ಮೀಸಲಿರಿಸಲಾಗಿರುತ್ತದೆ. ಕನಿಷ್ಟ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರಿಕ್ಷೇಯಲ್ಲಿ ಉತ್ತೀರ್ಣರಾಗಿರಬೇಕು. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ, ಸಹಕಾರಿ ಸಂಘಗಳಲ್ಲಿ ಒಂದು ವರ್ಷಕ್ಕಿಂತ ಮೇಲ್ಪಟ್ಟು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಸಹ ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಈ ತರಬೇತಿಯಲ್ಲಿ ಅಭ್ಯರ್ಥಿಗಳಿಗೆ ಮಾಹೆಯಾನ ರೂ.500 ಶಿಷ್ಯವೇತನ ನೀಡಲಾಗುವುದು.
ನಿರುದ್ಯೋಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ “6 ತಿಂಗಳು/180 ದಿನಗಳ ವಿಶೇಷ “ಡಿಪೆÇ್ಲೀಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್” ತರಬೇತಿಯನ್ನು ಸಹ ನೀಡಲಾಗುವುದು. ಈ ವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರವರ ಮೂಲಕ ಅಥವಾ ವ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ಗಳ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ವಯೋಮಿತಿ 16 ವರ್ಷಗಳಾಗಿರಬೇಕು. ಗರಿಷ್ಠ 30 ವರ್ಷಗಳು ಮೀರಿರಬಾರದು. ಈ ಅಭ್ಯರ್ಥಿಗಳಿಗೆ ಮಾಹೆಯಾನ ರೂ.600 ಶಿಷ್ಯವೇತನ ನೀಡಲಾಗುವುದು.
ಡಿ.ಸಿ.ಎಂ ತರಬೇತಿಯ ಅರ್ಜಿ ನಮೂನೆ ಮತ್ತು ವಿವರಣಾ ಪುಸ್ತಕವನ್ನು ಕಲಬುರಗಿ ತರಬೇತಿ ಸಂಸ್ಥೆಯಿಂದ ಹಾಗೂ ತರಬೇತಿ ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಸಹಕಾರ ಯೂನಿಯನ್‍ಗಳಲ್ಲಿ (ಬೀದರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಹೊಸಪೇಟೆ) ಪಡೆಯಬಹುದು ಎಂದು ಕಲಬುರಗಿ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*ಅರ್ಜಿ ಪಡೆಯುವ ಮತ್ತು ಕಳುಹಿಸುವ ವಿಳಾಸ:*
ಪ್ರಾಂಶುಪಾಲರು,
ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್,
ಆದರ್ಶನಗರ, ಪ್ರಗತಿ ಕಾಲೋನಿ, ಸೇಡಂ. ರಸ್ತೆ, ಕಲಬುರಗಿ-585105.
ದೂ.08472-245340, ಮೊ.9916726886, ಮೊ.9742307153, ಮೊ.9113916753.
-------
ಸಂಡೂರು: ವಸತಿ ನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಮೇ 24(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಯಶವಂತನಗರದ ಸರ್ಕಾರಿ ಪರಿಶಿಷ್ಟ ಪಂಗಡ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ 1ನೇ ತರಗತಿ ಮತ್ತು 6ನೇ ತರಗತಿಗೆ ವಸತಿ ನಿಲಯ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಅರ್ಜಿಗಳನ್ನು ಯಶವಂತನಗರ ಸರ್ಕಾರಿ ಪರಿಶಿಷ್ಟ ಪಂಗಡ ವಾಲ್ಮೀಕಿ ಆಶ್ರಮ ಶಾಲೆಯಲ್ಲಿಯೇ ಪಡೆದು, ಭರ್ತಿಮಾಡಿ ಜೂ.03 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.08395-200073 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಗುರುವಾರ, ಮೇ 23, 2024
ಮುಂಗಾರು ಪೂರ್ವ ಮಳೆ ಹಿನ್ನಲೆ ಮನೆಯ ಸುತ್ತಲೂ ನೀರು ನಿಲ್ಲದಂತೆ ಜಾಗ್ರತೆ ವಹಿಸಿ, ಸೊಳ್ಳೆಯಿಂದ ಹರಡುವ ರೋಗ ತಡೆಯಲು ಸಹಕರಿಸಿ: ಡಿಹೆಚ್‍ಒ ಡಾ.ವೈ.ರಮೇಶಬಾಬು ಮನವಿ
ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ):
ಮುಂಗಾರು ಪೂರ್ವ ಮಳೆ ಆರಂಭದ ಹಿನ್ನಲೆಯಲ್ಲಿ ಸಾರ್ವಜನಿಕರು ಮನೆಯ ಸುತ್ತಲು ನೀರು ನಿಲ್ಲದಂತೆ ಮಾಡುವುದು, ನೀರಿನ ಸಂಗ್ರಾಹಕಗಳನ್ನು ವಾರಕ್ಕೊಮ್ಮೆ ಸ್ವಚ್ಚಗೊಳಿಸುವುದು ಮತ್ತು ಚರಂಡಿಗಳಲ್ಲಿ ಕಸಕಡ್ಡಿಗಳನ್ನು ಹಾಕದಂತೆ ನೀರು ಸರಾಗವಾಗಿ ಹರಿಯುವಂತೆ ನೋಡಿಕೊಂಡಲ್ಲಿ ಸೊಳ್ಳೆಯಿಂದ ಹರಡುವ ರೋಗಗಳನ್ನು ತಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶಬಾಬು ಅವರು ತಿಳಿಸಿದರು.
ಇಂದು ಸಂಡೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ವಾರ್ಡ್‍ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಕುಶಲೋಪರಿ ವಿಚಾರಿಸಿ ಮಾತನಾಡಿಸಿದ ಅವರು, ಮಳೆ ನೀರು ಮನೆಯ ಸುತ್ತಲು ಹಾಗೂ ಮನೆಯ ಮೇಲ್ಭಾಗದಲ್ಲಿ, ಹೂವಿನ ಕುಂಡಗಳಲ್ಲಿ, ಟಿನ್, ಪ್ಲಾಸ್ಟಿಕ್ ಕಪ್ ಮುಂತಾದವುಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಉಂಟಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಹೇಳಿದರು.
ನೀರು ಸಂಗ್ರಾಹಕಗಳಾದ ಡ್ರಮ್, ಬ್ಯಾರೆಲ್, ಸಿಮೆಂಟ್ ತೊಟ್ಟಿ, ಮಡಿಕೆ ಮುಂತಾದವುಗಳನ್ನು ನೀರು ತುಂಬಿಸುವ ಪೂರ್ವದಲ್ಲಿ ಚೆನ್ನಾಗಿ ತೊಳೆದು ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆ ನಿಯಂತ್ರಣವನ್ನು ಕೈಗೊಳ್ಳಬೇಕು ಎಂದು ವಿನಂತಿಸಿದರು.
ಮಾನ್ಸುನ್ ಮಳೆಯ ಆರಂಭಿಕ ಹಿನ್ನಲೆ ಮಳೆ, ಗುಡುಗು-ಮಿಂಚು ಸಹಿತ ಬರುವುದರಿಂದ ಬಯಲಿನಲ್ಲಿದ್ದರೆ ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ತಗ್ಗು ಪ್ರದೇಶ ಇಲ್ಲದೇ ಬಯಲಿನಲ್ಲಿಯೇ ಇರಬೇಕಾದರೆ ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಬೇಕು, ಇದರಿಂದ ಮಿಂಚಿನಿಂದ ಮೆದುಳಿಗೂ, ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ. ಮರಗಳಿದ್ದ ಪ್ರದೇಶದಲ್ಲಿ ಇದ್ದರೆ ಆದಷ್ಟು ಅಲ್ಲಿಂದ ಬೇಗನೆ ಹೊರಬರುವುದು ಉತ್ತಮ ಎಂದು ಮನವರಿಕೆ ಮಾಡಿದರು.
ಮಳೆಯ ಹಿನ್ನಲೆಯಲ್ಲಿ ನೀರಿನ ಮೂಲಗಳಿಗೆ ಹೊಸ ನೀರು ಬರುವುದರಿಂದ ಆಕಸ್ಮಿಕವಾಗಿ ಶುದ್ಧಿಕರಿಸದೇ ಇರುವ ನೀರನ್ನು ಕುಡಿಯಬಾರದು, ವಾಂತಿ ಬೇಧಿ ಉಂಟಾಗುವ ಸಾದ್ಯತೆಗಳು ಇರುತ್ತವೆ. ಕ್ಲೋರಿನೇಷನ್ ಕೈಗೊಂಡು ಶುದ್ಧಿಕರೀಸಿದ ಕುಡಿಯುವ ನೀರನ್ನು ಹಾಗೂ ಶುದ್ದೀಕರಣ ಘಟಕದ ನೀರನ್ನು ಕುಡಿಯಬೇಕು. ಸಾಧ್ಯವಿದ್ದಲ್ಲಿ ಕುದಿಸಿ ಆರಿಸಿ ಸೋಸಿದ ನೀರನ್ನು ಕುಡಿಯಬೇಕು. ಊಟದ ಪೂರ್ವ, ಶೌಚದ ನಂತರ ಕೈಗಳನ್ನು ಸಾಬೂನುನಿಂದ ತೊಳೆದುಕೊಳ್ಳಬೇಕು ಎಂದು ಡಿಹೆಚ್‍ಓ ಅವರು ತಿಳಿಸಿದರು.
ಆಸ್ಪತ್ರೆಗಳಲ್ಲಿ ಈಗಾಗಲೇ ಎಲ್ಲಾ ಅಗತ್ಯ ಔಷಧಿಗಳ ದಾಸ್ತಾನು ಇರಿಸಲಾಗಿದ್ದು, ಯಾರು ಆತಂಕಕ್ಕೆ ಒಳಗಾಗದೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆಯಬೇಕು ಎಂದು ವಿನಂತಿಸಿದರು.
ಬಳಿಕ ಸಿಬ್ಬಂದಿಯವರೊಂದಿಗೆ ಚರ್ಚಿಸಿದ ಡಿಹೆಚ್‍ಒ ಡಾ.ವೈ.ರಮೇಶ್‍ಬಾಬು ಅವರು, ಆಸ್ಪತ್ರೆಗೆ ಆಗಮಿಸುವ ರೋಗಿಗಳಿಗೆ ಅನಾನುಕೂಲತೆ ಉಂಟಾಗದಂತೆ ನಿಗದಿತ ಸಮಯದಲ್ಲಿ ಒ.ಪಿ.ಡಿ ಚೀಟಿ ಒದಗಿಸಬೇಕು. ವೈದ್ಯರ ಕೊಠಡಿ ಬಳಿ ರೋಗಿಗಳು ಕುಳಿತುಕೊಳ್ಳಲು ಆಸನಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದರಲ್ಲದೇ, ವಾರ್ಡ್‍ಗಳಲ್ಲಿ ರೋಗಿಗಳಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಉಂಟಾಗದಂತೆ ನಿಗಾವಹಿಸುವ ಮೂಲಕ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬಿ ಗುಣಮುಖರಾಗಿ ಮನೆಗೆ ಹಿಂತಿರುಗುವಂತೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಅಬ್ದುಲ್ಲಾ, ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್, ತಾಲ್ಲೂಕ ಆರೋಗ್ಯ ಅಧಿಕಾರಿ ಡಾ.ಭರತ್, ವೈದ್ಯಾಧಿಕಾರಿ ಡಾ.ಕಿರಣ್ ಸೇರಿದಂತೆ ಶುಶ್ರೂಷಕರು ಹಾಗೂ ಇತರರು ಇದ್ದರು.
-------
ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿ ಆಹ್ವಾನ
ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ):
ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2024-25 ನೇ ಸಾಲಿಗೆ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯಡಿ (ಎನ್‍ಒಎಸ್) ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿವೇತನಕ್ಕೆ ಸ್ನಾತಕೋತ್ತರ ಪದವಿ, ಪಿಹೆಚ್‍ಡಿ ಮತ್ತು ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಆಸಕ್ತ ಅಭ್ಯರ್ಥಿಗಳು https://overseas.tribal.gov.in ವೆಬ್‍ಸೈಟ್‍ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಮೇ 31 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರದ ನಲ್ಲಚೇರುವು ಪ್ರದೇಶದ ವಾಲ್ಮೀಕಿ ಭವನದ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಅಥವಾ ದೂ.08392-242453 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದಿವಾಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
---------
ಯುವತಿ ಕಾಣೆ; ಪತ್ತೆಗೆ ಮನವಿ
ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ):
ಸಂಡೂರು ತಾಲ್ಲೂಕಿನ ತೋರಣಗಲ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿದ್ದಮ್ಮ ಎನ್ನುವ 17 ವರ್ಷದ ಯುವತಿಯು ಮೇ 12 ರಂದು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ತೋರಣಗಲ್ಲು ಪೊಲೀಸ್ ಠಾಣೆಯ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ.
ಯುವತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 08392-258100 ಅಥವಾ ತೋರಣಗಲ್ಲು ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ಹೋಟಲ್ ಮ್ಯಾನೇಜ್‍ಮೆಂಟ್ ಕೌಶಲ್ಯಪೂರ್ಣ ತರಬೇತಿ; ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಣಾ ಸಮಾರಂಭ
ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ):
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಖನಿಜ ನಿಧಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಹೋಟಲ್ ಮ್ಯಾನೇಜ್‍ಮೆಂಟ್ ಕೋರ್ಸ್‍ನ ಕೌಶಲ್ಯಪೂರ್ಣ ತರಬೇತಿ ಪಡೆದಿರುವ ಅಭ್ಯರ್ಥಿಗಳಿಗೆ ಮೇ 24 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಪಂಚಾಯಿತಿಯ ನಜೀರ್ ಸಭಾಂಗಣದಲ್ಲಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರು, ಜಿಲ್ಲಾ ಖನಿಜ ನಿಧಿಯ ವಿಶೇಷಾಧಿಕಾರಿ ಪಿ.ಎಸ್.ಮಂಜುನಾಥ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಸೋಮಶೇಖರ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪಿ.ಎಸ್.ಹಟ್ಟಪ್ಪ ಮತ್ತು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿರುವರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಬಳ್ಳಾರಿ ಚೇಂಬರ್ ಕೌಶಲ್ಯಾಭಿವೃದ್ಧಿ ಕೇಂದ್ರದ ಅಡಿಯಲ್ಲಿ ಹೋಟಲ್ ಮ್ಯಾನೇಜ್‍ಮೆಂಟ್ ಕೋರ್ಸ್ ತರಬೇತಿ ಪಡೆದು, ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
----------
ಸಮಾಜ ಕಲ್ಯಾಣ ಇಲಾಖೆ; ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಮೇ 23(ಕರ್ನಾಟಕ ವಾರ್ತೆ):
ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25 ನೇ ಶೈಕ್ಷಣಿಕ ಸಾಲಿಗೆ ಜಿಲ್ಲೆಯ ಬಳ್ಳಾರಿ, ಕುರುಗೋಡು ಹಾಗೂ ಕಂಪ್ಲಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ, ಬಾಲಕೀಯರ ವಿದ್ಯಾರ್ಥಿ ನಿಲಯಗಳಿಗೆ 5 ರಿಂದ 10 ನೇ ತರಗತಿ ಪ್ರವೇಶಕ್ಕೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮಮತಾ.ಪಿ ಅವರು ತಿಳಿಸಿದ್ದಾರೆ.
ಬೇಕಾದ ದಾಖಲಾತಿಗಳು:
ಸ್ಯಾಟ್ಸ್ (SATS) ಸಂಖ್ಯೆ, ಆಧಾರ್ ಸಂಖ್ಯೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಥಿ ಫೋಟೋ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ಸಂಖ್ಯೆ, ಹಿಂದಿನ ವರ್ಷದ ಅಂಕಪಟ್ಟಿ ಹಾಗೂ ತಂದೆ, ತಾಯಿ ಆಧಾರ್ ಪ್ರತಿ.
ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಮಾಜ ಕಲ್ಯಾಣ ಇಲಾಖೆಯ ವೆಬ್‍ಸೈಟ್ www.sw.kar.nic.in ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿಯೊಂದಿಗೆ ಪೂರಕ ದಾಖಲೆಗಳನ್ನು ಬಳ್ಳಾರಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ತಾಲ್ಲೂಕುವಾರು ವಿದ್ಯಾರ್ಥಿ ನಿಲಯಗಳ ನಿಲಯಪಾಲಕರ ಕಚೇರಿಗೆ ಸಲ್ಲಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಬುಧವಾರ, ಮೇ 22, 2024
ಡಿ.ಇಎಲ್.ಇಡಿ ಕೋರ್ಸ್ ದಾಖಲಾತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಮೇ 22(ಕರ್ನಾಟಕ ವಾರ್ತೆ):
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯು ಪ್ರಸಕ್ತ ಸಾಲಿನ ಪ್ರಥಮ ವರ್ಷದ ಡಿ.ಇಎಲ್.ಇಡಿ ಕೋರ್ಸ್‍ನ ದಾಖಲಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಡಯಟ್‍ನ ಪ್ರಾಂಶುಪಾಲರು ಹಾಗೂ ನಿರ್ದೇಶಕರು ತಿಳಿಸಿದ್ದಾರೆ.
ಅಸಕ್ತರು ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಅಥವಾ ವೆಬ್‍ಸೈಟ್ www.schooleducation.kar.nic.in ನಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಜೂನ್ 05 ರೊಳಗಾಗಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ www.schooleducation.kar.nic.in ವೆಬ್‍ಸೈಟ್ ಅಥವಾ ಸಂಸ್ಥೆಯ ಮೊ.9964891659, 9449380535 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
------
ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಮೇ 22(ಕರ್ನಾಟಕ ವಾರ್ತೆ):
ತೋಟಗಾರಿಕೆ ಇಲಾಖೆ ವತಿಯಿಂದ 2024-25ನೇ ಸಾಲಿಗೆ 09 ತಿಂಗಳ ತೋಟಗಾರಿಕೆ ತರಬೇತಿಗಾಗಿ ಜಿಲ್ಲೆಯ ರೈತ ಮಕ್ಕಳ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಮಾಲವಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ 2024ರ ಜುಲೈ ರಿಂದ 2025 ರ ಮಾರ್ಚ್ 31 ರ ವರೆಗೆ ಒಟ್ಟು 09 ತಿಂಗಳ ತರಬೇತಿಯನ್ನು ನೀಡಲಾಗುತ್ತದೆ.
*ಅಭ್ಯರ್ಥಿಗಳ ಆಯ್ಕೆ ಗುರಿ:*
ಮಹಿಳೆಯರು 8, ಪುರುಷರು 16, ಪರಿಶಿಷ್ಟ ಜಾತಿ 03, ಪರಿಶಿಷ್ಟ ಪಂಗಡ 01 ಮತ್ತು ಇತರೆ 20 ಅಭ್ಯರ್ಥಿಗಳು ಸೇರಿ ಒಟ್ಟು 24 ಅಭ್ಯರ್ಥಿಗಳನ್ನು ತೋಟಗಾರಿಕೆ ಉಪ ನಿರ್ದೇಶಕರು ಆಯ್ಕೆ ಮಾಡುತ್ತಾರೆ.
ಅಭ್ಯರ್ಥಿಗಳ ವಯೋಮಿತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 18 ವರ್ಷದಿಂದ 33 ವಷರ್Àದೊಳಗೆ ಇರಬೇಕು. ಇತರರಿಗೆ 18 ವಷರ್Àದಿಂದ 30 ವಷರ್Àದೊಳಗೆ ಹಾಗೂ ಮಾಜಿ ಸೈನಿಕರಿಗೆ 33 ರಿಂದ 65 ವಷರ್Àದೊಳಗಿರಬೇಕು.
ಅಭ್ಯರ್ಥಿಗಳು ಕನಿಷ್ಠ ಕನ್ನಡ ವಿಷÀಯಗಳೊಂದಿಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಹೊಂದಲು ಬಯಸುವ ಅಭ್ಯರ್ಥಿಯ ತಂದೆ-ತಾಯಿ, ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು.
ಅರ್ಜಿಗಳನ್ನು ಮೇ 23 ರಿಂದ ಜೂನ್ 03 ರ ವರೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಬಳ್ಳಾರಿ, ಕಚೇರಿಯಲ್ಲಿ ಪಡೆಯಬಹುದು ಅಥವಾ ಇಲಾಖಾ ವೆಬ್ ಸೈಟ್ https://horticulturedir.karnataka.gov.in ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಭರ್ತಿಮಾಡಿದ ಅರ್ಜಿಗಳನ್ನು ಜೂನ್ 03 ರ ಸಂಜೆ 5.30 ರ ಒಳಗಾಗಿ ಇದೇ ಕಚೇರಿಗೆ ಸಲ್ಲಿಸಬೇಕು. ಜೂನ್ 06 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
*ವಿಶೇಷ ಸೂಚನೆ:*
ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಮಿತಿಯು ಸರ್ಕಾರದ ಮೀಸಲಾತಿ ನಿಯಮ ಕಡ್ಡಾಯ ಪಾಲನೆ, ಪರಿಶಿಷÀ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳ ಮೀಸಲಾತಿ ಮುಗಿದ ನಂತರ ಉಳಿಕೆ ಮೀಸಲಾತಿಗಳನ್ನು ಇತರೆ ಅಭ್ಯರ್ಥಿಗಳಿಗೆ ನೀಡಲಾಗುವುದು.
ಒಂದು ವೇಳೆ ಮೀಸಲಾದ ಸ್ಥಾನಗಳಿಗೆ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಸಾಮಾನ್ಯ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು. ಮಹಿಳಾ ಮೀಸಲಾತಿ (ಶೇ.33)ಯನ್ನು ನಿಯಮಾನುಸಾರ ಪಾಲಿಸತಕ್ಕದ್ದು. ಮಹಿಳಾ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಅಂತಹ ಸ್ಥಾನಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಮೀಸಲಾತಿ ಕುರಿತು ಸರ್ಕಾರದ ಮೀಸಲಾತಿಗಳನ್ವಯ ಆಯ್ಕೆ ಸಮಿತಿ ನಿರ್ಧರಿಸಲಾಗುತ್ತದೆ.
ಮಾಜಿ ಸೈನಿಕ ಅಭ್ಯರ್ಥಿಗಳು ಆಯ್ಕೆಗೊಂಡಲ್ಲಿ ಈಗಾಗಲೇ ಇಲಾಖೆಯಲ್ಲಿ ರೈತ ಮಕ್ಕಳಿಗೆ ಕಾಯ್ದಿರಿಸಿರುವ ಗುರಿಗಳಿಗೆ ಹೆಚ್ಚುವರಿಯಾಗಿ ಸೇರ್ಪಡಿಸಲಾಗುವುದು. ಅಭ್ಯರ್ಥಿಗಳಿಗೆ ಉಚಿತವಾಗಿ ಕಲಿಕೆಯ ಎಲ್ಲಾ ತರಹದ ಅವಕಾಶಗಳನ್ನು ಕಲ್ಪಿಸಲಾಗುವುದು. ಆದರೆ, ವಸತಿ ನಿಲಯದಲ್ಲಿ ವಾಸ್ತವ್ಯದ ವ್ಯವಸ್ಥೆಯು ಕಡ್ಡಾಯ ಇರುವುದಿಲ್ಲ ಹಾಗೂ ಶಿಷ್ಯವೇತನ (ಸ್ಟೈಫಂಡ್) ಕ್ಕೆ ಅವಕಾಶವಿರುವುದಿಲ್ಲ.
ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ಆಯ್ಕೆಯು ತೋಟಗಾರಿಕೆ ಪ್ರಾಯೋಗಿಕ ತರಬೇತಿಯಲ್ಲಿ ಹಮ್ಮಿಕೊಳ್ಳುವ ಚಟುವಟಿಕೆಗಳನ್ನು ಸ್ವಾವಲಂಬಿಯಾಗಿ ನಿರ್ವಹಿಸಲು ಶಕ್ತನಾಗಿರಬೇಕು ಹಾಗೂ ಚಟುವಟಿಕೆ ನಿರ್ವಹಿಸಲು ಸಾಧ್ಯವಾಗದಂತಹ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.
ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು. ಇದಕ್ಕಾಗಿ ಪ್ರತ್ಯೇಕ ಸಂದರ್ಶನ ಪತ್ರ ಕಳುಹಿಸುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ದೂ.08392-278588 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------
ಮೇ 26 ರಂದು ಜೆಇಇ ಪರೀಕ್ಷೆ | ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಡಿಸಿ ಮಿಶ್ರಾ ಆದೇಶ
ಬಳ್ಳಾರಿ,ಮೇ 22(ಕರ್ನಾಟಕ ವಾರ್ತೆ):
ಜಿಲ್ಲೆಯಲ್ಲಿ ಮೇ 26 ರಂದು ನಗರದ 02 ಕೇಂದ್ರಗಳಲ್ಲಿ ಜೆಇಇ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತ 200 ಮೀಟರ್ ಒಳಗಿನ ಆವರಣವನ್ನು ಸಿಆರ್‍ಪಿಸಿ ಕಲಂ 144ರ ಮೇರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶಿಸಿದ್ದಾರೆ.
ನಗರದ ಬಿಐಟಿಎಂ ಕಾಲೇಜು ಮತ್ತು ಕಿಷ್ಕಿಂದ ವಿಶ್ವವಿದ್ಯಾಲಯ ಕೇಂದ್ರಗಳಲ್ಲಿ ಜೆಇಇ ಪರೀಕ್ಷೆಗಳು ಬೆಳಿಗ್ಗೆ 09 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಹಾಗೂ ಮಧ್ಯಾಹ್ನ 02.30 ರಿಂದ ಸಂಜೆ 05.30 ರವರೆಗೆ ನಡೆಯಲಿವೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ಒಳಗಿನ ಆವರಣವನ್ನು ನಿಬರ್ಂಧಿತ ಪ್ರದೇಶವೆಂದು ಘೋಷಿಸಿದ್ದಾರೆ.
ಅನಧೀಕೃತ ವ್ಯಕ್ತಿ ಮತ್ತು ವ್ಯಕ್ತಿಗಳ ಗುಂಪುಗಳಿಗೆ ಪ್ರವೇಶವನ್ನು ನಿμÉೀಧಿಸಿದೆ ಹಾಗೂ ಬೆಳಿಗ್ಗೆ 08 ರಿಂದ ಸಂಜೆ 06 ರ ವರೆಗೆ ಪರೀಕ್ಷಾ ಕೇಂದ್ರಗಳ ಸುತ್ತ-ಮುತ್ತಲಿನ ಝೆರಾಕ್ಸ್ ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
-------
ಕುರುಗೋಡು: ಐಟಿಐ ಕೋರ್ಸ್ ಪ್ರವೇಶಾತಿಗೆ ಅರ್ಜಿ ಆಹ್ವಾನ
ಬಳ್ಳಾರಿ,ಮೇ 22 (ಕರ್ನಾಟಕ ವಾರ್ತೆ):
ಕುರುಗೋಡು ಪಟ್ಟಣದಲ್ಲಿನ ಸರ್ಕಾರಿ ಕೈಗಾರಿಕಾ ಸಂಸ್ಥೆ(ಐಟಿಐ) ವತಿಯಿಂದ 2024-25 ಗೆ ಸಾಲಿಗೆ ವಿವಿಧ ವೃತ್ತಿಗಳಿಗೆ ಆನ್‍ಲೈನ್ ಮೂಲಕ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸ್ಥೆಯ ಪ್ರಾಚಾರ್ಯರಾದ ವಿ.ತಿಮ್ಮರಾಜು ಅವರು ತಿಳಿಸಿದ್ದಾರೆ.
ಕಾಲೇಜಿನಲ್ಲಿ ಲಭ್ಯವಿರುವ ಕೋರ್ಸ್‍ಗಳ ವಿವರ:
2 ವರ್ಷದ ಎಲೆಕ್ಟ್ರಿಷಿಯನ್ (ಎನ್‍ಸಿವಿಟಿ), 2 ವರ್ಷದ ಫಿಟ್ಟರ್ (ಎನ್‍ಸಿವಿಟಿ), 2 ವರ್ಷದ ಮೆಕ್ಯಾನಿಕಲ್ ಎಲೆಕ್ಟ್ರಿಕಲ್ (ಎನ್‍ಸಿವಿಟಿ), 2 ವರ್ಷದ ಅಡ್ವಾನ್ಸ್ ಸಿನ್‍ಸಿ ಮೆಷಿನಿಂಗ್ (ಎನ್‍ಸಿವಿಟಿ).
ಬೇಕಾದ ದಾಖಲೆಗಳು:
ಆಧಾರ್ ಕಾರ್ಡ್, ಹೈ.ಕ (371ಜೆ) ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ (ಟಿ.ಸಿ), ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಕನ್ನಡ ಮತ್ತು ಗ್ರಾಮೀಣ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲಾತಿಗಳು.
ಆಸಕ್ತ ವಿದ್ಯಾರ್ಥಿಗಳು ಇಲಾಖೆಯ www.cite.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಆಥವಾ ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ನೇರವಾಗಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜೂನ್ 03 ಕೊನೆಯ ದಿನವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕುರುಗೋಡಿನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ವಿ.ತಿಮ್ಮರಾಜು ಮೊ:9980715718, ಸತೀಶ್.ಡಿ.ಜಿ ಮೊ:9481175925, ಮಹೇಶ್.ಟಿ ಮೊ:7892431265, ಓಬಳೇಶ.ಎಂ ಮೊ:9108127275, ರಾಜಶೇಖರ.ಪಿ.ಜಿ ಮೊ:7975845633 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-------
ಮೇ 24 ರಂದು “ವಿಶ್ವ ಸ್ಕಿಜೋಫ್ರೇನಿಯ ದಿನಾಚರಣೆ” ಅಂಗವಾಗಿ ಜಾಗೃತಿ ಜಾಥ
ಬಳ್ಳಾರಿ,ಮೇ 22(ಕರ್ನಾಟಕ ವಾರ್ತೆ):
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ “ವಿಶ್ವ ಸ್ಕಿಜೋಫ್ರೇನಿಯ ದಿನಾಚರಣೆ” ಅಂಗವಾಗಿ ಮೇ 24 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಿಂದ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿಯವರು ತಿಳಿಸಿದ್ದಾರೆ.
--------
ಬಳ್ಳಾರಿ: ವಸ್ತು ಸಂಗ್ರಹಾಲಯದಲ್ಲಿ ಆಫ್ರಿಕಾದ ಹಳೆ ಶಿಲಾಯುಗದ ಆಕರಗಳು ಪ್ರದರ್ಶನ
ಬಳ್ಳಾರಿ,ಮೇ 22(ಕರ್ನಾಟಕ ವಾರ್ತೆ):
ನಗರದ ರಾಬರ್ಟ್ ಬ್ರೂಸ್‍ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತು ಸಂಗ್ರಹಾಲಯದಲ್ಲಿ ಆಫ್ರಿಕಾದಲ್ಲಿ ಸಿಕ್ಕ ಹಳೆ ಶಿಲಾಯುಗದ ಕಲ್ಲಿನ ಆಕರಗಳನ್ನು (ಣooಟs) 3ಡಿ ಮಾದರಿಯಲ್ಲಿ ತಯಾರಿಸಿದ ತದ್ರೂಪ ಆಕರಗಳಾಗಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರದರ್ಶನಕ್ಕೆ ಇರಿಸಲಾಗಿದೆ.
ಈ 3ಡಿ ಮಾದರಿ ಆಕರಗಳು ಬೋನಕ್ಲೋನ್ಸ್ ಎಂಬ ಅಮೆರಿಕನ್ ಕಂಪನಿಯಿಂದ ಖ್ಯಾತ ಪ್ರಾಗೈತಿಹಾಸ ತಜ್ಞ ಪೆÇ್ರ.ರವಿ ಕೊರಿಶೆಟ್ಟರ್ ಅವರು ಖರೀದಿಸಿ ವಸ್ತು ಸಂಗ್ರಹಾಲಯಕ್ಕೆ ನೀಡಿದ್ದಾರೆ.
ವಸ್ತು ಸಂಗ್ರಹಾಲಯದ ನಿರ್ವಹಣಾ ಸಮಿತಿಯ ಸದಸ್ಯರುಗಳಾದ ಸಂತೋಷ್ ಮಾರ್ಟಿನ್ ಹಾಗೂ ಎಂ.ಅಹಿರಾಜ ಅವರು ಈ 3ಡಿ ಮಾದರಿಯ ಆಕರಗಳನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಾಗರಾಜ ಅವರಿಗೆ ನೀಡಿ ಪ್ರದರ್ಶನಕ್ಕೆ ಇರಿಸಲಾಯಿತು.
‘ಈ ವಸ್ತು ಸಂಗ್ರಹಾಲಯದಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಸಿಕ್ಕ 15 ತಲೆಬುರುಡೆಗಳ ತದ್ರೂಪ ತಲೆಬುರುಡೆಗಳನ್ನು ಪ್ರದರ್ಶನಕ್ಕಿರಿಸಿರುವುದು ಒಂದು ವಿಶೇಷ. ಜನರು, ಪ್ರಮುಖವಾಗಿ ಇತಿಹಾಸ ವಿಭಾಗದ ವಿದ್ಯಾರ್ಥಿಗಳು ವಸ್ತು ಸಂಗ್ರಹಾಲಯದಲ್ಲಿ ಪ್ರದಶನಕ್ಕಿರಿಸಿದ ವಿಶೇಷ ವಸ್ತುಗಳನ್ನು ವೀಕ್ಷಿಸಬೇಕು ಮತ್ತು ಸಾರ್ವಜನಿಕರೂ ವೀಕ್ಷಿಸಬಹುದು ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಅವರು ಅಭಿಪ್ರಾಯ ಪಟ್ಟರು.
------
ಮಂಗಳವಾರ, ಮೇ 21, 2024
ನೀರಿನ ಮೂಲಗಳನ್ನು ನಿರಂತರ ಪರೀಕ್ಷಿಸಿ: ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ
ಬಳ್ಳಾರಿ,ಮೇ 21(ಕರ್ನಾಟಕ ವ ವಾರ್ತೆ):
ಮಳೆಗಾಲ ಆರಂಭದ ಹಿನ್ನಲೆಯಲ್ಲಿ ಕುಡಿಯುವ ನೀರು ಕಲುಷಿತಗೊಳ್ಳುವ ಸಂಭವವಿದ್ದು, ಇದರಿಂದ ಉಂಟಾಗಬಹುದಾದ ವಾಂತಿಭೇದಿ ಪ್ರಕರಣಗಳ ನಿಯಂತ್ರಣಕ್ಕಾಗಿ ಎಲ್ಲಾ ನೀರಿನ ಮೂಲಗಳನ್ನು ನಿರಂತರವಾಗಿ ಪರೀಕ್ಷೆಗೊಳಪಡಿಸುವ ಮೂಲಕ ಯಾವುದೇ ರೀತಿಯ ಗಂಭೀರ ಪ್ರಕರಣಗಳು ಸಂಭವಿಸದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಸೂಚಿಸಿದರು.
ಅವರು ಇಂದು ನಗರದ ಜಿಪಂ ನಜೀರ್ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಜಂಟಿಯಾಗಿ ಏರ್ಪಡಿಸಿದ್ದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯೂ ಸೇರಿದಂತೆ ವಿವಿಧೆಡೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ನೀರಿನ ಎಲ್ಲ ಮೂಲಗಳನ್ನು ಸಕಾಲದಲ್ಲಿ ಗ್ರಾಮ ಪಂಚಾಯತ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಸಕಾಲದಲ್ಲಿ ನಿಯಮಾನುಸಾರ ಕ್ಲೋರಿನೇಷನ್ ಮಾಡಿಸಿ ನಿರಂತರವಾಗಿ ಪರೀಕ್ಷೆಗಳನ್ನು ಕೈಗೊಂಡು ಯಾವುದೇ ವಾಂತಿಭೇದಿ ಪ್ರಕರಣಗಳು ಉಂಟಾಗದಂತೆ ಗ್ರಾಮ ಪಂಚಾಯತ್ ಒಳಗೊಂಡಂತೆ ಎಲ್ಲ ಸ್ಥಳೀಯ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮವಹಿಸಿ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಮಾತನಾಡಿ, ಜಿಲ್ಲೆಯಲ್ಲಿ ಇಲ್ಲಿಯವರೆಗೆ ಪ್ರಮುಖ ಜಾತ್ರೆಗಳು, ಉತ್ಸವಗಳಲ್ಲಿ ಜಿಲ್ಲಾ ಕಾಲರಾ ನಿಯಂತ್ರಣ ತಂಡವು ಸಕಾಲದಲ್ಲಿ ಉಪಸ್ಥಿತರಿದ್ದು, ನೀರಿನ ಮೂಲಗಳು, ಆಹಾರದ ತಯಾರಿಕೆಯ ಸ್ಥಳ ಮುಂತಾದವುಗಳನ್ನು ಪರಿಶೀಲಿಸಿ ನಿಗಾ ವಹಿಸುವ ಮೂಲಕ ವಾಂತಿ-ಭೇದಿ ಪ್ರಕರಣಗಳು ಉಂಟಾಗದಂತೆ ಕ್ರಮವಹಿಸಿಲಾಗಿದೆ ಎಂದು ಸಭೆಗೆ ತಿಳಿಸಿದರು.
ಇಲ್ಲಿಯವರೆಗೆ 4027 ನೀರಿನ ಮೂಲಗಳನ್ನು ಪರೀಕ್ಷಿಸಿದ್ದು, ಅಶುದ್ಧವೆಂದು ಕಂಡು ಬಂದ ನೀರಿನ ಮೂಲಗಳನ್ನು ಸಕಾಲದಲ್ಲಿ ಪರೀಕ್ಷೆಗೊಳಪಡಿಸಿ ನೀರು ಪೂರೈಕೆಗೆ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಲಾಗಿದೆ ಎಂದು ತಿಳಿಸಿದರು.
ಕ್ಷಯರೋಗ ನಿಯಂತ್ರಣ ಕುರಿತು ಮಾತನಾಡುತ್ತಾ, ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕ್ಷಯರೋಗ ಪರೀಕ್ಷೆ ಕೈಗೊಂಡ ನಂತರ ಶೇ.20ರಷ್ಟು ನೂತನ ಪ್ರಕರಣಗಳಲ್ಲಿ ಇಳಿಕೆಯಾಗಿರುವುದು ಆಶಾದಾಯಕವಾಗಿದೆ ಎಂದರು.
ಬಾಲ್ಯದಲ್ಲಿ ಕಾಡುವ ಮಾರಕ ರೋಗಗಳ ತಡೆಗೆ ಲಸಿಕೆಯನ್ನು ಮಕ್ಕಳಿಗೆ ಸಕಾಲದಲ್ಲಿ ಹಾಕಿಸಲಾಗುತ್ತಿದೆ ಹಾಗೂ ಬಿಟ್ಟು ಹೋದ ಮಕ್ಕಳು ಲಸಿಕೆ ವಂಚಿತ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕಲು ಮುತುರ್ವಜಿ ವಹಿಸಲಾಗಿದೆ. ಅದರಲ್ಲೂ ದಡಾರ ಮತ್ತು ರೂಬೆಲ್ಲಾ ಪ್ರಕರಣಗಳು ಕಂಡುಬರದಂತೆ ಆದ್ಯತೆ ನೀಡಿ ಯಾವುದೇ ಮಗು ಲಸಿಕೆ ವಂಚಿತವಾಗದಂತೆ ಕ್ಷೇತ್ರ ಮಟ್ಟದ ಸಿಬ್ಬಂದಿಯವರು ಅಧಿಕಾರಿಗಳು ಕ್ರಿಯಾ ಯೋಜನೆ ಹಮ್ಮಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಮಳೆಯ ಆರಂಭದ ಹಿನ್ನೆಲೆಯಲ್ಲಿ ಸೊಳ್ಳೆಯಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕೆ ಯಾವುದೇ ನ್ಯೂನ್ಯತೆ ಉಂಟಾಗದಂತೆ ನೀರಿನ ಸಂಗ್ರಹಗಾರಗಳನ್ನು ಪ್ರತಿ ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಸೊಳ್ಳೆ ಉತ್ಪತ್ತಿ ನಿಯಂತ್ರಣಕ್ಕೆ ಅಗತ್ಯವಿದ್ದಲ್ಲಿ ಸ್ಥಳೀಯ ಪಂಚಾಯತಿಗಳೊಂದಿಗೆ ಚರ್ಚಿಸಿ ವ್ಯಾಪಕ ಪ್ರಚಾರ ಕೈಗೊಳ್ಳಲು ಸೂಚಿಸಿದರು. ಸಭೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಂಧತ್ವ ನಿಯಂತ್ರಣ ಕಾರ್ಯಕ್ರಮ, ಹಾಗೂ ನವಜಾತ ಶಿಶುಗಳ ಆರೈಕೆ ಕಾರ್ಯಕ್ರಮದ ಕುರಿತು ವ್ಯಾಪಕವಾಗಿ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ವಿಮ್ಸ್ ಅಧೀಕ್ಷಕ ಡಾ.ಚಿದಂಬರಂ, ವಿಶ್ವ ಆರೋಗ್ಯ ಸಂಸ್ಥೆಯ ಬಳ್ಳಾರಿ ಪ್ರತಿನಿಧಿ ಡಾ.ಆರ್.ಎಸ್.ಶ್ರೀಧರ್, ಕಾರ್ಯಕ್ರಮ ಅನುμÁ್ಠನ ಅಧಿಕಾರಿ ಡಾ.ಅಬ್ದುಲ್ಲಾ, ಡಾ.ಪೂರ್ಣಿಮಾ ಕಟ್ಟಿಮನಿ, ಡಾ.ಮರಿಯಂಬಿ, ಡಾ.ಇಂದ್ರಾಣಿ, ಡಾ.ವೀರೇಂದ್ರ ಕುಮಾರ, ಡಾ.ಹನುಮಂತಪ್ಪ, ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ್, ಡಾ.ಅರುಣ್, ಡಾ.ಮಂಜುನಾಥ ಜವಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಡಾ.ಜಬೀನ್ ತಾಜ್, ಡಿಎನ್‍ಓ ಗಿರೀಶ್, ವೆಂಕೋಬ್ ನಾಯ್ಕ್ ಹಾಗೂ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)














































